ಶ್ವಾಸಕೋಶದ ಕ್ಯಾನ್ಸರ್ ದಿನ: ಈ ಕಾರಣದಿಂದಾಗಿ ಧೂಮಪಾನ ಮಾಡದವರಲ್ಲೂ ಕಂಡು ಬರುತ್ತಿದೆ ಶ್ವಾಸಕೋಶದ ಕ್ಯಾನ್ಸರ್‌

ಆಗಸ್ಟ್‌ 1ನ್ನು ವಿಶ್ವ ಶ್ವಾಸಕೋಶ ಕ್ಯಾನ್ಸರ್‌ ದಿನವನ್ನಾಗಿ ಆಚರಿಸಲಾಗುವುದು. ಶ್ವಾಸಕೋಶ ಕ್ಯಾನ್ಸರ್ ಕುರಿತು ಜನರಲ್ಲಿ ಅರಿವು ಮೂಡಿಸಿ, ಶ್ವಾಸಕೋಶದ ಕ್ಯಾನ್ಸರ್ ತಡೆಗ್ಟಟಲು ಈ ದಿನವನ್ನು ಆಚರಿಸಲಾಗುವುದು.

ಶ್ವಾಸಕೋಶದ ಕ್ಯಾನ್ಸರ್ ಧೂಮಪಾನಿಗಳಿಗೆ ಮಾತ್ರವಲ್ಲ, ಧೂಮಪಾನ ಮಾಡದೇ ಇರುವವರನ್ನು ಕಾಡುತ್ತಿದೆ, ಏಕೆ? ಈ ಕುರಿತು ತಜ್ಞರಾದ ಡಾ, ಸುಹಾಸ್ ಹೆಚ್‌ ಎಸ್ (Consultant Pulmonologist, Manipal Hospital Sarjapur Road, Bangalore) ನಮ್ಮೊಂದಿಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿದ್ದಾರೆ ನೋಡಿ..

What Is The Relationship Between Viral Infections And Lung Cancer In Non-Smokers

ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿರುವವರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಅಧಿಕವಿದೆ. ಶ್ವಾಸಕೋಶದ ಕ್ಯಾನ್ಸರ್‌ಗೆ ಧೂಮಪಾನ ಪ್ರಮುಖ ಕಾರಣವಾಗಿದೆ, ಆದರೆ ಧೂಮಪಾನ ಮಾಡದೇ ಇರುವವರಲ್ಲಿಯೂ ಈ ಕ್ಯಾನ್ಸರ್‌ ಕಂಡು ಬರುತ್ತಿದೆ. ಧೂಮಪಾನ ಮಾಡದೇ ಇದ್ದರೂ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವೇನು? ಅಧ್ಯಯನಗಳು ಈ ಕುರಿತು ಏನು ಹೇಳಿದೆ ಎಂದು ನೋಡೋಣ ಬನ್ನಿ:

ಶ್ವಾಸಕೋಶದ ಕ್ಯಾನ್ಸರ್‌ಗೂ ವೈರಲ್‌ ಸೋಂಕಿಗೂ ಸಂಬಂಧವಿದೆ

ಅನೇಕ ಅಧ್ಯಯನಗಳು ಶ್ವಾಶಕೋಶದ ಕ್ಯಾನ್ಸರ್‌ಗೂ ಬ್ಯಾಕ್ಟಿರಿಯಾ ಮತ್ತು ವೈರಲ್‌ ಸೋಂಕಿಗೂ ಸಂಬಂಧವಿದೆ ಎಂದು ಹೇಳಿದೆ. ಇತ್ತೀಚೆಗೆ ನಡೆಸಿದ ಅಧ್ಯಯನವು ಧೂಮಪಾನ ಮಾಡದೆ ಇರುವವರಲ್ಲಿ ಶ್ವಾಶಕೋಶದ ಕ್ಯಾನ್ಸರ್‌ಗೆ HPV ಅದರಲ್ಲೂ PV-16 and HPV-18 ಪ್ರಮುಖ ಕಾರಣವಾಗಿದೆ. ಈ ವೈರಸ್‌ಗಳು ಶ್ವಾಸಕೋಶದ ಜೆನೆಟಿಕ್‌ನಲ್ಲಿ ಬದಲಾವಣೆ ಮಾಡುವುದರಿಂದ ಕಣಗಳ ಉತ್ಪತ್ತಿ ಹೆಚ್ಚಾಗಿ ಶ್ವಾಸಕೋಶದಲ್ಲಿ ಗಡ್ಡೆ ಉಂಟಾಗುತ್ತದೆ. ಅದರಂತೆ EBV ಸೋಂಕು ಶ್ವಾಸಕೋಶದ ಕಾರ್ಸಿನೋಮಾ ಉತ್ಪತ್ತಿಗೆ ಕಾರಣವಾಗಿದೆ. ಇದರಿಂದ ಉರಿಯೂತ ಉಂಟಾಗಿ ಆರೋಗ್ಯಕರ ಶ್ವಾಸಕೋಶವನ್ನು ಕ್ಯಾನ್ಸರ್‌ ಕಣಗಳಿರುವ ಶ್ವಾಸಕೋಶವನ್ನಾಗಿ ಬದಲಾಯಿಸುತ್ತೆ.

ಈ ವೈರಸ್‌ಗಳಿಂದಲೂ ಶ್ವಾಸಕೋಶದ ಕ್ಯಾನ್ಸರ್ ಉಂಟಾಗುವುದು

ಸೈಟೊಮೆಗಾಲೊವೈರಸ್, SARS CoV2 ವೈರಸ್, ಹ್ಯೂಮನ್ಇಮ್ಯುನೊ ಡಿಫಿಷಿಯನ್ಸಿ ವೈರಸ್ (HIV), ಮತ್ತು ದಡಾರ ವೈರಸ್ (cytomegalovirus, SARS CoV2 virus, human immunodeficiency virus (HIV), and measles virus) ಈ ವೈರಸ್‌ಗಳಿಂದಲೂ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ, ಇದರ ಕುರಿತ ಇನ್ನಷ್ಟು ಅಧ್ಯಯನಗಳು ನಡೆಯುತ್ತಿದೆ. ಈ ಬಗೆಯ ಅನೇಕ ವೈರಸ್‌ಗಳಿಂದ ಶ್ವಾಸಕೋಶದ ಕ್ಯಾನ್ಸರ್‌ನ ಅಪಾಯ ಹೆಚ್ಚಾಗುವುದು.

ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸೆ

ಕ್ಯಾನ್ಸರ್‌ ರೋಗಿಗಳಿಗೆ ಇಮ್ಯೂನೋಥೆರಪಿ ಅವಶ್ಯಕತೆ ಇರುತ್ತದೆ. ಇದರಿಂದ ಕ್ಯಾನ್ಸರ್‌ ಕಣಗಳು ಹೆಚ್ಚಾಗುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ.

ಇತರ ಕಾರಣಗಳು

ವೈರಸ್ ಸೋಂಕಿನ ಜೊತೆಗೆ ಕಲುಷಿತ ವಾತಾವರಣ, ಧೂಮಪಾನಿಗಳು ಸೇದು ಬಿಟ್ಟ ಹೊಗೆಯನ್ನು ಸೆವಿಸಿದಾಗ, ಕಾರ್ಸಿಜೆನಿಕ್ ಇರುವ ರಾಸಾಯನಿಕಗಳ ಜೊತೆ ಕೆಲಸ ಮಾಡುವವರಲ್ಲಿ ಈ ಬಗೆಯ ಕ್ಯಾನ್ಸರ್ ಕಂಡು ಬರುವುದು. '

ಶ್ವಾಸಕೋಶದ ಕ್ಯಾನ್ಸರ್‌ನ ಲಕ್ಷಣಗಳೇನು?

  • ದೀರ್ಘಸಮಯದಿಂದ ಕಾಡುತ್ತಿರುವ ಕೆಮ್ಮು, ಎಷ್ಟೇ ಚಿಕಿತ್ಸೆ ಮಾಡದರೂ ಕೆಮ್ಮು ಕಡಿಮೆಯಾಗುವುದಿಲ್ಲ
  • ಕಫದಲ್ಲಿ ರಕ್ತ
  • ಉಸಿರಾಟದಲ್ಲಿ ತೊಂದರೆ
  • ಎದೆನೋವು
  • ತೂಕ ಇಳಿಕೆ
  • ಹೊಟ್ಟೆ ಹಾಳಾಗುವುದು

ತಡೆಗಟ್ಟುವುದು ಹೇಗೆ?

  • ಸೋಂಕನ್ನು ಪ್ರಾರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ಪಡೆಯಬೇಕು
  • ಧೂಮಪಾನ ಮಾಡಬೇಡಿ
  • ಸೆಕೆಂಡ್ ಹ್ಯಾಂಡ್‌ ಸ್ಮೋಕಿಂಗ್ ಮಾಡಬೇಡಿ (ಧೂಮಪಾನಿಗಳು ಸೇದಿ ಬಿಟ್ಟ ಹೊಗೆಯನ್ನು ಉಸಿರಾಡಿದರೆ)
  • ಕಾರ್ಸಿಜೆನಿಕ್ ರಾಸಾಯನಿಕಗಳ ಜೊತೆ ಕೆಲಸ ಮಾಡುವಾಗ ಮುನ್ನೆಚ್ಚರಿಕೆವಹಿಸಿ
  • ಪ್ರತಿನಿತ್ಯ ವ್ಯಾಯಾಮ ಮಾಡಿ
  • ಆರೋಗ್ಯಕರ ಆಹಾರಕ್ರಮ ಸೇವಿಸಿ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

What Is The Relationship Between Viral Infections And Lung Cancer In Non-Smokers

What is the relationship between viral infections and lung cancer in non-smokers: Expert Explains, read on.
X
Desktop Bottom Promotion