For Quick Alerts
ALLOW NOTIFICATIONS  
For Daily Alerts

ಕರ್ನಾಟಕ ಸರ್ಕಾರದ ಹೊಸ ಕೊವಿಡ್ ಪರೀಕ್ಷೆ, ಹೋಮ್ ಐಸೋಲೇಷನ್ ಮಾರ್ಗಸೂಚಿಗಳು ಹೀಗಿವೆ

|

ಕರ್ನಾಟಕ ಸರ್ಕಾರ ಬುಧವಾರ ಕೋವಿಡ್ 19 ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಕೇಂದ್ರದ ICMR ನಿಯಮಕ್ಕೆ ತಕ್ಕಂತೆ ಕೊರೊನಾ ಟೆಸ್ಟ್ ಹಾಗೂ ಹೋಂ ಐಸೋಲೇಷನ್‌ ಬಗ್ಗೆ ಹೊಸ ಕೊರೊನಾ ನಿಯಮಗಳನ್ನು ಜಾರಿಗೆ ತಂದಿದೆ.

ಹೊಸ ಆದೇಶದಲ್ಲಿ ಏನಿದೆ?

ಹೊಸ ಆದೇಶದಲ್ಲಿ ಏನಿದೆ?

ಹೊಸ ಆದೇಶದ ಪ್ರಕಾರ ರೋಗ ಲಕ್ಷಣಗಳಿರುವವರು ಕಡ್ಡಾಯವಾಗಿ ರ‍್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ (RAT)ಮಾಡಿಸಬೇಕು. ಒಂದು ವೇಳೆ ರಿಸಲ್ಟ್ ನೆಗೆಟಿವ್ ಬಂದ್ರೆ ICMR ನಿಯಮದಂತೆ RT-PCR ಮಾಡಿಸಬೇಕು.

ಪ್ರಾಥಮಿಕ ಸಂಪರ್ಕ ಹೊಂದಿದ್ದರೆ

ಪ್ರಾಥಮಿಕ ಸಂಪರ್ಕ ಹೊಂದಿದ್ದರೆ

ಮನೆ ಅಥವಾ ಕೆಲಸದ ಜಾಗದಲ್ಲಿ ಕೋವಿಡ್ 19 ರೋಗಿಗಳ ಸಂಪರ್ಕಕಕ್ಕೆ ಬಂದವರು ಕೋವಿಡ್ 19 ಪರೀಕ್ಷೆ ಮಾಡಿಸಬೇಕು. ಯಾವುದೇ ರೋಗ ಲಕ್ಷಣಗಳು ಕಂಡು ಬರದಿದ್ದರೂ ಪರೀಕ್ಷೆ ಮಾಡಿಸಬೇಕು. ಯಾವುದೇ ವಯಸ್ಸಿನವರಾಗಲಿ, ಇತರ ಕಾಯಿಲೆ ಇರುವವರಾಗಲಿ ಕೋವಿಡ್ 19 ರೋಗಿಯ ಸಂಪರ್ಕಕಕ್ಕೆ ಬಂದರೆ ಕೊರೊನಾ ಪರೀಕ್ಷೆ ಮಾಡಲೇಬೇಕು.

ಹೋಂ ಐಸೋಲೇಷನ್‌ನಲ್ಲಿದ್ದರೆ

ಹೋಂ ಐಸೋಲೇಷನ್‌ನಲ್ಲಿದ್ದರೆ

ಕೋವಿಡ್‌ 19 ರೋಗಿಗಳು ಹೋಂ ಐಸೋಲೇಷನ್‌ನಲ್ಲಿದ್ದರೆ 7 ದಿನಗಳ ಬಳಿಕ ಮನೆಯಿಮದ ಹೊರಬರಬಹುದು, ಆದರೆ ಅದಕ್ಕಿಂತ 3 ದಿನಗಳ ಮುಂಚೆಯಿಂದ ಅಂದ್ರೆ ಐಸೋಲೇಷನ್ ಆಗಿ 4 ದಿನ ಕಳೆದ ನಂತರ ಯಾವುದೇ ಜ್ವರ ಬಂದಿರಬಾರದು. ಅಲ್ಲದೆ 7 ದಿನಗಳ ಐಸೋಲೇಷನ್‌ ಮುಗಿದ ಬಳಿಕ ಮತ್ತೆ ಪರೀಕ್ಷೆ ಮಾಡಬೇಕಾಗಿಲ್ಲ.

ಪ್ರಾಥಮಿಕ ಸಂಪರ್ಕಕಕ್ಕೆ ಬಂದವರು 7 ದಿನ ಕ್ವಾರಂಟೈನ್‌ ಆಗಬೇಕು

ಪ್ರಾಥಮಿಕ ಸಂಪರ್ಕಕಕ್ಕೆ ಬಂದವರು 7 ದಿನ ಕ್ವಾರಂಟೈನ್‌ ಆಗಬೇಕು

ಆರೋಗ್ಯ ಕಾರ್ಯಕರ್ತರಾಗಿದ್ದರೆ ಅವರಲ್ಲಿ ಯಾವುದೇ ಕೋವಿಡ್ 19 ಲಕ್ಷಣಗಳು ಕಂಡು ಬಂದರೆ ಕೊರೊನಾ ಪರೀಕ್ಷೆ ಮಾಡಿಸಬೇಕು.

ಆರೊಗ್ಯ ಕಾರ್ಯಕರ್ತರಲ್ಲಿ ರೋಗ ಲಕ್ಷಣಗಳು ಕಂಡು ಬರದೆ ಕೊರೊನಾ ಪಾಸಿಟಿವ್ ಬಂದಿದ್ದರೆ ಅಥವಾ ಕೊರೊನಾದ ಸಣ್ಣ-ಪುಟ್ಟ ಲಕ್ಷಣಗಳಿದ್ದರೆ 5 ದಿನ ಮನೆ ಅಥವಾ ಹೋಟೆಲ್‌ನಲ್ಲಿ ಐಸೋಲೇಟ್ ಆಗಬೇಕು.

ರೋಗ ಲಕ್ಷಣಗಳು ಇರದೆ ಕೊರೊನಾ ಪಾಸಿಟಿವ್‌ ಬಂದಿದ್ದರೆ 3 ದಿನಗಳಲ್ಲಿ ಅವರ ಆಕ್ಸಿಜನ್‌ ಸ್ಯಾಚುರಢಷನ್ 94% ಇದ್ದರೆ ಅವರು ಮತ್ತೆ ಐಸೋಲೇಷನ್‌ನಲ್ಲಿ ಇರಬೇಕಾಗಿಲ್ಲ, ಆದರೆ ಮತ್ತೆ 5 ದಿನದವರೆಗೆ ಕಡ್ಡಾಯವಾಗಿ ಮಾಸ್ಕ್‌ ಅಥವಾ PPE ಧರಿಸಬೇಕು.

' ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಕ್ವಾರಂಟೈನ್‌ನಲ್ಲಿರಬೇಕು, ಯಾವುದೇ ಲಕ್ಷಣಗಳು ಕಂಡು ಬರದಿದ್ದರೆ 3 ದಿನಗಳಲ್ಲಿ ಕ್ವಾರಂಟೈನ್‌ನಿಂದ ಹೊರಬರಬಹುದು.

ICMR ಏನು ಹೇಳಿದೆ?

ICMR ಏನು ಹೇಳಿದೆ?

* ಯಾರು ಕೋವಿಡ್‌ 19 ಸೋಂಕಿತರ ಸಂಪರ್ಕಕಕ್ಕೆ ಬಂದಾಗ ಕೋವಿಡ್ 19 ಪರೀಕ್ಷೆ ಮಾಡಬೇಕಾಗಿಲ್ಲ, ಆದರೆ ಹೈ ರಿಸ್ಕ್‌ ಕೆಟಗರಿ ಅಂದ್ರೆ ವಯಸ್ಸು ಹಾಗೂ ಇತರ ಆರೋಗ್ಯ ಸಮಸ್ಯೆ ಇರುವವರು ಮಾತ್ರ ಪರೀಕ್ಷೆ ಮಾಡಿಸಿದರೆ ಸಾಕು.

* ಅಂತರ್‌ರಾಜ್ಯ ಪ್ರಯಾಣ ಮಾಡುವವರು ಕೋವಿಡ್ 19 ಪರೀಕ್ಷೆ ಮಾಡಿಸಬೇಕಾಗಿಲ್ಲ.

* ಆದರೆ ಕೆಮ್ಮು, ಜ್ವರ, ಗಂಟಲು ಕೆರೆತ, ರುಚಿ ಇಲ್ಲದಿರುವುದು, ಮೂಗಿಗೆ ಯಾವುದೇ ವಾಸನೆ ಗ್ರಹಿಸಲು ಸಾಧ್ಯವಾಗದಿರುವುದು ಈ ರೀತಿಯ ಲಕ್ಷಣಗಳು ಕಮಡು ಬಂದರೆ ಕೋವಿಡ್ 19 ಪರೀಕ್ಷೆ ಮಾಡಿಸಬೇಕು.

ಕರ್ನಾಟಕದಲ್ಲಿ ಕೋವಿಡ್ 19 ಪರಿಸ್ಥಿತಿ ಹೇಗಿದೆ?

ಈಗ ರಾಜ್ಉದಲ್ಲಿ ಶೇ. 18.80ರಷ್ಟು ಪಾಸಿಟಿವಿಟಿ ರೇಟ್ ಇದೆ, ಸುಮಾರು 2,67,650ರಷ್ಟು ಸಕ್ರೀಯ ಕೇಸ್‌ಗಳಿವೆ.

English summary

Karnataka Govt Revised Covid-19 Testing And Quarantine Guidelines

The Karnataka government issued new guidelines for testing, quarantine and home isolation of Covid-19 patients. Details here..
X
Desktop Bottom Promotion