For Quick Alerts
ALLOW NOTIFICATIONS  
For Daily Alerts

ಈ ನೈಸರ್ಗಿಕ ಸ್ವಚ್ಛಕಾರಗಳಿಂದ ಮನೆಯಲ್ಲಿ ಸೋಂಕು ನಿವಾರಿಸಿ

|

ಕರೋನವೈರಸ್ ಹೆದರಿಕೆಯಿಂದಾಗಿ ಮನೆಯ ಕೆಲಸಗಾರರನ್ನು, ಎಲ್ಲಾ ಸಹಾಯಕರನ್ನೂ ಮನೆಯಲ್ಲೇ ಇರುವಂತೆ ಮತ್ತು ಕೆಲಸಕ್ಕೆ ಬರದಂತೆ ಕೇಳಿಕೊಳ್ಳಲಾಗಿದೆ. ಈ ಪರಿಸ್ಥಿತಿಯಲ್ಲಿ, ಮಹಿಳೆಯರು ತಮ್ಮ ಮನೆಗಳನ್ನು ಯಾವುದೇ ಸಂಭವನೀಯ ಸೋಂಕುಗಳಿಂದ ಮುಕ್ತವಾಗಿರಿಸುವುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿದೆ.

ಆದ್ದರಿಂದ, ನಿಮ್ಮ ಮನೆಯಲ್ಲಿ ನೀವು ಸುಲಭವಾಗಿ ಕಂಡುಕೊಳ್ಳಬಹುದಾದ ಐದು ನೈಸರ್ಗಿಕ ಜೀವಿರೋಧಿ ವಸ್ತುಗಳ ಪಟ್ಟಿ ಇಲ್ಲಿದೆ, ಈ ಸವಾಲಿನ ಸಮಯದಲ್ಲಿ ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿಡಲು ಇವುಗಳನ್ನು ಬಳಸಬಹುದು. ಒಬ್ಬರೇ ತಮ ಜೀವನವನ್ನು ನಿರ್ವಹಿಸುತ್ತಿರುವ ಪುರುಷರಿಗೆ, ಈ ಸಲಹೆಗಳು ಸೂಕ್ತವಾಗಿವೆ ಮತ್ತು ಸಂಗ್ರಹಿಸುವುದು ಸುಲಭ.

ಬಿಳಿ ವಿನೆಗರ್

ಬಿಳಿ ವಿನೆಗರ್

ಅಸಿಟಿಕ್ ಆಮ್ಲ ಮತ್ತು ನೀರಿನಿಂದ ತಯಾರಿಸಲ್ಪಟ್ಟ ಬಿಳಿ ವಿನೆಗರ್ ಒಂದು ಶಕ್ತಿಶಾಲಿ ಸ್ವಚ್ಛಗೊಳಿಸುವ ವಸ್ತುವಾಗಿದೆ. ಇದು ಜಿಡ್ಡಿನ ಮತ್ತು ಹಠಮಾರಿ ಕೊಳೆಯನ್ನು ಸುಲಭವಾಗಿ ತೆಗೆದುಹಾಕುತ್ತದೆ. ಇದರಲ್ಲಿ ಆಮ್ಲೀಯತೆ ಅಧಿಕವಾಗಿರುವುದರಿಂದ, ಇದು ಮೇಲ್ಮೈ ಬ್ಯಾಕ್ಟೀರಿಯಾವನ್ನು ಸುಲಭವಾಗಿ ತೆಗೆದುಹಾಕುತ್ತದೆ. ವಾಣಿಜ್ಯ ಸ್ವಚ್ಛಗೊಳಿಸುವ ವಸ್ತುಗಳಿಗಿಂತ ಇದು ಹೆಚ್ಚು ಪರಿಣಾಮಕಾರಿ ಎಂದು ಹೇಳಲು ಸಾಧ್ಯವಿಲ್ಲ ಆದರೆ ನೈಸರ್ಗಿಕ ವಸ್ತುಗಳನ್ನು ಬಯಸುವವರಿಗೆ ಅಥವಾ ವಾಣಿಜ್ಯ ಶುಚಿಗೊಳಿಸುವ ಏಜೆಂಟ್ಗಳನ್ನು ಸಂಗ್ರಹಿಸಲು ಮರೆತವರಿಗೆ, ಬಿಳಿ ವಿನೆಗರ್ ಸುಲಭವಾದ ಆಯ್ಕೆಯಾಗಿದೆ.

ವೋಡ್ಕಾ

ವೋಡ್ಕಾ

ವೋಡ್ಕಾ 80 ಅಥವಾ 40 ಪ್ರತಿಶತದಷ್ಟು ಆಲ್ಕೋಹಾಲ್ ಅನ್ನು ಪರಿಮಾಣದ ಪ್ರಕಾರ ಒಳಗೊಂಡಿದೆ ಮತ್ತು ಆದ್ದರಿಂದ ಇದನ್ನು ಬ್ಯಾಕ್ಟೆರೀಯಾ ಮತ್ತು ಶಿಲೀಂಧ್ರವನ್ನು ತೆಗೆದುಹಾಕಲು ಸೋಂಕುನಿವಾರಕವಾಗಿ ಬಳಸಬಹುದು. ವೋಡ್ಕಾ ಸುಲಭವಾಗಿ ಕಲೆಗಳನ್ನು ತೆಗೆದುಹಾಕಬಹುದು, ಇದರಿಂದ ನೆಲವೂ ಹೊಳೆಯುತ್ತದೆ ಮತ್ತು ಇದು ಬಟ್ಟೆಗಳನ್ನು ಸಹ ಸ್ವಚ್ಛ ಮಾಡುತ್ತದೆ ಮತ್ತು ದೀರ್ಘಕಾಲದ ವಾಸನೆಯನ್ನು ಹೊಂದಿರುವುದಿಲ್ಲ.

ನಿಂಬೆ

ನಿಂಬೆ

ಸಂಪರ್ಕ ತಡೆಯ ಸಮಯದಲ್ಲಿ, (ಅಂದರೆ ವೈರಸ್ ಹರಡುವುದನ್ನು ತಪ್ಪಿಸಲು ಮನೆಯಲ್ಲಿಯೇ ಉಳಿಯುವುದು) ನೀವು ನಿಮ್ಮ ಮನೆಯ ಮೇಲೆ ಗಮನ ಹರಿಸಲು ನಿಮಗೆ ಸಾಕಷ್ಟು ಸಮಯವಿದೆ. ಮನೆಯಲ್ಲಿರುವ ತುಕ್ಕು ಹಿಡಿದಿರುವ ವಸ್ತುಗಳು ಮತ್ತು ನಲ್ಲಿಗಳ ಬಗ್ಗೆ ಸ್ವಲ್ಪ ಗಮನ ಹರಿಸುವ ಸಮಯ ಇದು. ತುಕ್ಕುಗಳನ್ನು ತೆಗೆಯಲು, ನಿಂಬೆ ಒಂದು ಉತ್ತಮ ಸಾಧನವಾಗಿದೆ. ಇದು ಕ್ಷಾರೀಯ ಕಲೆಗಳ ಮೇಲೆ ಅತ್ಯದ್ಭುತವಾಗಿ ಕಾರ್ಯನಿರ್ವಹಿಸುತ್ತದೆ, ರಂಧ್ರಗಳಿಲ್ಲದ ಮೇಲ್ಮೈಗಳನ್ನು ಸ್ವಚ್ಛಗೊಳಿಸುತ್ತದೆ ಜೊತೆಗೆ ಲೋಹದ ಮೇಲ್ಮೈಗಳನ್ನು ಹೊಳೆಯುವಂತೆ ಮಾಡುತ್ತದೆ.

ಉಗಿ

ಉಗಿ

ಬ್ಯಾಕ್ಟೀರಿಯಾ ಅಥವಾ ಸೂಕ್ಷ್ಮಜೀವಿಗಳನ್ನು ತೊಡೆದುಹಾಕಲು ಉಗಿ ಒಂದು ಪ್ರಬಲ ಮಾರ್ಗವಾಗಿದೆ ಎಂದು ನಮಗೆಲ್ಲರಿಗೂ ತಿಳಿದಿರುವ ವಿಷಯ. ನೀರು ಮತ್ತು ಶಾಖದ ಸರಳ ಸಂಯೋಜನೆಯು ರಾಸಾಯನಿಕ ಮುಕ್ತ ಸೋಂಕುನಿವಾರಕವಾಗಿ ಕೆಲಸ ಮಾಡುತ್ತದೆ. ನಿಮ್ಮ ಮನೆಯಲ್ಲಿನ ಸೋಂಕುನಿವಾರಿಸಲು ಇದು ಉತ್ತಮ ಮಾರ್ಗವಾಗಿದೆ.

ಕರೋನಾ ವೈರಸ್ಸನ್ನು ತಡೆಯಲು ಮನೆಯಲ್ಲೇ ಉಳಿಯುವ ಅನಿವಾರ್ಯತೆ ಇದೆ. ಹಾಗಾಗಿ ಈ ಸಮಯವನ್ನು ಸದುಪಯೋಗಗೊಳಿಸಿಕೊಳ್ಳಿ, ಮನೆಯನ್ನು ಸ್ವಚ್ಛವಾಗಿಡಿ, ನೀವೂ ಸುರಕ್ಷಿತವಾಗಿರಿ.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary

Natural Antibacterials To Disinfect Your Home

Here we are discussing about Use These Natural Antibacterials To Disinfect Your Home. here is a list of five natural antibacterial things you can easily find at your home which you can use to keep your family safe in these challenging times. Read more.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X