Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಯಾವ ಬಣ್ಣದ ಸ್ವಸ್ತಿಕ್ ಮನೆಗೆ ಶುಭಕರ
ಜಗತ್ತು ಎಷ್ಟೇ ಮುಂದುವರಿಯುತ್ತಿದ್ದರೂ ಕೂಡ ದೈವಿಕ ಶಕ್ತಿಯ ಮೇಲಿನ ನಂಬಿಕೆ ಕಿಂಚಿತ್ತೂ ಕಡಿಮೆಯಾಗಿಲ್ಲ. ಪ್ರತಿಯೊಬ್ಬ ಮನುಷ್ಯನು ತನ್ನ ಒಳಿತಿಗಾಗಿ ಪ್ರಾರ್ಥಿಸುವುದು ಭಗವಂತನನ್ನು ಮಾತ್ರ. ದೇವರೇ ಸರ್ವಕಾರ್ಯಗಳಿಗೂ ಕಾರಣ ಎಂಬ ನಂಬಿಕೆ ಬಲವಾಗಿ ಬೇರೂರಿದೆ. ಆ ನಿಟ್ಟಿನಲ್ಲಿ ಹಲವು ಆಚಾರ-ವಿಚಾರ, ನಂಬಿಕೆಗಳು ನಮ್ಮಲ್ಲಿವೆ. ಅವುಗಳಲ್ಲೊಂದು ಸ್ವಸ್ತಿಕ ಬರೆಯುವ ಪದ್ಧತಿ. ಹೌದು ಸ್ವಸ್ತಿಕ್ ಬರೆದರೆ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ ರೂಢಿಯಲ್ಲಿದೆ.


ಯಾವ ಬಣ್ಣದ ಸ್ವಸ್ತಿಕ್ ಏನನ್ನು ಸೂಚಿಸುತ್ತದೆ
1. ಹಳದಿ ಬಣ್ಣದ ಸ್ವಸ್ತಿಕವನ್ನು ಗೋಡೆಯಲ್ಲಿ ಉತ್ತರ ಭಾಗಕ್ಕೆ ರಚಿಸಿದರೆ ಅಂದರೆ ಅರಿಶಿಣದಿಂದ ಸ್ವಸ್ತಿಕ್ ಅನ್ನು ಬರೆದರೆ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ ಇದೆ ಮತ್ತು ಮಂಗಳ ಕಾರ್ಯ ಮಾಡುವಾಗ ಕೆಂಪು ಬಣ್ಣದ ಸ್ವಸ್ವಿಕ್ ಬರೆಯುವುದು ಶುಭಕರ ಎಂಬ ಭಾವನೆ ಇದೆ.

ಯಾವ ಬಣ್ಣದ ಸ್ವಸ್ತಿಕ್ ಏನನ್ನು ಸೂಚಿಸುತ್ತದೆ
2. ಕಣ್ಣು ಬೀಳುವುದು ಎಂದು ಹೇಳುತ್ತೀವಲ್ಲ ಅಂದರೆ ದೃಷ್ಟಿ ದೋಷದ ಪರಿಹಾರಕ್ಕೆ, ಕೆಟ್ಟ ಸಮಯದ ನಿವಾರಣೆಗೆ ಕಪ್ಪು ಬಣ್ಣದ ಸ್ವಸ್ವಿಕ್ ಅನ್ನು ರಚಿಸಲಾಗುತ್ತದೆ. ಇದ್ದಿಲು ಅಥವಾ ಇದ್ದಿಲಿನ ಪುಡಿಯಿಂದ ಈ ಸ್ವಸ್ವಿಕ್ ಅನ್ನು ಬರೆಯಲಾಗುತ್ತದೆ. ನಿಮ್ಮ ಕುಟುಂಬದ ಮೇಲೆ ಯಾರದ್ದಾದರೂ ಕೆಟ್ಟ ಕಣ್ಣಿದ್ದಲ್ಲಿ ಕಪ್ಪು ಬಣ್ಣದಿಂದ ಅಥವಾ ಇದ್ದಿಲಿನಿಂದ ಬರೆದಿರುವ ಸ್ವಸ್ತಿಕ್ ಅದನ್ನು ತೆಗೆಯುತ್ತದೆ ಎಂದು ಹೇಳಲಾಗುತ್ತದೆ.

ಯಾವ ಬಣ್ಣದ ಸ್ವಸ್ತಿಕ್ ಏನನ್ನು ಸೂಚಿಸುತ್ತದೆ
3. ಕುಂಕುಮ ಅಥವಾ ರಂಗೋಲಿಯಿಂದ ಮನೆಯ ಹೊರಗಡೆ ಪ್ರವೇಶ ದ್ವಾರದ ಬಳಿ ಸ್ವಸ್ತಿಕ್ ಬರೆದರೆ ಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದ ಗಣೇಶ ದೇವರು ಸಂತೃಪ್ತನಾಗಲಿದ್ದು, ಇದು ವಿನಾಯಕನ ಚಿಹ್ನೆ ಎಂದು ಕೂಡ ಹೇಳಲಾಗುತ್ತದೆ. ಅಷ್ಟೇ ಅಲ್ಲ ಮನೆಗೆ ಒಳ್ಳೆಯ ಪರಿಣಾಮವನ್ನು ಇದು ಉಂಟುಮಾಡುತ್ತದೆ ಎಂಬ ನಂಬಿಕೆ ಇದೆ.

ಯಾವ ಬಣ್ಣದ ಸ್ವಸ್ತಿಕ್ ಏನನ್ನು ಸೂಚಿಸುತ್ತದೆ
4. ರಾತ್ರಿ ನಿದ್ದೆಯ ಸಮಸ್ಯೆಯಿಂದ ಬಳಲುವ ವ್ಯಕ್ತಿಯು ತಾನು ಮಲಗುವ ಜಾಗದಲ್ಲಿ ತನ್ನ ತೋರು ಬೆರಳಿನಿಂದ ಕೆಂಪು ಬಣ್ಣದಲ್ಲಿ ಸ್ವಸ್ತಿಕ್ ಬರೆದರೆ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.

ಯಾವ ಬಣ್ಣದ ಸ್ವಸ್ತಿಕ್ ಏನನ್ನು ಸೂಚಿಸುತ್ತದೆ
5. ಸ್ವಸ್ತಿಕ್ ಅನ್ನು ಸರಿಯಾದ ಜಾಗದಲ್ಲಿ, ಸರಿಯಾದ ಕ್ರಮದಲ್ಲಿ ಬರೆಯಬೇಕು. ಒಂದು ವೇಳೆ ಕೊಳಕು ಪ್ರದೇಶದಲ್ಲಿ, ಟಾಯ್ಲೆಟ್, ಬಚ್ಚಲು, ಇತ್ಯಾದಿ ಕಡೆಗಳಲ್ಲಿ ಸ್ವಸ್ವಿಕ್ ಚಿಹ್ನೆಯ ರಚನೆ ಇದ್ದಲ್ಲಿ ಅದು ಕೆಟ್ಟದ್ದನ್ನು ಹೆಚ್ಚಿಸಬಹುದು. ಒತ್ತಡವನ್ನು ಅಧಿಕಗೊಳಿಸುತ್ತದೆ. ಮನೆ ಮಂದಿಗೆ ಕಾಯಿಲೆ ತರಿಸುತ್ತದೆ ಎಂದು ನಂಬಲಾಗುತ್ತದೆ.



Click it and Unblock the Notifications
