Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಳಿಗಾಲ: ಸಾಮಾನ್ಯ ಶೀತ ತಡೆಗಟ್ಟಲು ಕಾಳುಮೆಣಸು ಹೇಗೆ ಬಳಸಬೇಕು? ಯಾರಿಗೆ ಕಾಳುಮೆಣಸು ಒಳ್ಳೆಯದಲ್ಲ
ಮೋಹನ್ ವೈ. ಕೆ
ಚಳಿಗಾಲ ಆರಂಭವಾಯಿತೆಂದರೆ ಕೆಮ್ಮು, ನೆಗಡಿಯಂತಹ ಹತ್ತು ಹಲವು ರೀತಿಯ ಕಾಯಿಲೆಗಳು ಹರಡಲು ಆರಂಭವಾಗುತ್ತದೆ. ಕೆಲವರಲ್ಲಿ ಇದು ದೀರ್ಘಕಾಲದ ವರೆಗೂ ಉಳಿದುಬಿಡುತ್ತದೆ. ವಾತಾವರಣದಲ್ಲಿ ಶೀತಗಾಳಿಯ ಪರಿಣಾಮ ಕೆಮ್ಮು, ಗಂಟಲು ನೋವು, ನೆಗಡಿ ಆರಂಭಗೊಳ್ಳುತ್ತದೆ. ಆದರೆ ಶೀತ, ಕೆಮ್ಮಿನಿಂದ ಬಳಲುತ್ತಿದ್ದವರು ಅದೆಷ್ಟೇ ಔಷಧಿ ಬಳಸಿದರು ಕೆಲ ದಿನದಲ್ಲಿ ಮತ್ತೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಹಾಗಾದ್ರೆ ಶೀತ, ಕೆಮ್ಮುವಿನಂತ ಕಾಯಿಲೆಯಿಂದ ದೂರವಿರಲು ಕೆಲವು ಸಲಹೆ ಇಲ್ಲಿದೆ.

ಚಳಿಗಾಲದಲ್ಲಿ ನಾವು ಸೇವಿಸುವ ಆಹಾರದಲ್ಲಿ ನಮ್ಮ ಆರೋಗ್ಯದ ಗುಟ್ಟು ಅಡಗಿರುತ್ತದೆ. ನಾವು ನಿತ್ಯ ಸೇವಿಸುವ ಆರೋಗ್ಯದಲ್ಲಿ ಕಾಳು ಮೆಣಸಿನ ಪುಡಿ ಅಥವಾ ಕಾಳು ಮೆಣಸು ಬಳಸುವುದರಿಂದ ಈ ಕಾಲೋಚಿತ ಕಾಯಿಲೆಗಳಿಂದ ಪಾರಾಗಬಹುದು. ಕಾಳು ಮೆಣಸನ್ನು ಕಪ್ಪು ಚಿನ್ನ ಅಂತಲೂ ಕರೆಯುತ್ತಾರೆ. ಏಕೆಂದರೆ ಕಾಳು ಮೆಣಸಿನಲ್ಲಿ ಅಷ್ಟೊಂದು ಆರೋಗ್ಯಕರ ಅಂಶಗಳಿದ್ದು, ಇದೊಂದು ಅಮೂಲ್ಯ ವಸ್ತು ಎಂದು ಪರಿಗಣಿಸಲಾಗಿದೆ. ಕಾಳು ಮೆಣಸು ಹಲವು ಆರ್ಯುವೇದ ಔಷಧ ತಯಾರಿಕೆಯಲ್ಲೂ ಬಳಸಲ್ಪಡುತ್ತದೆ. ಹೀಗಾಗಿ ಕಾಳು ಮೆಣಸು ಔಷಧಿ ಗುಣವುಳ್ಳ ಕಪ್ಪು ಚಿನ್ನ ಎಂದು ಕರೆಯಲಾಗಿದೆ.
ಕಾಳು ಮೆಣಸಿನಿಂದಾಗುವ ಪ್ರಯೋಜನಗಳೇನು?
ತೂಕ ಇಳಿಸಲು: ಕಾಳು ಮೆಣಸಿನಲ್ಲಿ ಕೊಬ್ಬಿನಾಂಶ ಕರಗಿಸುವಂತಹ ಅಂಶ ಇರುವುದರಿಂದ ಹೊಸದಾಗಿ ರೂಪುಗೊಳ್ಳುವ ಫ್ಯಾಟ್ ಸೆಲ್ಸ್‌ಗಳ ಕರಗಿಸಲಿದೆ. ಹೀಗಾಗಿ ನೀವು ತೂಕ ಇಳಿಸುವ ಜೊತೆ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕೆಂದರೆ ಕಾಳು ಮೆಣಸು ಸುಲಭ ದಾರಿಯಾಗಿದೆ.
ದೇಹ ನಿರ್ವಿಷಿಕರಣ (ಡಿಕಾಕ್ಸಿಕೇಶನ್): ಕಾಳು ಮೆಣಸಿನಲ್ಲಿ ಡಿಟಾಕ್ಸಿಕೇಶನ್ ಅಂಶವಿದ್ದು, ನಿಮಗೆ ಅಲರ್ಜಿಯಂತಹ ಸಮಸ್ಯೆ ಇದ್ದರೆ ಕರಿಮೆಣಸು ಸಮಸ್ಯೆಗೆ ಪರಿಹಾರ ನೀಡಲಿದೆ. ಕಾಳುಮೆಣಸಿನ ನಿಯಮಿತ ಸೇವನೆಯು ಕಿಡ್ನಿ, ಲಿವರ್ ಶುದ್ಧೀಕರಣಕ್ಕೂ ಕಾರಣವಾಗುತ್ತದೆ.
ಕ್ಯಾನ್ಸರ್‍ಗೂ ಮದ್ದು: ಕಾಳು ಮೆಣಸಿನಲ್ಲಿ ಕ್ಯಾನ್ಸರ್ ವಿರೋಧಿ ಲಕ್ಷಣವೂ ಇದೆ. ನಿಯಮಿತ ಬಳಕೆಯು ಕ್ಯಾನ್ಸರ್ ತಡೆಗಟ್ಟಲು ಹಾಗೂ ನಿತ್ಯದ ಆಹಾರದಲ್ಲಿ ಕರಿಮೆಣಸಿನ ಬಳಕೆಯು ಹಲವು ರೀತಿಯ ಕ್ಯಾನ್ಸರ್ ಕಣಗಳು ದೇಹದ ಅಂಗಗಳ ಮೇಲೆ ಪರಿಣಾಮ ಬೀರುವುದನ್ನು ತಡೆಯುತ್ತದೆ.
ಜೀರ್ಣಕ್ರಿಯೆಗೆ ಸಹಕಾರಿ: ಕರಿಮೆಣಸು ಆಹಾರ ಕ್ರಮದಲ್ಲಿ ಬೆರೆತರೆ ನಿಮ್ಮ ಜೀರ್ಣಕ್ರಿಯೆ ಪ್ರಕ್ರಿಯೆ ಸರಾಗವಾಗಲಿದೆ. ಕೆಲ ಆಹಾರದಿಂದ ಅಜೀರ್ಣ ಸಮಸ್ಯೆ ತಲೆದೂರಬಹುದು ಇದನ್ನು ತಡೆಗಟ್ಟಬೇಕಾದರೆ ಕಾಳು ಮೆಣಸಿನ ಬಳಕೆ ಉತ್ತಮ ಪರಿಹಾರ ಕ್ರಮವಾಗಿದೆ.
ಕೂದಲು ಉದುರುವಿಕೆ ತಡೆಗಟ್ಟಲು: ಕಾಳು ಮೆಣಸು ಕೂದಲು ಉದುರುವಿಕೆ ಸಮಸ್ಯೆಗೂ ಪರಿಹಾರವಾಗಿದೆ. ಕರಿಮೆಣಸಿನ ಪುಡಿಯನ್ನು ತ್ರಿಪಲಾ ಪುಡಿಯೊಂದಿಗೆ ಬೆರೆಸಿ ಕೂದಲು ಉದುರುವ ಜಾಗಕ್ಕೆ ಹಚ್ಚುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗಲಿದೆ. ತ್ರಿಪಲಾ ಪುಡಿಯು ಮೂರು ಫಲಗಳ ಮಿಶ್ರಣವಾಗಿದ್ದು, ಕಫಾ, ವಾತಾ ಹಾಗೂ ಪಿತ್ತ ನಿವಾರಣೆಗೆ ಸಹಾಯಕವಾಗಿದೆ.
ಸಕ್ಕರೆ ಅಂಶದ ಮೇಲೆ ಹಿಡಿತ : ನಮ್ಮ ರಕ್ತದಲ್ಲಿ ಸೂಕ್ತ ಪ್ರಮಾಣದ ಸಕ್ಕರೆಯ ಅಂಶ ಅಗತ್ಯವಾಗಿರುತ್ತದೆ. ಆದರೆ ನಮ್ಮ ಆಹಾರ ಕ್ರಮದಲ್ಲಿ ಏರುಪೇರಾದರೂ ಈ ಸಕ್ಕರೆ ಅಂಶ ಕಡಿಮೆಯಾಗುವುದು ಅಥವಾ ಹೆಚ್ಚಾಗುವುದು ಕಂಡುಬರುತ್ತದೆ. ಆದರೆ ಕಾಳು ಮೆಣಸು ಗ್ಲೊಕೋಸ್ ಮೆಟಾಬಾಲಿಸಂ ಅನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಈ ಹಿನ್ನೆಲೆ ಮಧುಮೇಹ ಹೊಂದಿರುವವರು ಸಹ ಕಾಳು ಮೆಣಸು ಮಿಶ್ರಿತ ಆಹಾರವನ್ನು ಸೇವಿಸಬಹುದು.
ಚರ್ಮ ಸಂಬಂಧಿ ಸಮಸ್ಯೆಗೆ ಪರಿಹಾರ: ಮೊದಲೇ ಹೇಳಿದಂತೆ ಕಾಳು ಮೆಣಸಿನ ಹಲವು ಔಷಧಿ ಗುಣಗಳ ಸಾಲಿನಲ್ಲಿ ಅಲರ್ಜಿ ನಿವಾರಣೆ ಮುಖ್ಯವಾಗಿದೆ. ಕರಿಮೆಣಸು ಸೇವನೆಯು ಚರ್ಮದ ರಕ್ಷಣೆಗೆ ನೆರವಾಗುತ್ತದೆ. ಮೊಡವೆ, ಕಾಲೋಚಿತ ಅಲರ್ಜಿ, ಸುಕ್ಕಾಗುವುದು ಸೇರಿದಂತೆ ಚರ್ಮ ಸಂಬಂಧಿ ಸಮಸ್ಯೆಗೆ ಪರಿಹಾರವಾಗಿದೆ.
ಯಾರೆಲ್ಲಾ ಕಾಳು ಮೆಣಸು ಸೇವಿಸಬಾರದು?
ಕಾಳು ಮೆಣಸು ಎಲ್ಲರಲ್ಲೂ ಆರೋಗ್ಯಕರ ಬೆಳವಣಿಗೆಗೆ ಕಾರಣವಾಗದಿರಬಹುದು. ಕೆಲವರಿಗೆ ಕಾಳು ಮೆಣಸು ಸೇವನೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಬಹುದು. ಬಾಯಿ ಹುಣ್ಣಾದವರು, ಮೂಲವ್ಯಾಧಿ, ಅಧಿಕ ಉಷ್ಣತೆಯಿಂದ ಬಳಲುವವರು, ತುಟಿಯಲ್ಲಿ ಬೊಬ್ಬೆ ಎದ್ದಿದ್ದರೆ ಕಾಳು ಮೆಣಸು ಸೇವನೆ ಸೂಕ್ತವಲ್ಲ. ಜೊತೆಗೆ ಕಾಳು ಮೆಣಸು ಸೇವನೆಯ ಬಳಿಕ ಆರೋಗ್ಯದಲ್ಲಿ ಏರುಪೇರು ಕಂಡುಬಂದರೆ ವೈದ್ಯರ ಭೇಟಿಯಾಗುವುದು ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications









