Latest Updates
-
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು! -
ಇಂದಿನ ಪೆಟ್ರೋಲ್ ದರ ಸ್ಥಿರ: ಪ್ರಯಾಣದ ವೆಚ್ಚ ಉಳಿಸಲು ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: ಆರೋಗ್ಯ ಕಾಪಾಡಿಕೊಳ್ಳಲು 12 ನಿಮಿಷದ ವರ್ಕೌಟ್ ಮತ್ತು ಸುರಕ್ಷತಾ ಟಿಪ್ಸ್ -
ಸ್ಮ್ಯಾಶ್ ಪ್ಯಾಟ್ರಿಯಾರ್ಕಿ: ದಂಪತಿಗಳ ನಡುವಿನ ಜಗಳಕ್ಕೆ 20 ನಿಮಿಷದ 'ಹೋಮ್ ರಿಸೆಟ್' ಪ್ಲಾನ್! -
ಮಳೆಗಾಲದಲ್ಲಿ ನಿಮ್ಮ ಮನೆ ಮತ್ತು ಬಲ್ಕನಿ ಸುರಕ್ಷಿತವಾಗಿಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್: ಕೇರಳದಲ್ಲಿ ಯೆಲ್ಲೋ ಅಲರ್ಟ್! -
ರಕ್ಷಾಬಂಧನಕ್ಕೆ ಪನ್ನೀರ್ ಖರೀದಿಸುವ ಮುನ್ನ ಎಚ್ಚರ: ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ರಾಖಿ ಹಬ್ಬ 2026: ಆಗಸ್ಟ್ 28ರಂದು ರಕ್ಷಾಬಂಧನ ಆಚರಣೆ; ಶುಭ ಮುಹೂರ್ತ ಮತ್ತು ಭದ್ರಾ ಕಾಲದ ಸಂಪೂರ್ಣ ಮಾಹಿತಿ ಇಲ್ಲಿದೆ -
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ!
ಟಾಯ್ಲೆಟ್‌ನಲ್ಲಿ ಕೂತು ಮೊಬೈಲ್ ಬಳಸುವ ಅಭ್ಯಾಸ ನಿಮಗಿದ್ದರೆ ಹುಷಾರ್!
ನಮ್ಮಲ್ಲಿ ಹೆಚ್ಚಿನವರಿಗೆ ಒಂದು ಅಭ್ಯಾಸ ಇದೆ. ಅದೇನಂದ್ರೆ, ಬಾತ್ ರೂಮ್ ಅಥವಾ ಟಾಯ್ಲೆಟ್ ಹೋಗುವಾಗ ಕೈಯಲ್ಲಿ ಮೊಬೈಲ್ ಕೊಂಡೊಯ್ಯುವುದು, ಗಂಟೆಗಟ್ಟಲೇ ಮೊಬೈಲ್ ಹಿಡಿದು ಅಲ್ಲೇ ಕಾಲಕಳೆಯುವುದು. ಆದರೆ ಈ ಅಭ್ಯಾಸ ಎಂತಹ ಸಮಸ್ಯೆಗೆ ಕಾರಣವಾಗುತ್ತದೆ ಗೊತ್ತಾ? ನೀವೇನೋ ಟೈಮ್ ಪಾಸ್‌ಗಾಗಿ ಮೊಬೈಲ್ ಹಿಡಿದುಕೊಂಡು ಹೋಗುತ್ತೀರಾ ಆದರೆ ಇದು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
ಟಾಯ್ಲೆಟ್‌ನಲ್ಲಿ ಮೊಬೈಲ್ ಬಳಸುವವರಲ್ಲಿ ನೀವೂ ಒಬ್ಬರಾಗಿದ್ದರೆ, ಇಂದೇ ಆ ಅಭ್ಯಾಸ ಬಿಡಿ. ಯಾಕೆ ಬಿಡಬೇಕು ಎಂಬುದನ್ನು ನಾವಿಂದು ಹೇಳಲಿದ್ದೇವೆ.
ಬಾತ್‌ರೂಮ್ ಹೋಗುವಾಗ ಮೊಬೈಲ್ ಬಳಕೆ ಸಲ್ಲದು ಎಂಬುದಕ್ಕೆ ಕಾರಣವೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ರೋಗಾಣುಗಳ ಅಪಾಯ:
ಮಲದಿಂದ ಬರುವ ಸಾಲ್ಮೋನೆಲ್ಲಾ, ಇ.ಕೋಲಿನಂತಹ ಸೂಕ್ಷ್ಮಜೀವಿಗಳು ನಿಮ್ಮ ಮೊಬೈಲ್‌ಗೆ ಅಂಟಿಕೊಳ್ಳುವ ಅಪಾಯವಿದೆ. ಈ ರೋಗಾಣುಗಳು ಮೊಬೈಲ್ ಮೂಲಕ ನಿಮ್ಮ ದೇಹ ಅಥವಾ ಮನೆಯ ಇತರ ಸದಸ್ಯರಿಗೂ ಹರಡಿ, ಅಪಾಯಕಾರಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಮೊಬೈಲ್ ಕೊಂಡ್ಯೊಯದೇ ಇರುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

ಮೂಲವ್ಯಾಧಿ ಅಪಾಯ:
ಟಾಯ್ಲೆಟ್‌ಗೆ ಮೊಬೈಲ್ ಹಿಡಿದುಕೊಂಡು ಹೋದಾಗ, ಟಾಯ್ಲೆಟ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತೀರಿ. ಅಂದರೆ ಕೂತಲ್ಲಿಯೇ ಹೆಚ್ಚುಕಾಲ ಕುಳಿತಿರುತ್ತೀರಿ. ಇದು ನಿಮ್ಮ ಗುದನಾಳದ ಮಲೆ ಒತ್ತಡವನ್ನು ಉಂಟುಮಾಡುತ್ತದೆ. ಇದು ಮೂಲವ್ಯಾಧಿಗೆ ಕಾರಣವಾಗಬಹುದು.

ಜೀರ್ಣಾಂಗವ್ಯೂಹದ ಸಮಸ್ಯೆಗಳು:
ಟಾಯ್ಲೆಟ್‌ನಲ್ಲಿ ಹೆಚ್ಚು ಕಾಲ ಕುಳಿತುಕೊಳ್ಳುವುದರಿಂದ ಗುದನಾಳದ ಮೇಲೆ ಒತ್ತಡ ಹೇರುವುದರಿಂದ ಈಗಾಗಲೇ ಇರುವ ಜೀರ್ಣಾಂಗವ್ಯೂಹದ ಸಮಸ್ಯೆಗಳು ಹೆಚ್ಚಾಗಬಹುದು.

ವಿರಾಮ ಸಿಗದೇ ಹೋಗಬಹುದು:
ಕೆಲವರು ಟಾಯ್ಲೆಟ್‌ಗೆ ಮೊಬೈಲ್ ತೆಗೆದುಕೊಂಡು ಹೋಗವುದು ಸಮಯ ವ್ಯರ್ಥವಾಗಬಾರದೆಂಬ ಉದ್ದೇಶದಿಂದ. ಅಲ್ಲಿಗೂ ಮೊಬೈಲ್ ತೆಗೆದುಕೊಂಡು ಹೋಗಿ ಕೆಲಸ ಮಾಡುತ್ತಿರುತ್ತಾರೆ. ಆದರೆ ಹೀಗೆ ಮಾಡುವುದರಿಂದ ನಿಮಗೆ ವಿರಾಮ ಸಿಗದೇ ಹೋಗಬಹುದು. ಒತ್ತಡ ಹೆಚ್ಚಾಗಬಹುದು.

ಸಮಯ ವ್ಯರ್ಥ ಆಗುವುದು:
ನೀವು ಬೆಳಗ್ಗೆ ಎದ್ದು,ಫೋನ್ ಹಿಡಿದು ಟಾಯ್ಲೆಟ್ ಹೊಕ್ಕರೆ, ಸಮಯ ಹೋಗಿದ್ದೇ ಗೊತ್ತಾಗಲ್ಲ. ಸೋಶಿಯಲ್ ಮೀಡಿಯಾದೊಳಗೆ ಹೊಕ್ಕಿ, ಹೊರ ಬರುವಷ್ಟರಲ್ಲಿ ಸಾಕಷ್ಟು ಸಮಯ ವ್ಯರ್ಥವಾಗಿರುತ್ತದೆ. ಆದ್ದರಿಂದ ಮೊಬೈಲ್ ಹೊರಗಿಡುವುದೇ ಉತ್ತಮ,.

ನಿಮ್ಮನ್ನು ವ್ಯಸನಿಯಾಗಿಸಬಹುದು:
ಹೌದು, ಯಾವುದೇ ವಿಚಾರವಾದರೂ ಪದೇ ಪದೇ ಮಾಡುತ್ತಿದ್ದರೆ, ಅದಕ್ಕೆ ಅಂಡಿಕೊಳ್ಳುತ್ತೇವೆ. ಹಾಗೆಯೇ ಈ ಫೋನ್ ಕೂಡ.. ಪ್ರತಿದಿನ ಮೊಬೈಲ್ ಹಿಡಿದೇ ಟಾಯ್ಲೆಟ್ ಹೋಗುತ್ತಿದ್ದರೆ, ಅದೇ ಅಭ್ಯಾಸ ಆಗಬಹುದು. ಮುಂದೆ ಮೊಬೈಲ್ ಇಲ್ಲದೇ, ಟಾಯ್ಲೆಟ್ ಹೋಗಲು ಆಗದೇ ಇರಬಹುದು. ಇಂತಹ ಪರಿಸ್ಥಿತಿಗೆ ನೀವೂ ಒಳಗಾಗಬಾರದೆಂದರೆ ಮೊಬೈಲ್ ಬಿಡುವುದು ಉತ್ತಮ.

ಟಾಯ್ಲೆಟ್ ಗೆ ಬೀಳುವ ಸಾಧ್ಯತೆ:
ಇದು ಬಹಳ ವಿರಳವಾಗಿದ್ದರೂ, ಸಾಧ್ಯತೆ ಅಂತೂ ಖಂಡಿತಾ ಇದೆ. ಯಾವುದೋ ಆಲೋಚನೆಯಲ್ಲಿ ಅಥವಾ ಕೈತಪ್ಪಿ ಮೊಬೈಲ್ ಟಾಯ್ಲೆಟಿಗೆ ಬೀಳಬಹುದು. ಆದ್ದರಿಂದ ಎಚ್ಚರವಾಗಿರುವುದು ಉತ್ತಮ.



Click it and Unblock the Notifications