Latest Updates
-
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು?
ದಿನಾ ಮಾಸ್ಕ್ ಹಾಕಿದರೆ ಶ್ವಾಸಕೋಶಕ್ಕೆ ಹಾನಿಯಾಗುವುದೇ?
ಕಳೆದ ಒಂದೂವರೆ ವರ್ಷದಿಂದ ಮಾಸ್ಕ್ ಎಂಬುವುದು ನಮ್ಮೆಲ್ಲರ ಬದುಕಿನಲ್ಲಿ ಅತ್ಯಂತ ಅವಶ್ಯಕವಾದ ಒಂದು ವಸ್ತುವಾಗಿದೆ. ಹೊರಗಡೆ ಹೋಗುವಾಗ ಪರ್ಸ್ ಮರೆತರೂ ಮಾಸ್ಕ್ ಮರೆಯುವಂತಿಲ್ಲ.
ಕೊರೊನಾ ಬರುವ ಬದಲು ವೈದ್ಯರು , ನರ್ಸ್‌ಗಳು ಆಪರೇಷನ್ ಥಿಯೇಟರ್‌ನಲ್ಲಿ ಬಳಸುವುದನ್ನು ನೋಡಿರುತ್ತೇವೆ. ಆದರೆ ಕೊರೊನಾ ಬಂದ ಮೇಲೆ ಅವರಿಗೆ ಪಿಪಿಇ ಕಿಟ್ ಧರಿಸುವ ಅನಿವಾರ್ಯತೆ ಎದುರಾದರೆ ಜನಸಾಮಾನ್ಯರಿಗೆ ಮಾಸ್ಕ್ ಧರಿಸಿ ಓಡಾಡಬೇಕಾದ ಅನಿವಾರ್ಯ.
ಚಳಿಗಾಲದಲ್ಲಿ ಮಾಸ್ಕ್ ಧರಿಸಿದಾಗ ಅಷ್ಟೇನು ತೊಂದರೆಯಾಗಲ್ಲ, ಆದರೆ ಸೆಕೆ ಇರುವಾಗ ಧರಿಸಿದಾಗ ತುಂಬಾನೇ ಹಿಂಸೆ ಅನಿಸುವುದು, ಆದರೆ ಕೊರೊನಾ ತಡೆಗಟ್ಟಬೇಕಾದರೆ ಮಾಸ್ಕ್ ಧರಿಸಲೇಬೇಕಾಗಿದೆ.
ಇನ್ನು ಕೆಲವರಿಗೆ ದಿನಪೂರ್ತಿ ಮಾಸ್ಕ್ ಧರಿಸಬೇಕಾಗಿರುತ್ತದೆ. ಮಾಸ್ಕ್ ತುಂಬಾ ಬಳಕೆ ಮಾಡುವುದರಿಂದ ಏನಾಗುತ್ತೆ ನೋಡೋಣ:

ದೊಡ್ಡ ಸಮಸ್ಯೆ ತಡೆಗಟ್ಟಲು ಒಂದು ಚಿಕ್ಕ ಮುನ್ನಚ್ಚರಿಕೆ
ಬೇಸಿಗೆಯಲ್ಲಿ ಮಾಸ್ ಧರಿಸಿದಾಗ ಮತ್ತಷ್ಟು ಮುಖ ಬೆವರುವುದರಿಂದ ತುಂಬಾ ಕಿರಿಕಿರಿಯಾಗುತ್ತದೆ. ಇದರಿಂದ ಮೊಡವೆ ಸಮಸ್ಯೆ ಉಂಟಾಗುತ್ತಿದೆ, ಮುಖದ ತ್ವಚೆ ತುಂಬಾ ಸೆನ್ಸಿಟಿವ್ ಆಗಿದೆ ಎಂದೆಲ್ಲಾ ಜನರು ಕಂಪ್ಲೇಂಟ್ ಮಾಡುತ್ತಾರೆ.
ಇನ್ನು ಮಾಸ್ಕ್ ಧರಿಸುವುದರಿಂದ ಶ್ವಾಸಕೋಶಕ್ಕೆ ಹಾನಿಯಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ನಿಮ್ಮಲ್ಲೂ ಆ ರೀತಿಯ ಕಲ್ಪನೆ ಇದ್ದರೆ ಅದೊಂದು ತಪ್ಪು ಕಲ್ಪನೆ ಎಂಬುವುದನ್ನು ಅರಿತು ಕೊಂಡರೆ ಒಳ್ಳೆಯದು.

ಮಾಸ್ಕ್ ಧರಿಸುವುದರಿಂದ ಶ್ವಾಸಕೋಶಕ್ಕೆ ಹಾನಿಯುಂಟಾಗುವುದಿಲ್ಲ
ಮಾಸ್ಕ್ ಧರಿಸಿ ಉಸಿರಾಡಿದಾಗ ನಾವು ಹೊರಬಿಡುವ ಇಂಗಾಲದ ಡೈಯಾಕ್ಸೈಡ್ ವಿಷವಾಗುವುದಿಲ್ಲ, ಇದು ನಾವು ತೆಗೆದುಕೊಳ್ಳುವ ಆಮ್ಲಜನಕದ ಪ್ರಮಾಣವನ್ನು ಕಡಿಮೆ ಮಾಡುವುದೂ ಇಲ್ಲ. ನಿಮಗೆ ಈ ಕುರಿತು ಇನ್ನೂ ಸಂಶಯವಿದ್ದರೆ ನೀವೊಮ್ಮೆ snopes.com ಪರಿಶೀಲಿಸಿ. ಇದೊಂದು ಫ್ಯಾಕ್ಟ್ ಚೆಕಿಂಗ್ ಸೈಟ್ ಆಗಿದೆ.
ಇಂಗಾಲದ ಡೈಯಾಕ್ಸೈಡ್ ತುಂಬಾ ಚಿಕ್ಕ ಕಣವಾಗಿದ್ದು ಅದು ನಾವು ಉಸಿರು ಬಿಟ್ಟಾಗ ಮಾಸ್ಕ್ ಮೂಲಕ ಹೊರ ಹೋಗುತ್ತದೆ ಹಾಗೂ ಆಮ್ಲಜನಕವನ್ನು ತೆಗೆದುಕೊಳ್ಳುವುದರಲ್ಲಿ ಯಾವುದ್ಯರು ದೇ ತೊಂದರೆಯುಂಟಾಗುವುದಿಲ್ಲ.

ಅಸ್ತಮಾ ಮುಂತಾದ ರೋಗವಿರುವವರಿಗೆ ಮಾಸ್ಕ್ ಧರಿಸುವುದರಿಂದ ತೊಂದರೆ ಉಂಟಾಗುವುದೇ?
ಅಸ್ತಮಾ, ಉಸಿತರಾಟದ ಸಮಸ್ಯೆ ಇರುವವರಿಗೆ ಮಾಸ್ಕ್ ಧರಿಸುವುದರಿಂದ ಮತ್ತಷ್ಟು ಉಸಿರು ಕಟ್ಟಿದ ಅನುಭವವಾಗುತ್ತದೆ ಎಂದು ಕೆಲವರು ಹೇಳುತ್ತಾರೆ, ಆದರೆ ಮಾಸ್ಕ್ ಧರಿಸುವುದರಿಂದ ಹೈಪರ್‌ಕ್ಯಾಪ್ನಿಯಾ ಅಥವಾ ಇಂಗಾಲದ ಡೈಯಾಕ್ಸೈಡ್ ವಿಷಾನಿಲವಾಗುವುದಿಲ್ಲ.
ಅಲ್ಲದೆ ವೈದ್ಯರು ಕೂಡ ಅಸ್ತಮಾ ರೋಗಿಗಳಿಗೆ ದೂಳು ಅಥವಾ ಹಿಗೆ ಇರುವ ಕಡೆ ಹೋಗುವಾಗ ಮಾಸ್ಕ್ ಧರಿಸುವಂತೆ ಸಲಹೆ ನೀಡುತ್ತಾರೆ. ಏಕೆಂದರೆ ಅಸ್ತಮಾ ರೋಗಿಗಳ ರೋಗ ನಿರೋಧಕ ಶಕ್ತಿ ತುಂಬಾನೇ ಕಡಿಮೆ ಇರುತ್ತದೆ, ಇವರ ಆರೋಗ್ಯ ದೂಳು, ವಾಯು ಮಾಲಿನ್ಯ ಇರುವ ಕಡೆ ಹೋದಾಗ ಬೇಗನೆ ಹದಗೆಡುವುದರಿಂದ ಮಾಸ್ಕ್ ಧರಿಸುವಂತೆ ಸಲಹೆ ನೀಡುತ್ತಾರೆ.
ನೀವು ತುಂಬಾ ಹೊತ್ತು ಮಾಸ್ಕ್ ಧರಿಸುವುದರಿಂದ ನಿಮ್ಮ ಉಸಿರಾಟದ ಸಾಮರ್ಥ್ಯಕ್ಕೆ ತೊಂದರೆಯಾಗುವುದೇ?
ಏನಿಲ್ಲ, ಅಲ್ಲದೆ ಜನ ಸಾಮಾನ್ಯರು ದಿನಾ ಪೂರ್ತಿ ಮಾಸ್ಕ್ ಧರಿಸುವುದಿಲ್ಲ, ಆದರೆ ವೈದ್ಯರು ಹಾಗೂ ನರ್ಸ್‌ಗಳ ಬಗ್ಗೆ ಯೋಚಿಸಿ, ಆಸ್ಪತ್ರೆಯಲ್ಲಿ ಇರುವಷ್ಟು ಹೊತ್ತು ಮಾಸ್ಕ್ ಧರಿಸಿಯೇ ಇರಬೇಕು.

ಯಾವಾಗ ಮಾಸ್ಕ್ ಧರಿಸಬಾರದು?
* ನೀವು ವ್ಯಾಯಾಮ ಮಾಡುವಾಗ
* ಚಿಕ್ಕ ಮಗುವಿಗೆ (ಇದರ ಶ್ವಾಸಕೋಶ ಬೆಳೆದಿರುವುದಿಲ್ಲ, ಆದ್ದರಿಂದ ಧರಿಸಬೇಡಿ)
* ಗಂಭೀರವಾದ ಉಸಿರಾಟದ ತೊಂದರೆ ಇದ್ದು ಸಹಜವಾಗಿ ಉಸಿರಾಡಲು ಸಾಧ್ಯವಾಗದವರು

ನಿಮಗೆ ಮಾಸ್ಕ್ ಧರಿಸಲು ಸಮಸ್ಯೆಯೇ?
ನಿಮಗೆ ಮಾಸ್ಕ್ ಧರಿಸಲು ಇಷ್ಟವಿಲ್ಲದಿದ್ದರೆ ಸಾರ್ವಜನಿಕ ಸ್ಥಳಗಳಿಗೆ, ಮಾಲ್, ರೆಸ್ಟೋರೆಂಟ್‌ಗಳಿಗೆ ಹೋಗಬೇಡಿ, ಮನೆಯಲ್ಲಿಯೇ ಇರಿ.
ನೀವು ಹೊರಗಡೆ ಹೋಗುವುದೇ ಆದರೆ ಮಾಸ್ಕ್ ಧರಿಸಿ ಹೋಗಿ ಇದರಿಂದ ನಿಮ್ಮನ್ನು ಕಾಪಾಡುವುದು ಮಾತ್ರವಲ್ಲ, ಬೇರೆಯವರನ್ನೂ ಕೋವಿಡ್ 19 ಮಹಾಮಾರಿಯಿಂದ ರಕ್ಷಿಸಬಹುದು.



Click it and Unblock the Notifications
