Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಮಳೆಗಾಲದಲ್ಲಿ ಕೈ ತೋಟದ ಆರೈಕೆ
ಹೂ ಗಿಡಗಳನ್ನು ಹೆಚ್ಚಾಗಿ ಮಳೆಗಾಲದ ಸಮಯದಲ್ಲಿ ನೆಡಲಾಗುವುದು. ಅದರಲ್ಲೂ ಮಳೆ ಜೋರಾಗಿ ಪ್ರಾರಂಭವಾಗುವ ಮುನ್ನ ಹೂಗಿಡಗಳನ್ನು ನೆಡಲಾಗುವುದು. ಈ ಸಮಯದಲ್ಲಿ ಗಿಡಗಳನ್ನು ನೆಟ್ಟರೆ, ಗಿಡಗಳಿಗೆ ನೀರಿನ ಕೊರತೆ ಉಂಟಾಗುವುದಿಲ್ಲ. ಆದರೆ ಹೀಗೆ ನೆಡುವ ಗಿಡವನ್ನು ಸರಿಯಾದ ಕ್ರಮದಲ್ಲಿ ಆರೈಕೆ ಮಾಡದಿದ್ದರೆ ಅಧಿಕ ತಂಪಿನಿಂದ ಗಿಡ ಕೊಳೆತು ಹೋಗುವುದು. ಆದ್ದರಿಂದ ಮಳೆಗಾಲದಲ್ಲಿ ಹೂ ತೋಟದ ಆರೈಕೆಗೆ ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.

1. ಗಿಡವನ್ನು ಹೂ ಕುಂಡದಲ್ಲಿ ನೆಡಬಯಸುವವರು ಬಿಳಿ ವಿನಿಗರ್, ರಬ್ಬಿಂಗ್ ಆಲ್ಕೋಹಾಲ್ ಮತ್ತು ನೀರು ಹಾಕಿ ಮಿಶ್ರ ಮಾಡಿ ಅದನ್ನು ಒಂದು ಬ್ರೆಷ್ ನಿಂದ ಮಣ್ಣಿನ ಹೂಕುಂಡಕ್ಕೆ ಪೇಯಿಂಟ್ ಮಾಡಿದ ರೀತಿ ಮಾಡಿ, ನಂತರ ಆ ಹೂಕುಂಡಗಳನ್ನು ಒಣಗಿಸಿ ನಂತರ ಅದರಲ್ಲಿ ಮಣ್ಣು ತುಂಬಿ ಗಿಡ ನೆಡಬೇಕು.
2. ಹೂತೋಟದ ಆರೈಕೆ ಮಾಡುವಾಗ ಉಗುರಿನಲ್ಲಿ ಮಣ್ಣು ಸೇರದಿರಲು ಸೋಪನ್ನು ಉಗುರಿನಿಂದ ಗೀರಬೇಕು. ಆಗ ಸೋಪು ಉಗುರಿನಲ್ಲಿ ಸೇರಿಕೊಳ್ಳುವುದು. ಈ ರೀತಿ ಮಾಡಿದರೆ ಉಗುರಿನಲ್ಲಿ ಮಣ್ಣು ಸೇರಲು ಸಾಧ್ಯವಾಗುವುದಿಲ್ಲ. ನಂತರ ಕೆಲಸ ಮುಗಿದ ನಂತರ ಉಗುರನ್ನು ಹಳೆಯ ಹಲ್ಲುಜ್ಜುವ ಬ್ರೆಷ್ ಬಳಸಿ ತಿಕ್ಕಿ ತೊಳೆದರೆ ಉಗುರು ಸ್ವಚ್ಛವಾಗುವುದು.
3. ತೋಟ ಆರೈಕೆಯಲ್ಲಿ ಬಳಸುವ ಪರಿಕರಗಳನ್ನು ಬಳಸುವ ಮುನ್ನ ಅದಕ್ಕೆ ವನಸ್ಪತಿ ಎಣ್ಣೆ ಸವರಿದರೆ ಒಳ್ಳೆಯದು.
4. ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಸ್ವಲ್ಪ ಅಂತರ ಇರಬೇಕು. ತುಂಬಾ ಹತ್ತಿರ ಗಿಡಗಳನ್ನು ನೆಟ್ಟರೆ ಅದಕ್ಕೆ ಸರಿಯಾಗಿ ಬೆಳೆಯಲು ಸ್ಥಳಾವಕಾಶವಿಲ್ಲದೆ ಗಿಡಗಳು ಸೊರಗುವುದು
5. ಮಳೆಗಾಲದಲ್ಲಿ ಗಿಡವನ್ನು ನೆಡುವುದಾದರೆ ಅಧಿಕ ಮಳೆಯಿಲ್ಲದ ಸಮಯದಲ್ಲಿ ನೆಡುವುದು ಒಳ್ಳೆಯದು. ತುಂಬಾ ಮಳೆ ಬಿದ್ದರೆ ಪುಟ್ಟ ಗಿಡಗಳು ಕೊಳೆತು ಹೋಗುವುದು.
6. ಮಳೆಗಾಲದಲ್ಲಿ ಹೂ ಕುಂಡದಲ್ಲಿರುವ ಗಿಡಗಳಿಗೆ ಪ್ರತಿದಿನ ನೀರು ಹಾಕುವ ಅವಶ್ಯಕತೆಯಿಲ್ಲ.
7. ಕೊಳೆತ ತರಕಾರಿಗಳನ್ನು ಬಿಸಾಡುವ ಬದಲು ಅದನ್ನು ಗಿಡದ ಬುಡದಲ್ಲಿ ಹಾಕಿದರೆ ಗಿಡಕ್ಕೆ ಒಳ್ಳೆಯ ಗೊಬ್ಬರವಾಗುವುದು.
8. ಗಾರ್ಡನ್ ಅಥವಾ ಹೂ ತೋಟಕ್ಕೆ ಗೊಬ್ಬರ ಹಾಕ ಬಯಸುವವರು ಈ ಸಮಯದಲ್ಲಿ ಹಾಕುವುದು ಒಳ್ಳೆಯದು. ತುಂಬಾ ಮಳೆಯ ಸಮಯದಲ್ಲಿ ಗೊಬ್ಬರ ಹಾಕಿದರೆ ಗೊಬ್ಬರ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುವುದರಿಂದ, ಗಿಡಕ್ಕೆ ಯಾವುದೇ ಫಲ ಸಿಗುವುದಿಲ್ಲ.
9. ಟೀ ಮತ್ತು ಕಾಫಿ ಮಾಡಿದ ಮಡ್ಡಿಯನ್ನು ಬಿಸಾಡದೆ ಅದನ್ನು ಗಿಡಕ್ಕೆ ಹಾಕಿದರೆ ಗಿಡ ಸೊಗಸಾಗಿ ಬೆಳೆಯುತ್ತದೆ.
10. ಗಿಡಗಳನ್ನು ಕೀಟನಾಶಕದಿಂದ ರಕ್ಷಿಸಲು ಮದ್ದು ಸಿಂಪಡಿಸುವುದಾದರೆ ಮಳೆ ಇದ್ದಾಗ ಸಿಂಪಡಿಸಬಾರದು. ಸ್ವಲ್ಪ ಬಿಸಿಲಿರುವ ದಿನ ನೋಡಿ ಮದ್ದು ಸಿಂಪಡಿಸಬೇಕು.
11. ಈ ಸಮಯದಲ್ಲಿ ಹೂ ತೋಟದ ಮಣ್ಣನ್ನು ಅಗೆದು ಸಡಿಲ ಮಾಡುವುದು ಒಳ್ಳೆಯದು. ಇದರಿಂದ ನೀರು ಚೆನ್ನಾಗಿ ಇಂಗುವುದು, ಗಿಡ ಕೂಡ ಫಲವತ್ತಾಗಿ ಬೆಳೆಯುತ್ತದೆ.
12. ಹೂ ತೋಟದಲ್ಲಿ ನೀರು ನಿಲ್ಲದಂತೆ ಚಿಕ್ಕ ಚರಂಡಿಗಳನ್ನು ತೋಡಿದರೆ ಚಿಕ್ಕ ಗಿಡಗಳು ಕೊಳೆಯುವುದನ್ನು ತಪ್ಪಿಸಬಹುದು.



Click it and Unblock the Notifications











