Latest Updates
-
ಬಿಸಿಲ ಧಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಲಿನ ಬೇಗೆಯಲ್ಲಿ ಮದುವೆ ಸಂಭ್ರಮ: ಅತಿಥಿಗಳ ಆರೋಗ್ಯ ಕಾಪಾಡಲು ಪ್ಲಾನ್ ಬದಲಾಯಿಸುವುದು ಅನಿವಾರ್ಯವೇ? -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಗಾರ್ಡನ್ ಮತ್ತು ಮನೆಯನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಹೀಟ್ವೇವ್ ಎಚ್ಚರಿಕೆ: ಬಿಸಿಲ ಬೇಗೆಯಿಂದ ಬಚಾವಾಗಲು ಈ ಸರಳ ಆಹಾರ ಕ್ರಮಗಳನ್ನು ಮರೆಯದಿರಿ -
ದೆಹಲಿ ಬಿಸಿಲು: ಸುಡುವ ತಾಪಮಾನದಲ್ಲೂ ಸ್ಟೈಲಿಶ್ ಆಗಿ ಕಾಣಲು ವೈರಲ್ ಆಗ್ತಿವೆ ಈ ಸಿಂಪಲ್ ಹ್ಯಾಕ್ಸ್! -
ಮಳೆಗಾಲದ ಬೆಳಗಿನ ವರ್ಕೌಟ್: ನಿಮ್ಮ ಪ್ಲಾನ್ ಉಲ್ಟಾಪಲ್ಟಾ ಆಗದಿರಲಿ, ಈ ಮುನ್ನೆಚ್ಚರಿಕೆ ಮರೆಯದಿರಿ! -
ಲಿವ್-ಇನ್ ಸಂಬಂಧ ಮುರಿದರೆ ಕ್ರಿಮಿನಲ್ ಕೇಸ್? ಸುಪ್ರೀಂ ಕೋರ್ಟ್ನಿಂದ ಬಂತು ಬಿಗ್ ಶಾಕ್! -
ಉರಿಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಹೀಟ್ ವೇವ್ ಎಚ್ಚರಿಕೆ: ಬಿಸಿಲಿನ ಬೇಗೆಯಿಂದ ಬಚಾವಾಗಲು ಈ ಪಾನೀಯಗಳೇ ಮದ್ದು! -
ಅನುಷ್ಕಾ ಶರ್ಮಾ ಐಪಿಎಲ್ ಲುಕ್: ಸಿಂಪಲ್ ಡ್ರೆಸ್ನಲ್ಲೇ ಮ್ಯಾಜಿಕ್ ಮಾಡಿದ್ದು ಹೇಗೆ?
ಆರೋಗ್ಯಕರ ಋತುಚಕ್ರಕ್ಕೆ ಇಲ್ಲಿವೆ ಕೆಲವೊಂದು ಯೋಗಾಸನಗಳು
ಅನಿಯಮಿತ ಋತುಸ್ರಾವ ಚಕ್ರವು ಯಮಯಾತನೆಯಾಗಿ ಪರಿಣಮಿಸಬಹುದು. ಇದು ಮಹಿಳೆಯರಿಗೆ ಯಾವಾಗಲೂ ಕಾಡುವ ಸಮಸ್ಯೆಯಾಗಿದೆ. ಅನಿಯಮಿತ ಅಥವಾ ಅತೀವ ರಕ್ತಸ್ರಾವಕ್ಕೆ ಸಾಮಾನ್ಯ ಕಾರಣವೆಂದರೆ ಅನಿಯಮಿತ ಅಂಡೋತ್ಪತ್ತಿ. ಅಂಡೋತ್ಪತ್ತಿ ಇಲ್ಲದಿದ್ದರೆ, ನೀವು ಸರಿಯಾದ ಸಮಯಕ್ಕೆ ಮುಟ್ಟು ಆಗುವುದಿಲ್ಲ, ಅಥವಾ ಆ ದಿನಗಳು ದೀರ್ಘಕಾಲದವರೆಗೂ ಉಳಿಯಬಹುದು ಅಥವಾ ತೀವ್ರ ರಕ್ತಸ್ರಾವಕ್ಕೆ ಕಾರಣವಾಗಬಹುದು.
ಮಹಿಳೆ ಇಂತಹ ಅಸಾಮಾನ್ಯ ಸಮಸ್ಯೆ ಎದುರಿಸುತ್ತಿದ್ದರೆ ಅದನ್ನು ಎದುರಿಸಲು ಅತ್ಯಂತ ಉತ್ತಮ ಮಾರ್ಗ ಎಂದರೆ ಅದು ಯೋಗ. ಈ ಯೋಗವು ನಿಮ್ಮ ಅನಿಯಮಿತ ಅವಧಿ, ನೋವಿನ ಮುಟ್ಟಿನ ಸೆಳೆತ ಮತ್ತು ಮುಟ್ಟಿನ ಅಸ್ವಸ್ಥತೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಋತು ಚಕ್ರವನ್ನು ಆರೋಗ್ಯಕರವಾಗಿಡಲು ನಿಮ್ಮ ದೈನಂದಿನ ದಿನಚರಿಯಲ್ಲಿ ಸೇರಿಸಿಕೊಳ್ಳಬಹುದಾದ ಕೆಲವು ಯೋಗ ಆಸನಗಳು ಇಲ್ಲಿವೆ.

ಅಧೋ ಮುಖ ಶ್ವಾನಾಸನ:
ಈ ಯೋಗ ಆಸನವು ಕಿಬ್ಬೊಟ್ಟೆಯ ಹಿಗ್ಗಿಸುವಿಕೆಯನ್ನು ಕಡಿಮೆ ಮಾಡಲು ಬಹಳ ಸಹಾಯಕವಾಗಿದೆ ಮತ್ತು ಮುಟ್ಟಿನ ಸೆಳೆತದ ಸಮಯದಲ್ಲಿ ಪರಿಹಾರ ನೀಡುತ್ತದೆ.
ಇದನ್ನು ಹೇಗೆ ಮಾಡುವುದು?: ನಾಯಿಯಂತೆ ನಿಮ್ಮ ಮೊಣಕಾಲು ಊರಿ ನಿಂತುಕೊಳ್ಳಿ. ನಿಧಾನವಾಗಿ ಉಸಿರು ಬಿಡಿ ಮತ್ತು ಸೊಂಟವನ್ನು ಮೇಲಕ್ಕೆತ್ತಿ. ಮೊಣಕೈ ಮತ್ತು ಮೊಣಕಾಲನ್ನು ನೇರವಾಗಿಸಿ. ದೇಹವು 'ವಿ' ಆಕಾರದಲ್ಲಿ ಇರಬೇಕು. ಕೈಗಳು ಭುಜದ ಸಮಾನಾಂತರವಾಗಿರಬೇಕು ಮತ್ತು ಪಾದಗಳು ಸೊಂಟದ ಸಮಾನವಾಗಿರಲಿ. ಹೆಬ್ಬೆರಳುಗಳು ಮೇಲಿನ ಭಾಗಕ್ಕೆ ನೋಡುತ್ತಿರಲಿ. ಕೈಗಳನ್ನು ನೆಲಕ್ಕೆ ಊರಿಕೊಳ್ಳಿ ಮತ್ತು ಕುತ್ತಿಗೆ ಎಳೆಯಿರಿ. ಕಿವಿಗಳು ಒಳಭಾಗದ ಕೈಗಳನ್ನು ಮುಟ್ಟಬೇಕು ಮತ್ತು ನಾಭಿ ಕಡೆಗೆ ನೋಟವನ್ನಿಡಿ. ಕೆಲವು ಸೆಕೆಂಡು ಹಾಗೆ ಇರಿ ಮತ್ತು ಇದರ ಬಳಿಕ ಮತ್ತೆ ಮೊಣಕಾಲುಗಳನ್ನು ಮಡಚಿ ಮೊದಲಿನ ಭಂಗಿಗೆ ಬನ್ನಿ.

ಪಶ್ಚಿಮೋತ್ತಾನಾಸನ:
ನಿಮ್ಮ ಮೆದುಳನ್ನು ಶಾಂತಗೊಳಿಸುವ ಆಸನಗಳಲ್ಲಿ ಒಂದಾಗಿದೆ. ಇದು ಋತುಚಕ್ರದ ಸಮಯದಲ್ಲಿ ಸಾಮಾನ್ಯವಾಗಿ ಕಂಡುಬರುವ ಒತ್ತಡ ಮತ್ತು ಖಿನ್ನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಇದನ್ನು ಹೇಗೆ ಮಾಡುವುದು: ಮೊದಲು, ನಿಮ್ಮ ಪಾದಗಳನ್ನು ನೇರವಾಗಿ ನಿಮ್ಮ ಮುಂದೆ ಕುಳಿತುಕೊಳ್ಳಿ. ನಿಮ್ಮ ಬೆನ್ನು ನೇರವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಈಗ, ನಿಮ್ಮ ದೇಹವನ್ನು ನಿಮ್ಮ ಕಾಲುಗಳ ಕಡೆಗೆ ನಿಧಾನವಾಗಿ ಬಾಗಿಸಿ. ನಿಮ್ಮ ಕೈಗಳಿಂದ ನಿಮ್ಮ ಪಾದಗಳನ್ನು ಸ್ಪರ್ಶಿಸಿ. ಈ ಭಂಗಿಯನ್ನು 20-30 ಸೆಕೆಂಡುಗಳ ಕಾಲ ಮುಂದುವರಿಸಿ. ಮತ್ತು ನಂತರ ಮೂಲ ಸ್ಥಾನಕ್ಕೆ ಹಿಂತಿರುಗಿ.
ಬದ್ಧಕೋನಾಸನ:
ಋತುಸ್ರಾವದ ಸಮಸ್ಯೆಗಳ ಚಿಕಿತ್ಸೆಗೆ ಬದ್ಧಕೋನಾಸನ ಅತ್ಯುತ್ತಮ ಆಸನಗಳಲ್ಲಿ ಒಂದಾಗಿದೆ. ಆರೋಗ್ಯಕರ ಮುಟ್ಟಿನ ಚಕ್ರವನ್ನು ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ.

ಬದ್ಧಕೋನಾಸನ:
ಋತುಸ್ರಾವದ ಸಮಸ್ಯೆಗಳ ಚಿಕಿತ್ಸೆಗೆ ಬದ್ಧಕೋನಾಸನ ಅತ್ಯುತ್ತಮ ಆಸನಗಳಲ್ಲಿ ಒಂದಾಗಿದೆ. ಆರೋಗ್ಯಕರ ಮುಟ್ಟಿನ ಚಕ್ರವನ್ನು ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ.
ಇದನ್ನು ಹೇಗೆ ಮಾಡುವುದು?: ಮೊದಲು ನೇರವಾಗಿ ಕುಳಿತುಕೊಂಡು ಎರಡು ಕಾಲುಗಳನ್ನು ಮಡಿಸಿ ತೊಡೆಯ ಹತ್ತಿರಕ್ಕೆ ತೆಗೆದುಕೊಳ್ಳಿ. ತೊಡೆಯ ಮೂಲದ ಹತ್ತಿರ ಹಿಮ್ಮಡಿಗಳು ಬರಬೇಕು. ಎರಡು ಪಾದಗಳ ಅಂಗಾಲುಗಳನ್ನು ಮೇಲ್ಮುಖವಾಗಿ ತಿರುಗಿಸಬೇಕು. ಎರಡು ತೊಡೆಗಳು ಮತ್ತು ಮಂಡಿಗಳು ನೆಲಕ್ಕೆ ತಾಗಿರಬೇಕು. ಬೆನ್ನು ನೇರವಾಗಿರಬೇಕು. ದೃಷ್ಟಿ ನೇರವಾಗಿರಬೇಕು. ನಂತರ ಕೈಗಳನ್ನು ಬಿಟ್ಟು ನಿಧಾನವಾಗಿ ಕಾಲುಗಳನ್ನು ಮುಂದೆ ಚಾಚಿ.

ಉಷ್ಟ್ರಾಸನ:
ಒಂಟೆ ಭಂಗಿಯು ನಿಮ್ಮ ಕಿಬ್ಬೊಟ್ಟೆಯ ಪ್ರದೇಶ ಹಿಗ್ಗಲು ಕಾರಣವಾಗುತ್ತದೆ. ಇದು ನಿಮ್ಮ ಮುಟ್ಟಿನ ಸೆಳೆತವನ್ನು ಸರಾಗಗೊಳಿಸುತ್ತದೆ. ಈ ಆಸನವು ಬೆನ್ನುಮೂಳೆಯನ್ನು ವಿಸ್ತರಿಸುತ್ತದೆ. ಮತ್ತು ಬೆನ್ನು ನೋವನ್ನು ನಿವಾರಿಸುತ್ತದೆ.
ಇದನ್ನು ಹೇಗೆ ಮಾಡುವುದು?: ನಿಮ್ಮ ಭಂಗಿ ಸರಿಯಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ನೆಲದ ಮೇಲೆ ಮಂಡಿಯೂರಿ. ಈಗ, ನಿಮ್ಮ ಬೆನ್ನನ್ನು ನಿಧಾನವಾಗಿ ಹಿಂದಕ್ಕೆ ಬಾಗಿಸಿ . ಈ ಸ್ಥಾನವನ್ನು 20-30 ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ ಮತ್ತು ನಂತರ ಮೂಲ ಸ್ಥಾನಕ್ಕೆ ಹಿಂತಿರುಗಿ.

ಧನುರಾಸನ:
ನಿಮ್ಮ ಸಂತಾನೋತ್ಪತ್ತಿ ವ್ಯವಸ್ಥೆಗೆ ಧನುರಾಸನ ಅತ್ಯುತ್ತಮ ಭಂಗಿಗಳಲ್ಲಿ ಒಂದಾಗಿದೆ . ಇದು ಮೂಲ ಯೋಗ ಭಂಗಿಯಾಗಿದ್ದು ಮುಟ್ಟಿನ ನೋವನ್ನು ನಿವಾರಿಸುವುದಲ್ಲದೆ ನಿಮ್ಮ ಮುಂದಿನ ಮುಟ್ಟಿನ ರೋಗಲಕ್ಷಣಗಳ ತೀವ್ರತೆಯನ್ನು ಕಡಿಮೆ ಮಾಡುತ್ತದೆ.
ಇದನ್ನು ಹೇಗೆ ಮಾಡುವುದು?: ಹೊಟ್ಟೆಯು ನೆಲಕ್ಕೆ ತಾಗಿ ಕಾಲು ಮತ್ತು ಕೈ ಗಳನ್ನು ಉದ್ದಕ್ಕೆ ಚಾಚಿ. ಗಲ್ಲವನ್ನು ನೆಲದ ಮೇಲೆ ಇರಿಸಿ ಹಾಗು ಕೈಗಳಿಂದ ಪಾದಗಳನ್ನು ಹಿಡಿದುಕೊಳ್ಳಿ. ಆಳವಾದ ಉಸಿರನ್ನು ತೆಗೆದುಕೊಳ್ಳಿ. ಕಾಲುಗಳ ಸ್ನಾಯುಗಳನ್ನು ಬಿಗಿಗೊಳಿಸಿ. ನಿಧಾನವಾಗಿ ತಲೆ, ಗಲ್ಲ, ಎದೆ ಮತ್ತು ತೊಡೆಯೊಂದಿಗೆ ಕಾಲುಗಳನ್ನು ಏಕಕಾಲದಲ್ಲಿ ಹೆಚ್ಚಿಸಲು ಪ್ರಾರಂಭಿಸಿ. ಹೊಟ್ಟೆಯು ಇಡೀ ದೇಹದ ತೂಕವನ್ನು ಸಂಪೂರ್ಣವಾಗಿ ಹೊಂದಬೇಕು. ಅಭ್ಯಾಸದುದ್ದಕ್ಕೂ ಮೊಣಕೈಯನ್ನು ನೇರವಾಗಿ ಇರಿಸಿ. ನೋಡಲು ಬಿಲ್ಲು/ಧನಸ್ಸಿನ ಆಕಾರದಲ್ಲಿ ಕಾಣುವುದು. ನಿಮಗೆ ಆರಾಮದಾಯಕ ಅನಿಸುವವರೆಗೂ ಈ ಭಂಗಿಯಲ್ಲಿದ್ದು, ಯಾವಾಗ ನಿಮಗೆ ದಣಿವಿನ ಅನುಭವ ಆಗುವುದೊ ಆಗ ನಿಧನಾಗಿ ತಲೆ ಗಲ್ಲ ಎದೆ ಕೈ ಮತ್ತು ಕಾಲುಗಳನ್ನು ನೆಲದ ಮೇಲೆ ತನ್ನಿ. ಇಡೀ ದೇಹವನ್ನು ವಿಶ್ರಾಂತಿ ಮಾಡಿ ಮತ್ತು ಆಳವಾದ ಉಸಿರನ್ನು ತೆಗೆದುಕೊಳ್ಳಿ.



Click it and Unblock the Notifications