Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮನಸ್ಸಿಗೆ ಮುದ ನೀಡುವ ಬಿಸಿನೀರಿನ ಸ್ನಾನ, ಆರೋಗ್ಯಕ್ಕೆ ತರವಲ್ಲ!
ಚಳಿಗಾಲದಲ್ಲಿ ಬಿಸಿನೀರಿನಿಂದ ಸ್ನಾನ ಮಾಡುವುದು ತುಂಬಾ ಖುಷಿ ಕೊಡುವ ಸಂಗತಿ. ಆದರೆ ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಅನೇಕ ಹಾನಿ ಉಂಟಾಗುತ್ತದೆ. ಆದ್ದರಿಂದ ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡುವುದು ಉತ್ತಮ. ನೀರಿನ ತಾಪಮಾನವು 32 ° C ಮೀರಬಾರದು. ಚಳಿಗಾಲ ಶುರುವಾದ ಕೂಡಲೇ ತುರಿಕೆ, ಒಣಹವೆ, ಸೋರಿಯಾಸಿಸ್, ತುರಿಗಜ್ಜಿ ಮುಂತಾದ ಸಮಸ್ಯೆಗಳು ಕಾಡುತ್ತಿದ್ದರೆ ಬಿಸಿ ನೀರಿನಿಂದ ಸ್ನಾನ ಮಾಡದಿರುವುದು ಉತ್ತಮ. ಒಂದು ವೇಳೆ ಹೆಚ್ಚು ಬಿಸಿನೀರಿನಿಂದ ಸ್ನಾನ ಮಾಡಿದರೆ, ಎಂತಹ ಅನಾನುಕೂಲತೆಗಳಿವೆ ಎಂಬುದನ್ನು ಇಲ್ಲಿ ನೋಡೋಣ.
ತುಂಬಾ ಬಿಸಿನೀರಿನಿಂದ ಸ್ನಾನ ಮಾಡುವುದರಿಂದ ದೇಹದ ಮೇಲಾಗುವ ಪರಿಣಾಮಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

1. ದದ್ದು ಅಥವಾ ರಾಶೆಸ್:
ಅತಿಯಾಗಿ ಬಿಸಿಯಾಗಿರುವ ನೀರಿನಿಂದ ಸ್ನಾನ ಮಾಡುವುದರಿಂದ ನಿಮ್ಮ ಮನಸ್ಸಿಗೇನೋ ಉಲ್ಲಾಸವೆನಿಸಬಹುದು. ಆದರೆ, ಇದು ನಿಮ್ಮ ಚರ್ಮಕ್ಕೆ ಒಳ್ಳೆಯದಲ್ಲ. ಇದರಿಂದ ಮೊತ್ತಮೊದಲು ಉಂಟಾಗುವ ತೊಂದರೆಯೆಂದರೆ ಅದು ದದ್ದುಗಳು ಅಥವಾ ಅಲರ್ಜಿ. ಬಿಸಿನೀರಿನ ಸ್ನಾನದಿಂದ ಚರ್ಮದ ಮೇಲೆ ಕೆಂಪು ಗುಳ್ಳೆಗಳಾಗಬಹುದು. ಆದ್ದರಿಂದ ಎಚ್ಚರವಾಗಿರಿ.

2.ಚರ್ಮದ ಸೋಂಕು:
ಬಿಸಿನೀರು ಚರ್ಮದಿಂದ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ಸದಾ ತುರಿಕೆ ಉಂಟಾಗುತ್ತದೆ. ಇದು ಚರ್ಮದ ಸೋಂಕಿಗೆ ಕಾರಣವಾಗುವ ಸಾಧ್ಯತೆಯೂ ಇದೆ.
ಆದ್ದರಿಂದ ಸ್ನಾನಕ್ಕೆ ಉಗುರು ಬೆಚ್ಚಗಿನ ನೀರು ಬಳಸುವುದು ಸೂಕ್ತ.

3.ಅಕಾಲಿಕ ಸುಕ್ಕುಗಳು:
ಬಿಸಿನೀರಿನಿಂದ ಸ್ನಾನ ಮಾಡುವುದರಿಂದ ಸುಕ್ಕುಗಳಿಗೆ ಸಹ ಕಾರಣವಾಗಬಹುದು, ಏಕೆಂದರೆ ಬಿಸಿನೀರು ಚರ್ಮದ ಅಂಗಾಂಶಗಳನ್ನು ಹಾನಿಗೊಳಿಸುತ್ತದೆ. ಅಂದರೆ, ಬಿಸಿನೀರು ಕೆರಾಟಿನ್ ಎಂಬ ಚರ್ಮದ ಕೋಶಗಳನ್ನು ಕೊಲ್ಲುತ್ತದೆ. ಇದರಿಂದ ಚರ್ಮದ ತೇವಾಂಶ ಕಡಿಮೆಯಾಗಿ, ಚರ್ಮವು ಮಂದವಾಗಿ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಆದ್ದರಿಂದ ಮುಖ ತೊಳೆಯಲು ತಣ್ಣೀರನ್ನೇ ಬಳಸುವುದು ಉತ್ತಮ.

4. ಕೂದಲು ಉದುರುವಿಕೆ:
ಬಿಸಿನೀರನಿಂದ ತಲೆಸ್ನಾನ ಮಾಡುವುದರಿಂದ ನೆತ್ತಿಯಲ್ಲಿ ಶುಷ್ಕತೆ ಹೆಚ್ಚಾಗುವುದು. ಇದು ಕೂದಲು ಉದುರುವಿಕೆಗೆ ಕಾರಣವಾಗುವುದು. ನೆತ್ತಿಯನ್ನು ಎಂದಿಗೂ ಒಣಗಲು ಬಿಡಬೇಡಿ. ಆದ್ದರಿಂದ ಕೂದಲನ್ನು ಬಿಸಿ ನೀರಿನಿಂದ ತೊಳೆಯುವ ತಪ್ಪನ್ನು ಮಾಡಬೇಡಿ. ಜೊತೆಗೆ ತಲೆಹೊಟ್ಟು ಸಮಸ್ಯೆಯೂ ಉಂಟಾಗಬಹುದು. ಆದ್ದರಿಂದ ಕೂದಲು ತೊಳೆಯಲು ತಣ್ಣೀರನ್ನೇ ಬಳಸಿ.

5.ಕಣ್ಣಿನ ಸಮಸ್ಯೆ:
ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ತ್ವಚೆಗೆ ಮಾತ್ರವಲ್ಲದೇ ಕಣ್ಣುಗಳಿಗೂ ಸಂಬಂಧಿಸಿದ ಸಮಸ್ಯೆಗಳು ಬರಬಹುದು. ಬಿಸಿನೀರಿನ ಸ್ನಾನದ ನಂತರ, ಕಣ್ಣು ಕೆಂಪಾಗುವುದು, ತುರಿಕೆ ಮತ್ತು ಆಗಾಗ್ಗೆ ಕಣ್ಣಿನಲ್ಲಿ ನೀರು ಬರುವಂತಹ ಸಮಸ್ಯೆಗಳು ಕಂಡುಬರುತ್ತಿದ್ದರೆ, ಈ ಬಗ್ಗೆ ಗಮನ ಕೊಡಿ. ಏಕೆಂದರೆ ಇದು ಅತಿಯಾದ ಬಿಸಿನೀರಿನಿಂದಲೇ ಸಂಭವಿಸುತ್ತಿರುತ್ತದೆ.

6. ಉಗುರುಗಳಿಗೆ ಹಾನಿ:
ಬಿಸಿ ನೀರಿನಿಂದ ತ್ವಚೆ ಹೇಗೆ ಶುಷ್ಕವಾಗಿ ಹಾನಿಗೊಳಗಾಗುತ್ತದೆಯೋ, ಅದೇ ರೀತಿ, ಉಗುರುಗಳಿಗೂ ಹಾನಿಯಾಗುವುದು. ಇದರಿಂದ ಉಗುರುಗಳು ಬಹುಬೇಗ ಮುರಿಯುತ್ತವೆ. ಜೊತೆಗೆ ಉಗುರಿನಲ್ಲಿ ಯಾವುದೇ ರೀತಿಯ ಇನ್ಫೆಕ್ಷನ್ ಕಂಡುಬರುವುದು ಸಹ, ಬಿಸಿ ನೀರಿನಿಂದ ಸ್ನಾನ ಮಾಡುವುದೇ ಕಾರಣವಾಗಿರುತ್ತದೆ. ಆದ್ದರಿಂದ ನೀವು ಆರೋಗ್ಯವಂತರಾಗಿದ್ದರೆ, ಅದನ್ನು ಇನ್ನೂ ಕಾಪಾಡಿಕೊಳ್ಳಲು ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಉತ್ತಮ. ನಿಮ್ಮ ಮುಖವನ್ನು ತೊಳೆಯಲು ಮತ್ತು ನಿಮ್ಮ ಕೂದಲನ್ನು ತೊಳೆಯಲು ತಣ್ಣನೆಯ ನೀರನ್ನು ಮಾತ್ರ ಬಳಸಿ.



Click it and Unblock the Notifications