Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ದುಲ್ಖರ್ ಸಲ್ಮಾನ್, ಸಮಂತಾ ಆರೋಗ್ಯಕ್ಕೆ ಏನಾಗಿದೆ? ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರಾ?
ದುಲ್ಖರ್ ಸಲ್ಮಾನ್‌ಗೆ ಏನಾಗಿದೆ? ಅವರಿಗೆ ಏನಾದರೂ ಆರೋಗ್ಯ ಸಮಸ್ಯೆ ಇದೆಯೇ? ಅವರು ಏಕೆ ಆ ರೀತಿಯ ವೀಡಿಯೋ ಪೋಸ್ಟ್ ಮಾಡಿ ಡಿಲೀಟ್ ಮಾಡಿದರು ಈ ಬಗೆಯ ನೂರಾರು ಪ್ರಶ್ನೆಗಳು ಅವರ ಅಭಿಮಾನಿಗಳನ್ನು ಕಾಡುತ್ತಿದೆ.
ದುಲ್ಕರ್ ಸಲ್ಮಾನ್ದಕ್ಷಿಣ ಭಾರತದ ಚಿತ್ರರಂಗದ ಟಾಪ್ ನಟರಲ್ಲೊಬ್ಬರು, ಮಲಯಾಳ ಚಿತ್ರರಂಗದ ನಟ ಮಮ್ಮೂಟಿ ಅವರ ಪುತ್ರ. ದುಲ್ಕರ್ ಸಲ್ಮಾನ್ತಮ್ಮ ಆಕರ್ಷಕ ಮೈ ಮಾಟ, ಅದ್ಭುತವಾದ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ನೋಡಲು ಫಿಟ್ ಅಂಡ್ ಫೈನ್ ಆಗಿರುವ ನಟ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಬಂದು ತಮ್ಮ ಆರೋಗ್ಯದ ಬಗ್ಗೆ ಹೇಳಿದಾಗ ಅಲ್ಲಿ ಅವರ ಲುಕ್ ನೊಡಿದವರಿಗೆ ಫುಲ್ ಶಾಕ್.

ನಿದ್ರೆ ಮಾಡಿ ತುಂಬಾ ದಿನಗಳಾದಂತೆ ಕಣ್ಣುಗಳು ನೋಡಿದಾಗ ಗೊತ್ತಾಗುವಂತಿದೆ, ಅವರ ಮುಖದಲ್ಲಿ ಕಳೆಯಿಲ್ಲ, ಏನೋ ಸಮಸ್ಯೆ ಇದ್ದಂತೆ ಕಾಣುತ್ತಿದ್ದಾರೆ ಅವರು ""I have experienced something for the first time, and things haven't been the same since. It has reached a point where I just can't get it out of my mind. I want to say more, but I am not allowed." ( ಇದೇ ಮೊದಲ ಬಾರಿಗೆ ನನಗೆ ಏನೋ ಆಗುತ್ತಿದೆ, ಯಾವುದೂ ಮೊದಲಿನಂತಿಲ್ಲ, ನನಗೆ ಏನು ಆಗುತ್ತಿದೆ ಎಂದು ನನಗೇ ಗೊತ್ತಾಗುತ್ತಿಲ್ಲ, ನನಗೆ ತುಂಬಾ ಹೇಳಬೇಕೆನಿಸುತ್ತಿದೆ, ಆದರೆ ಹೇಳಲು ಬಿಡುತ್ತಿಲ್ಲ/ ಆಗುತ್ತಿಲ್ಲ) ಎಂದು ತನ್ನ ಇನ್‌ಸ್ಟಾದಲ್ಲಿ ಲೈವ್ ಬಂದು ಹೇಳಿಕೊಂಡಿದ್ದರು, ಆ ವೀಡಿಯೋಗೆ ತುಂಬಾ ಕಮೆಂಟ್ ಬರಲಾರಂಭಿಸಿದಾಗ ಕೂಡಲೇ ಆ ವೀಡಿಯೋ ಡಿಲೀಟ್ ಮಾಡಿದ್ದಾರೆ. ಏಕೆ ಅವರು ಆ ರೀತಿ ಹೇಳಿದರು ಅವರಿಗೆ ಏನಾದರೂ ಆರೋಗ್ಯ ಸಮಸ್ಯೆ ಇದೆಯೇ ಎಂಬ ಆತಂಕ ಅಭಿಮಾನಿಗಳಿಗೆ ಕಾಡಿದೆ.
ದುಲ್ಖಾರ್ ಸಲ್ಮಾನ್‌ಗೆ ನಿದ್ರಾಹೀನತೆ ಸಮಸ್ಯೆ ಕಾಡುತ್ತಿದೆಯೇ?
ಅವರು ವೀಡಿಯೋದಲ್ಲಿ ನನಗೆ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುವುದಾಗಿ ಹೇಳಿದ್ದರು, ಅವರಿಗೆ ನಿದ್ರಾಹೀನತೆ ಕಾಡುತ್ತಿದೆಯೇ ಎಂದು ಪ್ರಶ್ನೆ ಕಾಡುತ್ತಿದೆ. ಅವರ ತಪಾಸಣೆಗೆ ಅಂತಲೇ ದೊಡ್ಡ ದೊಡ್ಡ ವೈದ್ಯರ ತಂಡವಿರುತ್ತದೆ, ವಿದೇಶದಲ್ಲಿ ಹೋಗಿ ಚಿಕಿತ್ಸೆ ಪಡೆಯುವ ಸಾಮರ್ಥ್ಯ ಅವರಿಗಿದೆ, ಅಷ್ಟೆಲ್ಲಾ ಇದ್ದರೂ ಅವರ ಆರೋಗ್ಯ ಸಮಸ್ಯೆ ಅಷ್ಟೊಂದು ಗಂಭೀರವಾಗಿದೆಯೇ ಎಂಬ ಪ್ರಶ್ನೆ ಹುಟ್ಟು ಹಾಕಿದೆ.
ನಿದ್ರಾಹೀನತೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ
ಎಷ್ಟೇ ಹಣವಿರಲಿ ನಿದ್ರಾಹೀನತೆ ಕಾಡಿದರೆ ಅದನ್ನು ಗುಣಪಡಿಸುವುದು ತುಂಬಾನೇ ಕಷ್ಟವಾಗುವುದು, ಕಣ್ಣಿಗೆ ಸುಖ ನಿದ್ದೆ ಇಲ್ಲ ಅಂದರೆ ನಮ್ಮ ಮನಸ್ಸಿನಲ್ಲಿ ತೊಳಲಾಟ ಪ್ರಾರಂಭವಾಗುವುದು, ನಮಗೆ ದಿನನಿತ್ಯದ ಕೆಲಸದ ಕಡೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ, ನಿದ್ದೆ ಎಂಬುವುದು ತುಂಬಾ ಮುಖ್ಯವಾಗುವುದು. ಮನುಷ್ಯನಿಗೆ ಕನಿಷ್ಠ8 ಗಂಟೆ ನಿದ್ದೆ ಅವಶ್ಯಕ. ಮಕ್ಕಳಿಗೆ 10ರಿಂದ 12 ಗಂಟೆ ನಿದ್ದೆ ಬೇಕಾಗುವುದು. ದುಲ್ಖಾರ್ ಸಲ್ಮಾನ್‌ಗೆ ಯಾವುದೇ ದೊಡ್ಡ ಸಮಸ್ಯೆ ಕಾಡದಿರಲಿ ಎಂಬುವುದೇ ಅವರ ಅಭಿಮಾನ ಆಶಯ.
ಅನಾರೋಗ್ಯದಿಂದಾಗಿ ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಂಡಿರುವ ಸಮಂತಾ
ಸಮಂತಾ ಅವರ ಅನಾರೋಗ್ಯದ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇದೆ, ಅವರು ಮಯೋಸೈಟಿಸಿ ಎಂಬ ಅಪರೂಪದ ಅಟೋ ಇಮ್ಯೂನೆ ಕಾಯಿಲೆಯಿಂದ ಬಳಲುತ್ತಿರುವುದಾಗಿ ಅವರೇ ಹೇಳಿಕೊಂಡಿದ್ದರು, ದೀರ್ಘ ಸಮಯದ ಚಿಕಿತ್ಸೆ ನಂತರ ಚಿತ್ರರಂಗಕ್ಕೆ ಮರಳಿದ್ದ ಅವರು ಇದೀಗ ಮತ್ತೆ ಅನಾರೋಗ್ಯದ ಕಾರಣದಿಂದಾಗಿ ಚಿತ್ರರಂಗದಿಂದ ಚಿಕ್ಕ ಬ್ರೇಕ್ ತೆಗೆದಿದ್ದಾರೆ.
ಮಯೋಸೈಟಿಸ್ ಎಂದರೇನು?
ಮಯೋಸಿಟಿಸ್ ಅಥವಾ ಮಯೋಸೈಟಿಸ್ ಎಂದು ಕರೆಯಲ್ಪಟುವ ಈ ಕಾಯಿಲೆ ಸ್ನಾಯುಗಳನ್ನು ಬಲಹೀನವಾಗಿಸುತ್ತದೆ, ಇದು ಶರೀರಕ್ಕೆ ತುಂಬಾ ನೋವುಂಟು ಮಾಡುತ್ತದೆ. ಇದರಿಂದ ದೇಹದಲ್ಲಿ ಊತ, ಶ್ವಾಸಕೋಶದ, ಹೃದಯದ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುವುದು, ಈ ಕಾಯಿಲೆ ಬಂದರೆ ಎದ್ದು ನಡೆದಾಡುವುದು ಕೂಡ ಕಷ್ಟವಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.
What happened to #DulquerSalmaan 🥺🥺. He posted and deleted it later. Is everything alright to him ?. #KingOfKotha pic.twitter.com/PyGnrwnorw
— DON BOY (@preethamtweets_) July 2, 2023



Click it and Unblock the Notifications












