Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಡೀಪ್ ಫ್ರೈ ಬದಲಿಗೆ ವ್ಯಾಕ್ಯೂಮ್ ಫ್ರೈ ಟೆಕ್ನಿಕ್ ಹೆಚ್ಚು ಆರೋಗ್ಯಕರ, ಹೇಗೆ?
ಮಳೆಗಾಲದಲ್ಲಿ ಪಕೋಡ, ಬಜ್ಜಿ, ಚಿಪ್ಸ್ ಈ ರೀತಿಯ ಕುರುಕಲು ತಿಂಡಿಗಳನ್ನೇ ತಿನ್ನಬೇಕೆನಿಸುವುದು, ಹೊರಗಡೆ ಜಿಟಿ ಜಿಟಿ ಅಂತ ಮಳೆ ಸುರಿಯುತ್ತಿದ್ದರೆ ಬಿಸಿ-ಬಿಸಿ ಟೀ ಹೀರುತ್ತಾ ಇಂಥ ಕುರುಕಲು ತಿಂಡಿಗಳನ್ನು ತಿನ್ನಲು ಮಜ ಅನಿಸುವುದು. ಆದರೆ ಎಣ್ಣೆಯಲ್ಲಿ ಕರಿದ ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದಲ್ಲ, ಇದರ ಬದಲಿಗೆ ನೀವು ವ್ಯಾಕ್ಯೂಮ್ ಫ್ರೈ ಮಾಡಿ ತಿನ್ನುವುದು ಒಳ್ಳೆಯ ಆಯ್ಕೆ.
ವ್ಯಾಕ್ಯೂಮ್ ಫ್ರೈ ವಿಧಾನದಲ್ಲಿ ಎಣ್ಣೆ ಹೆಚ್ಚು ಬೇಕಾಗಿಲ್ಲ, ಪೋಷಕಾಂಶಗಳು ಹಾಳಾಗುವುದಿಲ್ಲ, ಏನಿದು ವ್ಯಾಕ್ಯೂಮ್ ಫ್ರೈ ವಿಧಾನ? ಈ ವಿಧಾನದಲ್ಲಿ ಮಾಡುವ ತಿಂಡಿಗಳು ಏಕೆ ಹೆಚ್ಚು ಆರೋಗ್ಯಕರ ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ.

ವ್ಯಾಕ್ಯೂಮ್ ಫ್ರೈ ಟೆಕ್ನಿಕ್ ಎಂದರೇನು?
ಇದು ಆಹಾರವನ್ನು ಬೇಯಿಸುವ ಒಂದು ವಿಧಾನವಾಗಿದೆ. ಇದರಲ್ಲಿ ಕಡಿಮೆ ಎಣ್ಣೆ ಹಾಗೂ ಕಡಿಮೆ ಉಷ್ಣತೆ ಬಳಸಿ ಅಡುಗೆ ಬೇಯಿಸಲಾಗುವುದು. ಇದರಲ್ಲಿ ಕಡಿಮೆ ಉಷ್ಣತೆಯಲ್ಲಿ ಆಹಾರ ಬೇಯುವುದರಿಂದ ಅದರಲ್ಲಿರುವ ಪೋಷಕಾಂಶ ಕೂಡ ಹಾಳಾಗುವುದಿಲ್ಲ. ನಿಧಾನಕ್ಕೆ ಫ್ರೈಯಾಗುವುದರಿಂದ ಕ್ಯಾನ್ಸರ್‌ಕಾರಕವಾಗುವುದಿಲ್ಲ ಆದ್ದರಿಂದ ಸ ಇಂಥ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದು.

ವ್ಯಾಕ್ಯೂಮ್ ಫ್ರೈ VS ಎಣ್ಣೆಯಲ್ಲಿ ಕರಿಯುವ ವಿಧಾನ
ವ್ಯಾಕ್ಯೂಮ್ ಫ್ರೈನಲ್ಲಿ ಎಣ್ಣೆಯಂಶ ಕಡಿಮೆ ಬಳಸಿ ಆಹಾರ ಬೇಯುವುದು, ಆದರೆ ಎಣ್ಣೆಯಲ್ಲಿ ಕರಿಯುವ ವಿಧಾನದಲ್ಲಿ ತುಂಬಾ ಎಣ್ಣೆ ಬೇಕು. ತುಂಬಾ ಉಷ್ಣತೆಯಲ್ಲಿ ಎಣ್ಣೆಯಲ್ಲಿ ಕರಿದಾಗ ಅದರ ಪೋಷಕಾಂಶ ಹಾಳಾಗುವುದು ಆದರೆ ವ್ಯಾಕ್ಯೂಮ್ ಫ್ರೈನಲ್ಲಿ ನಿಧಾನಕ್ಕೆ ಬೇಯುವುದರಿಂದ ಅದರಲ್ಲಿರುವ ಪೋಷಕಾಂಶ ಹಾಳಾಗುವುದಿಲ್ಲ.

ಎಣ್ಣೆ ಖರ್ಚು ತುಂಬಾ ಕಡಿಮೆ
ವ್ಯಾಕ್ಯೂಮ್ ಫ್ರೈ ವಿಧಾನದಲ್ಲಿ ಸ್ವಲ್ಪ ಎಣ್ಣೆ ಸಾಕು, ಇದರಿಂದ ಎಣ್ಣೆ ಉಳಿತಾಯವಾಗುವುದು ಅಲ್ಲದೆ ಎಣ್ಣೆ ಕಡಿಮೆ ಬೇಕಾಗಿರುವುದರಿಂದ ಆರೋಗ್ಯಕ್ಕೂ ಒಳ್ಳೆಯದು.

ರುಚಿಯೂ ಚೆನ್ನಾಗಿರುತ್ತದೆ
ವ್ಯಾಕ್ಯೂಮ್ ಫ್ರೈನಲ್ಲಿ ಫ್ರೈ ಮಾಡಿದ ಆಹಾರ ಕೂಡ ಎಣ್ಣೆಯಲ್ಲಿ ಕರಿದಷ್ಟೇ ರುಚಿಯಾಗಿರುತ್ತೆ. ಆದ್ದರಿಂದ ಈ ವಿಧಾನ ಅನುಸರಿದರೆ ರುಚಿಕರವಾದ ಹಾಗೂ ಆರೋಗ್ಯಕರವಾದ ಆಹಾರ ಸವಿಯಬಹುದು.



Click it and Unblock the Notifications
