Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಲಕ್ಷಾಧಿಪತಿಯಾಗಬೇಕೆಂದರೆ ಮನಿ ಮಂತ್ರ ಜಪಿಸಿ

ಆದರೆ ಲಕ್ಷಾಧಿಪತಿ ಆಗೋದಕ್ಕೆ ಏನು ಮಾಡಬೇಕು? ನಿಮ್ಮನ್ನೇ ನೀವು ಪ್ರಶ್ನಿಸಿಕೊಳ್ಳಲು ಇದು ಸುಸಮಯ.
ನಾನು ಹಣವನ್ನು ಪ್ರೀತಿಸುತ್ತೀನಾ?
ನೀವು ನಿಮ್ಮನ್ನು ಒಮ್ಮೆಯಾದರೂ ಈ ಪ್ರಶ್ನೆ ಕೇಳಿಕೊಂಡಿದ್ದೀರಾ? ಹಾಗಾದರೆ ಈಗ ಆ ಕೆಲಸ ಮಾಡಿ. ಹಣಕ್ಕೂ ನಿಮಗೂ ನಡುವಿನ ಸ್ನೇಹದ ಮಟ್ಟ ಹೇಗಿದೆಯೆಂದು ಒಮ್ಮೆ ಪರಿಶೀಲಿಸಿ. ನೀವು ನಿಜಕ್ಕೂ ಹಣವನ್ನು ಪ್ರೀತಿಸುತ್ತೀರಾ ಅಥವಾ ನಿಮ್ಮಲ್ಲಿ ಹಣವನ್ನು ಗಳಿಸುವ ಹಂಬಲವಿದೆಯಾ ಎಂದು ಪರಿಶೀಲನೆ ಮಾಡಿಕೊಳ್ಳಿ. ಆಗಾಗ್ಗೆ ಹಣವನ್ನು ಗಳಿಸಬೇಕೆಂಬ ಹಂಬಲ ಕಾಡುತ್ತಿದೆಯಾ ಎಂದು ತಿಳಿಯಿರಿ. ಹಣ ಮಾಡುವುದು ಒಂದು ಕಲೆಯೆಂದು ಗೊತ್ತಿರಲಿ.
ಹಣವನ್ನು ಏಕೆ ಗಳಿಸಿಕೊಳ್ಳಲಾಗುತ್ತಿಲ್ಲ?
ನೀವು ಏಕೆ ಹಣ ಗಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಜಾತಕದ ಪ್ರಕಾರ ತಿಳಿದುಕೊಳ್ಳಬಹುದು. ಜಾತಕದಿಂದ ವ್ಯಕ್ತಿಯ ಆರ್ಥಿಕ ಸ್ಥಿತಿ ಗತಿಯ ಬಗ್ಗೆ ತಿಳಿಯಲು ಸಾಧ್ಯವಿದೆ. ಕೇವಲ ಹಣದ ವಿಷಯವಷ್ಟೇ ಅಲ್ಲ, ಆ ವ್ಯಕ್ತಿ ಯಾವ ರೀತಿ ಹಣ ಗಳಿಸಿಕೊಳ್ಳಬಹುದು ಅಥವಾ ಕಳೆಯಬಹುದು ಎಂಬುದನ್ನೂ ತಿಳಿಸುತ್ತದೆ.
ಹಣ ಪಡೆಯೋದಕ್ಕೆ ಗುರುಬಲ ಇರಬೇಕೆ?
ಏಳಿಗೆ, ಉನ್ನತಿಯ ಸಂಕೇತವಾಗಿರುವ ಗುರುಬಲವನ್ನು ವ್ಯಕ್ತಿ ಹೊಂದಿದ್ದರೆ ಕಡಿಮೆ ಅವಧಿಯಲ್ಲೇ ಹಣಕಾಸಿನ ವಿಷಯದಲ್ಲಿ ಏಳಿಗೆ ಹೊಂದಬಹುದು. ವ್ಯಕ್ತಿಯ ಜಾತಕದಲ್ಲಿ ಗುರು ಬಲ ಹೆಚ್ಚಿದ್ದರೆ ಆತನು ಬೇಗ ಸಂಪನ್ನನಾಗುವನು. ಆದರೆ ಗುರು ಬಲವಿಲ್ಲದಿದ್ದರೆ ಆರ್ಥಕವಾಗಿ ತುಂಬಾ ಸಂಕಷ್ಟಕ್ಕೀಡಾಗುತ್ತಾನೆ ಎಂಬುದು ಜ್ಯೋತಿಷ್ಯದ ಮಾತು.
ರಾಶಿ ಚಕ್ರ, ಗ್ರಹಗತಿ, ಕುಂಡಲಿಯಲ್ಲಿ ಗುರುವಿನ ಸ್ಥಾನ ಎಲ್ಲಿದೆ ಎಂಬುದರ ಮೇಲೆ ವ್ಯಕ್ತಿ ಹೇಗೆ ಹಣ ಗಳಿಸಿಕೊಳ್ಳಬಹುದು ಎಂಬುದನ್ನು ತಿಳಿಯಬಹುದು. ಅದೇ ರೀತಿ ಇನ್ನಿತರ ಗ್ರಹಗಳೂ ಕೂಡ ಮನುಷ್ಯನ ಆರ್ಥಕತೆ ಮೇಲೆ ಪ್ರಭಾವ ಬೀರುತ್ತೆ.
ಹಣ ಗಳಿಕೆ, ಕಳೆಯುವಿಕೆ ಕರ್ಮ ಫಲವೇ?
ನೀವು ಗಳಿಸುವ ಮತ್ತು ಕಳೆದುಕೊಳ್ಳುವ ಹಣ ನಿಮ್ಮ ಕರ್ಮ ಫಲದ ಮೇಲೇ ನಿಂತಿದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಒಂದು ವೇಳೆ ನಿಮ್ಮ ಜಾತಕದಲ್ಲಿ ಹಣ ಗಳಿಸುವ ಯೋಗ ಇಲ್ಲದಿದ್ದರೂ ನಿಮ್ಮ ಕರ್ಮ ಫಲದಿಂದ ಅಂದುಕೊಳ್ಳದೆಯೇ ಹಣ ಗಳಿಸಬಹುದು. ನಿರೀಕ್ಷೆಯಿಲ್ಲದೆ ಹಾಕಿದ ಬಂಡವಾಳದಿಂದ, ಹೂಡಿಕೆ, ಲಾಟರಿ ಮುಂತಾದ ಮೂಲದಿಂದ ಹೆಚ್ಚು ಹಣ ಬರಲೂಬಹುದು.
ಆದರೆ ಕೆಲವೊಂದು ಬಾರಿ ಜನ್ಮ ಸಂಬಂಧಿ ದೋಷ, ಸಮಯದ ದೋಷ, ಕಾಳಸರ್ಪ ದೋಷ ಅಥವಾ ಗ್ರಹಗಳ ಚಲನವಲನದಿಂದ ಹಣದ ಮುಗ್ಗಟ್ಟು ಉಂಟಾಗಬಹುದು.
ಹನ್ನೊಂದನೆ ಮನೆಯಲ್ಲಿ ಅಡಗಿದೆ ನಿಮ್ಮ ಹಣ:
ನೀವು ಹಣ ಗಳಿಸಬೇಕೆಂದರೆ ನಿಮ್ಮ ಜಾತಕದಲ್ಲಿ ಹನ್ನೆರಡನೆ ಮನೆಗಿಂತ ಹನ್ನೊಂದನೆ ಮನೆ ಹೆಚ್ಚು ಪ್ರಭಾವಶಾಲಿಯಾಗಿರಬೇಕು. ಹನ್ನೆರಡನೆ ಮನೆ ವ್ಯಯದ ಸಂಕೇತವಾದ್ದರಿಂದ ಹನ್ನೊಂದನೆ ಮನೆಯನ್ನು ಹಿಂದಿಕ್ಕಿದರೆ ಒಳ್ಳೆಯ ಸ್ಥಿತಿವಂತಿಕೆಯಿದ್ದವರೂ ಕೂಡ ಬರ್ಬಾತ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
ಇದಕ್ಕೆ ಪರಿಹಾರ ಏನು?
ಹೋಮ ಹವನಗಳಿಂದ ದೇವರನ್ನು ಪ್ರಸನ್ನಗೊಳಿಸಿದರೆ ಆರ್ಥಿಕ ಮುಗ್ಗಟ್ಟು ಸರಿಹೋಗಬಹುದು. ಮಹಾ ಲಕ್ಷ್ಮಿ ಹೋಮ, ಲಕ್ಷ್ಮಿ ಕುಬೇರ ಹೋಮ, ಸತ್ಯನಾರಾಯಣ ಪೂಜೆ ಮತ್ತು ಲಕ್ಷ್ಮಿ ಗಾಯತ್ರಿ ಮಂತ್ರದ ಪಠಣ ಮಾಡಿ ಧನ ದೇವತೆಗಳನ್ನು ಒಲಿಸಿಕೊಳ್ಳಬಹುದು.
ಹೋಮ ಮತ್ತು ಯಾಗ ಏಕೆ ಮಾಡಬೇಕು?
ಪುರಾತನ ಯುಗದಲ್ಲಿ ಯೋಗ ಮತ್ತು ಹವನದ ಮೂಲಕ ನಮ್ಮ ಪ್ರಾರ್ಥನೆ, ಮಂತ್ರಗಳನ್ನು ದೇವರಿಗೆ ತಲುಪಿಸಿ ಬೇಡಿಕೊಳ್ಳುವ ಪರಿಯಿತ್ತು. ಅಗ್ನಿಯ ಮೂಲಕ ಇದು ದೇವರಿಗೆ ತಲುಪಿ ಅದರ ಫಲವಾಗಿ ದೇವನಿಂದ ರಕ್ಷಣೆ ಮತ್ತು ಜೀವನದಲ್ಲಿ ಬದಲಾವಣೆ ಸಂಭವಿಸುತ್ತದೆ ಎನ್ನಲಾಗಿದೆ.



Click it and Unblock the Notifications