Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಟಿಪ್ಸ್
ಮಳೆಗಾಲ ಜೂನ್ ತಿಂಗಳಿನಲ್ಲಿ ಶುರುವಾಗುವುದು. ಈ ವರ್ಷ ಚಂಡ ಮಾರುತದಿಂದಾಗಿ ಮೇ ತಿಂಗಳಿನಲ್ಲಿಯೇ ಕೆಲವಡೆತುಂಬಾ ಮಳೆ ಸುರಿಯುತ್ತಿದೆ. ಮಳೆಗಾಲ ಬಂತೆಂದರೆ ಶೀತದ ವಾತಾವರಣ ಕಾರಣ ಕಾಯಿಲೆ ಬೀಳುವುದು ಅಧಿಕ. ಇದನ್ನು ತಡೆಗಟ್ಟಲು ನಾವು ಮಳೆಗಾಲದಲ್ಲಿ ನಮ್ಮ ಉಡುಪು, ಆಹಾರ ಶೈಲಿ ಎಲ್ಲವನ್ನೂ ಬದಲಾಯಿಸಬೇಕು.
ಈ ಸಮಯದಲ್ಲಿ ಬೆಚ್ಚಗಿನ ಉಡುಪು ಹಾಗೂ ಬಿಸಿ-ಬಿಸಿಯಾದ ಆಹಾರ ಸೇವಿಸಬೇಕು. ನಾವಿಲ್ಲಿ ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಪ್ರಕಾರ ಯಾವ ಆಹಾರ ಸೇವಿಸಬೇಕು ನೋಡಿ:

ಮಳೆಗಾಲದಲ್ಲಿ ಕಾಡುವ ವಾತ, ಪಿತ್ತ ದೋಷ
ವಾತ ಹಾಗೂ ಪಿತ್ತ ದೋಷ: ಮಳೆಗಾಲದಲ್ಲಿ ವಾತಾವರಣದಲ್ಲಿ ವಾತ ಹಾಗೂ ಪಿತ್ತದ ದೋಷದ ಕಾರಣ ಜೀರ್ಣಕ್ರಿಯೆ ದುರ್ಬಲವಾಗುವುದು. ಮಳೆಗಾಲದಲ್ಲಿ ಕಾಯಿಲೆ ಬೀಳಲು ಇದು ಪ್ರಮುಖ ಕಾರಣವಾಗಿದೆ. ಆಹಾರಕ್ರಮದಲ್ಲಿ ಸಮತೋಲನ ಕಾಪಾಡಿದರೆ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಆಹಾರಕ್ರಮ ಹೇಗಿರಬೇಕು ಎಂದು ನೋಡೋಣ:

ತಾಜಾ ಹಾಗೂ ಲಘು ಆಹಾರ ಸೇವಿಸಿ
* ಮಳೆಗಾಲದಲ್ಲಿ ಅಕ್ಕಿ, ಬಾರ್ಲಿ, ಗೋಧಿ ಇವುಗಳಿಂದ ತಯಾರು ಮಾಡುವ ಆಹಾರ ಸೇವಿಸಿ. ಧಾನ್ಯಗಳು, ತುಪ್ಪ ಇಂಥ ಪದಾರ್ಥಗಳನ್ನು ಸೇವಿಸಿ.
* ಪ್ರತೀ ಊಟದ ಮೊದಲಿಗೆ ಸ್ವಲ್ಪ ಶುಂಠಿ, ಒಂದು ಒಮದು ಹರಳು ಕಲ್ಲುಪ್ಪು ತಿನ್ನಿ.
* ಸಾಲ್ಟ್ ಅಂಡ್ ಸೋರ್ ಸೂಪ್ ಬಳಸಿ. ಈರುಳ್ಳಿ ಹಾಗೂ ಇತರ ತರಕಾರಿಗಳನ್ನು ಹೆಚ್ಚಾಗಿ ಬಳಸಿ.

ಇವುಗಳನ್ನು ತಿನ್ನಿ
* ತುಂಬಾ ಮಳೆ ಬರುತ್ತಿದ್ದರೆ ಹುಳಿಯಂಶದ, ಉಪ್ಪಿನಂಶದ, ಎಣ್ಣೆಯಂಶದ ಆಹಾರ ಸೇವಿಸಿ.
* ಕುದಿಸಿ ಆರಿದ ನೀರಿಗೆ ಸ್ವಲ್ಪ ಜೇನು ಸೇರಿಸಿ ಕುಡಿಯುವುದು ಒಳ್ಳೆಯದು.
* ಶುಂಠಿ, ಏಲಕ್ಕಿಯನ್ನು ನಿಮ್ಮ ದಿನನಿತ್ಯದ ಆಹಾರಕ್ರಮದಲ್ಲಿ ಸೇರಿಸಿ.
* ಮಳೆಗಾಲದಲ್ಲಿ ಅಳಲೆಕಾಯಿ ಜೊತೆ ಸ್ವಲ್ಪ ಕಲ್ಲುಪ್ಪು ಸೇರಿಸಿ ತಿನ್ನುವುದು ಒಳ್ಳೆಯದು.
ನೀರು ಚೆನ್ನಾಗಿ ಕುಡಿಯಿರಿ
ಮಳೆಗಾಲದಲ್ಲಿ ಬಾಯಾರಿಕೆಯಾಗುತ್ತಿಲ್ಲವೆಂದು ನೀರು ಕುಡಿಯುವುದು ಕಮ್ಮಿ ಮಾಡಬೇಡಿ. ದಿನದಲ್ಲಿ 8 ಲೋಟ ನೀರು ಕುಡಿಯಿರಿ. ಈ ಸಮಯದಲ್ಲಿ ಸ್ವಲ್ಪ ಬೆಚ್ಚಗಿನ ನೀರು ಅಥವಾ ಸೂಪ್ ಕುಡಿಯಿರಿ.

ಯಾವ ಆಹಾರ ದೂರವಿಡಬೇಕು
* ಮಳೆಗಾಲದಲ್ಲಿ ಸೊಪ್ಪು ತಿನ್ನಬೇಡಿ.
ಅಲ್ಲದೆ ತಂಗಳು ಆಹಾರ ಸೇವಿಸಬೇಡಿ.
* ಕೆಂಪು ಮಾಂಸ, ಮೊಸರು ಅಲ್ಲದೆ ಜೀರ್ಣವಾಗಲು ತುಂಬಾ ಸಮಯ ತೆಗೆದುಕೊಳ್ಳುವಂಥ ಆಹಾರ ಸೇವಿಸಬೇಡಿ.
ಮೊಸರು ಬದಲಿಗೆ ಮಜ್ಜಿಗೆ ತೆಗೆದುಕೊಳ್ಳಬಹುದು.

ಜೀವನಶೈಲಿಯಲ್ಲಿ ಮಾಡಬೇಕಾದ ಬದಲಾವಣೆಗಳು
* ಮಳೆಗಾಲದಲ್ಲಿ ಹಗಲು ಹೊತ್ತಿನಲ್ಲಿ ನಿದ್ದೆ ಮಾಡಬೇಡಿ, ಇದು ಜೀರ್ಣಕ್ರಿಯೆಯನ್ನು ನಿಧಾನವಾಗಿಸುತ್ತೆ.
* ಸೂರ್ಯನ ಕಿರಣಗಳು ಬಿದ್ದರೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ನಿಲ್ಲಿ.
* ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿಡಿ, ಮಳೆ ನೀರು ಒಳಗೆ ಬಾರದಂತೆ ವ್ಯವಸ್ಥೆ ಮಾಡಿಡಿ.
* ದೇಹವನ್ನು ಬೆಚ್ಚಗಿಡುವ ಉಡುಪು ಧರಿಸಿ.
* ಒದ್ದೆ ಬಟ್ಟೆ ಧರಿಸಿ ಅಥವಾ ತಲೆ ಕೂದಲು ಒದ್ದೆ ಇರುವಾಗ ಎಸಿ ಇರುವ ರೂಮ್‌ಗೆ ಹೋಗಬೇಡಿ.
* ಕೊಳಕು ನೀರಿನಲ್ಲಿ ನಡೆದಾಡಬೇಡಿ.
* ಪಾದಗಳನ್ನು ಒಣಗಿಸಿ ಇಡಿ, ನೀರಿನಂಶವಿದ್ದರೆ ಬೆರಳುಗಳ ನಡುವೆ ಕೆಸರು ಕಜ್ಜಿಯಾಗಿ ತುರಿಕೆ ಉಂಟಾಗುವುದು.
* ಮಳೆ ನೀರಿನಲ್ಲಿ ನೆನೆಯಬೇಡಿ. ಒಂದು ವೇಳೆ ನೆನೆದರೆ ಬೇಗನೆ ಸ್ನಾನ ಮಾಡಿ ಬಟ್ಟೆ ಬದಲಾಯಿಸಿ. ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಕಾಯಿಲೆ ಬೀಳುವುದು.
* ಈ ಸಮಯದಲ್ಲಿ ಸುಖಿ ಚಿಕಿತ್ಸೆ (ಪಂಚ ಕರ್ಮ) ಪಡೆಯಿರಿ.



Click it and Unblock the Notifications
