For Quick Alerts
ALLOW NOTIFICATIONS  
For Daily Alerts

ದೇವರ ಕೋಣೆಯ ವಾಸ್ತು ಹೇಗಿರಬೇಕು, ಯಾವ ದಿಕ್ಕಿನಲ್ಲಿ ದೇವರ ವಿಗ್ರಹಗಳನ್ನು ಇಡಬೇಕು?

|

ಪೂಜಾ ಕೊಠಡಿ ಕೇವಲ ಪವಿತ್ರ ಸ್ಥಳವಲ್ಲ, ಆದರೆ ನೀವು ಧ್ಯಾನಸ್ಥ ಸ್ಥಿತಿಗೆ ಬರಲು ಸಕಾರಾತ್ಮಕ ಭಾವನೆಯನ್ನು ಹೊರಹೊಮ್ಮಿಸುವ ಸ್ಥಳ. ವಾಸ್ತು ಶಾಸ್ತ್ರದ ಪ್ರಕಾರ, ಪೂಜಾ ಕೊಠಡಿಯು ಮನೆಯಲ್ಲಿ ಸಕಾರಾತ್ಮಕತೆಯನ್ನು ತರುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಆದರೆ, ದೈವಿಕ ಸ್ವರೂಪಿ ಪೂಜೆಯ ಕೊಠಡಿಗೆ ವಾಸ್ತು ಬಹಳ ಮುಖ್ಯವಾಗುತ್ತದೆ. ಹೆಚ್ಚಿನ ಜನರು ದೇವರ ಮನೆಯ ವಾಸ್ತು ಮಾರ್ಗಸೂಚಿಗಳನ್ನು ಚೆನ್ನಾಗಿ ತಿಳಿದಿಲ್ಲ. ಆದ್ದರಿಂದ, ಎಲ್ಲರಿಗೂ ಸುಲಭವಾಗಿ ತಿಳಿಯುವಂತೆ ಪುಜಾ ಮನೆಯ ವಾಸ್ತು ಹೇಗಿರಬೇಕು ಎಂದು ವಾಸ್ತು ತಜ್ಞರು ಏನು ಹೇಳುತ್ತಾರೆ ನೋಡೋಣ:

ಪೂಜಾ ಕೋಣೆ ಎಲ್ಲಿರಬೇಕು?

ಪೂಜಾ ಕೋಣೆ ಎಲ್ಲಿರಬೇಕು?

ನಿಮ್ಮ ಪೂಜಾ ಕೋಣೆಯ ಸ್ಥಳವು ಮನೆಯಲ್ಲಿ ಅತ್ಯಂತ ಮಂಗಳಕರವಾದ ಸ್ಥಳವಾಗಿದೆ, ಇದು ಸಕಾರತ್ಮಕತೆ, ದೈವಿಕತೆಯ ಸೆಳವನ್ನು ವ್ಯಾಖ್ಯಾನಿಸುತ್ತದೆ. ಈಶಾನ್ಯ, ಪೂರ್ವ ಮತ್ತು ಉತ್ತರದ ದಿಕ್ಕು ಸೂಕ್ತವಾಗಿದೆ. ನೀವು ಹೊಸ ಮನೆಯನ್ನು ವಿನ್ಯಾಸಗೊಳಿಸುತ್ತಿದ್ದರೆ ಮತ್ತು ನಿಮ್ಮ ಪೂಜಾ ಕೊಠಡಿಯು ಎಲ್ಲಿರಬೇಕು ಎಂಬುದನ್ನು ನೀವು ಮೊದಲೇ ನಿಯಂತ್ರಿಸಲು ಸಾಧ್ಯವಾಗುತ್ತದೆ. ಮನೆಯ ನೆಲಮಾಳಿಗೆಯ ಸ್ಥಳದಲ್ಲಿ ಅಥವಾ ಮಹಡಿಯ ಮೇಲೆ ಸಾಧ್ಯವಾದಷ್ಟು ದೇವರ ಕೋಣೆ ನಿರ್ಮಿಸುವುದನ್ನು ತಪ್ಪಿಸಿ ಎಂದು ವಾಸ್ತು ತಜ್ಞರು ಬಲವಾಗಿ ಸೂಚಿಸುತ್ತಾರೆ. ಮನೆಯಲ್ಲಿ ಪೂಜಾ ಮಂದಿರ ನೆಲಮಟ್ಟದಲ್ಲಿ ಇರಿಸುವುದು ಉತ್ತಮ. ಸೂರ್ಯನಿಂದ ಗರಿಷ್ಠ ಶಕ್ತಿಯನ್ನು ಸೆಳೆಯಲು ವಾಸ್ತು ಶಾಸ್ತ್ರವು ಈಶಾನ್ಯ ದಿಕ್ಕನ್ನು ಹೆಚ್ಚು ಸೂಕ್ತ ಎಂದು ಹೇಳುತ್ತದೆ.

ಪಿರಮಿಡ್‌ ಆಕೃತಿ ಹಾಗೂ ಕಡಿಮೆ ಎತ್ತರ ಇರಲಿ

ಪಿರಮಿಡ್‌ ಆಕೃತಿ ಹಾಗೂ ಕಡಿಮೆ ಎತ್ತರ ಇರಲಿ

ನಿಮ್ಮ ಪೂಜಾ ಕೋಣೆಯಲ್ಲಿ ಸೀಲಿಂಗ್ ಕಡಿಮೆ ಎತ್ತರದಲ್ಲಿ ಇರಬೇಕು. ಪಿರಮಿಡ್ ಆಕಾರದ ಅಥವಾ ಗೋಪುರದಂತಹ ಮೇಲ್ಭಾಗವು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಉತ್ತಮ ಸ್ಥಳಾವಕಾಶ ಇದ್ದರೆ ಎರಡು-ಬಾಗಿಲಿನ ಪ್ರವೇಶವನ್ನು ನಿರ್ಮಿಸಿ, ಇದು ಸಹ ಸಕಾರಾತ್ಮಕತೆಯನ್ನು ಸೆಳೆಯುತ್ತದೆ.

ಪೂಜಾ ಕೋಣೆಯು ಚಿಕ್ಕದಾಗಿರುವುದರಿಂದ, ಗೋಪುರದಂತಹ ಆಕಾರವು ನಮ್ಮನ್ನು ಸುಲಭವಾಗಿ ಧ್ಯಾನಸ್ಥಿತಿಗೆ ಹೋಗಲು ಸಹಾಯ ಮಾಡುತ್ತದೆ. ಅಲ್ಲದೆ, ಪಿರಮಿಡ್‌ ಆಕಾರವು ಇರುವೆಗಳು ಮತ್ತು ಕೀಟಗಳನ್ನು ಪವಿತ್ರವಾದ ದೇವರ ಕೋಣೆಯಿಂದ ದೂರವಿರುವಂತೆ ಮಾಡುತ್ತದೆ.

ದೇವರ ವಿಗ್ರಹ ಹೇಗಿಡಬೇಕು?

ದೇವರ ವಿಗ್ರಹ ಹೇಗಿಡಬೇಕು?

ನಿಮ್ಮ ಪೂಜಾ ಕೊಠಡಿಯ ವಾಸ್ತು ದಿಕ್ಕಿಗೆ ಪ್ರಾಮುಖ್ಯತೆ ನೀಡಿದಂತೆಯೇ, ದೇವರ ವಿಗ್ರಹವನ್ನು ಇರಿಸುವುದು ಸಹ ಬಹಳ ಮುಖ್ಯವಾಗುತ್ತದೆ. ದೇವರ ವಿಗ್ರಹವನ್ನು ಇಡಲು ಉತ್ತಮ ಸ್ಥಳ, ಗೋಡೆಯಿಂದ ಕೆಲವು ಇಂಚುಗಳಷ್ಟು ದೂರದಲ್ಲಿ ಮತ್ತು ನೆಲದಿಂದ ಕನಿಷ್ಠ ಆರು ಇಂಚುಗಳಷ್ಟು ಎತ್ತರವಿರಬೇಕು. ದೈವಾಧೀನರಾದ ಭಾವಚಿತ್ರಗಳು ಮತ್ತು ಹಿಂಸೆಯನ್ನು ಚಿತ್ರಿಸುವ ವರ್ಣಚಿತ್ರಗಳು ನಿಮ್ಮ ಪೂಜಾ ಕೋಣೆಯಲ್ಲಿಇಡುವಂತಿಲ್ಲ.

ವಿಗ್ರಹದ ಸುತ್ತ ನಿರಂತರ ಗಾಳಿಯ ಹರಿವನ್ನು ಖಚಿತಪಡಿಸಿಕೊಳ್ಳಲು ವಿಗ್ರಹವು ಗೋಡೆಯಿಂದ ದೂರವಿರಬೇಕು ಎಂದು ಹೇಳಲಾಗುತ್ತದೆ. ಹೆಚ್ಚುವರಿಯಾಗಿ, ಇದು ಧೂಪದ್ರವ್ಯದ ಸುವಾಸನೆಯೊಂದಿಗೆ ವಿಗ್ರಹವನ್ನು ಆವರಿಸಲು ಸಹ ಸಹಾಯ ಮಾಡುತ್ತದೆ.

ದೇವರ ಕೋಣೆ ಹಾಗೂ ಪೂಜೆಗೆ ಸಂಬಂಧಿಸಿದ ವಸ್ತುಗಳನ್ನು ಎಲ್ಲಿಡಬೇಕು?

ದೇವರ ಕೋಣೆ ಹಾಗೂ ಪೂಜೆಗೆ ಸಂಬಂಧಿಸಿದ ವಸ್ತುಗಳನ್ನು ಎಲ್ಲಿಡಬೇಕು?

ಪೂಜೆ ಸಂಬಂಧಿಸಿದ ಎಲ್ಲಾ ಧಾರ್ಮಿಕ ಪುಸ್ತಕಗಳು, ದೀಪಗಳು ಮತ್ತು ಪೂಜೆಗೆ ಸಂಬಂಧಿಸಿದ ವಸ್ತುಗಳನ್ನು ಎಲ್ಲಿ ಸಂಗ್ರಹಿಸಬೇಕು ಎಂಬ ಗೊಂದಲದಲ್ಲಿದ್ದೀರಾ?. ಯಾವಾಗಲೂ ದೇವರ ವಿಗ್ರಹದ ಮೇಲೆ ಯಾವುದೇ ವಸ್ತುಗಳನ್ನು ಶೇಖರಿಸಬೇಡಿ ಹಾಗೂ ಪೂಜೆಗೆ ಸಂಬಂಧಿಸಿದ ವಸ್ತುಗಳನ್ನು ಆಗ್ನೇಯ ದಿಕ್ಕಿಗೆ ಇಟ್ಟರೆ ಒಳ್ಳೆಯದು.

ದೇವರ ಕೋಣೆಯ ಬಣ್ಣ ಹೇಗಿರಬೇಕು?

ದೇವರ ಕೋಣೆಯ ಬಣ್ಣ ಹೇಗಿರಬೇಕು?

ಪೂಜಾ ಕೋಣೆಯ ವಾಸ್ತು ಸಲಹೆಗಳಲ್ಲೊಂದು ಕೋಣೆಯ ಬಣ್ಣ. ಬಿಳಿ, ತಿಳಿ ನೀಲಿ ಅಥವಾ ತಿಳಿ ಹಳದಿ ಮುಂತಾದ ತಿಳಿ ಬಣ್ಣಗಳನ್ನು ಬಳಸಿದರೆ ಉತ್ತಮ ಕಾರಣ ಇದು ಧ್ಯಾನ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ನೀವು ದೇವರ ಕೋಣೆಗೆ ಮಾರ್ಬಲ್ ಅನ್ನು ಬಳಸುವುದಾದರೆ ಬಿಳಿ, ತಿಳಿ ಹಳದಿ ಚೆನ್ನಾಗಿ ಕಾಣುತ್ತದೆ.

ತಿಳಿ ಬಣ್ಣಗಳು ಜಾಗವನ್ನು ಪ್ರಕಾಶಮಾನವಾಗಿಡಲು ಸಹಾಯ ಮಾಡುತ್ತದೆ, ಆದರೆ ನೀವು ಪ್ರಾರ್ಥನೆ ಮಾಡುವಾಗ ಗಾಢವಾದ, ಜೋರಾದ ಛಾಯೆಗಳೇ ನಿಮ್ಮ ಗಮನವನ್ನು ಹೆಚ್ಚು ಸೆಳೆಯುವ ಸಾಧ್ಯತೆ ಇರುತ್ತದೆ.

ಬೆಳಕು ಪ್ರಕಾಶಮಾನವಾಗಿರಲಿ ಮತ್ತು ಧನಾತ್ಮಕವಾಗಿರಲಿ

ಬೆಳಕು ಪ್ರಕಾಶಮಾನವಾಗಿರಲಿ ಮತ್ತು ಧನಾತ್ಮಕವಾಗಿರಲಿ

ಪೂಜಾ ಕೋಣೆಗೆ ಸದಾ ಪ್ರಕಾಶಮಾನವಾದ ಬೆಳಕು ಬರುವಂತಿರಬೇಕ. ಇದು ನಿಮ್ಮ ಮನೆಯ ಚಿಕ್ಕ ಕೊಠಡಿಯಾಗಿರುವುದರಿಂದ ಅದನ್ನು ಬೆಳಗಿಸಲು ನಿಮಗೆ ಪ್ರಕಾಶಮಾನವಾದ ದೀಪಗಳು ಬೇಕಾಗುತ್ತವೆ. ಈಶಾನ್ಯ ದಿಕ್ಕಿನಲ್ಲಿ ದೀಪಗನ್ನು ಇಡಿ. ಅದು ಸಾಧ್ಯವಾಗದಿದ್ದರೆ, ಸಾಕಷ್ಟು ಕೃತಕ ದೀಪಗಳನ್ನು ಬದಲಿಯಾಗಿ ಬಳಸಿ.

FAQ's
  • ಈಗಾಗಲೇ ದೇವರ ಕೋಣೆ ಇದ್ದು ವಾಸ್ತು ಸರಿ ಇಲ್ಲದಿದ್ದರೆ ಏನು ಮಾಡಬೇಕು?

    ದೇವರ ಕೋಣೆಯ ವಾಸ್ತು ಸರಿ ಇಲ್ಲದಿದ್ದರೆ ಇದಕ್ಕೆ ವಾಸ್ತು ಪರಿಹಾರ ವಸ್ತುಗಳು ಲಭ್ಯವಿದೆ. ವಾಸ್ತು ತಜ್ಞರ ಸಲಹೆಯಂತೆ ಈ  ವಸ್ತುವನ್ನು ದೇವರ ಕೋಣೆಯಲ್ಲಿ ಇಡುವುದುರಿಂದ ವಾಸ್ತು ಸಮಸ್ಯೆ ನಿವಾರಿಸಿಕೊಳ್ಳಬಹುದು. 

English summary

Vastu for Pooja Room in House (Best Direction, Colors, Design, Door) in Kannada

Here we are discussing about Vastu for pooja room in Kannada Read more.
X
Desktop Bottom Promotion