Latest Updates
-
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್!
World Coconut Day: ತೆಂಗಿನ ಕಾಯಿ ತೆಗೆಯುವುದು ಹೇಗೆ? ಅಡುಗೆಗೆ ಇದನ್ನು ಬಳಸಿದಾಗ ಈ ತಪ್ಪು ಮಾಡದಿರಿ
ಸೆಪ್ಟೆಂಬರ್ 2ನ್ನು ವಿಶ್ವ ತೆಂಗಿನಕಾಯಿ ದಿನವನ್ನಾಗಿ ಆಚರಿಸಲಾಗುವುದು. ತೆಂಗಿನಕಾಯಿ ನಮ್ಮ ದಿನ ನಿತ್ಯದ ಜೀವನದಲ್ಲಿ ಅನೇಕ ರೀತಿಯಲ್ಲಿ ಬಳಸುತ್ತೇವೆ. ಎಣ್ಣೆಯಾಗಿ, ಕೊಬ್ಬರಿಯಾಗಿ, ತೆಂಗಿನಕಾಯಿ, ತೆಂಗಿನಕಾಯಿ ಹಾಲು, ಎಳನೀರು ಹೀಗೆ ಅನೇಕ ರೀತಿಯಲ್ಲಿ ಬಳಸುತ್ತೇವೆ. ಈ ಲೇಖನದಲ್ಲಿ ತೆಂಗಿನ ಕಾಯಿ ಹಾಲು ತೆಗೆಯುವುದು ಹೇಗೆ, ಹಾಲು ಹಾಳಾಗದಿರಲು ಏನು ಮಾಡಬೇಕು, ತೆಂಗಿನ ಕಾಯಿ ಹಾಲು ಹಾಕಿದ ಮೇಲೆ ರುಚಿ ಹೆಚ್ಚಿಸಲು ಏನು ಮಾಡಬಾರದು ಎಂಬುವುದರ ಬಗ್ಗೆ ಹೇಳಿದ್ದೇವೆ ನೋಡಿ:
ತೆಂಗಿನಕಾಯಿ ಹಾಕಿ ಮಾಡುವ ಅಡುಗೆಯ ರುಚಿ ಒಂದು ರೀತಿಯಾದರೆ, ತೆಂಗಿನ ಕಾಯಿ ಹಾಲು ಬಳಸಿ ಮಾಡುವ ಅಡುಗೆಯ ರುಚಿ ಇನ್ನೂ ಸೂಪರ್ ಆಗಿರುತ್ತೆ. ತೆಂಗಿನ ಕಾಯಿ ಹಾಲು ರೆಡಿ ಮೇಡ್ ಫುಡ್ ಮಾರ್ಕೆಟ್‌ಗಳಲ್ಲಿ ದೊರೆಯುವುದಾದರೂ ಫ್ರೆಷ್(ತಾಜಾ ಹಾಲು) ಹಾಕಿ ಮಾಡುವ ರುಚಿನೇ ಬೇರೆ.
ತೆಂಗಿನಕಾಯಿ ಹಾಲು ತೆಗೆದು ಮಾಡುವುದು ತುಂಬಾ ಕಷ್ಟದ ವಿಧಾನವೆಂದೇ ಹೆಚ್ಚಿನವರು ಭಾವಿಸಿರುತ್ತಾರೆ. ಆದರೆ ತೆಂಗಿನಕಾಯಿ ಹಾಲು ತೆಗೆಯುವುದು ತುಂಬಾನೇ ಸುಲಭ. ಅಲ್ಲದೆ ನೀವು ಈ ಹಾಲನ್ನು ತೆಗೆದು ಫ್ರಿಡ್ಜ್‌ನಲ್ಲಿಟ್ಟರೆ 3-4 ದಿನ ಕೂಡ ಬಳಸಬಹುದು. ಆದ್ದರಿಂದ ಹಬ್ಬದ ಸಂದರ್ಭದಲ್ಲಿ ತೆಂಗಿನಕಾಯಿ ಹಾಲು ತೆಗೆದು ಮಾಡಲು ಕಷ್ಟವಾಗುವುದು ಎಂದಾದರೆ ಮೊದಲೇ ಮಾಡಿಟ್ಟರೆ ಹಬ್ಬದ ಅಡುಗೆಗಳಲ್ಲಿ ಬಳಸಬಹುದು.
ತೆಂಗಿನ ಹಾಲು ತೆಗೆಯುವುದು ಹೇಗೆ? ಬಳಸುವ ವಿಧಾನ, ಇದರಲ್ಲಿರುವ ಪೋಷಕಾಂಶಗಳು ಮುಂತಾದ ಮಾಹಿತಿ ಈ ಲೇಖನದಲ್ಲಿದೆ ನೋಡಿ.

ಮೊದಲಿಗೆ ತೆಂಗಿನ ಹಾಲು ತೆಗೆಯುವುದು ಹೇಗೆ ಎಂದು ನೋಡೋಣ:
* ತೆಂಗಿನಕಾಯಿ ಆಗಷ್ಟೇ ಒಡೆದು ಅದನ್ನು ತುರಿಯಿರಿ. ಈಗ ತೆಂಗಿನ ತುರಿಯನ್ನು ಬ್ಲೆಂಡರ್‌ಗೆ ಹಾಕಿ ಒಂದು ಕಪ್ ಬಿಸಿ ನೀರು ಸೇರಿಸಿ (ಬಿಸಿ ನೀರು ಸೇರಿಸಿದರೆ 3-4 ದಿನ ಇಡಬಹುದು) ಚೆನ್ನಾಗಿ ರುಬ್ಬಿ.
* ಈಗ ಒಂದು ಶುದ್ಧವಾದ ಪಾತ್ರೆಯಿಟ್ಟು ಅದರ ಮೇಲೆ ಮಸ್ಲಿನ್ ಬಟ್ಟೆ ಇಟ್ಟು ಸೋಸಿ.
*ಮಸ್ಲಿನ್ ಬಟ್ಟೆಯಿಂದ ಚೆನ್ನಾಗಿ ಹಿಂಡಿ. ಹೀಗೆ ಮಾಡಿದರೆ ಗಟ್ಟಿ ಹಾಲು ಸಿಗುವುದು.
* ಈಗ ಈ ಗಟ್ಟಿ ಹಾಲನ್ನು ಒಂದು ಕಪ್‌ನಲ್ಲಿ ತೆಗೆದಿಡಿ.
* ಈಗ ತೆಂಗಿನಕಾಯಿ ತರಿಗೆ ಮತ್ತೆ ಅರ್ಧ ಅಥವಾ ಒಂದು ಕಪ್ ನೀರು ಹಾಕಿ ಮತ್ತೊಮ್ಮೆ ರುಬ್ಬಿ ಆ ಹಾಲನ್ನು ಮಸ್ಲಿನ್ ಬಟ್ಟೆಯಲ್ಲಿ ಸೋಸಿ ತೆಗೆದು ಮತ್ತೊಂದು ಲೋಟದಲ್ಲಿ ತೆಗೆದಿಡಿ.

ಬಳಸುವುದು ಹೇಗೆ?
* ನೀವು ತೆಂಗಿನ ಹಾಲು ಬಳಸುವಾಗ ಕುದಿಸಬಾರದು, ಬಿಸಿಯಾದಾಗ ಸಾರು ಅಥವಾ ಪಾಯಸವನ್ನು ಉರಿಯಿಂದ ಇಳಿಸಬೇಕು. ಆಗ ಅದರ ರುಚಿ ಹೆಚ್ಚು. ಮೊದಲಿಗೆ ತೆಳುವಾದ ಹಾಲನ್ನು ಹಾಕಿ ಕುದಿಸಿ.
* ಗಟ್ಟಿ ಹಾಲನ್ನು ಮಾತ್ರ ಕೊನೆಯ ಹಂತದಲ್ಲಿ ಹಾಕಬೇಕು.

ತೆಂಗಿನಕಾಯಿ ಹಾಲು ಹಾಕಿದ ಅಡುಗೆ ಹಾಳಾಗದಿರಲು ಏನು ಮಾಡಬೇಕು?
* ತೆಂಗಿನಕಾಯಿ ಹಾಲು ಹಾಕಿದ ಅಡುಗೆ ಬೇಗನೆ ಹಾಳಾಗುವುದು.
* ಇಂಥ ಆಹಾರ ನೀವು ಫ್ರಿಡ್ಜ್‌ನಲ್ಲಿಟ್ಟು ಬಳಸುವುದಾದರೆ ಕುದಿಸಬೇಡಿ, ಬಿಸಿ ಮಾಡಿ ಸಾಕು.

ತೆಂಗಿನ ಹಾಲನ್ನು ಸ್ಟೋರ್ ಮಾಡುವುದು ಹೇಗೆ?
* ತೆಂಗಿನ ಹಾಲು ತಯಾರಿಸುವಾಗ ತಣ್ಣೀರಿನ ಬದಲಿಗೆ ಕುದಿಸಿ ಆರಿಸಿದ ನೀರನ್ನು ಬಳಸಿ.
* ತೆಂಗಿನಕಾಯಿ ಹಾಲನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿಡಿ.
* ಫ್ರೀಜರ್‌ನಲ್ಲಿಡಿ
* ವಾರಕ್ಕಿಂತ ಹೆಚ್ಚು ಸಮಯ ಇಡಬೇಡಿ, ರುಚಿ ಕಡಿಮೆಯಾಗುವುದು.
* ತೆಂಗಿನ ಕಾಯಿ ಹಾಲು ಹಾಕಿದ ಪದಾರ್ಥವನ್ನು ಕುದಿಸಬೇಡಿ, ಬಿಸಿ ಮಾಡಿದರೆ ಸಾಕು. ಇದರಿಂದ ರುಚಿ ಹಾಗೂ ಪೋಷಕಾಂಶಗಳು ಹಾಳಾಗದಂತೆ ತಡೆಯಬಹುದು.

1 ಕಪ್ ತೆಂಗಿನಕಾಯಿ ಹಾಲಿನಲ್ಲಿರುವ ಪೋಷಕಾಂಶಗಳು
* ಕ್ಯಾಲೋರಿ:552
* ಕೊಬ್ಬು: 77 ಗ್ರಾಂ
* ಪ್ರೊಟೀನ್: 5 ಗ್ರಾಂ
* ಕಾರ್ಬ್ಸ್: 13 ಗ್ರಾಂ
* ನಾರಿನಂಶ: 5 ಗ್ರಾಂ
ವಿಟಮಿನ್ ಸಿ, ಫೋಲೆಟ್, ಕಬ್ಬಿಣದಂಶ, ಮೆಗ್ನಿಷ್ಯಿಯಂ, ಪೊಟಾಷ್ಯಿಯಂ, ಸತು, ಮ್ಯಾಂಗನೀಸ್, ಸೆಲೆನಿಯಂ ಪೋಷಕಾಂಶಗಳಿವೆ.



Click it and Unblock the Notifications
