Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
ಮನೆಯಲ್ಲಿ ಹಣ, ಸಂಪತ್ತು ಹೆಚ್ಚಲು ಇಲ್ಲಿದೆ ಸರಳ ವಾಸ್ತು ಟಿಪ್ಸ್..!!
ನಮ್ಮ ಆರೋಗ್ಯ, ಹಣಕಾಸು ಪರಿಸ್ಥಿತಿ, ಮನೆಯಲ್ಲಿನ ವಾತಾವರಣ ಇದಕ್ಕೆಲ್ಲ ನೇರವಾಗಿ ವಾಸ್ತು ಶಾಸ್ತ್ರದ ಸಂಬಂಧವಿರುತ್ತದೆ. ಯಾವ ಮನೆಯಲ್ಲಿ ವಾಸ್ತು ಚಿಹ್ನೆಗಳು ಶಾಸ್ತ್ರದಲ್ಲಿ ಹೇಳಲಾಗಿದ್ಯೋ ಅದೇ ರೀತಿ ಇದ್ದರೆ ಆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಐಶ್ವರ್ಯ, ಸಂಪತ್ತು ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ.
ಆದರೆ ಕೆಲವು ಬಾರಿ ನಾವು ಸರಳವಾಗಿ ವಾಸ್ತುವನ್ನು ಪಾಲಿಸುವ ಬದಲಾಗಿ ನಿರ್ಲಕ್ಷ್ಯ ಮಾಡುತ್ತೇವೆ. ಇದು ನಮ್ಮಲ್ಲಿ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಈ ರೀತಿಯ ವಾಸ್ತು ದೋಷದಿಂದ ಒಬ್ಬ ವ್ಯಕ್ತಿ ಏಳಿಗೆ ಕಾಣುವುದು ಕಷ್ಟವಾಗುತ್ತದೆ. ಹಾಗಾದರೆ ಮನೆಯಲ್ಲಿ ನಾವು ಯಾವ ರೀತಿಯ ವಾಸ್ತುವನ್ನು ಪಾಲಿಸಬೇಕು? ಯಾವ ವಾಸ್ತು ದೋಷ ಯಾವ ನಷ್ಟಕ್ಕೆ ಕಾರಣವಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮನೆಯಲ್ಲಿ ಕುಬೇರ ಯಂತ್ರ ಇಡಿ
ಮನೆಯಲ್ಲಿ ಹಣದ ಸಮಸ್ಯೆ ಮತ್ತು ಖರ್ಚು ಹೆಚ್ಚಾಗುತ್ತಿದ್ದರೆ ಕುಬೇರ ಯಂತ್ರವನ್ನು ಇಡಬೇಕು ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಕುಬೇರ ಸಂಪತ್ತಿನ ಪ್ರತೀಕವಾಗಿದ್ದು, ಮನೆಯ ಈಶಾನ್ಯ ಮೂಲೆಯಲ್ಲಿ ಕುಬೇರ ಯಂತ್ರ ಇಡಬೇಕು. ಈಶಾನ್ಯ ಮೂಲೆಯು ಸಂಪತ್ತು ಸಂಗ್ರಹದ ಪ್ರತೀಕವಾಗಿದೆ ಹೀಗಾಗಿ ಆ ಮೂಲೆಯಲ್ಲಿ ಶೌಚಾಲಯ, ಚಪ್ಪಲಿ ಬಿಡುವುದು, ಪೊರಕೆ ಇಡುವುದು ಮಾಡಬಾರದು ಎಂದು ವಾಸ್ತು ಶಾಸ್ತ್ರದ ಉಲ್ಲೇಖವಾಗಿದೆ.
ಮನೆಯಲ್ಲಿ ವಸ್ತುಗಳ ಜೋಡಿಸಿಡಿ
ಕೆಲವು ಬಾರಿ ಮನೆಯಲ್ಲಿ ಇಲ್ಲವೆ ನಿಮ್ಮ ರೂಮಿಯಲ್ಲಿ ಎಲ್ಲಾ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಿರುತ್ತಾರೆ. ಈ ರೀತಿ ಮಾಡಬಾರದು ಎಂಬುದು ವಾಸ್ತು ಶಾಸ್ತ್ರದ ಉಲ್ಲೇಖವಾಗಿದೆ. ನಿಮ್ಮ ಮನೆಯು ಆರ್ಥಿಕ, ಭಾವನಾತ್ಮಕ ರೀತಿಯ ಅಂಶವೂ ಧನಾತ್ಮಕ ಶಕ್ತಿಯ ಒಟ್ಟಾರೆ ಸಾರವಾಗಿದೆ. ಆದರೆ ಮನೆಯಲ್ಲಿ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೆ ಅಲ್ಲಿ ಧನಾತ್ಮಕ ಶಕ್ತಿ ನೆಲೆಸುವುದಿಲ್ಲ ಎಂಬುದು ಶಾಸ್ತ್ರದ ಉಲ್ಲೇಖವಾಗಿದೆ.
ಲಾಕರ್ ಯವಾಗಲು ನೈಋತ್ಯ ಮೂಲೆಯಲ್ಲಿರಲಿ
ನಮ್ಮ ಮನೆಯಲ್ಲಿ ಸಾಮಾನ್ಯವಾಗಿ ಲಾಕರ್ ಇಲ್ಲವೆ, ಹಣವಿಡಲು ಒಂದು ಕಮೋಡ್ ಇದ್ದೇ ಇರುತ್ತದೆ. ಆದರೆ ನಮ್ಮ ಅರಿವಿಲ್ಲದೆ ನಾವು ಅದನ್ನು ಎಲ್ಲಿ ಜಾಗ ಸಿಗುತ್ತದೆಯೋ ಅಲ್ಲಿ ಇಡುತ್ತೇವೆ. ಆದರೆ ಈ ರೀತಿ ಮಾಡುವುದರಿಂದ ಹಣದ ಸಮಸ್ಯೆ ಉದ್ಭವಿಸುತ್ತದೆ. ಹೀಗಾಗಿ ಲಾಕರ್ ಇಲ್ಲವೆ ಹಣವಿಡುವ ಕಮೋಡ್ ಅನ್ನು ಮನೆಯ ನೈರುತ್ಯ ಮೂಲೆಯಲ್ಲಿ ಇಡುವುದು ಸೂಕ್ತ. ಆದರೆ ಎಂದಿಗೂ ಲಾಕರ್ ಅನ್ನು ಪಶ್ಚಿಮ ಇಲ್ಲವೆ ದಕ್ಷಿಣ ದಿಕ್ಕಿನೆಡೆಗೆ ಇಡಬಾರದು.
ನೀರಿನ ಟ್ಯಾಂಕ್ ತಪ್ಪು ದಿಕ್ಕಿಗೆ ಇಡಬೇಡಿ
ನಿಮ್ಮ ಮನೆಯಲ್ಲಿ ನೀರಿನ ಟ್ಯಾಂಕ್ ಇದ್ದರೆ ಅದನ್ನು ಟೆರೆಸ್ ಮೇಲೆ ಇರಿಸುತ್ತೇವೆ. ಆದರೆ ಆ ಟ್ಯಾಂಕ್ ಅನ್ನು ಆಗ್ನೇಯ ಅಥವಾ ಈಶಾನ್ಯ ಮೂಲೆಯಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಸಂಪತ್ತು ಮತ್ತು ಆರೋಗ್ಯದಲ್ಲಿ ವೇಗದ ಬದಲಾವಣೆ ಹಾಗೂ ಯಶಸ್ಸು ಸಾಧಿಸಬಹುದು ಎಂಬುದು ವಾಸ್ತುಶಾಸ್ತ್ರದ ಉಲ್ಲೇಖವಾಗಿದೆ.
ಮನೆಯಲ್ಲಿ ವಾಸ್ತು ಗಿಡಗಳು ಇರಲಿ
ಮನೆಯಲ್ಲಿ ಗಿಡಗಳನ್ನು ಇಟ್ಟುಕೊಳ್ಳುವುದು ಮನೆಯಲ್ಲಿ ಧನಾತ್ಮಕ ಶಕ್ತಿ ವೃದ್ಧಿಗೆ ಕಾರಣವಾಗುತ್ತದೆ. ಸ್ತು ಶಾಸ್ತ್ರದ ಪ್ರಕಾರ, ವಿವಿಧ ಸಸ್ಯಗಳು ವಿಭಿನ್ನ ಪ್ರಾಮುಖ್ಯತೆಯನ್ನು ಹೊಂದಿವೆ. ಕೆಲವು ಸಸ್ಯಗಳು ಮನೆಯಲ್ಲಿ ಹಣ ಮತ್ತು ಸಂಪತ್ತನ್ನು ಆಕರ್ಷಿಸುತ್ತವೆ. ಈ ಸಸ್ಯಗಳಲ್ಲಿ ಮನಿ ಪ್ಲಾಂಟ್, ಬಿದಿರಿನ ಸಸ್ಯ ಮತ್ತು ರಬ್ಬರ್ ಪ್ಲಾಂಟ್ ಸೇರಿವೆ. ಈ ಸಸ್ಯಗಳನ್ನು ಮನೆಯೊಳಗೆ ಇಟ್ಟು ಪೋಷಿಸಬೇಕು. ಜೊಗೆಗೆ ಅವುಗಳನ್ನು ಇಡುವ ಜಾಗವೂ ಹೊಂದಾಣಿಕೆಯಾಗಬೇಕು.
ತಾಮ್ರದ ಸ್ವಸ್ತಿಕ್ ಇಡುವುದು
ಮನೆಯಲ್ಲಿ ತಾಮ್ರದಿಂದ ಮಾಡಲಾಗಿರುವ ಸ್ವಸ್ತಿಕ್ ಚಿಹ್ನೆಯನ್ನು ಇಡುವುದು ಸಹ ಸಂಪತ್ತು ಮತ್ತು ಶಾಂತಿಯ ಸಂಕೇತವಾಗಿದೆ. ಜೊತೆಗೆ ಹಣದ ಸಮಸ್ಯೆಗೆ ಪರಿಹಾರ ಬೇಕೆಂದರೆ ನೀವು ತಾಮ್ರದಿಂದ ಮಾಡಲಾದ ಸ್ವಸ್ತಿಕ್ ಅನ್ನು ಮನೆಯ ಆಗ್ನೇಯ ಭಾಗದ ಗೋಡೆಯ ಮೇಲೆ ಇಡಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.



Click it and Unblock the Notifications
