Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೂವಿನ ಚಿತ್ತಾರದ ವಸ್ತುಗಳು ಹೆಚ್ಚಿಸುತ್ತೆ ಮನೆ ಅಂದ
ಹೂವಿನ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ. ನೈಸರ್ಗಿಕ ಹೂಗಳು ತನ್ನ ಆಕರ್ಷಕ ಬಣ್ಣ ಮತ್ತು ಸುವಾಸನೆಯಿಂದ ಇಷ್ಟವಾದರೆ ಕೃತಕ ಹೂಗಳು ತನ್ನ ಅಂದದಿಂದ ಮನೆ ಸೌಂದರ್ಯವನ್ನು ಹೆಚ್ಚಿಸುತ್ತದೆ. ಬಣ್ಣ-ಬಣ್ಣದ ಹೂವಿನ ಚಿತ್ತಾರಗಳಿಂದ ಕೂಡ ಮನೆಯನ್ನು ಅಲಂಕರಿಸಬಹುದು. ಹೂವಿನ ಸೌಂದರ್ಯದಿಂದ ಮನೆಯ ಅಂದ ಹೆಚ್ಚುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ.

1. ವಾಲ್ ಪೇಪರ್: ಗೋಡೆಯಲ್ಲಿ ನೇತು ಹಾಕುವ ಕ್ಯಾಲೆಂಡರ್ ಮತ್ತು ಹೂವಿನ ಫೋಟೊಗಳನ್ನು ಗೋಡೆಗೆ ಅಲಂಕರಿಸಬಹುದು. ಅದರಲ್ಲೂ ಕಡು ತೆಳು ಬಣ್ಣದ ಪೇಯಿಂಟ್ ಹೊಡೆದಿರುವ ಕೋಣೆಗೆ ಕೆಂಪು ಗುಲಾಬಿಯ ಫೋಟೊಗಳು ತುಂಬಾ ಆಕರ್ಷವಾಗಿ ಕಾಣುವುದು.
2. ಸೋಫಾ: ಮೆರೂನ್ ಬಣ್ಣದ , ಕಪ್ಪು ಬಣ್ಣದ ಸೋಫಾಗಳು ಈಗ ಹಳೆಯ ಫ್ಯಾಷನ್ ಆಗಿದೆ. ಹೂವಿನ ಅಲಂಕಾರವಿರುವ ಆಕರ್ಷಕ ಬಣ್ಣದ ಸೋಫಾಗಳು ಮನೆ ಚೆಲುವನ್ನು ಮತ್ತಷ್ಟು ಹೆಚ್ಚಿಸುತ್ತದೆ.
3. ಕುಶನ್: ಹೂವಿನ ಚಿತ್ತಾರವಿರುವ ಕುಶನ್‌ಗಳು ದೊರೆಯುತ್ತಿದ್ದು ಇದು ಕೂತರೆ ಆರಾಮದಾಯಕ ಮತ್ತು ನೋಡಿದರೆ ಕಣ್ಣಿಗೆ ಆಕರ್ಷಕವಾಗಿ ಕಾಣುವುದು.
4. ಕರ್ಟನ್: ಕರ್ಟನ್‌ಗಳಲ್ಲಿ ಹೂವಿನ ಅಲಂಕಾರವಿರುವ ಕರ್ಟನ್ ಗಳು ತುಂಬಾ ಆಕರ್ಷಕವಾಗಿ ಕಾಣುವುದು. ಆದರೆ ಈ ರೀತಿಯ ಕರ್ಟನ್ ಕಡು ಕೆಂಪು ಗುಲಾಬಿ ಬಣ್ಣದ ಹೂವಿಗಿಂತ ಹಳದಿ ಬಣ್ಣದ ಅಥವಾ ತೆಳು ಬಣ್ಣದ ಹೂಗಳ ಚಿತ್ತಾರವಿರುವ ಕರ್ಟನ್ ಆಕರ್ಷಕವಾಗಿ ಕಾಣುವುದು.
5. ಬೆಡ್ ಶೀಟ್: ಬೆಡ್ ರೂಮ್‌ನಲ್ಲಿರುವ ದಿಂಬು ಮತ್ತು ಬೆಡ್ ಶೀಟ್‌ಗಳಲ್ಲಿ ಹೂವಿನ ವಿನ್ಯಾಸದಿದ್ದರೆ ಅದು ಬೆಡ್ ರೂಂನ ಚೆಲುವನ್ನು ಹೆಚ್ಚಿಸುತ್ತದೆ.



Click it and Unblock the Notifications
