Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ದುರಾದೃಷ್ಟ ತರಬಹುದಾದ ಗಿಡಗಳಿವು- ಮನೆಯಲ್ಲಿ ಅಪ್ಪಿತಪ್ಪಿಯೂ ಇಡಬೇಡಿ!

ಹೂಗಿಡಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ನಿಮ್ಮ ಮನೆ ಸುಂದರವಾಗಿದ್ದು ಅಲ್ಲಿ ಹೂದೋಟವೇ ಇಲ್ಲ ಎಂತಾದರೆ ಅದು ಬೋಳಾಗಿರುತ್ತದೆ. ಆದರೆ ಹೂಗಿಡಗಳ ಆಯ್ಕೆಯನ್ನು ನೀವು ಮಾಡುವಾಗ ಅವುಗಳು ಅದೃಷ್ಟವನ್ನು ತರುತ್ತದೆಯೋ ದುರಾದೃಷ್ಟವನ್ನು ತರುತ್ತದೆಯೋ ಎಂಬ ಅಂಶವನ್ನು ನೀವು ಗಮನಿಸಬೇಕು.
ನಿಮ್ಮ ಮನೆಯ ಹೂದೋಟದಲ್ಲಿ ನಳನಳಸಿವ ಹುಗಿಡಗಳು ನಿಮ್ಮ ಮನೆಯ ಅದೃಷ್ಟ ಲಕ್ಷ್ಮೀಯಾಗಿರಲೂ ಬಹುದು ಇಲ್ಲದಿದ್ದರೆ ದುರಾದೃಷ್ಟವನ್ನು ತರುವ ವಸ್ತುವೂ ಆಗಿರಬಹುದು ಇದನ್ನು ಹೇಗೆ ಪತ್ತೆಹಚ್ಚುವುದು ಎಂಬುದನ್ನು ವಾಸ್ತು ಶಾಸ್ತ್ರ ನಿಮಗೆ ತಿಳಿಸುತ್ತದೆ. ಕೆಲವೊಂದು ಹೂಗಿಡಗಳು ನಿಮ್ಮ ಮನೆಯ ದುರಾದೃಷ್ಟಕ್ಕೆ ಕಾರಣವಾಗಿರುತ್ತವೆ ಏಕೆಂದರೆ ಬರಿಯ ಸೌಂದರ್ಯಕ್ಕೆಂದು ತಂದಿರುವಂತಹ ಈ ಗಿಡಗಳು ಮನೆಯಲ್ಲಿ ದುರಾದೃಷ್ಟ ನೆಲೆನಿಲ್ಲುವಂತೆ ಮಾಡಬಲ್ಲುದು.
ಅನಾದಿ ಕಾಲದಿಂದಲೂ ವಾಸ್ತು ಪರಿಹಾರಗಳು ನಮ್ಮ ಮನೆಯ ಸೌಭಾಗ್ಯಕ್ಕೆ ಕಾರಣವಾಗಿವೆ. ಮನೆ ಕಟ್ಟುವ ಸಮಯದಲ್ಲಿ ಕೂಡ ವಾಸ್ತು ಸಲಹೆಯನ್ನು ಪಾಲಿಸಿಕೊಂಡು ಮನೆಯನ್ನು ಕಟ್ಟುತ್ತಾರೆ. ಪ್ರತಿಯೊಂದು ಕೋಣೆ, ಬಾಗಿಲು, ಕಿಟಕಿ, ದೇವರ ಕೋಣೆ, ಅಡುಗೆ ಮನೆ, ಬಚ್ಚಲು ಮನೆ ಹೀಗೆ ಪ್ರತಿಯೊಂದು ಭಾಗದಲ್ಲೂ ವಾಸ್ತು ರಾರಾಜಿಸುತ್ತದೆ. ಅಂದರೆ ವಾಸ್ತುವಿನ ಸಲಹೆಗಳನ್ನು ಪಾಲಿಸಿಕೊಂಡೇ ನಾವು ಮನೆಯ ನಿರ್ಮಾಣವನ್ನು ಮಾಡಬೇಕಾಗುತ್ತದೆ.
ಆದರೆ ಉದ್ಯಾನವನ್ನು ಮಾಡುವ ಸಮಯದಲ್ಲಿ ವಾಸ್ತು ಸಲಹೆಯನ್ನು ಏಕೆ ಪಾಲಿಸಬೇಕು ಎಂಬುದು ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ನಿಮ್ಮ ಉದ್ಯಾನವನದಲ್ಲಿ ಯಾವ ರೀತಿಯ ಹೂಗಿಡಗಳು ಬೇಕು ಎಂಬುದನ್ನು ವಾಸ್ತು ತಿಳಿಸುತ್ತದೆ. ಏಕೆಂದರೆ ನಿಮ್ಮ ಹೂದೋಟದಲ್ಲಿರುವ ಎಲ್ಲಾ ಗಿಡಗಳು ನಿಮ್ಮ ಮನೆಗೆ ಅದೃಷ್ಟವನ್ನು ತರಬೇಕೆಂದಿಲ್ಲ, ಕೆಲವೊಂದು ದುರಾದೃಷ್ಟವನ್ನು ತರಬಹುದು. ಆ ಹೂಗಿಡಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ....

ಕಾಕ್ಟಸ್
ಇದು ಮುಳ್ಳನ್ನು ಹೊಂದಿರುವ ಸಸ್ಯವಾಗಿದ್ದು ಇದಕ್ಕೆ ನೀರು ಅಷ್ಟು ಬೇಕಾಗಿಲ್ಲ. ಬೇಸಿಗೆಯಲ್ಲಿ ಕೂಡ ನೀರಿಲ್ಲದ ಸಮಯದಲ್ಲಿ ಈ ಗಿಡ ಚೆನ್ನಾಗಿ ಬೆಳೆಯುತ್ತದೆ. ಆದರೆ ಇದು ಕುಟುಂಬದ ಸದಸ್ಯರಲ್ಲಿ ಒಡಕನ್ನು ತಂದೊಡ್ಡುತ್ತದೆ ಮತ್ತು ತಪ್ಪು ತಿಳುವಳಿಕೆಗಳನ್ನು ಉಂಟುಮಾಡುತ್ತದೆ.

ಹುಣಸೆ ಮರ
ಅಡುಗೆ ಮನೆಯಲ್ಲಿ ಅಡುಗೆ ಸಾಮಾಗ್ರಿಯಾಗಿ ಹುಳಿಯನ್ನು ಬಳಸಲಾಗುತ್ತದೆ. ತಮ್ಮ ವೈಯಕ್ತಿಕ ಬಳಕೆಗಾಗಿ ಜನರು ಈ ಸಸ್ಯವನ್ನು ಬಳಸುತ್ತಾರೆ. ಆದರೆ ಈ ಗಿಡವನ್ನು ನಿಮ್ಮ ಮನೆಯಲ್ಲಿ ಬೆಳೆಸಬಾರದು. ಹುಣಸೆ ಮರವಿದ್ದಲ್ಲಿ ಯಾವತ್ತೂ ಮನೆ ಕಟ್ಟಬಾರದು. ಹುಳಿಯು ಋಣಾತ್ಮಕ ಅಂಶಗಳನ್ನು ತರುತ್ತದೆ ಆದ್ದರಿಂದ ಹುಳಿ ಮರವಿದ್ದಲ್ಲಿ ಅದನ್ನು ಕೆಡವುದು ಒಳ್ಳೆಯದು.

ಮಿರ್ಟಲ್
ಮೆಹಂದಿ ಗಿಡವಾಗಿರುವ ಮಿರ್ಟಲ್ ಭಾರತೀಯ ಮನೆಗಳಲ್ಲಿ ಕಂಡುಬರುವ ಸಸ್ಯವಾಗಿದೆ. ಮೆಹಂದಿ ಪೌಡರ್ ಮತ್ತು ತಲೆಗೆ ಹಚ್ಚಿಕೊಳ್ಳುವುದಕ್ಕಾಗಿ ಈ ಗಿಡವನ್ನು ಮನೆಯ ಬಳಿ ನೆಡುತ್ತಾರೆ. ಇದು ಕೆಟ್ಟ ಶಕ್ತಿಗಳನ್ನು ಆಕರ್ಷಿಸುತ್ತದೆ ಆದ್ದರಿಂದ ಇದನ್ನು ಮನೆಯ ಸಮೀಪ ನೆಡಬಾರದು. ಈ ಸಸ್ಯವಿದ್ದಲ್ಲಿ ಅಲ್ಲಿ ಮನೆ ಕಟ್ಟಬಾರದು. ಏಕೆಂದರೆ ಮನೆಯ ಶಾಂತಿಯನ್ನು ಇದು ಕದಡುತ್ತದೆ.

ಬಾಬುಲ್
ಇದು ಹಸಿರು ಸಣ್ಣ ಎಲೆಗಳನ್ನು ಬಿಡುವ ಸಸ್ಯವಾಗಿದೆ. ಇದು ಹಲವಾರು ಪ್ರಯೋಜನಗಳನ್ನು ಹೊಂದಿದೆ. ಇದನ್ನು ಕಟ್ಟಡ ಕಟ್ಟುವುದು ಮೊದಲಾದ ಅಗತ್ಯಗಳಿಗಾಗಿ ಬಳಸಲಾಗುತ್ತದೆ. ಇಂಧನಕ್ಕಾಗಿ ಬಳಸುತ್ತಾರೆ. ಇದು ಮುಳ್ಳುಗಳಿಂದ ಕೂಡಿದೆ ಮತ್ತು ಮನೆಯಲ್ಲಿ ದುಷ್ಟ ಶಕ್ತಿ ನೆಲೆಗೊಳ್ಳುವಂತೆ ಮಾಡುತ್ತದೆ.

ಹತ್ತಿ
ಮನೆಯ ಬಳಿ ಹತ್ತಿ ಸಸ್ಯವನ್ನು ಬೆಳೆಸುವುದು ದುರದೃಷ್ಟಕರ ಎಂದೆನಿಸಿದೆ. ಇದು ಋಣಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತದೆ ಮತ್ತು ಮನೆಯಲ್ಲಿ ದುಷ್ಟ ಶಕ್ತಿ ಇರುವಂತೆ ಮಾಡುತ್ತದೆ. ಆದ್ದರಿಂದ ಮನೆಯ ಸಮೀಪ ಹತ್ತಿ ಮರವನ್ನು ಬೆಳೆಸಬೇಡಿ. ಇದೇ ಕಾರಣಕ್ಕಾಗಿ ಸಿಲ್ಕಿ ಕಾಟನ್ ಮತ್ತು ಪಾಲ್ಮಿರಾ ಮನೆಗಳಿಗೆ ಒಳ್ಳೆಯದಲ್ಲವೆಂದು ನಂಬಲಾಗಿದೆ.

ಹತ್ತಿಮನೆಯಲ್ಲಿ ಸಸ್ಯವನ್ನು ಇರಿಸಲು ಇನ್ನಿತರ ನಿಯಮಗಳು
ಮನೆಯಲ್ಲಿ ಸಸ್ಯಗಳನ್ನು ನೆಡುವುದಕ್ಕೆ ಮುಂಚೆ ಕೆಲವೊಂದು ಅಂಶಗಳನ್ನು ನಾವು ಗಮನಿಸಬೇಕಾಗುತ್ತದೆ. ಉದ್ಯಾನದಲ್ಲಿ ಕೊಳೆತ ಸಸ್ಯವಿದ್ದರೆ ಅದನ್ನು ನಿವಾರಿಸಬೇಕು ಇದು ಋಣಾತ್ಮಕ ಶಕ್ತಿ ಮತ್ತು ಅಸಮಾಧಾನವನ್ನುಂಟು ಮಾಡುತ್ತದೆ. ಉತ್ತರ ಅಥವಾ ಪೂರ್ವಭಾಗದಲ್ಲಿ ಸಸ್ಯಗಳ ಪಾಟ್‌ಗಳನ್ನು ಇರಬೇಡಿ. ಈ ದಿಕ್ಕುಗಳು ದೇವರಿಗೆ ಮತ್ತು ಸಂಪತ್ತಿಗೆ ಅಧೀನವಾಗಿದೆ. ಹಾಗೆಯೇ ಪೂರ್ವ ಮತ್ತು ಈಶಾನ್ಯ ದಿಕ್ಕಿನಲ್ಲಿ ದೊಡ್ಡ ಮರಗಳನ್ನು ಹೊಂದಿರಬಾರದು. ಈ ಭಾಗದಲ್ಲಿರುವ ಮರಗಳು ಋಣಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಕುಬೇರ ದೇವರಿಗೆ ಈ ದಿಕ್ಕುಗಳು ನಿರ್ದೇಶನಗಳಾಗಿವೆ. ಇವೆಲ್ಲದರ ಬದಲಿಗೆ ಕೆಲವೊಂದು ನೈಸರ್ಗಿಕ ಹಾಗೂ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುವ ಗಿಡಗಳನ್ನು ಬೆಳೆಸಿಕೊಳ್ಳಬಹುದು..

ತುಳಸಿಗಿಡಕ್ಕೆ ಪ್ರಾಮುಖ್ಯತೆ ನೀಡಿ
ಆಯುರ್ವೇದದ ಪ್ರಕಾರ ಔಷಧೀಯ ಗುಣಗಳ ಭಂಡಾರವೇ ಆಗಿರುವ ತುಳಸಿ ಗಿಡಕ್ಕೆ ಹಿಂದೂ ಧರ್ಮಗ್ರಂಥಗಳಲ್ಲಿ ಪವಿತ್ರಗಿಡ ಎಂದೂ ಕರೆಯಲಾಗಿದೆ. ತುಳಸಿ ಎಂದರೆ ಕೃಷ್ಣದೇವರ ಪತ್ನಿ ಹಾಗೂ ಆಕೆ ಅತ್ಯಂತ ಪವಿತ್ರಳು ಎಂಬ ವಿಶೇಷಣವನ್ನು ಇದರ ಎಲೆಗಳಿಗೆ ನೀಡಲಾಗಿದೆ, ಇದರ ಎಲೆಗಳು ಹಲವು ಕಾಯಿಲೆಗಳನ್ನು ತೊಳೆದು ಹಾಕುವಂತೆಯೇ ಬಟ್ಟೆಗಳ ಕಲೆಯನ್ನೂ ತೊಲಗಿಸಬಲ್ಲದು. ಮನೆಯಂಗಳದಲ್ಲಿರುವ ತುಳಸಿ ಗಿಡ ಕೆಟ್ಟ ಶಕ್ತಿಗಳನ್ನು ದೂರವಾಗಿಸಿ ಧನಾತ್ಮಕ ಶಕ್ತಿಯನ್ನು ಮನೆಯೊಳಕ್ಕೆ ತರುತ್ತದೆ ಎಂದು ನಂಬಲಾಗಿದೆ.

ಪುದೀನಾ ಗಿಡ ಕೂಡ ಒಳ್ಳೆಯದು
ಅತ್ಯಂತ ವೇಗವಾಗಿ ಬೆಳೆಯುವ ಗಿಡಗಳಲ್ಲಿ ಪುದೀನಾ ಕೂಡ ಒಂದು.. ನೀವು ಪಾಟ್‌ಗಳಲ್ಲಿ ಪೆಸ್ಟಿಸೈಡ್ಸ್ ಹಾಕಿ ಬೆಳೆದಿರುವ ಸೊಪ್ಪುಗಳನ್ನು ಕೊಂಡುಕೊಳ್ಳುವ ಬದಲು ನೀವೇ ಮನೆಯಲ್ಲೇ ಅತ್ಯತ್ತುಮ ಆಹಾರವನ್ನು ಬೆಳೆಸಿಕೊಳ್ಳಬಹುದು. ಆದ್ರೆ ಹೆಚ್ಚಿನವ್ರು ಆಹಾರ ಪದಾರ್ಥಗಳ ಗಿಡಗಳನ್ನು ಬೆಳೆಸಿ ಕೇರ್ ತೆಗೆದುಕೊಳ್ಳುವ ಬದಲು ಮನಿಪ್ಲಾಂಟ್ ಬೆಳೆಸಿದ್ರೆ ದುಡ್ಡು ಬರುತ್ತೆ ಅನ್ನೋ ಮೌಢ್ಯತೆಯಲ್ಲಿದ್ದು ಆಹಾರ ಪದಾರ್ಥಗಳನ್ನು ಬೆಳೆಸಿಕೊಳ್ಳಲು ಅವಕಾಶವಿದ್ರೂ ಬೆಳೆಯುದಿಲ್ಲ. ಆದ್ರೆ ನೆನಪಿಡಿ ನೀವು ಆಹಾರ ಪದಾರ್ಥಗಳ ಗಿಡಗಳನ್ನು ಬೆಳೆಸಿದ್ರೆ ಖಂಡಿತ ದುಡ್ಡು ಉಳಿಯುತ್ತೆ. ಬದಲಾಗಿ ಕಸದಂತಿರುವ ವೇಸ್ಟ್ ಗಿಡವನ್ನು ಬೆಳೆಸಿದ್ರೆ ಅಲ್ಲ ಅನ್ನೋದು ನೆನಪಿರಲಿ. ಅಷ್ಟೇ ಅಲ್ಲ ಪುದೀನಾ ಗಿಡಗಳನ್ನು ಮನೆಯಲ್ಲಿ ಬೆಳೆಸಿದ್ರೆ ಸೊಳ್ಳೆಗಳ ಕಾಟವೂ ಇರೋದಿಲ್ಲ. ಹಾಗಾಗಿ ಸೊಳ್ಳೆಗಳಿಂದ ಆಗುವ ಕಿರಿಕಿರಿಯನ್ನು ತಪ್ಪಿಸಿಕೊಳ್ಳಬೇಕು. ಅವುಗಳು ಹರಡುವ ಕಾಯಿಲೆಯಿಂದ ಮುಕ್ತರಾಗಿರಬೇಕು ಅಂದ್ರೆ ನೀವು ಮನೆಯಲ್ಲಿ ಮನಿಪ್ಲಾಂಟ್ ಬದಲಾಗಿ ಪುದೀನಾ ಗಿಡಗಳನ್ನು ಬೆಳೆಸಿಕೊಳ್ಳಬಹುದು.



Click it and Unblock the Notifications











