Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
WHO ಶ್ರವಣ ದಿನದ ಪೋಸ್ಟರ್‌ನಲ್ಲಿ ಕೇರಳದ ಯುವತಿ: ಈಕೆಗೆ ಮೊತ್ತ ಮೊದಲು ಕಿವಿ ಕೇಳಿಸಿದ್ದೇ ತನ್ನ 6ನೇ ವಯಸ್ಸಿನಲ್ಲಿ
ಅದೋ ಪಕ್ಷಿಯ ಚಿಲಿಪಿಲಿ ಕೇಳಿಸುತ್ತಿದೆ, ಪಟ್ ಪಟ್ ಬೀಳುವ ಮಳೆ ಹನಿ, ಅರೇ ನನ್ನದೇ ಕಾಲ್ಗೆಜ್ಜೆ ಶಬ್ದ ಇಷ್ಟೊಂದು ಇಂಪಾಗಿದೆಯೇ, ಎಂದು 6 ವರ್ಷದ ಆ ಪುಟ್ಟ ಬಾಲಕಿ ಖುಷಿಯಿಂದ ಕುಣಿದು ಕುಪ್ಪಳಿಸುತ್ತಿದ್ದಳು. ಇಷ್ಟು ವರ್ಷ ಶಬ್ದ ಏನೆಂದೇ ಗೊತ್ತಿರದ ಬಾಲಕಿ ತನ್ನ 6ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಶಬ್ದ ಕೇಳಿ ಬಂದಾಗ ಖುಷಿ ಹೇಳತೀರದು.

ಮೊದಲ ಬಾರಿಗೆ ತನ್ನ ತಾಯಿಯ ಮಾತುಗಳು ಕಿವಿಗೆ ಬೀಳುತ್ತದೆ, 6 ವರ್ಷಗಳ ಕಾಲ ಕಿವಿ ಕೇಳದೆ ಕಳೆದ ಬಾಲಕಿಗೆ ಕಿವಿ ಕೇಳುವಂತಾಗಿದ್ದು ಯಾವುದೇ ಪವಾಡದಿಂದಲ್ಲ, ಬದಲಿಗೆ ತಕ್ಕ ಸಮಯಕ್ಕೆ ಆಕೆಗೆ ಇಯರಿಂಗ್ ಇಂಪ್ಲ್ಯಾಂಟ್ ಮಾಡಿದ್ದರಿಂದ ಆಕೆಗೆ ಕಿವಿ ಕೇಳಲು ಸಾಧ್ಯವಾಗಿದೆ. ಇದೀಗ ಅದೇ ಬಾಲಕಿ ವಿಶ್ವ ಆರೋಗ್ಯ ಸಂಸ್ಥೆಯ ಶ್ರವಣ ದಿನದ ಪೋಸ್ಟರ್‌ನಲ್ಲಿ ಕಾಣುವ ಮೂಲಕ ವಿಶ್ವದ ಗಮನ ಸೆಳೆದಿದ್ದಾಳೆ. ಈಕೆಯ ಹೆಸರಿ ರಿಜ್ವಾನ, ಭಾರತೀಯಳು.
ರಿಜ್ವಾನಾ ಕೇರಳದ ಗವರ್ನ್ಮೆಂಟ್ ಮೆಡಿಕಲ್ ಹಾಸ್ಪೆಟಲ್
ಕೋಟ್ಯಾಯಂನಲ್ಲಿ ಫೈನಲ್ ಇಯರ್ ಎಂಬಿಬಿಎಸ್ ವಿದ್ಯಾರ್ಥಿನಿ. ಹುಟ್ಟುವಾಗಲೇ ಕಿವಿ ಕೇಳುತ್ತದೆಯೇ ಎಂದು ಪರೀಕ್ಷೆ ಮಾಡಿದರೆ ಒಂದು ವೇಳೆ ಕಿವಿ ಕೇಳಿಸದೇ ಇದ್ದರೆ ಚಿಕ್ಕ ವಯಸ್ಸಿನಲ್ಲಿಯೇ ಕಾಕ್ಲಿಯರ್ ಇಂಪ್ಲಾಂಟೇಶನ್( cochlear implantation)ಮಾಡುವುದರಿಂದ ಸಹಜ ಜೀವನ ನಡೆಸಬಹುದು ಎಂಬುವುದಕ್ಕೆ ಉದಾಹರಣೆಯಾಗಿದ್ದಾರೆ..
ರಿಜ್ವಾನಾಳಿಗೆ ಒಂದು ವರ್ಷ ಇರುವಾಗ ಆಕೆಯ ಪೋಷಕರಿಗೆ ಅವಳಿಗೆ ಕಿವಿ ಕೇಳಲ್ಲ ಎಂಬುದು ತಿಳಿಯುತ್ತದೆ, ಆಗ ಅವರಿಗೆ ಕಾಕ್ಲಿಯರ್ ಇಂಪ್ಲಾಂಟೇಶನ್ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ, ಅವರು ಅವಳಿಗೆ ಸ್ಪೀಚ್ ಥೆರಪಿ ಕೊಡಿಸುತ್ತಾರೆ, ಮನೆಯಲ್ಲಿಯೇ ಶಿಕ್ಷಣ ಕೊಡಿಸುತ್ತಾರೆ. ಆಕಎಗೆ 6 ವರ್ಷ ಇರುವಾಗ ಕಾಕ್ಲಿಯರ್ ಇಂಪ್ಲಾಂಟೇಶನ್ ಮಾಡಿಸುತ್ತಾರೆ, ಆಗ ಆಕೆಗೆ ಮಾತು ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂಬುವುದಾಗಿ ವೈದ್ಯರು ಹೇಳಿದ್ದರು.
ನನ್ನ ಪೋಷಕರು ನಾನು ಮಾತನಾಡುವಂತಾಗಲು ಸ್ಪೀಚ್ ಥೆರಪಿ
ಕೊಡಿಸಿದರು, ತುಂಬಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದ್ದರು, ಆದರೆ ಯಾವಾಗ ಕಾಕ್ಲಿಯರ್ ಇಂಪ್ಲಾಂಟೇಶನ್ ಮಾಡಲಾಯಿತೋ ನನಗೆ ಸರಿಯಾಗಿ ಕೇಳಿಸಲು, ಮಾತನಾಡಲು ಸಾಧ್ಯವಾಯಿತು ಎಂದು ರಿಜ್ವಾನಾ ಹೇಳಿದ್ದಾರೆ.
ಕಾಕ್ಲಿಯರ್ ಇಂಪ್ಲಾಂಟೇಶನ್ ಎಂದರೇನು?
ಕಾಕ್ಲಿಯರ್ ಇಂಪ್ಲಾಂಟೇಶನ್ ಎಂಬುವುದು ಎಲೆಕ್ಟ್ರಾನಿಕ್ ಸಾಧನವಾಗಿದೆ, ಕಿವಿಯ ಒಳಗಡೆ ನರವನ್ನು ವಿದ್ಯುತ್ತ್ ಉತ್ತೇಜಿಸುವ ಮೂಲಕ ( electrically stimulating) ಕಿವಿ ಕೇಳುವಂತಾಗುವುದು.
ಯಾವಾಗ ಕಾಕ್ಲಿಯರ್ ಇಂಪ್ಲಾಂಟೇಶನ್ ಮಾಡಿಸುವುದು ಒಳ್ಳೆಯದು?
ಮಗುವಿಗೆ 18 ತಿಂಗಳು ತುಂಬುವ ಮುನ್ನ ಕಾಕ್ಲಿಯರ್ ಇಂಪ್ಲಾಂಟೇಶನ್ ಮಾಡುವುದು ಒಳ್ಳೆಯದು, ಆಗ ಪ್ರಯೋಜನ ಹೆಚ್ಚು, ಈ ಕಾರಣಕ್ಕೆ ಮಕ್ಕಳಿಗೆ ಚಿಕ್ಕ ಪ್ರಾಯದಲ್ಲಿಯೇ ಕಿವಿ ಪರೀಕ್ಷೆ ಮಾಡಿಸಬೇಕು. ಬಹುತೇಕ ಆಸ್ಪತ್ರೆಗಳಲ್ಲಿ ಮಗು ಜನಿಸಿದಾಗಲೇ ಮಗುವಿಗೆ ಶ್ರವಣ ಶಕ್ತಿ ಇದೆಯೇ ಎಂದು ಪರೀಕ್ಷಿಸಲಾಗುವುದು.
ಕಾಕ್ಲಿಯರ್ ಇಂಪ್ಲಾಂಟೇಶನ್ ಮಾಡಿಸಿದ ಬಳಿಕ ಸ್ಪೀಚ್ ಥೆರಪಿ ಕೊಡಿಸಬೇಕಾಗುತ್ತದೆ.
ಭಾರತದಲ್ಲಿ 63 ಮಿಲಿಯನ್ ಜನರಲ್ಲಿ ಶ್ರವಣದೋಷವಿದೆ
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಭಾರತದಲ್ಲಿ 63 ಮಿಲಿಯನ್ ಜನರಿಗೆ ಶ್ರವಣದೋಷವಿದೆ. ಅದರಲ್ಲಿ ಶೇ. 60ರಷ್ಟು ಮಕ್ಕಳಾಗಿದ್ದಾರೆ. ಅವರಿಗೆ ಕಾಕ್ಲಿಯರ್ ಇಂಪ್ಲಾಂಟೇಶನ್ ಮಾಡುವುದರಿಂದ ಕಿವಿ ಕೇಳುವಂತೆ ಮಾಡಲಾಗುವುದು.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಆರ್ಥಿಕವಾಗಿ ಹಿಂದುಳಿದವರಿಗೆ 7 ಲಕ್ಷದವರಿಗೆ ಆರ್ಥಿಕವಾಗಿ ದೊರೆಯಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

