Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಇಂತಹವರು ಹೀಟ್ ಸ್ಟ್ರೋಕ್ ಗೆ ಒಳಗಾಗುವುದು ಹೆಚ್ಚು!
ಬೇಸಿಗೆಯ ಕಾಲದಲ್ಲಿ ಬಿಸಿಲಿನಿಂದ ರಕ್ಷಿಸಿಕೊಳ್ಳುವುದು ಒಂದು ಸಾಹಸವೇ ಸರಿ. ಇದಕ್ಕೆ ನಾನಾ ವಿಧಾನಗಳನ್ನು ಅನುಸರಿಸಿದರೂ ಸಹ, ಈ ಹವಾಮಾನದಿಂದ ಹೆಚ್ಚು ಪರಿಣಾಮ ಬೀರುವ ಅನೇಕ ಜನರು ನಮ್ಮ ನಡುವೆಯೇ ಇದ್ದಾರೆ. ಇಂತಹವರು ಹೀಟ್ ಸ್ಟ್ರೋಕ್ ಅಥವಾ ಶಾಖದ ಹೊಡೆತಕ್ಕೆ ಒಳಗಾಗುವುದು ಹೆಚ್ಚು ವಿಶೇಷವಾಗಿ ಈ ಬೇಸಿಗೆಯಲ್ಲಿ. ಅಂತಹ ಜನರು ಎಷ್ಟೇ ಜಾಗರೂಕರಾಗಿರಲಿ, ಅವರನ್ನು ಹೀಟ್ ಸ್ಟ್ರೋಕ್ ಕಾಡದೇ ಬಿಡದು. ಹಾಗಾದರೆ ಇಲ್ಲಿ ಯಾರು ಇದಕ್ಕೆ ಒಳಗಾಗುವುದು ಎಂಬುದನ್ನು ನೊಡೋಣ.
ಹೀಟ್ ಸ್ಟ್ರೋಕ್ ಗೆ ಒಳಗಾಗುವ ಸಾಧ್ಯತೆ ಯಾರಿಗಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಹವಾಮಾನಕ್ಕೆ ತಕ್ಕಂತೆ ದೇಹ ಹೊಂದಿಕೆಯಾಗದವರು:
ಹೌದು, ಇಂತಹ ಸೂಕ್ಷ್ಮ ದೇಹವನ್ನು ಹೊಂದಿರುವವರು ಹೀಟ್ ಸ್ಟ್ರೋಕ್ ಗೆ ಹೆಚ್ಚು ಒಳಗಾಗುತ್ತಾರೆ. ಅವರಿಗೆ ಹವಾಮಾನಕ್ಕೆ ಅನುಗುಣವಾಗಿ ತಮ್ಮನ್ನು ಹೊಂದಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಬೇಸಿಗೆ ಬಂದ ಕೂಡಲೇ ಎಸಿ ಮೊರೆ ಹೋಗುತ್ತಾರೆ. ಇದರಿಂದ ಅವರ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಜೊತೆಗೆ ಇವರಿಗೆ ವಿಪರೀತ ಶಾಖ ಅಥವಾ ಉಷ್ಣಾಂಶವನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಅವರು ಹೆಚ್ಚಾಗಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ.

ಆರೋಗ್ಯ ಸಮಸ್ಯೆಯುಳ್ಳವರು:
ಚರ್ಮದ ಕಾಯಿಲೆಗಳು ಮತ್ತು ಮಧುಮೇಹದಂತಹ ಕಾಯಿಲೆಗಳಿಂದ ಬಳಲುತ್ತಿರುವ ಜನರು ಸಹ ಶಾಖದ ಹೊಡೆತಕ್ಕೆ ತುತ್ತಾಗುತ್ತಾರೆ. ಮಧುಮೇಹ ಹೊಂದಿರುವ ರೋಗಿಗಳು ಬೇಸಿಗೆಯಲ್ಲಿ ಸನ್‌ಸ್ಕ್ರೀನ್, ಕೊಡೆ ಅಥವಾ ಚರ್ಮ ಕಾಪಾಡುವಂತಹ ಬಟ್ಟೆಗಳಿಲ್ಲದೇ ಹೊರಗೆ ಹೋಗುವುದನ್ನು ತಪ್ಪಿಸಬೇಕು.

ಆಲ್ಕೋಹಾಲ್ ಸೇವಿಸುವವರು:
ಆಲ್ಕೊಹಾಲ್ ಕುಡಿಯುವವರು ಸಹ ಶಾಖದ ಹೊಡೆತಕ್ಕೆ ಗುರಿಯಾಗುತ್ತಾರೆ ಏಕೆಂದರೆ ಆಲ್ಕೋಹಾಲ್ ಯಕೃತ್ತು ಮತ್ತು ಹೃದಯವನ್ನು ಸುಡುತ್ತದೆ. ತಾಪಮಾನ ಹೆಚ್ಚಾದಾಗ, ತನ್ನ ದುರ್ಬಲ ರೋಗನಿರೋಧಕ ಶಕ್ತಿಯಿಂದ ಅದನ್ನು ಎದುರಿಸಲು ಸಾಧ್ಯವಾಗುವುದಿಲ್ಲ ಇದರಿಂದ ಅನಾರೋಗ್ಯಕ್ಕೆ ಒಳಗಾಗುತ್ತಾನೆ.

ತೇವಾಂಶದ ಕೊರತೆಯಿರವವರು:
ತೇವಾಂಶದ ಕೊರತೆಯಿಂದ ದೇಹ ಒಣಗಿದವರು ಸಹ ಹೀಟ್ ಸ್ಟ್ರೋಕ್ ಗೆ ಗುರಿಯಾಗುತ್ತಾರೆ. ದೇಹದಲ್ಲಿ ನೀರಿನಾಂಶದ ಕೊರತೆಯಿರುವುದರಿಂದ ಹೀಟ್ ಸ್ಟ್ರೋಕ್ ಬರುವ ಸಾಧ್ಯತೆಗಳು ಹೆಚ್ಚು. ಎಣ್ಣೆಯುಕ್ತ ಚರ್ಮವುಳ್ಳವರು, ಡ್ರೈ ಸ್ಕಿನ್ ಇರುವವರಿಗಿಂತ ಹೆಚ್ಚು ಶಾಖದ ಹೊಡೆತಕ್ಕೆ ಒಳಗಾಗುತ್ತಾರೆ.

ಹೀಟ್‌ಸ್ಟ್ರೋಕ್ ತಪ್ಪಿಸಲು ಅತ್ಯಂತ ಪರಿಣಾಮಕಾರಿ ಮನೆಮದ್ದು ಇಲ್ಲಿದೆ:
ಹೀಟ್ ಸ್ಟ್ರೋಕ್ ತಡೆಗಟ್ಟಲು ಮಾವಿನ ಹಣ್ಣಿನ ಪಚ್ಚೆ ಸಹಾಯ ಮಾಡಲಿದೆ. ಇದನ್ನು ತಯಾರಿಸಲು ಮಾವಿನಹಣ್ಣುಗಳನ್ನು ನೀರಿನಲ್ಲಿ ಕುದಿಸಿ. ನಂತರ ಸ್ವಲ್ಪ ಸಮಯದವರೆಗೆ ತಣ್ಣೀರಿನಲ್ಲಿ ಇರಿಸಿ. ಅದು ತಣ್ಣಗಾದಾಗ, ಅವುಗಳ ಸಿಪ್ಪೆ ತೆಗೆಯಿರಿ. ತದನಂತರ ಅದನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕರಗಿಸಿ. ಇದಕ್ಕೆ ಬೆಲ್ಲ, ಕೊತ್ತಂಬರಿ, ಕರಿಮೆಣಸು, ಉಪ್ಪು ಇತ್ಯಾದಿಗಳನ್ನು ರುಚಿಗೆ ತಕ್ಕಂತೆ ಸೇರಿಸಿ ಮತ್ತು ಸ್ವಲ್ಪ ಸಮಯದವರೆಗೆ ಫ್ರಿಜ್ ನಲ್ಲಿಡಿ. ಇದನ್ನು ತಣ್ಣಗಾಗಿಸಿ ಮತ್ತು ದಿನಕ್ಕೆ 2 ರಿಂದ 3 ಬಾರಿ ಕುಡಿಯಿರಿ. ಹೀಟ್‌ಸ್ಟ್ರೋಕ್ ತಡೆಗಟ್ಟುವಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ.



Click it and Unblock the Notifications
