For Quick Alerts
ALLOW NOTIFICATIONS  
For Daily Alerts

ಕರ್ನಾಟದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹತ್ತೇ ದಿನದಲ್ಲಿಮೂರು ಪಟ್ಟು ಹೆಚ್ಚಳ

|

ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸಂಖ್ಯೆ ಹೆಚ್ಚುತ್ತಿದೆ. ಜೂನ್‌ 1ಕ್ಕೆ ಹೋಲಿಸಿದರೆ ಈಗ ಕೊರೊನಾ ಸಮಖ್ಯೆ ಮೂರು ಪಟ್ಟು ಹೆಚ್ಚಾಗಿದೆ.

COVID-19

ಶಾಲೆಗಳು ಪ್ರಾರಂಭವಾಗಿದೆ, ಆಫೀಸ್‌ಗಳು ತಮ್ಮ ಉದ್ಯೋಗಿಗಳನ್ನು ಆಫೀಸ್‌ಗೆ ಬರಲು ಹೇಳುತ್ತಿದ್ದಾರೆ, ಜನ ಜೀವನ ಮೊದಲಿನ ಸ್ಥಿತಿಗೆ ಮರಲಿದೆ ಹೀಗಿರುವಾಗ ಮತ್ತೆ ಕೊರೊನಾ ಅಧಿಕವಾಗುತ್ತಿರುವುದು ಈಗ ಮತ್ತೆ ಆತಂಕಕ್ಕೆ ಕಾರಣವಾಗಿದೆ.

ಮೂರೂವರೆ ತಿಂಗಳ ಬಳಿಕ ಮತ್ತೆ ಕೊರೊನಾ ಸಂಖ್ಯೆ ಹೆಚ್ಚಳ

ಮೂರೂವರೆ ತಿಂಗಳ ಬಳಿಕ ಮತ್ತೆ ಕೊರೊನಾ ಸಂಖ್ಯೆ ಹೆಚ್ಚಳ

ಕರ್ನಾಟಕದಲ್ಲಿ ಕೊರೊನಾ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿತ್ತು, ಕೆಲವೊಂದು ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಶೂನ್ಯವಾಗಿತ್ತು. ಆದರೆ ಮೂರೂವರೆ ತಿಂಗಳ ಬಳಿಕ ಕೊರೊನಾ ಸೋಂಕಿತರ ಸಂಖ್ಯೆ 500 ದಾಟಿದೆ. ಶನಿವಾರ ಅಂದರೆ ಜೂನ್‌ 11ಕ್ಕೆ 562 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. Covid -19 Information Portal ಮಾಹಿತಿ ಪ್ರಕಾರ ಇಂದಿಗೆ ಕರ್ನಾಟಕದಲ್ಲಿ 3, 882 ಸಕ್ರೀಯ ಕೇಸ್‌ಗಳಿವೆ.

ಬೆಂಗಳೂರಿನಲ್ಲಿ ಅಧಿಕ ಕೇಸ್‌

ಬೆಂಗಳೂರಿನಲ್ಲಿ ಅಧಿಕ ಕೇಸ್‌

ಜೂನ್‌ 1ಕ್ಕೆ 178 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು, ಹತ್ತೇ ದಿನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3 ಪಟ್ಟು ಹೆಚ್ಚಾಗಿದೆ. ಆದರೆ ಕಳೆದ ಸಾವಿನ ಸಂಖ್ಯೆ ತುಂಬಾ ಕಡಿಮೆಯಿದೆ ಹಾಗೂ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ತುಂಬಾ ಕಡಿಮೆ ಇದೆ. ತುಂಬಾ ಕೊರೊನಾ ಸೋಂಕಿತರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಾವುದೇ ಹೊಸ ತಳಿ ಪತ್ತೆಯಾಗಿಲ್ಲ

ಯಾವುದೇ ಹೊಸ ತಳಿ ಪತ್ತೆಯಾಗಿಲ್ಲ

ಕರ್ನಾಟಕದಲ್ಲಿ ಯಾವುದೇ ಹೊಸ ತಳಿ ವೈರಸ್‌ ಕಂಡು ಬಂದಿಲ್ಲ. ಈಗ ಹರಡುತ್ತಿರುವುದು ಒಮಿಕ್ರಾನ್‌ ವೈರಸ್‌ ಆಗಿದೆ. ಒಮಿಕ್ರಾನ್ ಈಗಾಗಲೇ ಒಮ್ಮೆ ಬಂದು ಹೋಗಿರುವುದರಿಂದ ಇದರಿಂದ ನಾಲ್ಕನೇ ಅಲೆ ಉಂಟಾಗಲ್ಲ ಎಂಬುವುದು ತಜ್ಞರ ಅಭಿಪ್ರಾಯವಾಗಿದೆ.

ಕೊರೊನಾ ನಿಯಮಗಳನ್ನು ತಪ್ಪದೆ ಪಾಲಿಸಿ

ಕೊರೊನಾ ನಿಯಮಗಳನ್ನು ತಪ್ಪದೆ ಪಾಲಿಸಿ

* ಕೊರೊನಾ ಬಗ್ಗೆ ಈ ಹಿಂದೆ ನಿರ್ಲಕ್ಷ್ಯ ತೋರಿ ಎಷ್ಟು ನಷ್ಟ ಅನುಭವಿಸಿದ್ದೇವೆ ಎಂಬುವುದು ಜನರ ಅನುಭವಕ್ಕೆ ಬಂದಿದೆ

* ಆದ್ದರಿಂದ ಈ ಬಾರಿ ಕೊರೊನಾ ನಿಯಮಗಳನ್ನು ತಪ್ಪದೆ ಪಾಲಿಸಿ, ಕೊರೊನಾ ಹರಡದಂತೆ ಮುನ್ನೆಚ್ಚರಿಕೆವಹಿಸಿ.

English summary

3 fold increase in COVID-19 cases in 10 days in Karnataka

3 fold increase in COVID-19 cases in 10 days in Karnataka, Read on...
X
Desktop Bottom Promotion