Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
Adenovirus Infection:ರಾಜ್ಯದಲ್ಲಿ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ ಅಡೆನೋವೈರಸ್, ಇದರ ಲಕ್ಷಣವೇನು?
ಇದೀಗ ರಾಜ್ಯದಲ್ಲಿ ಮಕ್ಕಳಿಗೆ ಅಡೆನೋವೈರಸ್ ಸೋಂಕು ಹೆಚ್ಚಾಗಿ ಕಂಡು ಬರುತ್ತಿದೆ. ಈ ಅಡೆನೋವೈರಸ್ ಸೋಂಕು ಎಂದರೇನು? ಇದು ಹೇಗೆ ಹರಡುವುದು? ಇದರ ಲಕ್ಷಣಗಳೇನು? ಇದು ಅಪಾಯಕಾರಿಯೇ ಮತ್ತಿತರ ಮಾಹಿತಿ ತಿಳಿಯೋಣ ಬನ್ನಿ:
ಅಡೆನೋವೈರಸ್ ಎಂದರೇನು?
ಅಡೆನೋವೈರಸ್ ಎಂಬುವುದು ಶೀತ, ಜ್ವರ ತರುವಂಥ ವೈರಸ್ ಆಗಿದೆ. ಸುಮಾರು 50ಕ್ಕೂ ಅಧಿಕ ಅಡೆನೋವೈರಸ್ ಮನುಷ್ಯರನ್ನು ಬಾಧಿಸುತ್ತದೆ, ಅದರಲ್ಲೂ ಚಳಿಗಾಲದಲ್ಲಿ ಹೆಚ್ಚಾಗಿ ಕಂಡು ಬರುವುದು. ಈ ವರ್ಷ ವಾತಾವರಣದಲ್ಲೂ ಹಲವು ಬದಲಾವಣೆ ಕಂಡು ಬಂದಿದೆ, ಮಳೆಗಾಲದಲ್ಲಿ ಮಳೆ ಸರಿಯಾಗಿ ಬೀಳಲಿಲ್ಲ, ಇದೀಗ ಮಳೆ ಬರುತ್ತಿದೆ, ಇದರ ಜೊತೆಗೆ ಈ ಬಗೆಯ ಸೋಂಕುಗಳು ಹೆಚ್ಚಾಗುತ್ತಿದೆ.

ಈ ಅಡೆನೋವೈರಸ್ ಸಮಸ್ಯೆ ಯಾರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ?
ಈ ಅಡೆನೋವೈರಸ್ 5 ವರ್ಷದ ಕೆಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುವುದು. ಪ್ರೀಕೆಜಿ, ಡೇಕೇರ್ ಸೆಂಟರ್‌ಗಳಲ್ಲಿ ಒಬ್ಬರಿಗೆ ಬಂದರೆ ಮತ್ತೊಬ್ಬರಿಗೆ ಹರಡುವುದು. ದೊಡ್ಡವರಿಗೆ ಜನರು ಗುಂಪು ಸೇರಿರುವ ಕಡೆ ಸೇರಿದರೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು. ಇನ್ನು ಇದು ಆಸ್ಪತ್ರೆಗಳಿಂದಲೂ ಹರಡುವುದು. ಯಾರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೋ ಅವರಿಗೆ ಈ ವೈರಸ್ ಬೇಗನೆ ಹರಡುವುದು.
ಅಡೆನೋವೈರಸ್ ಲಕ್ಷಣಗಳೇನು?
* ಕೆಮ್ಮು
* ಜ್ವರ
* ಶೀತ
* ಗಂಟಲು ಕೆರೆತ
* ಕಣ್ಣು ಕೆಂಪಾಗುವುದು
* ಕಿವಿ ನೋವು
* ಗಂಟಲಿನಲ್ಲಿ ಊತ
* ಉಸಿರಾಟದಲ್ಲಿ ತೊಂದರೆ ಉಂಟಾಗುವುದು (ಬ್ರಾಂಕೈಟಿಸ್)
* ನ್ಯೂಮೊನಿಯಾ
ಅಡೆನೋವೈರಸ್ ತಗುಲಿದರೆ ಎಷ್ಟು ದಿನ ಇರುತ್ತದೆ?
ಅಡೆನೋವೈರಸ್ ತಗುಲಿದರೆ ಕೆಲವರಿಗೆ 3-4 ದಿನದಲ್ಲಿ ಕಡಿಮೆಯಾದರೆ ಇನ್ನು ಕೆಲವರಿಗೆ ಲಕ್ಷಣಗಳು 2 ವಾರದವರೆಗೆ ಇರಲಿದೆ.
ಅಡೆನೋವೈರಸ್ ಹೇಗೆ ಹರಡುವುದು?
ಕ್ಲೋಸ್ ಕಾಂಟ್ಯಾಕ್ಟ್: ಕೈ ಕುಲುಕುವುದರಿಂದ, ಜೊತೆಗೆ ಆಟ ಆಡುವುದರಿಂದ, ತಬ್ಬಿಕೊಳ್ಳುವುದು, ಕಿಸ್ ಕೊಡುವುದು ಇವುಗಳಿಂದ ಕೂಡ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು.
* ಗಾಳಿಯ ಮೂಲಕ ಹರಡುವುದು: ಸೀನಿದಾಗ, ಕೆಮ್ಮಿದಾಗ, ಎಂಜಲು ಹಾರಿದಾಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು.
* ಟಾಯ್ಲೆಟ್: ಟಾಯ್ಲೆಟ್ ಸ್ವಚ್ಛವಾಗಿರದಿದ್ದರೆ ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು
* ನೀರು: ಸೋಂಕು ತಗುಲಿದ ವ್ಯಕ್ತಿ ಈಜಿದ ಕೊಳದಲ್ಲಿ ಈಜಾಡಿದರೆ ಕೂಡ ಹರಡುವುದು.
ಅಡೆನೋವೈರಸ್‌ಗೆ ಚಿಕಿತ್ಸೆಯೇನು?
ರೋಗ ಲಕ್ಷಣಗಳನ್ನು ನೋಡಿ ಚಿಕಿತ್ಸೆ ನೀಡಲಾಗುವುದು. ಕಣ್ಣು ಕೆಂಪಾಗಿದ್ದರೆ ಕಣ್ಣಿಗೆ ಡ್ರಾಪ್ ನೀಡಲಾಗುವುದು, ಜ್ವರವಿದ್ದರೆ ಜ್ವರ ಕಡಿಮೆಯಾಗಲು ಮಾತ್ರೆ ಅಥವಾ ಸಿರಪ್ ನೀಡಲಾಗುವುದು. ವ್ಯಕ್ತಿಯ ರೋಗ ಲಕ್ಷಣ ನೋಡಿ ಅದರಂತೆ ಚಿಕಿತ್ಸೆ ನೀಡಲಾಗುವುದು. ಇದಕ್ಕೆ Antibiotics ಕೆಲಸ ಮಾಡಲ್ಲ.
ಅಡೆನೋವೈರಸ್ ತಡೆಗಟ್ಟುವುದು ಹೇಗೆ?
* ಕೈಗಳನ್ನು ಆಗಾಗ ತೊಳೆಯಿರಿ
* ಸೋಂಕು ತಗುಲಿದ ವ್ಯಕ್ತಿಯಿಂದ ಅಂತರ ಕಾಯ್ದುಕೊಳ್ಳಿ.
* ಮಕ್ಕಳು ಮುಟ್ಟಿದ ಟಾಯ್ಸ್ ಸ್ವಚ್ಛಗೊಳಿಸಿ
* ಸಿಂಕ್, ಟಾಯ್ಲೆಟ್ ಸ್ವಚ್ಛವಾಗಿಡಿ.
ಕಾಯಿಲೆ ಬಂದಾಗ ಏನು ಮಾಡಬೇಕು?
* ಹುಷಾರಿಲ್ಲದಿದ್ದರೆ ಮನೆಯಲ್ಲಿರಿ
* ಕೆಮ್ಮುವಾಗ, ಸೀನುವಾಗ ಕರ್ಚೀಫ್ ಅಡ್ಡ ಹಿಡಿಯಿರಿ
* ರೋಗಿ ಬಳಸಿದ ತಟ್ಟೆ, ಸ್ಪೂನ್ ಇವುಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕು.
* ಕೈಗಳನ್ನು ಆಗಾಗ ತೊಳೆಯಿರಿ.
ಯಾವಾಗ ವೈದ್ಯರನ್ನು ಕಾಣಬೇಕು?
* ಜ್ವರ 104°F (40°C)ಗಿಂತ ಅಧಿಕವಿದ್ದರೆ
* ಉಸಿರಾಟದಲ್ಲಿ ತೊಂದರೆ ಉಂಟಾಗಿದ್ದರೆ
* ದೇಹದಲ್ಲಿ ನೀರಿನಂಶ ಕಡಿಮೆಯಾಗಿದ್ದರೆ
* ತುಂಬಾ ಸುಸ್ತು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
