Latest Updates
-
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ?
ಹಾಲು ಇಷ್ಟವಿಲ್ಲವೇ? ಹಾಗಿದ್ದಲ್ಲಿ, ಮೂಳೆಗಳು ಸದೃಢವಾಗಿರಲು ಈ 8 ಆಹಾರಗಳನ್ನು ಮಹಿಳೆಯರು ತಪ್ಪದೇ ಸೇವಿಸಿ
ಸಾಮಾನ್ಯವಾಗಿ, 30ರ ನಂತರ ಮಹಿಳೆಯರ ಮೂಳೆಯ ಸಾಮರ್ಥ್ಯ ಕಡಿಮೆಯಾಗುತ್ತಾ ಬರುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅದಕ್ಕೂ ಮುನ್ನವೇ ಮೂಳೆಯ ಸಮಸ್ಯೆ ಹಾಗೂ ರಕ್ತಹೀನತೆ ಕಂಡುಬರುತ್ತಿದೆ. ಒಂದು ವರದಿಯ ಪ್ರಕಾರ, ಭಾರತದಲ್ಲಿ 85% ಜನರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ವರದಿಯ ಪ್ರಕಾರ ಇದಕ್ಕೆ ದೊಡ್ಡ ಕಾರಣ ಆಹಾರದಲ್ಲಿನ ಕ್ಯಾಲ್ಸಿಯಂ ಕೊರತೆ. ಭಾರತವು ಹಾಲು ಉತ್ಪಾದಕತೆಯಲ್ಲಿ ಮುಂದಿದ್ದರೂ, ಆಹಾರದ ಕ್ಯಾಲ್ಸಿಯಂ ಪ್ರಮಾಣದಲ್ಲಿ ದೊಡ್ಡ ಕೊರತೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದರ ಕೆಟ್ಟ ಪರಿಣಾಮವು ಮೂಳೆಯ ಆರೋಗ್ಯದ ಮೇಲೆ ಬೀಳುತ್ತಿದೆ.
ಕ್ಯಾಲ್ಸಿಯಂ ಒಂದು ಖನಿಜವಾಗಿದ್ದು ಅದು ಬಲವಾದ ಮೂಳೆಗಳು ಮತ್ತು ಹಲ್ಲುಗಳಿಗೆ ಅವಶ್ಯಕವಾಗಿದೆ. ಆದರೆ, ಅನೇಕ ಮಹಿಳೆಯರಿಗೆ ಹಾಲು ಕುಡಿಯಲು ಇಷ್ಟವಾಗುವುದಿಲ್ಲ. ಆಗ ಇಂತಹ ಮೂಳೆ ಸಂಬಂಧಿತ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಅದಕ್ಕಾಗಿ ನೀವು ಕ್ಯಾಲ್ಸಿಯಂ ಹಾಗು ಪ್ರೋಟೀನ್ ಪಡೆಯಲು ಹಾಲಿನ ಬದಲು ಕೆಲವು ಪರ್ಯಾಯ ವಸ್ತುಗಳನ್ನು ಸೇವಿಸಬಹುದು. ಅವುಗಳಾವುವು ಇಲ್ಲಿ ನೋಡೋಣ.
ಕ್ಯಾಲ್ಸಿಯಂ ಹಾಗು ಪ್ರೋಟೀನ್ ಪಡೆಯಲು ಹಾಲಿನ ಬದಲು ಸೇವಿಸಬಹುದಾದ ಇತರ ಆಹಾರಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಬೀನ್ಸ್:
ಬೀನ್ಸ್ ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ನಲ್ಲಿ ಸಮೃದ್ಧವಾಗಿದ್ದು, ಅರ್ಧ ಕಪ್ ಬೇಯಿಸಿದ ಬೀನ್ಸ್ 40 ಮಿಲಿಗ್ರಾಂಗಳಷ್ಟು ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ. ಜೊತೆಗೆ ಅರ್ಧ ಕಪ್ ಬಿಳಿ ಬೀನ್ಸ್ 81 ಮಿಗ್ರಾಂ ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ ಜೊತೆಗೆ ಕಬ್ಬಿಣದಲ್ಲಿ ಕೂಡ ಸಮೃದ್ಧವಾಗಿದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಇದನ್ನು ಸೇರಿಸಿ.

ಬಾದಾಮಿ:
ಬಾದಾಮಿಯಲ್ಲಿ ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ಫೈಬರ್‌ನಂತಹ ಪೋಷಕಾಂಶಗಳು ಕಂಡುಬರುತ್ತವೆ. ಅರ್ಧ ಕಪ್ ಬಾದಾಮಿಯು 130 ಮಿಲಿಗ್ರಾಂಗಳಷ್ಟು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ.ಆದ್ದರಿಂದ ನೀವು ಮನೆಯಲ್ಲಿ ತಯಾರಿಸಿದ ಬಾದಾಮಿ ಹಾಲನ್ನು ಸಹ ತೆಗೆದುಕೊಳ್ಳಬಹುದು. ಪ್ರತಿದಿನ ಒಂದು ಗ್ಲಾಸ್ ನಿಮಗೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುವುದು.

ಓಟ್ ಮೀಲ್:
ಓಟ್ ಮೀಲ್ ಕೂಡ ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದ್ದು, ಕ್ಯಾಲ್ಸಿಯಂ ಪೂರಕಗಳನ್ನು ಪೂರೈಸಲು ಓಟ್ ಮೀಲ್ ನ್ನು ಬದಲಿಯಾಗಿ ಬಳಸಬಹುದು. ಒಂದು ಬೌಲ್ ಓಟ್ ಮೀಲ್ ನಲ್ಲಿ 100 ಮಿಲಿಗ್ರಾಂಗಿಂತ ಹೆಚ್ಚು ಕ್ಯಾಲ್ಸಿಯಂ ಇರುತ್ತದೆ. ಆದ್ದರಿಂದ ಇದನ್ನ ಕ್ಯಾಲ್ಸಿಯಂ ಪೂರೈಕೆಗಾಗಿ ಆರಾಮವಾಗಿ ಸೇವಿಸಬಹುದು.

ಕಿತ್ತಳೆ:
ಕಿತ್ತಳೆಯು ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ ಅನ್ನು ಒಂದೇ ಸಮಯದಲ್ಲಿ ನೀಡುವುದು. ಒಂದು ಕಿತ್ತಳೆ (150 ಗ್ರಾಂ) ಸುಮಾರು 60 ಮಿಲಿಗ್ರಾಂ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಯ ಉಗ್ರಾಣ ಎಂದು ಕರೆಯಲ್ಪಡುವ ಒಂದು ಸಣ್ಣ ಗ್ಲಾಸ್ ಕಿತ್ತಳೆ ರಸವನ್ನು ಕುಡಿಯುವುದು ಮತ್ತೊಂದು ಆಯ್ಕೆಯಾಗಿದೆ.

ಸೋಯಾ ಹಾಲು:
ನಿಮಗೆ ಹಾಲು ಇಷ್ಟವಿಲ್ಲದಿದ್ದರೆ, ಸೋಯಾ ಹಾಲು ನಿಮಗೆ ಉತ್ತಮ ಆಯ್ಕೆಯಾಗಿದೆ. ಸೋಯಾ ಹಾಲು ಸಾಮಾನ್ಯ ಗ್ಲಾಸ್ ಹಾಲಿಗಿಂತ ಹೆಚ್ಚು ಪ್ರೋಟೀನ್ ಹೊಂದಿರುತ್ತದೆ. ಜೊತೆಗೆ ಹಸುವಿನ ಹಾಲಿನಲ್ಲಿರುವಷ್ಟೇ ಪ್ರಮಾಣದ ಕ್ಯಾಲ್ಸಿಯಂ ಸೋಯಾ ಹಾಲಿನಲ್ಲಿದೆ.

ಹಸಿರು ಸೊಪ್ಪು:
ಹಸಿರು ಸೊಪ್ಪು, ತರಕಾರಿಗಳಲ್ಲಿ 100 ಮಿಗ್ರಾಂಗಿಂತ ಹೆಚ್ಚು ಕ್ಯಾಲ್ಸಿಯಂ ಕಂಡುಬರುತ್ತದೆ. ಇವುಗಳನ್ನು ತಿನ್ನುವುದು ಕ್ಯಾಲ್ಸಿಯಂ ಕೊರತೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಎಲೆಕೋಸು, ಪಾಲಕ್ ಇತ್ಯಾದಿಗಳನ್ನು ನೀವು ಪ್ರತಿದಿನ ಸೇವಿಸಬೇಕು.

ಎಳ್ಳು:
ಒಂದು ಟೀಚಮಚ ಎಳ್ಳು 88 ಮಿಲಿಗ್ರಾಂ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಇದರಲ್ಲಿ ಮೆಗ್ನೀಸಿಯಮ್ ಕೂಡ ಅಧಿಕವಾಗಿದ್ದು, ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಿದೆ. ಇದು ನಿದ್ರಾಹೀನತೆಯ ಸಮಸ್ಯೆಗಳನ್ನು ನಿವಾರಿಸಿ, ಮನಸ್ಥಿತಿಯನ್ನು ಸುಧಾರಿಸುತ್ತದೆ.

ಪನ್ನೀರ್:
ಇದು ಸಾಮಾನ್ಯವಾಗಿ ಹೆಚ್ಚಿನರಿಗೆ ತಿಳಿದಿರುವ ಹಾಲಿನ ಪರ್ಯಾಯ ವಸ್ತು. ಒಂದೂವರೆ ಕಪ್ ಪನ್ನೀರ್ 861 ಮಿಲಿಗ್ರಾಂ ಕ್ಯಾಲ್ಸಿಯಂ ಹೊಂದಿರುತ್ತದೆ. ಯಾವುದೇ ಊಟಕ್ಕೆ ಸಾಕಷ್ಟು ಪ್ರೋಟೀನ್, ಆರೋಗ್ಯಕರ ಕೊಬ್ಬು ಮತ್ತು ಕ್ಯಾಲ್ಸಿಯಂ ಅನ್ನು ಸೇರಿಸಲು ಇದು ಉತ್ತಮ ಮಾರ್ಗವಾಗಿದೆ.



Click it and Unblock the Notifications
