Latest Updates
-
ದಸರಾ ಟ್ರಾವೆಲ್ ರಶ್: ಕುಳಿತ ಸೀಟಿನಲ್ಲೇ ಮಾಡಿ ಈ 9 ನಿಮಿಷಗಳ ಮ್ಯಾಜಿಕ್ ಸ್ಟ್ರೆಚಿಂಗ್! -
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ!
ಪೀನಟ್ ಬಟರ್ v/s ಬೆಣ್ಣೆ ಯಾವುದು ಹೆಚ್ಚು ಆರೋಗ್ಯಕರ?
ಬ್ರೆಡ್ ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುವ ಒಂದು ತಿಂಡಿ. ಇದು ವಿದೇಶಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದುದಾದರೂ ಇದೀಗ ಭಾರತದಲ್ಲಿ ಕೂಡ ಬೆಳಗಿನ ಉಪಹಾರಕ್ಕೆ ಅಥವಾ ಸಂಜೆಯ ತಿಂಡಿಗೆ ಬ್ರೆಡನ್ನೇ ಆಹಾರವಾಗಿ ಸೇವಿಸುತ್ತಾರೆ.

ಬೆಣ್ಣೆಯಿಲ್ಲದೇ ಬ್ರೆಡ್ ತಿನ್ನಲು ಸಾಧ್ಯವಿಲ್ಲ. ಅಥವಾ ಹಾಗೆ ತಿಂದರೆ ಬ್ರೆಡ್ ರುಚಿಸುವುದೂ ಇಲ್ಲ. ಬೆಣ್ಣೆಯು ತುಂಬಾ ಕೆನೆಯನ್ನು ಹೊಂದಿರುವ ಮತ್ತು ಸಮೃದ್ಧ ರುಚಿಯನ್ನು ಹೊಂದಿರುವಂಥದ್ದು, ಅದು ಸ್ಯಾಂಡ್ವಿಚ್, ಕೇಕ್, ಕುಕೀಸ್ ಅಥವಾ ಮಾಂಸ ಭಕ್ಷ್ಯ ಯಾವುದೇ ಆಗಿರಬಹುದು, ನಮ್ಮ ಆಹಾರದಲ್ಲಿ ಬೆಣ್ಣೆ ಅತ್ಯಂತ ಅಧಿಕ ರುಚಿಯನ್ನು ನೀಡುತ್ತದೆ. ಸ್ವಲ್ಪ ಬೆಣ್ಣೆ ನಿಮ್ಮ ಖಾದ್ಯ ಅನುಭವವನ್ನು ಬೇರೆಯೇ ಹಂತಕ್ಕೆ ಕೊಂಡೊಯ್ಯಬಹುದು.
ಬೆಣ್ಣೆ ಅತ್ಯಂತ ಆರೋಗ್ಯಕರ ಆಹಾರವೂ ಆಗಿರುವುದರಿಂದ ಇಂದು ಸಾಕಷ್ಟು ಮನೆಗಳಲ್ಲಿ ಬೆಣ್ಣೆಯ ಸ್ಥಾನವನ್ನು ಕಡಲೆಕಾಯಿ ಬೆಣ್ಣೆ ಆವರಿಸಿದೆ. ಪೀನಟ್ ಬಟರ್, ಸಾಮಾನ್ಯ ಬೆಣ್ಣೆಗಿಂತ ಆರೋಗ್ಯಕರ ಎಂದು ಜನರು ನಂಬುತ್ತಾರೆ. ಇದು ನಿಜವೇ? ಅದನ್ನು ಕಂಡುಹಿಡಿಯೋಣ ಬನ್ನಿ:

ಬೆಣ್ಣೆ ತಯಾರಿಸುವ ವಿಧಾನಗಳು
ಬೆಣ್ಣೆಯು ಹಾಲಿನ ಪ್ರೋಟೀನ್, ನೀರು ಮತ್ತು ಕೊಬ್ಬಿನಿಂದ ಕೂಡಿದೆ. ಇದು ಹಾಲಿನ ಕೊಬ್ಬಿನಿಂದ ಬಂದ ಕೆನೆಯನ್ನು ಹೊಂದಿರುತ್ತದೆ, ಹುದುಗಿಸಿದ ಹಾಲು ಅಥವಾ ಕೆನೆ ಕಡೆದು ನಂತರ ಬೆಣ್ಣೆಯನ್ನು ತೆಗೆಯಲಾಗುತ್ತದೆ. ಬೆಣ್ಣೆಯನ್ನು ತಯಾರಿಸುವ ಮೂಲ ವಿಧಾನವೆಂದರೆ ಅದನ್ನು ಹಸುವಿನ ಹಾಲು, ಮೇಕೆ ಮತ್ತು ಎಮ್ಮೆ ಹಾಲಿನೊಂದಿಗೆ ಕೈಯಾರೆ ಮಥಿಸುವುದು/ ಕಡೆಯುವುದು. ಕಡೆದ ನಂತರ ಬೆಣ್ಣೆಗೆ ಕೆನೆ ವಿನ್ಯಾಸ ದೊರೆಯುತ್ತದೆ ಮತ್ತು ಪ್ರಾಣಿಗಳ ಹಾಲಿನಿಂದ ಬೆಣ್ಣೆ ಪೋಷಕಾಂಶಗಳನ್ನು ಪಡೆಯುತ್ತದೆ.

ಪೀನಟ್ ಬಟರ್ ತಯಾರಿಸುವ ವಿಧಾನಗಳು
ಕಡಲೆಕಾಯಿಯನ್ನು ಹುರಿದು, ಹುರಿದ ಮತ್ತು ಹುಡಿಮಾಡಿದ ಕಡಲೆಕಾಯಿಯನ್ನು, ತರಕಾರಿ ಎಣ್ಣೆ ಮತ್ತು ಸಿಹಿಕಾರಕಗಳೊಂದಿಗೆ ಬೆರೆಸಿ ಕೆನೆಯನ್ನು ತರಿಸಲಾಗುತ್ತದೆ.
ಕಡಲೆಕಾಯಿ ಬೆಣ್ಣೆಯನ್ನು ರೆಫ್ರಿಜರೇಟರ್ನಲ್ಲಿ ಇಡಬಹುದು ತರಕಾರಿ ಎಣ್ಣೆ ಮತ್ತು ಉಪ್ಪಿನ ಕಾರಣದಿಂದಾಗಿ ಅದು ಯಾವಾಗಲೂ ಮೃದುವಾಗಿರುತ್ತದೆ. ರೆಫ್ರಿಜರೇಟರ್ ನಲ್ಲಿ ಇರಿಸಿದ ಸಾಮಾನ್ಯ ಬೆಣ್ಣೆ (ನೈಸರ್ಗಿಕ ಬೆಣ್ಣೆ) ಗಟ್ಟಿಯಾಗುತ್ತದೆ ಮತ್ತು ಅದನ್ನು ಕರಗಿಸಲು ಬಿಸಿಮಾಡಬೇಕಾಗುತ್ತದೆ.

ಬೆಣ್ಣೆಯ ಆರೋಗ್ಯ ಪ್ರಯೋಜನಗಳು
ಬೆಣ್ಣೆಯಲ್ಲಿ ವಿಟಮಿನ್ ಎ, ಇ, ಬಿ 12 ಮತ್ತು ಕೆ, ಮತ್ತು ಕೊಬ್ಬುಗಳಂತಹ ವಿಟಮಿನ್ ಗಳಿವೆ. ಇದು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ.

ಪೀನಟ್ ಬಟರ್ ಆರೋಗ್ಯ ಪ್ರಯೋಜನಗಳು
ಕಡಲೆಕಾಯಿ ಬೆಣ್ಣೆಯಲ್ಲಿ ವಿಟಮಿನ್ ಬಿ 9, ಬಿ 6, ಬಿ 3, ಇ, ಪ್ರೋಟೀನ್, ಫೈಬರ್, ಕೊಬ್ಬುಗಳು ಮುಂತಾದ ವಿಟಮಿನ್ ಗಳಿವೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ನಮ್ಮ ಚಯಾಪಚಯವನ್ನು ಆರೋಗ್ಯಕರವಾಗಿರಿಸುತ್ತದೆ ಜೊತೆಗೆ ತೂಕ ನಿಯಂತ್ರಣಕ್ಕೂ ಸಹಾಯ ಮಾಡುತ್ತದೆ.
ಕೊಬ್ಬು ಮತ್ತು ಕ್ಯಾಲೋರಿಗಳ ಎಣಿಕೆ- 100 ಗ್ರಾಂ ಸಾಮಾನ್ಯ ಬೆಣ್ಣೆಯಲ್ಲಿ ಇದು 717 ಕ್ಯಾಲೊರಿ ಮತ್ತು 81 ಗ್ರಾಂ ಕೊಬ್ಬಿನಂಶವನ್ನು ಹೊಂದಿರುತ್ತದೆ. ಕಡಲೆಕಾಯಿ ಬೆಣ್ಣೆಯಲ್ಲಿ ಕೇವಲ 567 ಕ್ಯಾಲೋರಿಗಳು ಮತ್ತು 50 ಗ್ರಾಂ ಕೊಬ್ಬು ಇದೆ.



Click it and Unblock the Notifications
