For Quick Alerts
ALLOW NOTIFICATIONS  
For Daily Alerts

ಸುವಾಸನೆಯ ಎಣ್ಣೆಯನ್ನು ಕೊಳ್ಳುವಾಗ ಈ ಅಂಶಗಳನ್ನು ಗಮನಿಸಲೇಬೇಕು

|

ಆಹ್ಲಾದಕರ ಪರಿಮಳ ಯಾರಿಗಿಷ್ಟವಿಲ್ಲ? ವಿಶೇಷವಾಗಿ ಈ ಪರಿಮಳ ನೈಸರ್ಗಿಕ ಮತ್ತು ಮನಸ್ಸಿಗೆ ಮುದ ನೀಡುವಂತಿದ್ದಾಗ ಈ ಪರಿಮಳ ಸದಾ ಹೀಗೇ ಇರಲಿ ಎಂದೆನ್ನಿಸುತ್ತದೆ. ಈ ಪರಿಮಳಗಳಿಗೆ ಮನಸ್ಸನ್ನು ನಿರಾಳಗೊಳಿಸುವ, ನಿತ್ರಾಣಗೊಂಡ ದೇಹಕ್ಕೆ ಪುನಃಶ್ಚೇತನ ನೀಡುವ ಹಾಗೂ ಮನೋಭಾವನೆಗಳನ್ನು ಉತ್ತಮಗೊಳಿಸುವ ಗುಣವಿದೆ. ಈ ಗುಣಗಳನ್ನೇ ಚಿಕಿತ್ಸಾ ರೂಪದಲ್ಲಿ ಬಳಸುವ ಅರೋಮಾಥೆರಪಿ ವಿಧಾನವೂ ಸಾಕಷ್ಟು ಜನಪ್ರಿಯವಾಗಿದೆ.

ತಲೆನೋವು, ಮೈಗ್ರೇನ್, ನಿದ್ರಾರಾಹಿತ್ಯ ಮೊದಲಾದವುಗಳಿಗೆ ಚಿಕಿತ್ಸೆ ಲಭ್ಯವಿದೆ. ಆದರೆ ಈ ಪರಿಮಳಗಳನ್ನು ನೈಸರ್ಗಿಕವಾಗಿ ನಮಗೆ ಬೇಕಾದ ಸಮಯದಲ್ಲಿ ಪಡೆಯಲು ಸಾಧ್ಯವಿಲ್ಲ. ಹಾಗಾಗಿ, ನೈಸರ್ಗಿಕವಾಗಿ, ಈ ಪರಿಮಳ ಸೂಸುವ ತೈಲದ ಅಂಶಗಳನ್ನು ಸಂಗ್ರಹಿಸಿ ಬೇಕಿದ್ದಾಗ ಬಳಸಿಕೊಳ್ಳಲು ಈ ತೈಲಗಳನ್ನು ಬಳಸಲಾಗುತ್ತದೆ. ಇವೇ ಅವಶ್ಯಕ ತೈಲಗಳು ಅಥವಾ essential oils. ಇವು ನೈಸರ್ಗಿಕವಾಗಿರುವ ಕಾರಣ ಇವನ್ನು ಸುಗಂಧಗಳ ಪಟ್ಟಿಗೆ ಸೇರಿಸಲಾಗಿಲ್ಲ.

ಅವಶ್ಯಕ ತೈಲಗಳು ಅವುಗಳ ಲಭ್ಯತೆ ಹಾಗೂ ತಯಾರಿಸುವ ಮೂಲವೆಚ್ಚವನ್ನು ಆಧರಿಸಿ ಕೊಂಚ ದುಬಾರಿಯೇ ಆಗಿರುತ್ತವೆ. ಯಾವಾಗ ಲಾಭದ ಅವಕಾಶವಿದೆಯೋ, ಅಲ್ಲಿ ದುರುಳರು ಕೈಚಳಕ ತೋರುವ ಸಾಧ್ಯತೆ ಇದ್ದೇ ಇರುತ್ತದೆ. ಅವಶ್ಯಕ ತೈಲಗಳ ವಿಷಯದಲ್ಲಿಯೂ ಹಾಗೇ, ಗ್ರಾಹಕರಾಗಿ ನಾವು ಈ ಬಗ್ಗೆ ಎಚ್ಚರವಹಿಸುವುದು ಅಗತ್ಯ. ಏನೆಲ್ಲಾ ಎಚ್ಚರ ವಹಿಸಬೇಕು ಎಂಬುದನ್ನು ನೋಡೋಣ:

ಬಾಟಲಿಯನ್ನು ಪರಿಶೀಲಿಸಿ

ಬಾಟಲಿಯನ್ನು ಪರಿಶೀಲಿಸಿ

ನಿಮ್ಮ ಅವಶ್ಯಕ ತೈಲಗಳು ಒಂದು ವೇಳೆ ಪ್ಲಾಸ್ಟಿಕ್ ಅಥವಾ ಇತರ ಬಾಟಲಿಗಳಲ್ಲಿ ಪ್ಯಾಕ್ ಮಾಡಲಾಗಿದ್ದರೆ ಖರೀದಿಸಬೇಡಿ. ಎಲ್ಲಾ ಸಂದರ್ಭಗಳಲ್ಲಿ, ಇದು ಗಾಜಿನ ಬಾಟಲಿಯಲ್ಲಿಯೇ ಇರಬೇಕೇ ವಿನಃ ಬೇರಾವ ಮೂಲವಸ್ತುವಿನ ಪ್ಯಾಕ್ ಅಲ್ಲ. ಬಾಟಲಿಯ ಸತ್ಯಾಸತ್ಯತೆಯನ್ನು ಪರೀಕ್ಷಿಸುವ ಎರಡನೆಯ ಪ್ರಮುಖ ಅಂಶವೆಂದರೆ ಅದರ ಬಣ್ಣ, ನೀವು ಕೋಬಾಲ್ಟ್ ನೀಲಿ ಅಥವಾ ಅಂಬರ್-ಕಂದು ಬಣ್ಣದ ಗಾಜಿನ ಬಾಟಲಿ ಇರುವುದನ್ನು ಪರಿಶೀಲಿಸಬೇಕು. ಈ ತೈಲಗಳು ಪ್ಲಾಸ್ಟಿಕ್‌ನಲ್ಲಿ ಪ್ಯಾಕ್ ಆಗುವುದಿಲ್ಲ ಏಕೆಂದರೆ ಅವು ಪ್ಲಾಸ್ಟಿಕ್ ಅನ್ನು ಒಡೆಯುವ ಸಾಧ್ಯತೆಯಿದೆ ಮತ್ತು ಅವು ಬೆಳಕಿಗೆ ಸೂಕ್ಷ್ಮವಾಗಿರುವುದರಿಂದ ಅಂದರೆ ಬೆಳಕಿಗೆ ಒಡ್ಡಿದಾಗ ಗುಣವನ್ನು ಕಳೆದುಕೊಳ್ಳುವುದರಿಂದ ಅವುಗಳ ಒಳ್ಳೆಯತನವನ್ನು ಕಳೆದುಕೊಳ್ಳಬಹುದು. ಹಾಗಾಗಿ, ಗಾಜಿನ ಬಾಟಲಿಯಾಗಿದ್ದರೂ ಪಾರದರ್ಶಕವಾಗಿರಬಾರದು.

ಲ್ಯಾಟಿನ್ ಹೆಸರು ಗಮನಾರ್ಹವಾಗಿದೆ

ಲ್ಯಾಟಿನ್ ಹೆಸರು ಗಮನಾರ್ಹವಾಗಿದೆ

ಅವಶ್ಯಕ ತೈಲದ ಬಾಟಲಿಯಲ್ಲಿ ತೈಲವನ್ನು ತಯಾರಿಸಲು ಬಳಸಲಾದ ಸಸ್ಯದ ಸಾಮಾನ್ಯ ಮತ್ತು ಲ್ಯಾಟಿನ್ ಹೆಸರಿನೊಂದಿಗೆ ಲೇಬಲ್ ಇರಬೇಕು. ಇದಲ್ಲದೆ, ನಿಮ್ಮ ಅನುಮಾನಗಳನ್ನು ಮತ್ತಷ್ಟು ತೆರವುಗೊಳಿಸಲು, ತೈಲವನ್ನು ತಯಾರಿಸಲು ಯಾವ ಸಸ್ಯ ಭಾಗಗಳನ್ನು ಬಳಸಲಾಗುತ್ತಿತ್ತು ಮತ್ತು ಅದನ್ನು ಹೇಗೆ ಹೊರತೆಗೆಯಲಾಗಿದೆ ಎಂಬ ಬಗ್ಗೆ ಲೇಬಲ್‌ನ ವಿವರಗಳಿವೆಯೇ ಎಂದು ಸಹ ಪರಿಶೀಲಿಸಿ. ಆದರೂ, ಕೆಲವೊಮ್ಮೆ ಜನರು ಶೇಕಡಾ 100 ರಷ್ಟು ಶುದ್ಧ ಅವಶ್ಯಕ ತೈಲವನ್ನು ಖರೀದಿಸಲು ಬಯಸುತ್ತಾರೆ, ಆದರೆ ವಿವಿಧ ಉದ್ದೇಶಗಳಿಗಾಗಿ ಬಳಸಲು ಕೊಬ್ಬರಿ ಅಥವಾ ಹೋಹೋಬಾ ಎಣ್ಣೆಯಂತಹ ವಾಹಕ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಒದಗಿಸಲಾಗಿರಬಹುದು.

ಯಾವುದು ಅವಶ್ಯಕ ತೈಲವಲ್ಲ?

ಯಾವುದು ಅವಶ್ಯಕ ತೈಲವಲ್ಲ?

ಚಿಕ್ಕ ಗಾಜಿನ ಬಾಟಲಿಯಲ್ಲಿ ಬರುವ ಪ್ರತಿಯೊಂದು ಪರಿಮಳಯುಕ್ತ ಎಣ್ಣೆಗಳೆಲ್ಲವೂ ಅವಶ್ಯಕ ತೈಲಗಳಲ್ಲ. ‘ಸುಗಂಧ ತೈಲ-(‘fragrance oil')- ಎಂದು ವಿವರಿಸುವ ಲೇಬಲ್ ಅನ್ನು ನೀವು ಓದಿದರೆ ಇದರರ್ಥ ಅದು ಸಾರಭೂತ ತೈಲವಲ್ಲ, ಆದರೆ ಉತ್ತಮವಾದ ವಾಸನೆಯುಕ್ತ ಸಸ್ಯಜನ್ಯ ಎಣ್ಣೆಯಾಗಿದೆ. ಕೆಲವು ಸಸ್ಯಗಳು ಸಾರಭೂತ ತೈಲವನ್ನು ನೀಡುವ ಸಾಮರ್ಥ್ಯವನ್ನು ಹೊಂದಿಲ್ಲ. ಆದರೆ ಇವು ಅವಶ್ಯಕ ತೈಲಗಳು ಬೀರುವ ರೀತಿಯ ಪರಿಮಳವನ್ನೇ ಸೂಸಬಹುದು. ಉದಾಹರಣೆಗೆ ನೇರಳೆ ಎಣ್ಣೆಯಂತೆ (violet oil) ಇರಬಹುದು. ಇವುಗಳನ್ನು ಅವಶ್ಯಕ ತೈಲಗಳು ಎಂದು ಪರಿಗಣಿಸಲು ಸಾಧ್ಯವಿಲ್ಲ (ಇದೇ ಕಾರಣಕ್ಕೆ ಜೆರೇನಿಯಂ ಅವಶ್ಯಕ ತೈಲ (Geranium essential oil) ಅನ್ನು ಕೊಳ್ಳುವುದು ಜಾಣತನದ ಕ್ರಮವಾಗಿದೆ).

 ಆಕ್ಸಿಡೀಕರಣ (Oxidation)

ಆಕ್ಸಿಡೀಕರಣ (Oxidation)

ಆಕ್ಸಿಡೀಕರಿಸಿದ ವಸ್ತುವನ್ನು ನೀವು ಎಂದಿಗೂ ಖರೀದಿಸಲು ಬಯಸುವುದಿಲ್ಲ. ಇವು ಹೆಚ್ಚಾಗಿ ನಕಲಿ ಅವಶ್ಕಕ ತೈಲದಿಂದ ತಯಾರಿಸಲಾಗಿರುತ್ತದೆ, ಏಕೆಂದರೆ ಅಪ್ಪಟ ಅವಶ್ಯಕ ತೈಲ ಬಹಳ ಕಾಲ ಪರಿಮಳ ಉಳಿಸಿಕೊಳ್ಳುತ್ತದೆ. ಆದರೆ ಕೃತಕವಾದ ತೈಲ ಅಶುದ್ಧವಾಗಿದ್ದು ಆಕ್ಸಿಡೀಕರಣದಿಂದಾಗಿ ಕೆಟ್ಟದಾಗಿ ಹೋಗುತ್ತದೆ. ತಜ್ಞರ ಸಲಹೆಯನ್ನು ಪರಿಗಣಿಸುವುದಾದರೆ, ನೀವು ಅವುಗಳನ್ನು ಹೇಗಾದರೂ ಆಮ್ಲಜನಕ ಮುಕ್ತ ವಾತಾವರಣದಲ್ಲಿ ಸಂಗ್ರಹಿಸದ ಹೊರತು ಇವುಗಳು ಹಾಳಾಗುವುದನ್ನು ತಡೆಯಲು ಸಾಧ್ಯವಿಲ್ಲ. ಇದು ಅಸಾಧ್ಯ ಎಂದು ನಮಗೆ ಸ್ಪಷ್ಟವಾಗಿ ತಿಳಿದಿದೆ. ಆದ್ದರಿಂದ ಸಾರಭೂತ ತೈಲಗಳನ್ನು ಖರೀದಿಸುವ ಮೊದಲು ಅವುಗಳನ್ನು ತಯಾರಿಸಿದ ಮತ್ತು ಅಂತಿಮ ದಿನಾಂಕಗಳನ್ನು ಪರಿಶೀಲಿಸಿ.

ಅವಶ್ಯಕ ತೈಲದ ಬೆಲೆ

ಅವಶ್ಯಕ ತೈಲದ ಬೆಲೆ

ಅವಶ್ಯಕ ತೈಲದ ಬೆಲೆ ಕೆಲವನ್ನು ಅಂಶಗಳನ್ನು ಅವಲಂಬಿಸಿರುತ್ತದೆ. ಹೇಗಾದರೂ, ಒಂದು ವಿಷಯ ಖಚಿತವಾಗಿ, ಒಂದೇ ಸಸ್ಯವು ಅಲ್ಪ ಪ್ರಮಾಣದ ಸಾರಭೂತ ತೈಲವನ್ನು ಮಾತ್ರ ನೀಡುವುದರಿಂದ ಅವು ಸ್ವಾಭಾವಿಕವಾಗಿಯೇ ಕೊಂಚ ದುಬಾರಿಯೇ ಆಗಿರುತ್ತದೆ. ಆದರೆ ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಪ್ರಮಾಣದ ಅವಶ್ಯಕ ತೈಲವನ್ನು ಪಡೆಯಲು ನೀವು ತಕ್ಕ ಬೆಲೆಯನ್ನು ಕೊಡುವುದು ಸಾರ್ಥಕವಾಗುತ್ತದೆ. ಆದರೆ ನೀವು ಕೊಡುವ ಬೆಲೆಗೆ ನಿಮಗೆ ತಕ್ಕ ಉತ್ಪನ್ನವೇ ದೊರಕುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಕೆಳಗಿನ ವಿಷಯಗಳನ್ನು ಪರಿಗಣಿಸುವುದು ಅಗತ್ಯ

ಈ ಸಸ್ಯಗಳನ್ನು ಬೆಳೆಸಿರುವ ವಿಧಾನ

ಸರಿಯಾದ ಸಸ್ಯದ ಲಭ್ಯತೆ

ಕೊಯ್ಲು ಮಾಡುವ ವಿಧಾನ

ತೈಲವನ್ನು ಪಡೆಯುವ ವಿಧಾನಗಳು

ಈ ಮಾಹಿತಿಗಳನ್ನು ಅವಲಂಬಿಸಿ ನಿಮಗೆ ಸೂಕ್ತವೆನಿಸುವ ಅವಶ್ಯಕ ತೈಲವನ್ನು ಕೊಳ್ಳಬಹುದು.

English summary

Things You Need to Know Before Buying Essential Oils

If you want to buy essential oil you must know these things, read on....
X