Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಟೀ, ಕಾಫಿ ತುಂಬಾ ಬಿಸಿ ಕುಡಿಯುತ್ತೀರಾ? ಕ್ಯಾನ್ಸರ್ ಸೇರಿ ಈ ಅಪಾಯಗಳಿವೆ!
ಬೆಳಗ್ಗೆದ್ದು ಬಿಸಿ ಬಿಸಿ ಕಾಫಿ, ಟೀ ಕಾಫಿ ಕುಡಿಯೋರಿಗೊಂದು ಕಹಿ ಸುದ್ದಿ.
ಅದೇನಪ್ಪಾ ಅಂದ್ರೆ ಅಂತರರಾಷ್ಟ್ರೀಯ ವೈದ್ಯಕೀಯ ನಿಯತಕಾಲಿಕದಲ್ಲಿ ಪ್ರಕಟವಾದ ಹೊಸ ಅಧ್ಯಯನವೊಂದು 60 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನದಲ್ಲಿ ಚಹಾ ಅಥವಾ ಕಾಫಿಯಂತಹ ಯಾವುದೇ ಬಿಸಿ ಪಾನೀಯವನ್ನು ಕುಡಿದರೆ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವಿವರಿಸಿದೆ.

ಇದು ನಿಜವಾಗಿಯೂ ಹೌದೇ.. ಇದ್ರಿಂದ ಏನೇನು ಸಮಸ್ಯೆಗಳಾಗುತ್ತೆ ಎನ್ನುವುದನ್ನು ನೋಡಿ..
ಅಧ್ಯಯನ ಏನು ಹೇಳುತ್ತೆ..?
ಅಧ್ಯಯನದ ಪ್ರಕಾರ, ಪ್ರತಿದಿನ 700 ಮಿಲಿ ಬಿಸಿ ಚಹಾವನ್ನು ಕುಡಿಯುವುದರಿಂದ ಅನ್ನನಾಳದ ಕ್ಯಾನ್ಸರ್ ಅಪಾಯವನ್ನು 90 ಪ್ರತಿಶತದಷ್ಟು ಹೆಚ್ಚಿಸುತ್ತದೆ. ಅನ್ನನಾಳದ ಕ್ಯಾನ್ಸರ್ ಅನ್ನನಾಳದಲ್ಲಿ ಅಸಹಜ ಜೀವಕೋಶಗಳು ಅನಿಯಂತ್ರಿತ ರೀತಿಯಲ್ಲಿ ಬೆಳೆದಾಗ ಸಂಭವಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಕಾಫಿ, ಟೀ ಮತ್ತು ಮೇಟ್‌ನಂತಹ ಬಿಸಿ ಪಾನೀಯಗಳು ಕೂಡ ಆ ಪಟ್ಟಿಗೆ ಸೇರಿವೆ ಎಂದು ಹೇಳುತ್ತದೆ. 10 ದೇಶಗಳ 23 ವಿಜ್ಞಾನಿಗಳನ್ನು ಒಳಗೊಂಡಿರುವ ಇಂಟರ್‌ನ್ಯಾಶನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC) ಸುಮಾರು 1,000 ಅಧ್ಯಯನಗಳನ್ನು ಪರಿಶೀಲಿಸಿದೆ, ಇದು ಅಧಿಕ-ತಾಪಮಾನದ ಪಾನೀಯಗಳು ಮತ್ತು ಕ್ಯಾನ್ಸರ್ ನಡುವಿನ ಸಂಭಾವ್ಯತೆಯ ಕುರಿತಾಗಿ ತನಿಖೆ ಮಾಡಿದೆ.
ಕ್ಯಾನ್ಸರ್ ಮಾತ್ರವಲ್ಲ ಈ ಸಮಸ್ಯೆಯೂ ಬರುತ್ತೆ
ರುಚಿ ಮೊಗ್ಗುಗಳು ನಾಲಿಗೆಯ ಸುತ್ತಲೂ ಬಹಳ ಸೂಕ್ಷ್ಮವಾಗಿರುತ್ತವೆ. ಬಿಸಿ ಪಾನೀಯಗಳಿಗೆ ಒಡ್ಡಿಕೊಂಡಾಗ ಅವು ಇತರ ಜೀವಕೋಶಗಳಂತೆ ಹಾನಿಗೊಳಗಾಗಬಹುದು. ನಿಯಮಿತವಾಗಿ ಬಿಸಿ ಪಾನೀಯಗಳನ್ನು ಕುಡಿಯುವುದು ನಾಲಿಗೆಯನ್ನು ತೀವ್ರವಾಗಿ ಮತ್ತು ಪದೇ ಪದೇ ಬಿಸಿ ಬಿಸಿ ಪಾನೀಯ ಕುಡಿಯುವುದು ನಾಲಿಗೆಯ ರುಚಿ ಮೊಗ್ಗುಗಳನ್ನು ಶಾಶ್ವತವಾಗಿ ಹಾನಿಗೊಳಿಸುತ್ತದೆ. ಬಿಸಿ ಪಾನೀಯಗಳ ಸೇವನೆಯು ತುಟಿಗಳ ಮೇಲೂ ಪರಿಣಾಮ ಬೀರಬಹುದು, ಅನೇಕ ಸಂದರ್ಭಗಳಲ್ಲಿ ತುಟಿಗಳು ಸುಟ್ಟುಹೋಗುತ್ತವೆ ಮತ್ತು ಕಪ್ಪಾಗುತ್ತವೆ. ತುಂಬಾ ಬಿಸಿಯಾದ ಪಾನೀಯಗಳ ನಿರಂತರ ಸೇವನೆಯು ಎದೆಯುರಿಯನ್ನೂ ಉಂಟುಮಾಡಬಹುದು.
ಎಷ್ಟು ಬಿಸಿ ಕುಡಿಯಬಾರದು..?
ಇರಾನ್‌ನ ಒಂದು ಅಧ್ಯಯನವು ದಿನಕ್ಕೆ 700 ಮಿಲಿಲೀಟರ್ ಬಿಸಿ ಚಹಾವನ್ನು 60 ° C ಅಥವಾ ಅದಕ್ಕಿಂತ ಹೆಚ್ಚಿನ (140 ° F) ಸೇವಿಸುವ ಜನರು ಅನ್ನನಾಳದ ಕ್ಯಾನ್ಸರ್ ಅಪಾಯವನ್ನು 90ರಷ್ಟು ಹೊಂದಿರುತ್ತಾರೆಂದಯ ಕಂಡುಹಿಡಿದಿದೆ. ಅನ್ನನಾಳದ ಕ್ಯಾನ್ಸರ್ ಒಂದು ನಿರ್ದಿಷ್ಟ ರೀತಿಯ ಕ್ಯಾನ್ಸರ್, ಇದು ತುಂಬಾ ಬಿಸಿಯಾದ ಚಹಾವನ್ನು ಕುಡಿಯುವುದಕ್ಕೆ ಸಂಬಂಧಿಸಿದೆ. ಅನ್ನನಾಳವು ಟೊಳ್ಳಾದ ಸ್ನಾಯುವಿನ ಕೊಳವೆಯಾಗಿದ್ದು ಅದು ದ್ರವಗಳು, ಲಾಲಾರಸ ಮತ್ತು ಅಗಿಯುವ ಆಹಾರವನ್ನು ಬಾಯಿಯಿಂದ ನಿಮ್ಮ ಹೊಟ್ಟೆಗೆ ಸಾಗಿಸುತ್ತದೆ. ಸ್ಪಿಂಕ್ಟರ್ ಸ್ನಾಯುಗಳು ಎಂದು ಕರೆಯಲ್ಪಡುವ ವೃತ್ತಾಕಾರದ ಸ್ನಾಯುಗಳು ಎರಡೂ ತುದಿಗಳನ್ನು ಮುಚ್ಚುತ್ತವೆ ಮತ್ತು ತೆರೆಯುತ್ತವೆ. ಅನ್ನನಾಳದಲ್ಲಿ ಗೆಡ್ಡೆ ಬೆಳೆದಾಗ ಅಥವಾ ಅನ್ನನಾಳದ ಒಳಪದರದಲ್ಲಿನ ಜೀವಕೋಶಗಳು ಬದಲಾದಾಗ ಅನ್ನನಾಳದ ಕ್ಯಾನ್ಸರ್ ಸಂಭವಿಸುತ್ತದೆ.
ಬಿಸಿ ಟೀ ಕಾಫಿ ಮಾತ್ರವಲ್ಲ ಇದರಿಂದಾನೂ ಅನ್ನನಾಳದ ಕ್ಯಾನ್ಸರ್..
ಕೇವಲ ಬಿಸಿ ದ್ರವವನ್ನು ಕುಡಿಯುವುದರಿಂದ ಅನ್ನನಾಳದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗದು. ಧೂಮಪಾನ ಮಾಡುವ ಅಥವಾ ಆಲ್ಕೋಹಾಲ್ ಸೇವಿಸುವ ಜನರಲ್ಲಿಯೂ ಅನ್ನನಾಳದ ಕ್ಯಾನ್ಸರ್‌ನ ಅಪಾಯ ಹೆಚ್ಚು. ಕೆಲವರಿಗೆ ಬಿಸಿ ಬಿಸಿ ಟೀ,ಕಾಫಿ ಕುಡಿದೇ ಅಭ್ಯಾಸ ಸ್ವಲ್ಪ ತಣ್ಣಗಾದರೂ ಅದು ಕುಡಿದಂತೆ ಆಗುವುದಿಲ್ಲ ಎನ್ನುತ್ತಾರೆ. ಆದರೆ ಇನ್ನುಮುಂದೆ ಹೀಗೆ ಮಾಡಬೇಡಿ. ಸ್ಟವ್‌ನಿಂದ ನೇರವಾಗಿ ಕಪ್‌ಗೆ ಬಗ್ಗಿಸಿಕೊಂಡು ಕುಡಿಯುವ ಬದಲು ಸ್ವಲ್ಪ ತಣ್ಣಗಾದ ನಂತರ ಕುಡಿಯೋದು ನಿಮ್ಮ ಆರೋಗ್ಯಕ್ಕೂ ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


