Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
"ವೀಳ್ಯದೆಲೆ" ಕ್ಯಾನ್ಸರ್‌ನಿಂದ ಹಿಡಿದು ಹತ್ತು ಹಲವು ಕಾಯಿಲೆಗಳಿಗೆ ರಾಮಬಾಣ ..!
ಹಿಂದೂ ಸಂಪ್ರದಾಯದಲ್ಲಿ "ವೀಳ್ಯದೆಲೆ" ಮಹತ್ವವಾದ ಸ್ಥಾನವಿದೆ. ದೇವರ ಪೂಜೆಯಿಂದ ಹಿಡಿದು ಎಲ್ಲಾ ಶುಭಕಾರ್ಯದಲ್ಲೂ ವೀಳ್ಯದೆಲೆ ಇರಲೇಬೇಕು. ಊಟ ಆದ ಮೇಲೆ ವೀಳ್ಯದೆಲೆ ಸೇವಿಸುವ ಖಷಿಯೇ ಬೇರೆ. ನಮ್ಮ ಹಿರಿಯರು ಹಿಂದಿನ ಕಾಲದಿಂದಾನೂ ಈ ಆಚರಣೆಯನ್ನ ರೂಢಿಸಿಕೊಂಡು ಬಂದಿದ್ದಾರೆ.
ಆದರೆ ಅನೇಕ ಜನರಲ್ಲಿ ವೀಳ್ಯದೆಲೆ ಸೇವಿಸಿದರೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂಬ ಭಾವನೆಯಿದೆ. ಆದರೆ ಈ ಕಲ್ಪನೆ ತಪ್ಪು. ಪ್ರತಿನಿತ್ಯ ವಿಲ್ಯದೆಲೆ ಸೇವನೆಯಿಂದ ನಿಮ್ಮ ಆರೋಗ್ಯ ವೃದ್ಧಿಸಲಿದೆ.
ಹಾಗಾದರೆ ವೀಳ್ಯದೆಲೆಯಿಂದ ಏನೆಲ್ಲಾ ಲಾಭವಿದೆ? ಇದರಿಂದ ಯಾವೆಲ್ಲಾ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬುದನ್ನ ಒಂದೊಂದಾಗಿ ತಿಳಿಯೋಣ.

ವೀಳ್ಯದೆಲೆಯ ಔಷಧೀಯ ಗುಣಗಳು ಇಲ್ಲಿದೆ ನೋಡಿ
ಆಯುರ್ವೇದದಲ್ಲಿ ವೀಳ್ಯದೆಲೆ ತನ್ನದೇ ಆದ ಸ್ಥಾನವಿದೆ. ತಾಂಬೂಲದ ಜೊತೆಯಲ್ಲಿ ವೀಳ್ಯದೆಲೆ ಇರಲೇಬೇಕು. ಇಂತಹ ಶುಭಕರ ವೀಳ್ಯದೆಲೆಯಲ್ಲಿ ವಿಟಮಿನ್ ಸಿ, ನಿಯಾಸನ್, ರೈಬೋಫ್ಲೇವಿನ್,ಕೆರಟೀನ್, ಮತ್ತು ಕ್ಯಾಲ್ಸಿಯಂನಂತಹ ಗುಣಗಳಿದ್ದು, ಆರೋಗ್ಯ ಉದ್ದೇಶದಿಂದ ತುಂಬಾನೇ ಒಳ್ಳೆಯದು.

1.ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ
ಎಲೆ ಅಡಿಕೆ ತಿನ್ನುವುದರಿಂದ ಕ್ಯಾನ್ಸರ್ ಬರುತ್ತ ಎಂಬ ನಂಬಿಕೆ ಅನೇಕರಲ್ಲಿ ಇದೆ. ಆದ್ರೆ ನಿಜವಾಗಿಯೂ ವೀಳ್ಯದೆಲೆಯಿಂದ ಯಾವುದೇ ಅಪಾಯವಿಲ್ಲ. ತಂಬಾಕಿನಲ್ಲಿ ಮಾತ್ರ ಕ್ಯಾನ್ಸರ್‌ಕಾರಕ ಗುಣಗಳಿರುವುದು. ವೀಳ್ಯದೆಲೆಯಲ್ಲಿ ಪೈಟೋಕೆಮಿಕಲ್ ಗುಣಗಳಿದ್ದು, ಅದು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಜೊತೆಗೆ ಕ್ಯಾನ್ಸರ್ ಕೋಶಗಳನ್ನು ದೇಹದ ಇತರ ಅಂಗಾಂಗಳಿಗೆ ಹರಡುವುದನ್ನು ತಡೆಯುತ್ತದೆ.

2. ಗಾಯಗಳನ್ನು ಗುಣಪಡಿಸುವ ಶಕ್ತಿ ಇದೆ
ವೀಳ್ಯದೆಲೆ ಸೇವನೆಯಿಂದ ನಮ್ಮಲ್ಲಿ ಪ್ರೋಟಿನ್ ಅಂಶ ಹೆಚ್ಚಾಗುತ್ತದೆ. ನಮ್ಮ ದೇಹದ ಯಾವುದೇ ಭಾಗದಲ್ಲಿ ಗಾಯಗಳಾದಾಗ ವೀಳ್ಯದೆಲೆಯ ಪೇಸ್ಟ್ ತಯಾರಿಸಿ ಹಚ್ಚಿದರೆ ಗಾಯ ಬೇಗ ಒಣಗುವಂತೆ ಮಾಡಿ ಕೆಲವೇ ದಿನಗಳಲ್ಲಿ ಗಾಯ ಒಣಗುತ್ತದೆ. ಮತ್ತು ಇದರ ಜ್ಯೂಸ್ ಕುಡಿದರೆ ಮೈಕೈ ನೋವು ಕಡಿಮೆಯಾಗುತ್ತದೆ.

3. ಬಾಯಿಯ ಆರೋಗ್ಯ ಕಾಪಾಡುತ್ತದೆ
ವೀಳ್ಯದೆಲೆಯು ನಮ್ಮ ಬಾಯಿಯ ಆರೋಗ್ಯ ಕಾಪಾಡುತ್ತದೆ. ಪ್ರತಿನಿತ್ಯ ವೀಳ್ಯದೆಲೆಯನ್ನು ಜಗಿದು ತಿನ್ನುವುದರಿಂದ ಬ್ಯಾಕ್ಟೀರಿಯಾ, ದುರ್ವಾಸನೆ, ಬಾಯಿಯ ಕ್ಷಯ, ಕುಳಿಯಂತಹ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ.

4. ಜೀರ್ಣಕ್ರಿಯೆಗೆ ಸಹಕಾರಿ
ಭಾರತೀಯ ಸಂಪ್ರದಾಯದಲ್ಲಿ ಊಟದ ನಂತರ ವೀಳ್ಯದೆಲೆ ತಿನ್ನುವ ಸಂಪ್ರದಾಯವಿದೆ. ಕಾರಣ ಇದು ಜೀರ್ಣ ಕ್ರಿಯೆಗೆ ಸಹಕರಿಸುತ್ತದೆ. ವೀಳ್ಯದೆಲೆಯು ಚಯಾಪಚಯ ಕ್ರಿಯೆ ಹಾಗೂ ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಜೊತೆಗೆ ನಮ್ಮ ಕರುಳನ್ನು ಪ್ರಮುಖ ಜೀವಸತ್ವಗಳು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳಲು ಉತ್ತೇಜಿಸುತ್ತದೆ ಮತ್ತು ನಮ್ಮ ಕರುಳನ್ನು ಆರೋಗ್ಯಕರವಾಗಿಸುತ್ತದೆ.

5. ತೂಕ ಇಳಿಸಿಕೊಳ್ಳಲು ಉತ್ತೇಜಿಸುತ್ತದೆ
ಅನೇಕರು ತೂಕ ಇಳಿಸಿಕೊಳ್ಳಲು ನಾನಾ ದಾರಿಯನ್ನು ಹುಡುಕುತ್ತಾರೆ. ಆದ್ರೆ ವೀಳ್ಯದೆಲೆಯನ್ನು ನಿರಂತರವಾಗಿ ಸೇವಿಸ್ತಿದ್ರೆ ಇದು ನಿಮಗೆ ತೂಕ ಇಳಿಸೋದಕ್ಕೆ ಸಹಾಯ ಮಾಡುತ್ತದೆ. ದೇಹದಲ್ಲಿನ ಕೊಬ್ಬಿನಂಶವನ್ನು ಕಡಿಮೆ ಮಾಡಿ, ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.

6. ಅತ್ಯಧಿಕ ನೀರಿನಾಂಶವಿದೆ
ವೀಳ್ಯದೆಲೆ ಅತ್ಯಧಿಕ ನೀರಿನಾಂಶದಿಂದ ಸಮೃದ್ಧವಾಗಿದೆ. ಇದರಲ್ಲಿ ಕೊಬ್ಬಿನ ಅಂಶವು ಕಡಿಮೆ ಇದೆ. ಹೀಗಾಗಿ ಬೇಸಿಗೆ ಸೇರಿದಂತೆ ಎಲ್ಲಾ ಕಾಲದಲ್ಲೂ ವೀಳ್ಯದೆಲೆಯನ್ನ ಸೇವನೆ ಮಾಡಬಹುದು. ನೇರವಾಗಿ ವೀಳ್ಯದೆಲೆಯನ್ನೇ ಸೇವಿಸಬೇಕೆಂದಿಲ್ಲ. ವೀಳ್ಯದೆಲೆಯ ಉತ್ಪನ್ನಗಳನ್ನು ಸೇವನೆ ಮಾಡಬಹುದು.

7. ಖಿನ್ನತೆಯಿಂದ ಹೊರಬರಲು ಸಹಾಯ ಮಾಡುತ್ತದೆ
ಇತ್ತಿಚಿನ ದಿನಗಳಲ್ಲಿ ಅನೇಕ ಜನ ಖಿನ್ನತೆಯಿಂದ ಬಳಲುತ್ತಿರುತ್ತಾರೆ. ಅದೆಷ್ಟೋ ಮಂದಿಗೆ ಇದರಿಂದ ಹೊರಬರುವುದು ಕೂಡ ಕಷ್ಟವಾಗುತ್ತದೆ. ವೀಳ್ಯದೆಲೆಯಲ್ಲಿ ಫಿನಾಲಿಕ್ ಎಂಬ ಸಂಯುಕ್ತವಿದ್ದು, ಇದು ಖಿನ್ನತೆಗೆ ಸಂಬಂಧಿದ ಹಾರ್ಮೋನನ್ನು ಕೊಂಚ ಮಟ್ಟಿಗೆ ತಗ್ಗಿಸುತ್ತದೆ.

8. ಮಧುಮೇಹ(ಡಯಾಬಿಟೀಸ್) ನಿರ್ಮೂಲನೆ ಮಾಡುತ್ತದೆ
ವೀಳ್ಯದೆಲೆಯಲ್ಲಿ ಉತ್ಕರ್ಷಣ ನಿರೋಧಕ ಗುಣಗಳು ಅಧಿಕವಾಗಿದೆ. ಇದು ಡಯಾಬಿಟೀಸ್ ರೋಗಿಗಳಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ರಕ್ತದ ಗ್ಲೂಕೋಸ್ ಅಂಶ ಕಡಿಮೆಯಾಗಿ ಇದು ಮಧುಮೇಹಿ ವಿರೋಧಿ ಏಜೆಂಟ್ ಆಗಿ ಕೆಲಸ ಮಾಡುತ್ತದೆ.

9. ಅಸ್ತಮ ನಿವಾರಿಸುತ್ತದೆ
ಅಸ್ತಮ ಕಾಯಿಲೆ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅಸ್ತಮಾ ಕಾಯಿಲೆ ತಡೆಗಟ್ಟಲು ಇದು ಸಹಕಾರಿಯಾಗಿದೆ. ಇದರಿಂದ ಕೆಮ್ಮು ಶೀತಕ್ಕೆ ಮನೆಮದ್ದು ತಯಾರಿಸಲಾಗುವುದು.
ನೋಡಿದ್ರಲ್ಲ ನಮ್ಮ ಮನೆಯಂಗಳದಲ್ಲೇ ಇರೋ ವೀಳ್ಯದೆಲೆಯಿಂದ ಇಷ್ಟೆಲ್ಲಾ ಔಷಧಿಯ ಗುಣಗಳಿದೆ.

10. ಮಲೇರಿಯಾ ನಿವಾರಣೆಗೆ ಸಹಕರಿಸುತ್ತದೆ
ಪುರಾತನ ಕಾಲದಲ್ಲಿ ಮಲೇಶೀಯಾದ ಜನ ಮಲೇರಿಯಾ ಭಾದಿಸಿದಾಗ ವೀಳ್ಯೆದೆಳೆಯನ್ನ ಮನೆಮದ್ದಾಗಿ ಉಪಯೋಗಿಸುತ್ತಿದ್ದರು. ವೀಳ್ಯದೆಲೆಯಲ್ಲಿ ಮಲೇರಿಯಾ ಹೋಗಲಾಡಿಸುವ ಗುಣಗಳಿದೆ. ವೀಳ್ಯದೆಲೆಯಲ್ಲಿರುವ ಫ್ಲೇವನಾಯ್ಡ್ ಅಂಶ ಮಲೇರಿಯಾದ ವಿವಿಧ ಪರಾವಲಂಬಿ ತಳಿಗಳ ವಿರುದ್ಧ ಹೋರಾಡುತ್ತದೆ.
ನೋಡಿದ್ರಲ್ಲ ನಮ್ಮ ಮನೆಯಂಗಳದಲ್ಲೇ ಇರೋ ವೀಳ್ಯದೆಲೆಯಿಂದ ಇಷ್ಟೆಲ್ಲಾ ಔಷಧಿಯ ಗುಣಗಳಿದೆ.



Click it and Unblock the Notifications
