ಆಯುರ್ವೇದದ ಪ್ರಕಾರ, ಸಂಜೆ 4ರ ನಂತರ ಹಣ್ಣುಗಳನ್ನು ಸೇವಿಸಬಾರದು, ಏಕೆ ಗೊತ್ತಾ?

ಹಣ್ಣುಗಳು ಜೀವಸತ್ವಗಳು ಮತ್ತು ಖನಿಜಗಳ ಪ್ರಮುಖ ಮೂಲವಾಗಿದೆ. ಆರೋಗ್ಯ ಚೆನ್ನಾಗಿರಲು ಪ್ರತಿದಿನ ಹಣ್ಣುಗಳನ್ನು ಸೇವಿಸುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ. ಇದಕ್ಕೆ ಬಹಳ ಜನಪ್ರಿಯವಾದ ಮಾತೆಂದರೆ, 'ದಿನಕ್ಕೊಂದು ಸೇಬು, ವೈದ್ಯರನ್ನು ದೂರವಿಡುತ್ತದೆ' ಎಂಬುದು. ಅದೇ ಸಮಯದಲ್ಲಿ, ಪ್ರತಿದಿನ ಎರಡು ತಾಜಾ ಹಣ್ಣುಗಳನ್ನು ತಿನ್ನುವುದರಿಂದ, ಯಾವಾಗಲೂ ಫಿಟ್ ಮತ್ತು ಆರೋಗ್ಯಕರವಾಗಿರಬಹುದು. ಅಲ್ಲದೆ, ತೂಕ ಕೂಡ ನಿಯಂತ್ರಣದಲ್ಲಿರುತ್ತದೆ. ಇದರ ಜೊತೆಗೆ, ದೀರ್ಘಕಾಲದ ಕಾಯಿಲೆಗಳ ಅಪಾಯವೂ ಕಡಿಮೆಯಾಗುತ್ತದೆ.

ಆಯುರ್ವೇದದ ಪ್ರಕಾರ, ಪ್ರತಿದಿನ ಬೆಳಿಗ್ಗೆ ಹಣ್ಣುಗಳನ್ನು ತಿನ್ನುವುದು ಡಬಲ್ ಪ್ರಯೋಜನವನ್ನು ನೀಡುತ್ತದೆ. ಆದರೆ, ಅಕಾಲಿಕ ಸಮಯದಲ್ಲಿ ಹಣ್ಣುಗಳನ್ನು ತಿನ್ನುವುದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದಕ್ಕಾಗಿ ಸೂರ್ಯಾಸ್ತದ ನಂತರ ಹಣ್ಣನ್ನು ಸೇವಿಸಬಾರದು. ಆಯುರ್ವೇದದಲ್ಲಿ ಸಂಜೆ 4 ಗಂಟೆಯ ನಂತರ ಹಣ್ಣುಗಳನ್ನು ತಿನ್ನುವುದನ್ನು ನಿಷೇಧಿಸಲಾಗಿದೆ. ಅದು ಏಕೆ ಎಂಬುದನ್ನು ತಿಳಿಯೋಣ.

ಆಯುರ್ವೇದದ ಪ್ರಕಾರ, ಸಂಜೆಯ ನಂತರ ಹಣ್ಣುಗಳನ್ನು ಸೇವಿಸಬಾರದು ಏಕೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಸಂಜೆ 4ರ ನಂತರ ಹಣ್ಣು ಏಕೆ ಸೇವಿಸಬಾರದು?:

ಸಂಜೆ 4ರ ನಂತರ ಹಣ್ಣು ಏಕೆ ಸೇವಿಸಬಾರದು?:

ಆಯುರ್ವೇದದ ಪ್ರಕಾರ, ಸಂಜೆ ಸೂರ್ಯಾಸ್ತದ ನಂತರ ಹಣ್ಣುಗಳನ್ನು ತಿನ್ನುವುದು ನಿದ್ರೆಗೆ ಭಂಗ ತರುತ್ತದೆ. ಜೊತೆಗೆ, ಜೀರ್ಣಕ್ರಿಯೆಯ ಪ್ರಕ್ರಿಯೆಯಲ್ಲಿಯೂ ಸಹ ಪರಿಣಾಮ ಬೀರುತ್ತದೆ. ಹಣ್ಣುಗಳು ಸರಳವಾದ ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುತ್ತವೆ ಎಂದು ನಮಗೆಲ್ಲರಿಗೂ ತಿಳಿದಿದೆ. ಈ ಕಾರ್ಬೋಹೈಡ್ರೇಟ್‌ಗಳನ್ನು ಸುಲಭವಾಗಿ ಸಕ್ಕರೆಯಾಗಿ ಪರಿವರ್ತನೆಯಾಗುವುದು. ಇದರಿಂದ ದೇಹಕ್ಕೆ ತ್ವರಿತ ಶಕ್ತಿ ದೊರೆಯುತ್ತದೆ. ಆದಾಗ್ಯೂ, ಹಣ್ಣುಗಳ ಸೇವನೆಯು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ಕಾರಣದಿಂದಾಗಿ, ರಾತ್ರಿಯ ನಿದ್ರೆ ಕಣ್ಮರೆಯಾಗುತ್ತದೆ. ಇದಲ್ಲದೆ, ಸೂರ್ಯಾಸ್ತದ ನಂತರ ಚಯಾಪಚಯ ದರವು ನಿಧಾನಗೊಳ್ಳುತ್ತದೆ. ಇದರಿಂದ ಕಾರ್ಬೋಹೈಡ್ರೇಟ್‌ಗಳನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಅದಕ್ಕಾಗಿಯೇ, ಹಣ್ಣುಗಳನ್ನು ಸಂಜೆಯ ನಂತರ ಸೇವಿಬಾರದು.

ಹಾಗಾದರೆ, ಹಣ್ಣು ಯಾವಾಗ ಸೇವಿಸಬೇಕು?:

ಹಾಗಾದರೆ, ಹಣ್ಣು ಯಾವಾಗ ಸೇವಿಸಬೇಕು?:

ಸಂಜೆಯ ನಂತರ, ಹಣ್ಣುಗಳ ಸೇವನೆಯಿಂದ ದೇಹಕ್ಕೆ ಪ್ರತಿಕೂಲ ಪರಿಣಾಮ ಬೀರುವುದರಿಂದ, ಅದನ್ನು ಸೂರ್ಯಾಸ್ತದ ಮೊದಲು ಸೇವಿಸುವುದು ಸೂಕ್ತ. ಸೂರ್ಯಾಸ್ತವಾಗುವ ಮೊದಲು ನಮ್ಮ ದೇಹವೂ ಹಲವಾರು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ, ಚಯಪಚಯ ದರವೂ ವೇಗವಾಗಿರುತ್ತದೆ. ಆ ಕಾಲದಲ್ಲಿ ಹಣ್ಣುಗಳನ್ನು ಸೇವನೆ ಮಾಡುವುದರಿಂದ, ದೇಹವೂ ಅವುಗಳನ್ನು ಸುಲಭವಾಗಿ ಜೀರ್ಣಿಸಿಕೊಂಡು, ಅಗತ್ಯ ಶಕ್ತಿ ಬಿಡುಗಡೆ ಮಾಡುತ್ತವೆ.

ಹಣ್ಣು ಸೇವನೆಗೆ ಉತ್ತಮ ಸಮಯ ಯಾವುದು?:

ಹಣ್ಣು ಸೇವನೆಗೆ ಉತ್ತಮ ಸಮಯ ಯಾವುದು?:

ಆಯುರ್ವೇದದ ಪ್ರಕಾರ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ತಿನ್ನುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ರಾತ್ರಿ ಸುಮಾರು ಹತ್ತು ಗಂಟೆಗಳ ವಿಶ್ರಾಂತಿಯ ನಂತರ ಹೊಟ್ಟೆ ಖಾಲಿಯಾಗಿರುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ತಿನ್ನುವುದರಿಂದ ದೇಹಕ್ಕೆ ತ್ವರಿತ ಶಕ್ತಿ ಸಿಗುತ್ತದೆ ಜೊತೆಗೆ ಚಯಾಪಚಯವನ್ನು ಹೆಚ್ಚಿಸುತ್ತದೆ. ಜೊತೆಗೆ ಊಟದ ನಂತರ ಅರ್ಧ ಘಂಟೆಯ ನಂತರ ಹಣ್ಣುಗಳನ್ನು ಸೇವಿಸಬೇಕು.

ಇವುಗಳ ಜತೆ ಹಣ್ಣು ಸೇವನೆ ಬೇಡ:

ಇವುಗಳ ಜತೆ ಹಣ್ಣು ಸೇವನೆ ಬೇಡ:

ತರಕಾರಿಗಳು ಮತ್ತು ಹಾಲಿನೊಂದಿಗೆ ಹಣ್ಣುಗಳನ್ನು ಎಂದಿಗೂ ಸೇವಿಸಬಾರದು. ಡೈರಿ ಉತ್ಪನ್ನಗಳು ಮತ್ತು ತರಕಾರಿಗಳೊಂದಿಗೆ ಹಣ್ಣುಗಳನ್ನು ಸೇವಿಸಿದರೆ, ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

English summary

Why you Must not have Fruits after 4 pm According to Ayurveda in Kannada

Here we talking about Why you must not have fruits after 4 pm according to Ayurveda in kannada, read on
Story first published: Friday, February 18, 2022, 11:06 [IST]
X
Desktop Bottom Promotion