Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಟ್ರೆಂಡ್ ನಲ್ಲಿರುವ ಬಾತ್ ರೂಂ ವಿನ್ಯಾಸ
ಹೊಸ ಶಕೆಯ ಬಾತ್ ರೂಮ್ ಗಳು ಸಂಪೂರ್ಣ ತ್ರಪ್ತಿದಾಯಕ ಮತ್ತು ಹಿತಕರವಾಗಿಯೂ ಇರಬೇಕು. ಇಷ್ಟು ದಿನಗಳ ಕಾಲ ಭಾರವಾದ, ಹರವಾದ ಸ್ವಚ್ಚತಾ ಉಪಕರಣಗಳು ಲಭ್ಯವಿದ್ದವು. ಆದರೆ ಈ ವರ್ಷದಲ್ಲಿ ಸರಳವಾದ, ಶುದ್ದ ಗೆರೆಯ ಬಾತ್ ರೂಮ್ ಪರಿಕರಗಳು ಪ್ರಾಮುಖ್ಯತೆ ಪಡೆದುಕೊಂಡಿವೆ. ಆಧುನಿಕ ಶೈಲಿಯ ನವನವೀನ ರಚನೆಗಳು ಮೇಲ್ಪಂಕ್ತಿಯಲ್ಲಿವೆ.
ಸ್ಥಳವನ್ನು ಉಳಿಸುವ ಕಪಾಟುಗಳು:
ಇವತ್ತಿನ ದಿನಗಳಲ್ಲಿ ಮನೆಯ ಸ್ಥಳಾವಕಾಶಗಳು ಕಿರಿದಾಗುತ್ತಿರುವ ಕಾರಣಕ್ಕೆ ಬಾತ್ ರೂಮ್ ನಲ್ಲಿಯೂ ಜಾಗ ಉಳಿಸಬೇಕಿದೆ. ಸ್ನಾನದ ಕೋಣೆಯ ಕಪಾಟು ಮತ್ತು ಡ್ರಾವರ್ ಗಳು ಕಡಿಮೆ ಸ್ಥಳವನ್ನು ಬಳಸುವಂತಿರಬೇಕು.

ಸ್ಫಾ ಹೋಲಿಕೆಯ ಬಾತ್ ರೂಮ್ :
ಬೆಚ್ಚನೆಯ ಟವೆಲ್ ರೇಲ್ ಗಳು, ಕೆಳ ಛಾವಣಿಯ ಹೀಟರ್ ಗಳು, ನಿರಂತರವಾಗಿ ಸಂಗೀತದ ಧಾರೆ ಹರಿಸುವ ನೀರಿನಿಂದ ಹಾಳಾಗದಂತ ಸ್ಪೀಕರ್ ಗಳು, ಕಲರ್ ಕಲರ್ ದೀಪಗಳು, ಶವರ್ ಗೆ ತಕ್ಕಂತೆ ಬಣ್ಣ ಬದಲಾಯಿಸುವ ಲೈಟಿಂಗ್ಸ್ ಮುಂತಾದವುಗಳನ್ನು ಅದ್ದೂರಿಯಾಗಿ ಅಳವಡಿಸಿದರೆ ಬಾತ್ ರೂಮ್ ಚಂದವೋ ಚಂದ.
ಪರಿಸರ ಸ್ನೇಹಿ:
ಜಲ ಸಂಪತ್ತನ್ನು ಯಾವತ್ತಿಗೂ ಪೋಲು ಮಾಡದೇ ಕಾಪಾಡಬೇಕಾದ ಜವಬ್ದಾರಿ ನಮ್ಮ ಮೇಲಿದೆ. ದುಬಾರಿ ಅದ್ದೂರಿತನದ ಉಮೇದಿನಲ್ಲಿ ನೀರು ಪೋಲಾಗುವುದನ್ನು ಒಪ್ಪಿಕೊಳ್ಳುವುದು ಸಾದ್ಯವಿಲ್ಲ. ಉತ್ತಮ ಬಾತ್ ರೂಮ್ ನಿರ್ಮಿಸುವಾಗ ಪರಿಸರ ಸ್ನೇಹದ ಕಡೆಗೂ ಗಮನ ಹರಿಸುವುದು ಒಳ್ಳೆಯದು.
ಲೋಹದ ಬಣ್ಣಗಳು:
ಬಾತ್ ರೂಮಿಗೆ ಕ್ರೋಮ್ ಬಣ್ಣ ಸೂಕ್ತವಾದದ್ದು. ಮೋನೋಕ್ರೋಮ್(ಕಪ್ಪು-ಬಿಳಿ) ಬಗ್ಗೆ ಒಲವು ಹೆಚ್ಚುತ್ತಿದ್ದು ಬಾತ್ ರೂಮ್ ವಿನ್ಯಾಸಗಳಲ್ಲಿ ಪ್ರಸಿದ್ದಿ ಪಡೆದಿದೆ. ಬಂಗಾರ ವರ್ಣದ ಟೈಲ್ಸ್ ಮತ್ತಿತರ ಪರಿಕರಗಳು ಮಾರುಕಟ್ಟೆಯನ್ನು ಪ್ರವೇಶಿಸಿವೆ. ಆದರೆ ಇವುಗಳನ್ನು ಬೊಟಿಕ್ ಬಾತ್ ರೂಮ್ ವಿನ್ಯಾಸಗಳಲ್ಲಿ ಅಪರೂಪಕ್ಕೆ ಬಳಸುತ್ತಾರೆ.



Click it and Unblock the Notifications
