Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ನಿತ್ಯ ಬಾದಾಮಿ ಸೇವಿಸಿದರೆ ಕರುಳಿನ ಸಮಸ್ಯೆ ನಿಮ್ಮನ್ನು ಬಾಧಿಸುವುದೇ ಇಲ್ಲ!
ಆಯುರ್ವೇದದಿಂದ ಹಿಡಿದು ಹೊಸ ಯುಗದ ಪೌಷ್ಟಿಕ ತಜ್ಞರವರೆಗೂ ಎಲ್ಲರೂ ಬಾದಾಮಿಯನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಬದಾಮಿಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ ಎನ್ನುವ ಕಾರಣಕ್ಕೆ ಇದನ್ನು ಶಿಫಾರಸು ಮಾಡುತ್ತಾರೆ. ಇದರಿಂದ ದೇಹದ ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗುತ್ತದೆ. ದಿನ ನಿತ್ಯ ಒಂದು ಬದಾಮಿ ತಿನ್ನಿ ನಿಮ್ಮ ಆರೋಗ್ಯ ಉತ್ತಮವಾಗುತ್ತದೆ ಎನ್ನುತ್ತಾರೆ. ಹಾಗಾದರೆ ಈ ಬೀಜಗಳು ಮನುಷ್ಯನ ಕರುಳಿಗೆ ಒಳ್ಳೆಯದೇ? ಒಂದು ಅಧ್ಯಯನದ ಪ್ರಕಾರ, ಪ್ರತಿದಿನ ಬೆರಳೆಣಿಕೆಯಷ್ಟು ಬಾದಾಮಿಯು ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಶಾರ್ಟ್-ಚೈನ್ ಫ್ಯಾಟಿ ಆಸಿಡ್ ಬ್ಯುಟೈರೇಟ್ ಸಂಶ್ಲೇಷಣೆಯನ್ನು ಉತ್ತಮಗೊಳಿಸುತ್ತದೆ ಎಂದು ಹೇಳಲಾಗಿದೆ. ಹಾಗಾದರೆ ನೀವು ದಿನ ನಿತ್ಯ ಬದಾಮಿ ತಿನ್ನುವ ವ್ಯಕ್ತಿಗಳಾಗಿದ್ದರೆ ಇದರ ಮಹತ್ವವನ್ನು ತಿಳಿದುಕೊಳ್ಳಿ. ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಅಧ್ಯಯನ ಹೇಳುವುದೇನು?
ಕಿಂಗ್ಸ್ ಕಾಲೇಜ್ ಲಂಡನ್‌ನ ಸಂಶೋಧಕರ ತಂಡವು ಕರುಳಿನ ಸೂಕ್ಷ್ಮಜೀವಿಗಳ ಸಂಯೋಜನೆಯ ಮೇಲೆ ಬಾದಾಮಿ ಯಾವ ರೀತಿಯ ಪ್ರಭಾವವನ್ನು ಬೀರುತ್ತದೆ ಎನ್ನುವುದರ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಇವರ ಪ್ರಕಾರ ಕರುಳಿನ ಸೂಕ್ಷ್ಮಜೀವಿಯು ಕರುಳಿನಲ್ಲಿ ವಾಸಿಸುವ ಸಾವಿರಾರು ಸೂಕ್ಷ್ಮ ಜೀವಿಗಳನ್ನು ಒಳಗೊಂಡಿದೆ. ಪೋಷಕಾಂಶಗಳನ್ನು ಜೀರ್ಣಿಸಿಕೊಳ್ಳುವಲ್ಲಿ ಇವು ಪ್ರಮುಖ ಪಾತ್ರವಹಿಸುತ್ತವೆ ಮತ್ತು ನಮ್ಮ ಜೀರ್ಣಕಾರಿ ಮತ್ತು ಪ್ರತಿರಕ್ಷಣಾ ವ್ಯವಸ್ಥೆಗಳು ಸೇರಿದಂತೆ ನಮ್ಮ ಆರೋಗ್ಯದ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪ್ರಭಾವವನ್ನು ಬೀರಬಹುದು.
ಕರುಳಿನ ಸೂಕ್ಷ್ಮಾಣುಜೀವಿಗಳು ಮಾನವನ ಆರೋಗ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದರ ಕಾರ್ಯವಿಧಾನಗಳ ಬಗ್ಗೆ ಹೆಚ್ಚಿನ ಸಂಶೋಧನೆ ಮುಖ್ಯ ಎಂದು ಅವರು ತಿಳಿಸಿದ್ದಾರೆ. ಅದಾಗ್ಯೂ ನಿರ್ದಿಷ್ಟ ರೀತಿಯ ಆಹಾರವನ್ನು ಸೇವಿಸುವುದರಿಂದ ನಮ್ಮ ಕರುಳಿನಲ್ಲಿರುವ ಬ್ಯಾಕ್ಟೀರಿಯಾದ ಪ್ರಕಾರಗಳು ನಮ್ಮ ಕರುಳಿನಲ್ಲಿ ಏನು ಮಾಡುತ್ತವೆ ಎಂಬುದನ್ನು ಧನಾತ್ಮಕವಾಗಿ ತಿಳಿದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಇನ್ನು ಅಧ್ಯಯನದ ಬಗ್ಗೆ ನೋಡುವುದಾದರೆ ಲಂಡನ್‌ನ ಕಿಂಗ್ಸ್ ಕಾಲೇಜ್‌ನ ಸಂಶೋಧಕರು ಒಟ್ಟು 87 ಆರೋಗ್ಯವಂತ ವಯಸ್ಕರನ್ನು ಈ ಸಂಶೋಧನೆಗಾಗಿ ಬಳಸಿಕೊಂಡಿದ್ದಾರೆ. ಈ ಪೈಕಿ ಮೂರು ಗುಂಪುಗಳಾಗಿ ಅಂದರೆ ಶಿಫಾರಸು ಮಾಡಲಾದ ಆಹಾರಗಳನ್ನು ಸೇವಿಸವವರು, ಬದಾಮಿ ಸೇವಿಸುವವರು, ಅನಾರೋಗ್ಯಕರ ತಿಂಡಿಗಳನ್ನು ಸೇವಿಸುವವರು ಎನ್ನುವ ಮೂರು ಗುಂಪು ಮಾಡಲಾಗಿತ್ತು. ಹೀಗೆ ನಾಲ್ಕು ವಾರ ಬದಾಮಿ ಸೇರಿ ವಿವಿಧ ಆಹಾರಗಳನ್ನು ಪರೀಕ್ಷೆ ಮಾಡುವ ದೃಷ್ಟಿಯಿಂದ ನೀಡಲಾಯ್ತು.

ಫಲಿತಾಂಶವೇನು?
ಮಫಿನ್ ಸೇವಿಸುವವರಿಗೆ ಹೋಲಿಸಿದರೆ ಬಾದಾಮಿ ತಿನ್ನುವವರಲ್ಲಿ ಬ್ಯುಟೈರೇಟ್ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಬ್ಯುಟೈರೇಟ್ ಒಂದು ಸಣ್ಣ ಸರಪಳಿ ಕೊಬ್ಬಿನಾಮ್ಲವಾಗಿದ್ದು, ಕೊಲೊನ್ ಅನ್ನು ಒಳಗೊಳ್ಳುವ ಜೀವಕೋಶಗಳಿಗೆ ಇಂಧನದ ಮುಖ್ಯ ಮೂಲವಾಗಿದೆ. ಈ ಜೀವಕೋಶಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದಾಗ, ಕರುಳಿನ ಸೂಕ್ಷ್ಮಜೀವಿಗಳು ಪ್ರವರ್ಧಮಾನಕ್ಕೆ ಬರಲು, ಕರುಳಿನ ಗೋಡೆಯು ಬಲವಾಗಿರಲು ಮತ್ತು ಸೋರಿಕೆಯಾಗದಂತೆ ಅಥವಾ ಉರಿಯದಂತೆ ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳಲು ಸೂಕ್ತವಾದ ಸ್ಥಿತಿಯನ್ನು ಒದಗಿಸುತ್ತದೆ. ಈ ರೀತಿಯ ಶಕ್ತಿ ಕರುಳಿಗೆ ಸಿಕ್ಕಿದರೆ ಕರಳು ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ. ಅಲ್ಲದೇ ಕರುಳು ಆರೋಗ್ಯವಾಗಿರುತ್ತದೆ.
ಪ್ರಮುಖ ಪೋಷಕಾಂಶಗಳ ಹೆಚ್ಚಳದಿಂದಾಗಿ ಯಾವುದೇ ರೂಪದಲ್ಲಿ ಬಾದಾಮಿ ತಿನ್ನುವುದು ಜನರ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು, ಫೈಬರ್ ಮತ್ತು ಪೊಟ್ಯಾಸಿಯಮ್ ಮಟ್ಟದಲ್ಲಿ ಸುಧಾರಣೆಗಳು ಬರುತ್ತವೆ. ಇದರಿಂದ ಕರುಳು ಆರೋಗ್ಯವಾಗಿರುತ್ತದೆ.

ಏನಿದು ಕರುಳು?
ಕರುಳು ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯ ಪ್ರಮುಖ ಭಾಗ. ನಮ್ಮ ಜೀರ್ಣಕ್ರಿಯೆಯಲ್ಲಿ ಸಣ್ಣ ಕರುಳು ಮತ್ತು ದೊಡ್ಡ ಕರುಳು ಎರಡೂ ಪ್ರಮುಖ ಪಾತ್ರ ವಹಿಸುತ್ತವೆ. ಕರುಳಿನ ಕಾರ್ಯವೆಂದರೆ ನಮ್ಮ ಆಹಾರದಿಂದ ಆರೋಗ್ಯಕರ ಮತ್ತು ಪೌಷ್ಟಿಕ ವಸ್ತುಗಳನ್ನು ಜೀರ್ಣಿಸಿಕೊಳ್ಳುವುದು, ಉಳಿದ ವಸ್ತುಗಳನ್ನು ಕರುಳು ದೇಹದಿಂದ ಹೊರತೆಗೆಯುತ್ತವೆ. ಇದು ನಮ್ಮ ದೇಹದಾದ್ಯಂತ ಪೋಷಕಾಂಶಗಳನ್ನು ಸಾಗಿಸುತ್ತದೆ. ಈ ಸಂದರ್ಭದಲ್ಲಿ ಕರುಳಿನಲ್ಲಿ ಸಮಸ್ಯೆ ಇದ್ದರೆ ಜೀರ್ಣಾಂಗ ವ್ಯವಸ್ಥೆಯ ಮೇಲೆ ಬೀರುತ್ತದೆ.



Click it and Unblock the Notifications
