Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮನೆಯ ಅಂದ ಹೆಚ್ಚಿಸಲು ಸೂಕ್ತ ಸಲಹೆ
ಮನೆಯ ಸ್ವಚ್ಛತೆ ಎಂದರೆ ಮನಸ್ಸಿನ ಭಾಷೆ ಎಂಬ ಮಾತೊಂದಿದೆ. ಮನೆಯ ಅಲಂಕಾರದಲ್ಲೇ ನಮ್ಮ ಮನವನ್ನು ಅರಿಯುವವರಿದ್ದಾರೆ. ಮನೆಯು ಸ್ವಚ್ಛವಾಗಿಲ್ಲ ಎಂದಾದಲ್ಲಿ ನಮ್ಮ ಮನವೂ ಕೊಳಕಿನಿಂದ ತುಂಬಿದೆ ಎಂಬುದೇ ಅರ್ಥವಾಗಿದೆ.
ನಮ್ಮ ಹಿರಿಯರು ಮನೆಯ ಅಲಂಕಾರ ಎಂದರೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಿದ್ದರು. ಮನೆಯು ಶೋಭಾಯಮಾನವಾಗಿದ್ದರೆ ಆ ನಿವಾಸಕ್ಕೆ ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ಇದ್ದೇ ಇರುತ್ತದೆ ಎಂಬುದು ಅವರ ಗಟ್ಟಿ ನಂಬಿಕೆಯಾಗಿದೆ. ಆದ್ದರಿಂದಲೇ ಮನೆಯನ್ನು ಅಲಂಕರಿಸುವಾಗ ಕೆಲವೊಂದು ಸಲಹೆಗಳನ್ನು ಪ್ರಶ್ನೆ ಮಾಡದೇ ನಾವು ಪಾಲಿಸಿಕೊಂಡು ಬರುತ್ತಿದ್ದೇವೆ. ಮನೆಯ ಸ್ವಚ್ಛತೆ- ಮೋಡಿ ಮಾಡುವ ಅಂಟುವಾಳ ಕಾಯಿ!
ಅಷ್ಟೇ ಅಲ್ಲದೆ ಮನೆಯ ಶೈಲಿ ಮತ್ತು ಪರಿಕಲ್ಪನೆ ಮನೆಯಲ್ಲಿ ವಾಸಿಸುವವರ ವ್ಯಕ್ತಿತ್ವದ ಪ್ರತಿರೂಪವಾಗಿರುತ್ತದೆ. ಹಾಗಾಗಿ ಹಳೆಯ ವಿಧಾನಗಳನ್ನು ಬಿಟ್ಟು ಮನೆಯನ್ನು ಅನನ್ಯ ಹಾಗೂ ವಿಭಿನ್ನವಾಗಿ ಶೃಂಗರಿಸಿ. ಸ್ವಲ್ಪ ಸಮಯ ಹಾಗೂ ಪ್ರಯತ್ನವಿದ್ದರೆ ನಿಮ್ಮ ಹೀಗಿನ ವಿಧಾನದಲ್ಲಿ ಸಣ್ಣ ಮಟ್ಟಿನ ಬದಲಾವಣೆ ಮಾಡಿಕೊಂಡು ಉತ್ತಮ ಫಲಿತಾಂಶವನ್ನು ಪಡೆಯಬಹುದು...

ಬೇಡದ ವಸ್ತುಗಳನ್ನು ಮನೆಯಿಂದ ಹೊರಹಾಕಿ
ಪ್ರತಿಯೊಂದು ಕೋಣೆಯೊಳಗೆ ಇರುವ ಅರ್ಧದಷ್ಟು ವಸ್ತುಗಳನ್ನು ತೆಗೆದು ಜಾಗ ಮಾಡಿ. ಮನೆ ಸೌಂದರ್ಯ ಹೆಚ್ಚಿಸಲು ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಮೊದಲ ಕೆಲಸ ಮನೆಯೊಳಗೆ ಜಾಗವಿರುವಂತೆ ನೋಡಿಕೊಳ್ಳುವುದು.

ಮನೆಯ ಮುಂದಿನ ದ್ವಾರ
ಮನೆ ಮುಂದಿನ ದ್ವಾರ ಮತ್ತು ಮೆಟ್ಟಿಲುಗಳಲ್ಲಿ ಯಾವುದೇ ಬಿರುಕು ಕಾಣಿಸಿಕೊಂಡಿದ್ದರೆ ಅದಕ್ಕೆ ಸಿಮೆಂಟ್ ಹಾಕಿ ಅಥವಾ ಸಣ್ಣ ಇಟ್ಟಿಗೆಗಳನ್ನು ಜೋಡಿಸಿ ಮೆಟ್ಟಿಲು ರಚಿಸಿದರೆ ಅಂದ ಹೆಚ್ಚುತ್ತದೆ. ಒಂದು ವೇಳೆ ಬಿರುಕುಗಳಿದ್ದರೆ ಸಿಮೆಂಟ್‌ನಿಂದ ತುಂಬಿಸಿ ಅದಕ್ಕೆ ಪೈಂಟ್ ಮಾಡಿ.

ಮನೆ ಪ್ರವೇಶದ ಬಾಗಿಲಿಗೆ ಪೈಂಟ್ ಮಾಡಿ
ಬಣ್ಣಕೆಟ್ಟ, ಶಬ್ದಬರುವ ಮನೆಯ ಪ್ರವೇಶದ್ವಾರದ ಬಾಗಿಲನ್ನು ನೋಡಿದರೆ ಯಾರಿಗೂ ಮನೆ ಪ್ರವೇಶಿಸಲು ಮನಸ್ಸು ಬರುವುದಿಲ್ಲ. ಇದಕ್ಕಾಗಿ ಮಾರುಕಟ್ಟೆಯಲ್ಲಿರುವ ಹೊಸ ಬಣ್ಣವನ್ನು ಆಯ್ಕೆ ಮಾಡಿ ಬಾಗಿಲಿಗೆ ಬಳಿಯಿರಿ.

ಅಡುಗೆ ಕೋಣೆ ಸಾಮಗ್ರಿಗಳು
ಮನೆಯಲ್ಲಿ ಅಡುಗೆ ಕೋಣೆಗೆ ತನ್ನದೇ ಆದ ಸ್ಥಾನವಿದೆ. ಅಡುಗೆ ಕೋಣೆಯಲ್ಲಿರುವ ಹಳೆಯ ಮತ್ತು ಉಪಯೋಗಕ್ಕೆ ಬಾರದ ವಸ್ತುಗಳನ್ನು ತೆಗೆದು ಅಲ್ಲಿ ಹೊಸ ವಸ್ತುಗಳನ್ನಿಡಿ. ಇದನ್ನು ಮಾರುಕಟ್ಟೆಯಿಂದಲೇ ಖರೀದಿಸಬೇಕೆಂದಿಲ್ಲ. ಸ್ವಚ್ಛಗೊಳಿಸಿದರೆ ಹಳೆ ವಸ್ತುವಿಗೂ ಹೊಸ ಕಳೆ ಬರುತ್ತದೆ.

ಲೈಟ್‌ಗಳನ್ನು ಬದಲಾಯಿಸಿ
ಹಳೆ ಲೈಟ್‌ಗಳಲ್ಲಿ ಪ್ರಕಾಶ ಕಡಿಮೆ. ಇದಕ್ಕಾಗಿ ಹೊಸದಾಗಿ ಬಂದಿರುವ ಲೈಟ್‌ಗಳನ್ನು ಹಾಕುವುದರಿಂದ ಮನೆಯ ಪ್ರಕಾಶ ಹೆಚ್ಚುತ್ತದೆ. ಕೋಣೆಯ ಮೂರು ಭಾಗದಲ್ಲಿ ತ್ರಿಕೋನಾಕೃತಿಯಲ್ಲಿ ಲೈಟ್ ಗಳನ್ನು ಅಳವಡಿಸಿದರೆ ಉತ್ತಮ.

ಕನ್ನಡಿಗಳನ್ನು ಬದಲಾಯಿಸಿ
ಮನೆಯಲ್ಲಿರುವ ಕನ್ನಡಿಗಳು ಅದರಲ್ಲೂ ಬಾತ್ ರೂಮ್‌ನಲ್ಲಿರುವ ಕನ್ನಡಿಗಳ ಬದಿ ತುಕ್ಕು ಹಿಡಿದಿರುತ್ತದೆ. ಇದಕ್ಕೆ ಬೇರೆ ಫ್ರೇಮ್ ಹಾಕಿಸಿ ಅಥವಾ ಫೈಂಟ್ ಮಾಡಿ. ಪ್ರತೀ ಕೋಣೆಯಲ್ಲಿ ಕನ್ನಡಿಗಳಿರಲಿ.

ಕಾರ್ಪೆಟ್ಗಳನ್ನು ಕ್ಲೀನ್ ಮಾಡಿ
ಅಮೋನಿಯಾ, ನೀರು, ವಿನೆಗರ್ ಮತ್ತು ಒಂದು ಕಪ್ ಬ್ಲೀಚ್‌ನ್ನು ಬೆರೆಸಿ ಕಾರ್ಪೆಟ್ ಅನ್ನು ಸ್ವಚ್ಛ ಮಾಡುವುದರಿಂದ ಕಾರ್ಪೆಟ್ ಹೊಸತರಂತೆ ಕಂಗೊಳಿಸುತ್ತದೆ.

ಗೋಡೆಯಲ್ಲಿ ಚಿತ್ರಗಳಿದ್ದರೆ ತೆಗೆಯಿರಿ
ಪ್ರತಿಯೊಬ್ಬರಿಗೆ ಭಿನ್ನ ರುಚಿಯಿರುತ್ತದೆ. ಇದರಿಂದ ಮನೆ ಶೃಂಗಾರಗೊಳಿಸುವಾಗ ಕೆಲವು ಅಂಶ ಗಮನಿಸಬೇಕಾಗುತ್ತದೆ. ಗೋಡೆ ಮೇಲಿನ ಚಿತ್ರಗಳು ಅಭಿರುಚಿಗೆ ತಕ್ಕಂತೆ ಇರುತ್ತದೆ. ಇದು ಎಲ್ಲರಿಗೂ ಇಷ್ಟವಾಗಲ್ಲ. ಇದಕ್ಕೆ ಗೋಡೆಯಲ್ಲಿರುವ ಚಿತ್ರಗಳನ್ನು ತೆಗೆದು ಯಾವುದಾದರೊಂದು ಒಳ್ಳೆಯ ಬಣ್ಣ ಬಳಿಯಿರಿ.

ಫರ್ನಿಚರ್ ಮತ್ತು ನೆಲಕ್ಕೆ ಪಾಲಿಶ್
ನೆಲ, ಬೇಸ್ ಬೋರ್ಡ್ ಮತ್ತು ಫರ್ನಿಚರ್ಗಳಿಗೆ ಪಾಲಿಶ್ ಮಾಡಿ. ಶುಚಿತ್ವವೆಂದರೆ ದೇವರಿದ್ದಂತೆ ಎನ್ನುವ ಮಾತಿದೆ. ಇದನ್ನು ಪಾಲಿಸಿ.

ಮನೆಯ ಪೀಠೋಪಕರಣಗಳಿಗೆ ಆಲಿವ್ ಎಣ್ಣೆ ಹಚ್ಚಿ
ಆಲಿವ್ ಎಣ್ಣೆ ಮರದ ಪೀಠೋಪಕರಣಗಳನ್ನು ಹೊಳೆಯುವಂತೆ ಮಾಡಲು ಅತ್ಯುತ್ತಮವಾದ ವಸ್ತು. ಮರದ ಪೀಠೋಪಕರಣದ ಮೇಲೆ ಸ್ವಲ್ಪ ಆಲಿವ್ ಎಣ್ಣೆ ಸಿಂಪಡಿಸಿ ಮತ್ತು ಅಷ್ಟೇ ಪ್ರಮಾಣದ ತೈಲವನ್ನು ಫರ್ನಿಚರ್ ಮೇಲೆ ಹಚ್ಚಿ. ಪೀಠೋಪಕರಣಗಳಲ್ಲಿ ಇರುವ ಕೆತ್ತನೆಯ ಭಾಗಗಳ ಬಗ್ಗೆ ಎಚ್ಚರಿಕೆ ವಹಿಸಿ.

ಹೂದೋಟಕ್ಕೆ ಆದ್ಯತೆ ನೀಡಿ
ಮನೆಯ ಕಂಪೌಂಡಿನೊಳಗೆ ಪ್ರವೇಶಿಸುವಾಗ ಮೊದಲು ಕಾಣಿಸುವುದು ಹೂದೋಟ. ದಟ್ಟವಾಗಿ ಬೆಳೆದಿರುವ ಗಿಡಗಳನ್ನು ಕತ್ತರಿಸಿ. ಗಿಡಗಳಿಲ್ಲದೆ ಹೂಕುಂಡಗಳಿಗೆ ಬೀಜ ಹಾಕಿ ಗಿಡಗಳನ್ನು ಬೆಳೆಸಿ. ಪ್ರತೀ ವಾರ ಹೂದೋಟದಲ್ಲಿರುವ ಹುಲ್ಲುಗಳನ್ನು ಕತ್ತರಿಸಿ ಟ್ರಿಮ್ ಮಾಡಿ.



Click it and Unblock the Notifications
