Just In
Don't Miss
- Sports
IND vs AUS Test : ಫೆಬ್ರವರಿ 1 ರಂದು ಭಾರತಕ್ಕೆ ಆಸ್ಟ್ರೇಲಿಯಾ ತಂಡ : ಬೆಂಗಳೂರಿನಲ್ಲಿ ಅಭ್ಯಾಸ
- News
BBC Documentary Screening: ದೆಹಲಿಯಲ್ಲಿ ಪ್ರತಿಭಟನೆಯ ಬೆನ್ನಲ್ಲೆ ಸಮಿತಿ ರಚನೆ!
- Technology
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- Movies
ಗಾಯಕನಾಗುವ ಆಸೆಯಿಂದ ಬಂದು ನಟನಾದ ಯಶವಂತ್ ಕಿರುತೆರೆ ಪಯಣ
- Automobiles
ಭಾರತದಲ್ಲಿ ಹೊಸ ಅಧ್ಯಾಯ ಬರೆಯಲು ಸಿದ್ಧವಾಗಿವೆ ಮಾರುತಿ ಸುಜುಕಿ ಕಾರುಗಳು
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಈ 5 ಸರಳ ವ್ಯಾಯಾಮ ಮಾಡಿದರೆ ಸಾಕು ಥೈರಾಯ್ಡ್ ಸಮಸ್ಯೆ ಇರಲ್ಲ: ಡಾ. ರಾಜು ಟಿಪ್ಸ್
ಥೈರಾಯ್ಡ್ ಸಮಸ್ಯೆ ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಜನರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಈ ಥೈರಾಯ್ಡ್ ಸಮಸ್ಯೆ ಮಹಿಳೆಯರಿಗೆ ಹೆಚ್ಚಾಗಿ ಕಾಡುತ್ತದೆ, ಕೆಲ ಪುರುಷರಲ್ಲೂ ಕಂಡು ಬರುವುದು.
ನಮ್ಮೆಲ್ಲರ ದೇಹದಲ್ಲಿ ಥೈರಾಯ್ಡ್ ಗ್ರಂಥಿ ಇದೆ, ಆ ಥೈರಾಯ್ಡ್ ಗ್ರಂಥಿ ಥೈರಾಯ್ಡ್ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಥೈರಾಯ್ಡ್ ಹಾರ್ಮೋನ್‌ಗಳ ಬಿಡುಗಡೆ ವ್ಯತ್ಯಾಸ ಅಂದ ಅತಿ ಕಡಿಮೆ ಥೈರಾಯ್ಡ್ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುವುದು ಅಥವಾ ಅತೀ ಹೆಚ್ಚು ಥೈರಾಯ್ಡ್ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುವುದು ಮಾಡಿದರೆ ಥೈರಾಯ್ಡ್ ಸಮಸ್ಯೆ ಉಂಟಾಗುವುದು.

ಹೈಪೋಥೈರಾಯ್ಡ್ VS ಹೈಪರ್ ಥೈರಾಯ್ಡ್
ಥೈರಾಯ್ಡ್ ಸಮಸ್ಯೆಯಲ್ಲಿ ಎರಡು ವಿಧ
1. ಹೈಪೋಥೈರಾಯ್ಡ್: ಥೈರಾಯ್ಡ್ ಗ್ರಂಥಿಗಳು ಸಾಕಷ್ಟು ಥೈರಾಯ್ಡ್ ಹಾರ್ಮೋನ್‌ಗಳನ್ನು ಉತ್ಪಾದಿಸದೇ ಹೋದಾಗ ಹೈಪೋಥೈರಾಯ್ಡ್ ಉಂಟಾಗುತ್ತದೆ. ಈ ರೀತಿಯಾದಾಗಾ ತಿಯಾದ ಮೈ ತೂಕ, ಮಲಬದ್ಧತೆ ಸಮಸ್ಯೆ ಈ ಬಗೆಯ ತೊಂದರೆಗಳು ಉಂಟಾಗುವುದು.
2. ಹೈಪರ್ ಥೈರಾಯ್ಡ್: ಹೈಪರ್‌ಥೈರಾಯ್ಡ್‌ನಲ್ಲಿ ಥೈರಾಯ್ಡ್ ಹಾರ್ಮೋನ್‌ಗಳ ಅಗ್ಯತಕ್ಕಿಂತ ಅಧಿಕ ಉತ್ಪತ್ತಿಯಾಗುವುದು. ಇದರಿಂದ ಮೈ ತೂಕ ತುಂಬಾ ಕಡಿಮೆಯಾಗುವುದು. ಹೈಪರ್ ಥೈರಾಯ್ಡ್ ಸಮಸ್ಯೆ ಇದ್ದರೆ ಆಗಾಗ ಮಲವಿಸರ್ಜನೆಗೆ ಹೋಗಬೇಕೆನಿಸುವುದು.

ಥೈರಾಯ್ಡ್ ಹಾರ್ಮೋನ್‌ಗಳ ವ್ಯತ್ಯಾಸವಾದರೆ ಏನಾಗುತ್ತೆ?
ಥೈರಾಯ್ಡ್ ಹಾರ್ಮೋನ್‌ಗಳು ನಮ್ಮ ದೇಹದ ಚಯಪಚಯ ಕ್ರಿಯೆಗೆ ತುಂಬಾನೇ ಅವಶ್ಯಕ, ಥೈರಾಯ್ಡ್ ಹಾರ್ಮೋನ್‌ಗಳಲ್ಲಿ ವ್ಯತ್ಯಾಸವಾದಾಗ ಗಳಗಂಡ ಸಮಸ್ಯೆ ಉಂಟಾಗುವುದು, ಇನ್ನು ಕೆಲವರಿಗೆ ಗಂಟಲಿನ ಕ್ಯಾನ್ಸರ್ ಕೂಡ ಉಂಟಾಗುವುದು. ಥೈರಾಯ್ಡ್ ಸಮಸ್ಯೆ ಇರುವ ಮಹಿಳೆಯರಲ್ಲಿ ಅನಿಯಮಿತ ಮುಟ್ಟಿನ ಸಮಸ್ಯೆ, ಬಂಜೆತನ ಉಂಟಾಗುವುದು.
ಥೈರಾಯ್ಡ್ ಸಮಸ್ಯೆ ಹೋಗಲಾಡಿಸಬಹುದೇ?
ಥೈರಾಯ್ಡ್ ಸಮಸ್ಯೆ ಇರುವವರಿಗೆ ವೈದ್ಯರು ಮಾತ್ರೆ ಸೂಚಿಸುತ್ತಾರೆ, ಇದರ ಜೊತೆಗೆ ಕೆಲವೊಂದು ಲೈಫ್‌ಸ್ಟೈಲ್ ಬದಲಾವಣೆ ಮಾಡಿಕೊಂಡರೆ ಥೈರಾಯ್ಡ್ ಸಮಸ್ಯೆಯಿಂದ ಹೊರಬರಬಹುದು.
ಕರ್ನಾಟಕ ಜನಪ್ರಿಯ ವೈದ್ಯರಲ್ಲಿ ಒಬ್ಬರಾಗಿರುವ ಡಾ. ರಾಜು ಅವರು ಥೈರಾಯ್ಡ್ ಸಮಸ್ಯೆಗೆ ಕೆಲವೊಂದು ಸರಳ ವ್ಯಾಯಾಮ ಹೇಳಿದ್ದಾರೆ, ಆ ವ್ಯಾಯಾಮಗಳನ್ನು ಮಾಡುವ ಮುಖಾಂತರ ಥೈರಾಯ್ಡ್ ಸಮಸ್ಯೆ ಹೋಗಲಾಡಿಸಬಹುದು ಎಂದು ಹೇಳಿದ್ದಾರೆ. ಆ ವ್ಯಾಯಾಮಗಳ ಬಗ್ಗೆ ಅವರು ಸರಳವಾಗಿ ವಿವರಿಸಿದ್ದಾರೆ. ವೀಡಿಯೋ ನೋಡಿ ನೀವು ಆ ವ್ಯಾಯಾಮಗಳನ್ನು ಮಾಡಬಹುದು. ಅವರು ತೋರಿಸಿರುವ ವ್ಯಾಯಾಮಗಳು ಯೋಗಾ ಭಂಗಿಗಳಾಗಿವೆ, ಅವುಗಳ ಕುರಿತ ವಿವರವಾಗಿ ತಿಳಿಯೋಣ:

1. ವಿಪರೀತಕರಣಿ
ಈ ವ್ಯಾಯಾಮದಲ್ಲಿ ಮ್ಯಾಟ್ ಮೇಲೆ ಮಲಗಿ ಕಾಲುಗಳನ್ನು ಮೇಲಕ್ಕೆ ಎತ್ತಿ ಗೋಡೆಗಳ ಮೇಲೆ ಇಡಿ, ಹೀಗೆ ಮಾಡುವುದರಿಂದ ತಲೆಗೆ ಚೆನ್ನಾಗಿ ರಕ್ತಸಂಚಾರವಾಗುತ್ತದೆ. ಡಾ. ರಾಜು ಅವರು ಈ ಭಂಗಿಯಲ್ಲಿ ಸ್ವಲ್ಪ ತಲೆಯನ್ನು ಮೇಲಕ್ಕೆ ಎತ್ತಿ ಗಲ್ಲವನ್ನು ಕುತ್ತಿಗೆಗೆ ಮುಟ್ಟಿಸಿ, ನಂತರ ಸ್ವಲ್ಪ ವಿಶ್ರಾಂತಿ ಮಾಡಿ. ಈ ರೀತಿ ನಿಮಗೆ ಎಷ್ಟು ಅನಿಸುವುದೋ ಅಷ್ಟು ಮಾಡಿ ಎಂದು ಹೇಳಿದ್ದಾರೆ. ದಿನದಲ್ಲಿ ಒಂದು 10 ಬಾರಿ ಈ ರೀತಿ ಮಾಡಿ. ಇದರಿಂದ ಥೈರಾಯ್ಡ್ ಗ್ರಂಥಿಗೆ ಒಳ್ಳೆಯದು.

2. ಮತ್ಯ್ಸಾಸನ :
ಈ ಭಂಗಿ ಥೈರಾಯ್ಡ್ ಗ್ರಂಥಿಗೆ ತುಂಬಾ ಒಳ್ಳೆಯದು. ಮೊದಲಿಗೆ ನಿಮಗೆ ಕಷ್ಟವಾದರೆ ಬೆನ್ನಿನ ಭಾಗಕ್ಕೆ ದಿಂಬಿನ ಸಪೋರ್ಟ್ ತೆಗೆದುಕೊಳ್ಳಬಹುದು, ಈ ರೀತಿ ಮತ್ಸ್ಯಾಸನ ಭಂಗಿಯಲ್ಲಿ 2 ನಿಮಿಷ ಇದ್ದು ನಂತರ ಶವಾಸನದಲ್ಲಿ ರೆಸ್ಟ್ ಮಾಡಿ.

3. ಭುಜಾಂಗಸಾನ:
ಈ ಭುಜಾಂಗಸಾನ ಕೂಡ ಥೈರಾಯ್ಡ್ ಹಾರ್ಮೋನ್‌ಗಳನ್ನು ಸಮತೋಲನದಲ್ಲಿಡಲು ತುಂಬಾನೇ ಸಹಕಾರಿ. ಭುಜಾಂಗಾಸನ ಮಾಡುವುದು ಕೂಡ ಸುಲಭ. ಭುಜಾಂಗಾಸನದಲ್ಲಿ 2 ನಿಮಿಷ ಇದ್ದು ನಂತರ ಶವಾಸನದಲ್ಲಿ ರೆಸ್ಟ್ ಮಾಡಿ.

4. ಪ್ರಾಣಯಾಮ:
ಪ್ರಾಣಯಾಮ ಮಾಡುವಾಗ ಸ್ವಲ್ಪ ಬದಲಾವಣೆ ಮಾಡಿಕೊಳ್ಳಿ, ಉಸಿರನ್ನು ತೆಗೆದುಕೊಳ್ಳುವಾಗ ಕುತ್ತಿಗೆಯನ್ನು ಮೇಲಕ್ಕೆ ಎತ್ತಿ, ನಿಧಾನಕ್ಕೆ ಉಸಿರು ಬಿಡುತ್ತಾ ಬಂದು ಗಲ್ಲವನ್ನು ಕುತ್ತಿಗೆಯ ಕೆಳಭಾಗಕ್ಕೆ ಮುಟ್ಟಿ 5 ಕೌಂಟ್ ಇದ್ದು ನಂತರ ಸಹಜ ಸ್ಥಿತಿಗೆ ಬನ್ನಿ. ಈ ರೀತಿ 5 ನಿಮಿಷ ಮಾಡಿ.
ಪ್ರಾಣಯಾಮದಲ್ಲಿ ಉಜ್ವೈನ್ ಪ್ರಾಣಯಾಮ ಕೂಡ ತುಂಬಾ ಒಳ್ಳೆಯದು. ಈ ಪ್ರಾಣಯಾಮ ಮಾಡುವುದರಿಂದ ಥೈರಾಯ್ಡ್ ಗ್ರಂಥಿ ಚಟುವಟಿಕೆಯಿಂದ ಇರುತ್ತದೆ.

5. ಮಸಾಜ್
ಡಾ. ರಾಜ್ ಅವರು ಕುತ್ತಿಗೆ ಭಾಗಕ್ಕೆ ಮಸಾಜ್ ಮಾಡುವ ಮೂಲಕ ಥೈರಾಯ್ಡ್ ಹಾರ್ಮೋನ್‌ಗಳನ್ನು ನಿಯಂತ್ರಣದಲ್ಲಿಡಬಹುದು ಎಂದು ಹೇಳಿದ್ದಾರೆ. ಮಸಾಜ್ ಮಾಡುವಾಗ ಬೆಳಗ್ಗೆ ಹೊತ್ತು ಸೂರ್ಯನ ಬೆಳಕಿನಲ್ಲಿ ನಿಂತು ಸ್ವಲ್ಪ ಕೊಬ್ಬರಿ ಎಣ್ಣೆ ಹಚ್ಚಿ ಮಸಾಜ್ ಮಾಡಿದರೆ ಒಳ್ಳೆಯದು ಎಂದು ಹೇಳಬಹುದು.
ಫಿಟ್ನೆಸ್ ಕಾಪಾಡುವುದು ಹೇಗೆ
ಥೈರಾಯ್ಡ್ ಸಮಸ್ಯೆ ಇರುವವರಿಗೆ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ ಎಂಬುವುದೇ ದೊಡ್ಡ ಸಮಸ್ಯೆ. ನೀವು ಆರೋಗ್ಯಕರ ಆಹಾರಕ್ರಮ ಸೇವಿಸಬೇಕು ಹಾಗೂ ಪ್ರತಿದಿನ ವ್ಯಾಯಾಮ ಮಾಡಬೇಕು. ಈ ರೀತಿ ಮಾಡುವುದರಿಂದ ಮೈ ತೂಕ ನಿಯಂತ್ರಣದಲ್ಲಿಡಬಹುದು. ಬೆಳಗ್ಗೆ ಎದ್ದಾಗ ಹಾಗೂ ರಾತ್ರಿ ಮಲಗುವಾಗ 1 ಚಮಚ ಕೊಬ್ಬರಿ ಎಣ್ಣೆ ತಿನ್ನಿ. ಥೈರಾಯ್ಡ್ ಹಾರ್ಮೋನ್‌ಗಳನ್ನು ನಿಯಂತ್ರಣದಲ್ಲಿಡಲು ಸಹಕಾರಿ. ಥೈರಾಯ್ಡ್ ಹಾರ್ಮೋನ್ ಸಮಸ್ಯೆ ಇರುವವರು ನವಣೆ ಪದಾರ್ಥಗಳನ್ನು ಬಳಸುವುದು ಒಳ್ಳೆಯದು.