Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪಾದ ಹಾಗೂ ಕಾಲುಗಳಲ್ಲಿ ಊತ ಹಾಗೂ ನೋವಿದೆಯೇ?
ಕಾಲುಗಳು, ಪಾದಗಳು ಊದಿಕೊಂಡಾಗ ಅದರ ಬಗ್ಗೆ ಹೆಚ್ಚಿನವರು ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ತುಂಬಾ ಹೊತ್ತು ಕೂತು ಪ್ರಯಾಣ ಮಾಡಿದಾಗ ಅಥವಾ ಹೆಚ್ಚು ಹೊತ್ತು ನಿಂತು ಕೊಂಡೇ ಕೆಲಸ ಮಾಡಿದವರಲ್ಲಿ ಈ ರೀತಿಯ ಸಮಸ್ಯೆ ಕಂಡು ಬರುವುದು ಸಹಜ. ಆದರೆ ಕಾಲಿನ ಊತದ ಜೊತೆಗೆ ಇತರ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಬಾರದು.
ಕಾಲುಗಳಲ್ಲಿ ಊತಕ್ಕೆ ಕಾರಣವಾಗುವ ಸಂಭಾವ್ಯ ಸಮಸ್ಯೆಗಳ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ:

ಗರ್ಭಾವಸ್ಥೆಯಲ್ಲಿ/ಗರ್ಭಾವಸ್ಥೆಯಲ್ಲಿ ತೊಂದರೆಯಿದ್ದರೆ
ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಕಾಲುಗಳಲ್ಲಿ ಊತ ಇರುತ್ತದೆ. ಆದರೆ ಕಾಲು ತುಂಬಾ ಊದಿದರೆ ಅದು ಸಾಮಾನ್ಯವಲ್ಲ. ಪ್ರೀಕ್ಲಾಂಪ್ಸಿಯಾ ಅಂಥ ಗಂಭೀರ ಸಮಸ್ಯೆ, ಅಂದ್ರೆ ಅತ್ಯಧಿಕ ರಕ್ತದೊತ್ತಡ ಮತ್ತು ಯೂರಿನ್‌ನಲ್ಲಿ ಪ್ರೊಟೀನ್ ಬೆಳವಣಿಗೆಯಾದರೆ ಕಾಲುಗಳಲ್ಲಿ ತುಂಬಾ ಊತ ಕಂಡು ಬರುವುದು. ಈ ರೀತಿಯ ಸಮಸ್ಯೆ ಗರ್ಭಧಾರಣೆಯ 20 ವಾರಗಳ ಬಳಿಕ ಕಂಡು ಬರುವುದು. ಇದರ ಜೊತೆಗೆ ಕೆಳ ಹೊಟ್ಟೆಯಲ್ಲಿ ನೋವು, ತಲೆನೀವು, ಆಗಾಗ ಮೂತ್ರ ವಿಸರ್ಜನೆಗೆ ಹೋಗುವುದು, ವಾಂತಿ, ಸುಸ್ತು, ಕಣ್ಣು ಮಂಜಾಗುವುದು ಇಂಥ ಸಮಸ್ಯೆ ಕಂಡು ಬರುವುದು. ಈ ರೀತಿಯ ಸಮಸ್ಯೆಗಳಿರುವಾಗ ಅದು ಗರ್ಭಾವಸ್ಥೆಯಲ್ಲಿ ಕಾಡುವ ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡಬೇಡಿ.

ಪಾದ ಅಥವಾ ಕಾಲುಗಳಿಗೆ ಪಟ್ಟಾದರೆ
ಪಾದ ಅಥವಾ ಕಾಲುಗಳಿಗೆ ಪೆಟ್ಟಾದರೆ ಕಾಲುಗಳಲ್ಲಿ ಊತ ಕಂಡು ಬರುವುದು. ಅದರಲ್ಲಿ ಪಾದದ ಮಣಿಗಂಟಿನಲ್ಲಿ ಹೆಚ್ಚು ನೋವು ಕಮಡು ಬರುವುದು. ಈ ರೀತಿಯಾದಾಗ ಐಸ್ ಪ್ಯಾಕ್ ಇಡುವುದು, ಕಂಪ್ರೆಷನ್ ಬ್ಯಾಂಡೇಜ್ ಸುತ್ತುವುದು ಪಾದಗಳನ್ನು ದಿಂಬಿನ ಅಥವಾ ಚೇರ್ ಮೇಲೆ ಇಟ್ಟು ಕೂರುವುದು ಮಾಡಿ. ಮನೆಯಲ್ಲಿ ಮಾಡಿದ ಪ್ರಯತ್ನಗಳ ನಂತರವೂ ಪಾದ ನೋವಿದ್ದರೆ ವೈದ್ಯರ ಸಲಹೆ ಪಡೆಯಿರಿ.

ಲಿಂಫೆಡೆಮ
ದೇಹದಲ್ಲಿ ದುಗ್ಧರಸ ನಾಳಗಳನ್ನು ತೆಗೆದಾಗ ಅಥವಾ ಅದಕ್ಕೆ ತೊಂದರೆಯಾದಗ ನರಗಳಲ್ಲಿ ದುಗ್ಧರಸ ತುಂಬುವುದು. ದುಗ್ಧರಸ ಎನ್ನುವುದು ಪ್ರೋಟೀನ್ ಅಧಿಕವಿರುವ ರಸವಾಗಿದ್ದು ಇದು ನರಗಳಲ್ಲಿ ಸಂಚಾರ ಮಾಡಿ ದೇಹದಲ್ಲಿರುವ ಅನಗ್ಯತ ಬ್ಯಾಕ್ಟಿರಿಯಾ ತೆಗೆದು ಹಾಕುತ್ತದೆ. ಈ ದುಗ್ಧರಸ ಗ್ರಂಥಿಗೆ ಏನಾದರೂ ತೊಂದರೆಯಾದರೆ ದುಗ್ಧರಸ ಸಂಚಾರಕ್ಕೆ ತಡೆ ಉಂಟಾಗಿ , ಇದರ ಸೋಂಕು ಹೆಚ್ಚಿ ಕಾಲುಗಳಲ್ಲಿ ಊತ ಕಂಡು ಬರುವುದು. ಈ ರೀತಿ ಉಂಟಾದಾಗ ದುಗ್ಧರಸ ಗ್ರಂಥಿ ತೆಗೆಯುವುದು ಅಥವಾ ರೇಡಿಯೇಷನ್ ಥೆರಪಿ ಮುಖಾಂತರ ಗುಣ ಪಡಿಸಬಹುದು. ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವವರು ಕಾಲುಗಳಲ್ಲಿ ಊತ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಬೇಕು.

ಸಿರೆಯ ಕೊರತೆ (Venous insufficiency)
ಇದರಲ್ಲಿ ರಕ್ತವು ನರಗಳಿಗೆ ಸರಿಯಾದ ಪ್ರಮಾಣದಲ್ಲಿ ಪೂರೈಕೆಯಾಗದೇ ಇದ್ದಾಗ ಕಾಲು ಹಾಗೂ ಪಾದಗಳಲ್ಲಿ ಊತ ಕಂಡು ಬರುವುದು. ರಕ್ತವು ನರಗಳಲ್ಲಿರುವ ಕವಾಟದ ಮೂಲಕ ಒಂದೇ ದಿಕ್ಕಿನಲ್ಲಿ ಸಂಚರಿಸುವುದು. ಕವಾಟಕ್ಕೆ ಹಾನಿಯುಂಟಾದಾಗ ರಕ್ತ ಕವಾಟದಲ್ಲಿ ಸೋರಿಕೆಯಾಗಿ ನರಗಳಲ್ಲಿ ವಾಪಾಸ್ಸು ಚಲಿಸುತ್ತದೆ. ಈ ರೀತಿ ಉಂಟಾದಾಗಲು ಪಾದ ಹಾಗೂ ಕಾಲುಗಳಲ್ಲಿ ಊತ ಕಂಡು ಬರುತ್ತದೆ.
ಈ ರೀತಿಯಾದಾಗ ತ್ವಚೆಯಲ್ಲಿ ಬದಲಾವಣೆ, ತ್ವಚೆಯಲ್ಲಿ ಗುಳ್ಳೆಗಳು, ಸೋಂಕು ಕಂಡು ಬರುವುದು. ಸಿರೆಯ ಕೊರತೆ ಉಂಟಾದರೆ ಕೂಡಲೇ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು.

ಸೋಂಕು
ಪಾದ ಹಾಗೂ ಕಾಲುಗಳಲ್ಲಿ ಊತ ಸೋಂಕಿನ ಒಂದು ಲಕ್ಷಣವಾಗಿದೆ. ಮಧುಮೇಹಿಗಳಲ್ಲಿ ಅಥವಾ ಇತರ ನರದ ಸಮಸ್ಯೆ ಇರುವವರಲ್ಲಿ ಪಾದಗಳಲ್ಲಿ ಗುಳ್ಳೆಗಳು ಎದ್ದು ಒಡೆದರೆ ಕೂಡಲೇ ವೈದ್ಯರಿಗೆ ತೋರಿಸಬೇಕು.

ರಕ್ತ ಹೆಪ್ಪುಗಟ್ಟುವುದು
ಕಾಲುಗಳಲ್ಲಿ ಊತ, ನೋವು, ಸಣ್ಣ ಜ್ವರ, ನೋವು ಇರುವ ಕಾಲಿನಲ್ಲಿ ಬಣ್ಣದ ಸ್ವಲ್ಪ ಬಣ್ಣದ ಬದಲಾವಣೆ ಇವುಗಳಿದ್ದರೆ ಅದು ರಕ್ತ ಹೆಪ್ಪುಗಟ್ಟಿವಿಕೆಯ ಸಮಸ್ಯೆಯಿಂದ ಉಂಟಾಗಿರುತ್ತದೆ. ಈ ರೀತಿ ಕಂಡು ಬಂದಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

ಹೃದಯ, ಲಿವರ್, ಕಿಡ್ನಿ ಸಮಸ್ಯೆಯಿದ್ದಾಗ
ಹೃದಯ ಸಮಸ್ಯೆ, ಲಿವರ್ ಅಥವಾ ಕಿಡ್ನಿಯಲ್ಲಿ ಸಮಸ್ಯೆಯಿದ್ದಾಗ ಕಾಲುಗಳಲ್ಲಿ ಊತ ಕಂಡು ಬರುವುದು. ಕಾಲುಗಳಲ್ಲಿ ಊತದ ಜೊತೆಗೆ ಎದೆ ಅಥವಾ ಕಿಬ್ಬೊಟ್ಟೆಯಲ್ಲಿ ನೋವು, ತಲೆ ಸುತ್ತುವುದು, ಹೊಟ್ಟೆ ಹಸಿವು ಇಲ್ಲದೇ ಇರುವುದು, ತೂಕ ಹೆಚ್ಚಾಗುವುದು ಕಂಡು ಬಂದರೆ ವೈದ್ಯರನ್ನು ಕಾಣಿ.

ಔಷಧಗಳ ಅಡ್ಡಪರಿಣಾಮ
* ಹಾರ್ಮೋನ್ ರೀಪ್ಲೇಸ್ಮಂಟ್ ಥೆರಪಿ ಮಾಡಿಸಿಕೊಂಡವರಲ್ಲಿ ಈ ಸಮಸ್ಯೆ ಕಾಣಿಸಬಹುದು.
* ಗರ್ಭನಿರೋಧಕ ಮಾತ್ರೆಗಳ ಅಡ್ಡಪರಿಣಾಮದಿಂದ
* ರಕ್ತದೊತ್ತಡಕ್ಕೆ ಸಂಬಂಧಿಸಿದ ಮಾತ್ರೆಗಳಿಂದ
* ಸ್ಟಿರಾಯ್ಡ್
* ಖಿನ್ನತೆಗೆ ಮಾತ್ರೆ ತೆಗೆದುಕೊಂಡಾಗ
* ಉರಿಯೂತದ ಔಷಧ
* ಮಧುಮೇಹದ ಔಷಧ
ಇವೆಲ್ಲಾ ಕೂಡ ಕಾಲಿನಲ್ಲಿ ಊತ ಕಂಡು ಬರಲು ಕಾರಣವಾಗಿರಬಹುದು.
ಸಲಹೆ: ಕಾಲು ಹಾಗೂ ಪಾದಗಳಲ್ಲಿ ಊತ ಹಾಗೂ ನೋವಿದ್ದರೆ ನಿರ್ಲಕ್ಷ್ಯ ಮಾಡಬೇಡಿ, ವೈದ್ಯರನ್ನು ಸೂಕ್ತ ಚಿಕಿತ್ಸೆ ಪಡೆಯಿರಿ.
Source:WebMD



Click it and Unblock the Notifications