Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಬಿಸಿನೀರು ಒಳ್ಳೆಯದೇ, ಆದರೆ ಅತಿಯಾಗಿ ಕುಡಿಯುವುದರಿಂದ ಆರೋಗ್ಯಕ್ಕೆ ಆಗುವ ಹಾನಿಗಳೇನು ಗೊತ್ತಾ?
ಒಬ್ಬ ವ್ಯಕ್ತಿ ತನ್ನ ತೂಕ ಇಳಿಸಿಕೊಳ್ಳಲು ಅಥವಾ ತನ್ನನ್ನು ತಾನು ಸದೃಢವಾಗಿಡಲು, ಪ್ರತಿದಿನ ಬಿಸಿನೀರನ್ನು ಕುಡಿಯಬೇಕು ಎಂದು ಹೇಳಲಾಗುವುದು. ಈ ಬಿಸಿನೀರು ಕುಡಿಯುವುದರಿಂದ ನಿಮ್ಮ ಬಾಯಾರಿಕೆ ತಣಿಯದಿದ್ದರೂ, ನಿಮ್ಮ ಗಂಟಲಿಗೆ ಉತ್ತಮವಾಗಿರುತ್ತದೆ. ನಿಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿರುವ ಬಿಸಿನೀರನ್ನು ಬೆಳಿಗ್ಗೆ ಒಂದು ಲೋಟ ಬಿಸಿ ನೀರು ಕುಡಿಯುವುದು ಒಳ್ಳೆಯದು. ಆದರೆ ಬಿಸಿನೀರನ್ನು ಮತ್ತೆ ಮತ್ತೆ ಕುಡಿಯುವುದರಿಂದ ಅನೇಕ ಅನಾನುಕೂಲಗಳಿವೆ. ಅವುಗಳೇನು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಅತಿಯಾಗಿ ಬಿಸಿನೀರು ಕುಡಿಯುವುದರಿಂದ ಆಗುವ ದುಷ್ಪರಿಣಾಮಗಳನ್ನು ಈ ಕೆಳಗೆ ನೀಡಲಾಗಿದೆ:

ಮೂತ್ರಪಿಂಡಗಳ ಮೇಲೆ ಪರಿಣಾಮ:
ನಮ್ಮ ಮೂತ್ರಪಿಂಡಗಳು ವಿಶೇಷ ಕ್ಯಾಪಿಲ್ಲರಿ ವ್ಯವಸ್ಥೆಯನ್ನು ಹೊಂದಿವೆ. ಇದು ದೇಹದಿಂದ ಹೆಚ್ಚುವರಿ ನೀರು ಮತ್ತು ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಯಾವಾಗ ನಾವು ಬಿಸಿನೀರು ಕುಡಿಯುತ್ತೇವೋ, ಅದು ನಮ್ಮ ಮೂತ್ರಪಿಂಡಗಳ ಮೇಲೆ ಸಾಮಾನ್ಯಕ್ಕಿಂತ ಹೆಚ್ಚಿನ ಒತ್ತಡವನ್ನು ಬೀರುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಇದರಿಂದಾಗಿ ಸಾಮಾನ್ಯವಾಗಿ ಮೂತ್ರಪಿಂಡದ ಕಾರ್ಯಗಳ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಅತಿಯಾಗಿ ಬಿಸಿನೀರು ಸೇವನೆ ಒಳ್ಳೆಯದಲ್ಲ.

ನಿದ್ರಾಹೀನತೆಯ ಸಮಸ್ಯೆ:
ರಾತ್ರಿ ಮಲಗುವ ಮುನ್ನ ಬಿಸಿನೀರು ಸೇವನೆಯಿಂದ ನಿಮಗೆ ನಿದ್ರೆ ಬರದೇ ಇರಬಹುದು. ಅದರ ಜೊತೆಗೆ ಮಲಗುವ ಸಮಯದಲ್ಲಿ ಬಿಸಿನೀರು ಕುಡಿಯುವುದರಿಂದ ನೀವು ಹೆಚ್ಚು ಮೂತ್ರ ವಿಸರ್ಜನೆ ಮಾಡುತ್ತೀರಿ. ಇದರಿಂದ ಕೂಡ ನಿಮ್ಮ ನಿದ್ದೆ ಹಾಳಾಗಬಹುದು. ಅಷ್ಟೇ ಅಲ್ಲ ನಿಮ್ಮ ರಕ್ತನಾಳಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಆದ್ದರಿಂದ ನಿದ್ದೆ ಮಾಡುವ ಮೊದಲು ಬಿಸಿನೀರು ಕುಡಿಯಬೇಡಿ.

ದೇಹದ ಆಂತರಿಕ ಅಂಗಗಳಿಗೆ ಹಾನಿ:
ಬಿಸಿನೀರಿನ ಉಷ್ಣತೆಯು ದೇಹದ ಆಂತರಿಕ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಅದೇ ಸಮಯದಲ್ಲಿ, ನಿರಂತರವಾಗಿ ಬಿಸಿನೀರನ್ನು ಕುಡಿಯುವುದರಿಂದ ದೇಹದೊಳಗಿನ ಅಂಗಗಳು ಸುಡುವ ಅಪಾಯವಿದೆ. ಆದ್ದರಿಂದ ಅತಿಯಾಗಿ ಬಿಸಿಯಾಗಿರುವ ನೀರನ್ನು ಕುಡಿಯಬೇಡಿ. ದೇಹದ ಆಂತರಿಕ ಅಂಗಗಳ ಅಂಗಾಂಶಗಳು ಅತ್ಯಂತ ಸೂಕ್ಷ್ಮವಾಗಿದ್ದು, ಆಗಾಗ್ಗೆ ಬಿಸಿನೀರನ್ನು ಕುಡಿಯುತ್ತಿದ್ದರೆ, ಅದು ನಿಮ್ಮ ಆಂತರಿಕ ಅಂಗಗಳಲ್ಲಿ ಗುಳ್ಳೆಗಳಿಗೆ ಕಾರಣವಾಗಬಹುದು.

ರಕ್ತದ ಪ್ರಮಾಣ ಮೇಲೆ ಪರಿಣಾಮ:
ಅತಿಯಾಗಿ ಬಿಸಿನೀರು ಕುಡಿಯುವುದರಿಂದ ರಕ್ತದ ಪ್ರಮಾಣಕ್ಕೂ ಅಪಾಯಕಾರಿಯಾಗಬಹುದು. ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಬಿಸಿನೀರನ್ನು ಸೇವಿಸುವುದರಿಂದ ನಿಮ್ಮ ಒಟ್ಟು ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ರಕ್ತ ಪರಿಚಲನೆಯು ಒಂದು ಮುಚ್ಚಿದ ವ್ಯವಸ್ಥೆಯಾಗಿದ್ದು, ರಕ್ತ ಹೆಚ್ಚಳದಿಂದ ಅನಗತ್ಯ ಒತ್ತಡವನ್ನು ಪಡೆಯಬಹುದು. ಇದರಿಂದ ಅಧಿಕ ರಕ್ತದೊತ್ತಡ ಮತ್ತು ಇತರ ಅನೇಕ ಹೃದಯ ಸಮಸ್ಯೆಗಳು ಉಂಟಾಗಬಹುದು.

ರಕ್ತನಾಳಗಳಲ್ಲಿ ಊತ:
ಬಾಯಾರಿಕೆಯಿಲ್ಲದೆ ಬಿಸಿನೀರನ್ನು ಕುಡಿಯುವುದರಿಂದ ಮೂಲಕ ಮೆದುಳಿನ ರಕ್ತನಾಳಗಳಲ್ಲಿ ಊತವನ್ನು ಪಡೆಯುವ ಅನೇಕ ಜನರಿದ್ದಾರೆ. ಆದ್ದರಿಂದ ನಿಮಗೆ ಬಾಯಾರಿಕೆ ಆದಾಗ ಮಾತ್ರ ಬಿಸಿನೀರು ಕುಡಿಯಿರಿ. ಬಿಸಿನೀರನ್ನು ಆಗಾಗ್ಗೆ ಕುಡಿಯುವುದರಿಂದ ತಲೆನೋವು ಕೂಡ ಹೆಚ್ಚಾಗುತ್ತದೆ. ಆದ್ದರಿಂದ ಇನ್ನುಮುಂದೆ ಬಿಸಿನೀರನ್ನು ಎಷ್ಟು ಬೇಕೋ ಅಷ್ಟೇ ಕುಡಿಯಿರಿ. ಆರೋಗ್ಯಕ್ಕೆ ಉತ್ತಮ ಎಂದು ಅತಿಯಾಗಿ ಕುಡಿದರೆ, ಅದೇ ಬಿಸಿನೀರಿನಿಂದ ಆರೋಗ್ಯಕ್ಕೆ ಕೆಟ್ಟದಾಗಬಹುದು ಎಚ್ಚರವಿರಲಿ..



Click it and Unblock the Notifications