For Quick Alerts
ALLOW NOTIFICATIONS  
For Daily Alerts

ಪೂಜೆಯಲ್ಲಿ ಪಾರಿಜಾತ ಹೂವಿನ ಮಹತ್ವ ಹಾಗೂ ಇದರಲ್ಲಿರುವ ಔಷಧೀಯ ಗುಣಗಳು

|

ಭೂಮಿ ಪೂಜೆಯಲ್ಲಿ ಪವಿತ್ರವಾದ ಪಾರಿಜಾತ ಹೂ ಗಿಡವನ್ನು ನೆಡಲಾಗಿದೆ. ನಮ್ಮ ತತ್ತ್ವ ಶಾಸ್ತ್ರದಲ್ಲಿನ ಪಾರಿಜಾತ ಗಿಡಕ್ಕೆ ಎಲ್ಲಿಲ್ಲದ ಮಹತ್ವವಿದೆ. ಸಮುದ್ರ ಮಥನ ಕಾಲದಲ್ಲಿ ಸುರಭಿ, ವಾರಣಿಯ ನಂತರ ಜನಿಸಿದ್ದು ಪಾರಿಜಾತ ಎಂಬ ಕತೆಯಿದೆ. ಕ್ಷೀರ ಸಮುದ್ರದಿಂದ ಹುಟ್ಟಿದ 5 ಕಲ್ಪ ವೃಕ್ಷಗಳಲ್ಲಿ ಇದೂ ಕೂಡ ಒಂದು. ಕಲ್ಪ ವೃಕ್ಷ ಹಾಗೂ ಕಾಮಧೇನುವನ್ನು ಋಷಿಗಳಿಗೆ ಕೊಟ್ಟ ಇಂದ್ರ, ಇಂದ್ರಾಣಿಗಾಗಿ ಪಾರಿಜಾತ ವೃಕ್ಷವನ್ನು ತನ್ನ ನಂದನವನಕ್ಕೆ ಕೊಂಡೊಯೊದ್ದ. ಕೃಷ್ಣನಿಗೆ ತುಂಬಾ ಪ್ರಿಯವಾದ ಗಿಡ ಪಾರಿಜಾತ. ಕೃಷ್ಣ ಇಂದ್ರ ಲೋಕದಿಂದ ಪಾರಿಜಾತ ಗಿಡವನ್ನು ತಂದು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟನೆಂಬ ಕತೆಯಿದೆ.

ಈ ಹವ್ಯಾಸ ನಿಮ್ಮಲ್ಲಿದ್ದರೆ ಮರೆವು ಕಟ್ಟಿಟ್ಟ ಬುತ್ತಿ | Habits That Will Damage Your Brain | Boldsky Kannada
Parijat Tree History, Significance, Health Benefits, Medicinal Uses

ಪಾರಿಜಾತ ಹೂವನ್ನು ತಿಳುವಳಿಕೆ ಹಾಗೂ ಜ್ಞಾನದ ಸಂಕೇತ ಎನ್ನುತ್ತಾರೆ. ಈ ಹೂವಿನ ಕಂಪು ಮೂಗಿಗೆ ತುಂಬಾ ಹಿತ, ಈ ಹೂ ಸೂರ್ಯ ಮುಳುಗಿದ ನಂತರ ಅರಳುವುದರಿಂದ ಇದನ್ನು ನೈಟ್ ಜಾಸ್ಮಿನ್‌ ಎಂದು ಕೂಡ ಕರೆಯಲಾಗುವುದು. ಇದನ್ನು ದೇವ ಪುಷ್ಮ ಎಂದು ಕರೆಯಲಾಗುವುದು.

ಪೂಜೆಯಲ್ಲಿ ಪಾರಿಜಾತ

ಪೂಜೆಯಲ್ಲಿ ಪಾರಿಜಾತ

ಪಾರಿಜಾತ ಹೂವನ್ನು ಪೂಜೆಗೆ ಬಳಸುವುದು ಶ್ರೇಷ್ಠವೆಂದು ಹೇಳಲಾಗುತ್ತದೆ. ಇದರ ಸುವಾಸನೆ ಮನಸ್ಸಿಗೆ ತುಂಬಾ ಆಹ್ಲಾದಕರವಾಗಿರುತ್ತದೆ. ಈ ಹೂವನ್ನು ಪೂಜೆಗೆ ಮಾತ್ರವಲ್ಲ, ಆಯುರ್ವೇದಲ್ಲಿ ಔಷಧಿಯಾಹಿಯೂ ಬಳಸಲಾಗುವುದು. ತುಂಬೆ ಮುಂತಾದ ಔಷಧಿ ಸಸ್ಯಗಳಲ್ಲಿ ತುಂಬೆ ಹೂವಿಗೆ ಅಗ್ರಸ್ಥಾನ.

 ಸಂಧಿವಾತ ನಿವಾರಣೆ ಮಾಡುವ ಪಾರಿಜಾತ

ಸಂಧಿವಾತ ನಿವಾರಣೆ ಮಾಡುವ ಪಾರಿಜಾತ

ವಿಪರೀತ ಕಾಡುವ ಕೀಲುನೋವು ಶಮನ ಮಾಡುವ ಗುಣ ಪಾರಿಜಾತ ಗಿಡಕ್ಕಿದೆ, ಇದರ ಎಲೆಗಳಿಂದ ಮಾಡುವ ಕಷಾಯ ಸಂಧಿವಾತ ನೋವು ಕಡಿಮೆಯಾಗುವುದು. ಪ್ರತಿದಿನ ಮುಂಜಾನೆ ಪಾರಿಜಾತದ ಎಲೆಗಳ ಕಷಾಯ ಕುಡಿಯುತ್ತಿದ್ದರೆ ಸಂಧಿವಾತ ನಿಯಂತ್ರಣಕ್ಕೆ ಬರುತ್ತದೆ.

ಪಾರಿಜಾತ ಎಲೆಯನ್ನು ಜಜ್ಜಿ ಅದನ್ನು ತೆಂಗಿನೆಣ್ಣೆಯಲ್ಲಿ ಕುದಿಸಿ ಅದನ್ನು ಹಚ್ಚುವುದರಿಂದಲೂ ನೋವು ಕಡಿಮೆಯಾಗುವುದು.

ಕೆಮ್ಮು, ಜಂತು ಹುಳ ನಿವಾರಣೆ

ಕೆಮ್ಮು, ಜಂತು ಹುಳ ನಿವಾರಣೆ

ಪಾರಿಜಾತ ಗಿಡದ ಎಲೆಯಿಂದ ಮಾಡಿದ ಕಷಾಯ ಕೆಮ್ಮು ಹಾಗೂ ಜಂತುಹುಳ ನಿವಾರಣೆಗೆ ಬಳಸುತ್ತಾರೆ. ಮಕ್ಕಳಿಗೆ ಇದರ ಎಲೆಯ ಔಷಧ ಮಾಡಿ ನೀಡಲಾಗುವುದು. ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡುವಲ್ಲಿಯೂ ಪಾರಿಜಾತ ಎಲೆಯ ಕಷಾಯ ಪರಿಣಾಮಕಾರಿಯಾಗಿದೆ.

ಹತ್ತು ಪಾರಿಜಾತ ಎಲೆಯನ್ನು ಒಂದು ಕಪ್ ನೀರಿಗೆ ಹಾಕಿ ಅದು ಅರ್ಧ ಕಪ್ ಆಗುವಷ್ಟು ಹೊತ್ತು ಕುದಿಸಿ, ಅದಕ್ಕೆ ಶುಂಠಿ ರಸ ಹಾಗೂ ಜೇನು ಸೇರಿಸಿ ಕುಡಿಯಿರಿ. ಇದನ್ನು ಮೂರು ಹೊತ್ತು ಕುಡಿಯುತ್ತಿದ್ದರೆ ಬೇಗನೆ ಕೆಮ್ಮು ಕಡಿಮೆಯಾಗುವುದು.

ಅಲ್ಲದೆ ಇದರ ಎಲೆಗಳನ್ನು ಕುದಿಸಿ ಕುಡಿಯುವುದರಿಮದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.

ಪಾರಿಜಾತ ಬೀಜ

ಪಾರಿಜಾತ ಬೀಜ

ಪಾರಿಜಾತ ಬೀಜವನನ್ನು ಸಂಗ್ರಹಿಸಿ ಪುಡಿ ಮಾಡಿ ಇದನ್ನು ಔಷಧಿಯಾಗಿ ಕಾಮಲೆ ರೋಗ ನಿವಾರಣೆಗೆ ಕೂಡ ಬಳಸಲಾಗುವುದು.

ಸೌಂದರ್ಯ ಉತ್ಪನ್ನ

ಪಾರಿಜಾತ ಬೀಜದ ಪುಡಿಯನ್ನು ಪೌಡರ್ ಮಾಡಿ ಇದನ್ನು ಮುಖದ ಸೌಂದರ್ಯ ವೃದ್ದಿಸಲು ಬಳಸಬಹುದು. ಅಲ್ಲದೆ ಇದನ್ನು ಸುಗಂಧ ದ್ರವ್ಯಗಳ ಔಷಧ ತಯಾರಿಕೆಯಲ್ಲಿ ಕೂಡ ಬಳಸುತ್ತಾರೆ.

 ಪಾರಿಜಾತ ಗಿಡ ಬೆಳೆಸುವುದು ಹೇಗೆ?

ಪಾರಿಜಾತ ಗಿಡ ಬೆಳೆಸುವುದು ಹೇಗೆ?

  • ಈ ಗಿಡಕ್ಕೆ ಪ್ರತಿದಿನ ನೀರು ಹಾಕಬೇಕು (ಹೆಚ್ಚು ನೀರು ಹಾಕಬಾರದು, ಹವಾಮಾನಕ್ಕೆ ತಕ್ಕಂತೆ ನೀರುಣಿಸಬೇಕು)
  • ಗಿಡ ನೆಟ್ಟು ಒಂದು ತಿಂಗಳಾಗುವಷ್ಟರಲ್ಲಿ ಗಿಡದಲ್ಲಿ ಹೂ ಬಿಡಲಾರಂಭಿಸುತ್ತದೆ. ಹೂ ಅರಳಿದರೆ ಒಂದು ವಾರಗಳ ಕಾಲ ಇರುತ್ತದೆ.
  • ಹೂ ಅರಳಿ ಉದುರಿದ ತುದಿಯನ್ನು ಕತ್ತರಿಸಬೇಕು, ಈ ಕೊಂಬೆ ನೆಟ್ಟರೆ ಹೊಸ ಗಿಡ ಬೆಳೆಯುತ್ತದೆ.
  • ಎಲ್ಲಾ ಕಾಲದಲ್ಲಿ ಪುಷ್ಪ ಬಿಡುವ ಈ ಗಿಡವನ್ನು ಮಳೆಗಾಲದಲ್ಲಿ ಕತ್ತರಿಸಬಾರದು.
English summary

Parijat Tree History, Significance, Health Benefits, Medicinal Uses in Kannada

Here are parijat tree history, significance and helath benefits and medicinal uses, read on
X
Desktop Bottom Promotion