Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತಲೆನೋವನ್ನು ತ್ವರಿತವಾಗಿ ನಿವಾರಣೆ ಮಾಡುವ ಯೋಗ ಭಂಗಿಗಳು
ತಲೆನೋವು ಎನ್ನುವುದು ನಮ್ಮ ದೈನಂದಿನ ಚಟುವಟಿಕೆ ಮೇಲೆ ಪರಿಣಾಮ ಬೀರುವುದು. ಸರಿಯಾಗಿ ನಿದ್ರೆ ಮಾಡಲು ಆಗುವುದಿಲ್ಲ ಮತ್ತು ಕೆಲಸ ಮಾಡಲು ಆಗದು. ತಲೆನೋವು ಬರಲು ಹಲವಾರು ಕಾರಣಗಳು ಇರಬಹುದು. ನಿರ್ಜಲೀಕರಣ, ಒತ್ತಡ, ಖಿನ್ನತೆ, ಹ್ಯಾಂಗ್ ಓವರ್ ಇತ್ಯಾದಿಗಳು ಪ್ರಮುಖ ಕಾರಣಗಳು. ತಲೆನೋವು ಕಾಡಿದ ಕೂಡಲೇ ಅದನ್ನು ಯಾವಾಗ ಓಡಿಸುವುದು ಎಂದು ನಾವು ಯಾವಾಗಲೂ ಚಿಂತೆ ಮಾಡುತ್ತಲಿರುತ್ತೇವೆ. ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಮಡು ತಲೆನೋವು ಓಡಿಸಬಹುದು. ಆದರೆ ಕೆಲವೊಂದು ಸಲ ಈ ಔಷಧಿಗಳು ಅಡ್ಡಪರಿಣಾಮ ಬೀರುವುದು. ಇದರಿಂದ ನಿಯಮಿತವಾಗಿ ಯೋಗ ಮಾಡಿದರೆ ಆಗ ಆರೋಗ್ಯ ಮತ್ತು ಫಿಟ್ ಆಗಿರಬಹುದು. ಯೋಗಾಭ್ಯಾಸ ಮಾಡಿದರೆ ಆಗ ತಲೆನೋವು ನಿವಾರಣೆ ಮಾಡಬಹುದು.

ತಲೆನೋವಿಗೆ ಪ್ರಮುಖ ಕಾರಣವೆಂದರೆ ಅದು ಒತ್ತಡ. ಇದು ಕೆಲಸದ ಒತ್ತಡ ಆಗಿರಬಹುದು ಅಥವಾ ಬೇರೆ ಯಾವುದೇ ಒತ್ತಡ ಆಗಿರಬಹುದು. ಯೋಗಾಭ್ಯಾಸ ಮಾಡಿದರೆ ಅದರಿಂದ ಒತ್ತಡ ದೂರ ಮಾಡಬಹುದು. ಕೆಲವೊಂದು ಯೋಗಾಸನದಿಂದ ದೇಹದ ಕೆಲವೊಂದು ಭಾಗಗಳಾಗಿರುವ ಕುತ್ತಿಗೆ, ಭುಜ ಮತ್ತು ಬೆನ್ನು ತೆರೆದುಕೊಳ್ಳುವುದು ಮತ್ತು ಇದರಿಂದ ತಲೆಗೆ ಸರಿಯಾಗಿ ರಕ್ತವು ಸರಬರಾಜು ಆಗುವುದು. ಈ ವೇಳೆ ಒತ್ತಡವು ಕಡಿಮೆಯಾಗುವುದು. ಈ ಆಸನಗಳನ್ನು ಮಾಡಿಕೊಂಡು ತಲೆನೋವು ನಿವಾರಿಸಬಹುದು.

ಅರ್ಧ ಪಿಂಚ ಮಯೂರಾಸನ
ಡಾಲ್ಫಿನ್ ರೀತಿಯ ಭಂಗಿಯನ್ನು ಅರ್ಧ ಪಿಂಚ ಮಯೂರಾಸನ ಎಂದು ಕರೆಯಲಾಗುತ್ತದೆ. ಇದು ಅಧೋ ಮುಖ ಶವಾಸನಕ್ಕೆ ಸಮಾನವಾಗಿದೆ. ಈ ಆಸನವು ಬೆನ್ನು ಮತ್ತು ಕುತ್ತಿಗೆ ಒಳ್ಳೆಯ ಒತ್ತಡ ಹಾಕುವುದು ಮತ್ತು ಮೆದುಳಿಗೆ ಸರಿಯಾಗಿ ರಕ್ತಸಂಚಾರವಾಗಲು ನೆರವಾಗುವುದು. ಈ ಭಂಗಿಯಲ್ಲಿ ನೀವು ಯಾವಾಗಲೂ ದೀರ್ಘವಾಗಿ ಉಸಿರಾಡಬೇಕು. ತಲೆಗೆ ಸರಿಯಾಗಿ ರಕ್ತ ಸಂಚಾರ ಆಗುವ ಕಾರಣದಿಂದಾಗಿ ಈ ಭಂಗಿಯು ತಲೆನೋವು ನಿವಾರಣೆ ಮಾಡುವುದು.

ಸುಪ್ತ ವಿರಾಸನ
ಒತ್ತಡದಿಂದ ತಲೆನೋವು ಬಂದಿದ್ದರೆ ಆಗ ನೀವು ಸುಪ್ತ ವಿರಾಸನವನ್ನು ಅಭ್ಯಾಸ ಮಾಡಬೇಕು. ಈ ಆಸನವು ಬೆನ್ನು ಮತ್ತು ಭುಜಕ್ಕೆ ಹೆಚ್ಚಿನ ಒತ್ತಡ ಹಾಕುವುದು ಮತ್ತು ಒತ್ತಡ ನಿವಾರಣೆ ಮಾಡುವುದು. ಇದು ಒತ್ತಡಕ್ಕೆ ತಕ್ಷಣವೇ ತೃಪ್ತಿ ನೀಡುವುದು ಮತ್ತು ತಲೆನೋವು ನಿವಾರಿಸುವುದು.

ವಿಪರಿತಾ ಕರನಿ
ಈ ಆಸನವು ಸ್ವಲ್ಪ ಕ್ಲಿಷ್ಟವೆಂದು ಅನಿಸುವುದು. ಆದರೆ ಇದು ಕುತ್ತಿಗೆ ಭಾಗದಲ್ಲಿನ ಸ್ನಾಯುಗಳ ಮೇಲೆ ಒತ್ತಡ ಹಾಕಿ ಅದಕ್ಕೆ ಆರಾಮ ನೀಡುವುದು. ಯೋಗ ಮ್ಯಾಟ್ ನ ತುದಿಯಲ್ಲಿ ನಿಮ್ಮ ಬಲ ಬದಿ ಸೊಂಟವು ಗೋಡೆಗೆ ತಾಗುವಂತೆ ಕುಳಿತುಕೊಳ್ಳಿ. ಹಿಂದಕ್ಕೆ ಒರಗಿ ಮತ್ತು ಮ್ಯಾಟ್ ಮೇಲೆ ಅಂಗಾತ ಮಲಗಿ ಮತ್ತು ಕಾಲುಗಳನ್ನು ಮೇಲೆತ್ತಿ ಗೋಡೆಗೆ ಒತ್ತಿಕೊಳ್ಳಿ. ನಿಮ್ಮ ಸೊಂಟದ ಭಾಗವು ಗೋಡೆಗೆ ತಾಗುವಂತಿರಲಿ ಮತ್ತು ಉಳಿದ ಭಾಗವು ಮ್ಯಾಟ್ ಮೇಲೆ ಇರಬೇಕು. ಕಣ್ಣುಗಳನ್ನು ಮುಚ್ಚಿಕೊಳ್ಳಿ ಮತ್ತು ದವಡೆಗೆ ಆರಾಮ ನೀಡಿ. ನಿಧಾನವಾಗಿ ಉಸಿರಾಡಿ ಮತ್ತು 3-10 ನಿಮಿಷ ಕಾಲ ಇದೇ ಭಂಗಿಯಲ್ಲಿ ಇರಬೇಕು.

ಆನಂದ ಬಾಲಾಸನ
ಆನಂದ ಬಾಲಾಸನ ಅಥವಾ ಸಂತೋಷದಲ್ಲಿರುವ ಮಗುವಿನ ಭಂಗಿಯು ತಲೆನೋವು ನಿವಾರಣೆ ಮಾಡಲು ತುಂಬಾ ನೆರವಾಗುವುದು. ಇದು ಬೆನ್ನು ನೋವನ್ನು ಕೂಡ ನಿವಾರಿಸಲು ಸಹಕಾರಿಯಾಗಿದೆ. ಬೆನ್ನ ಮೇಲೆ ಮಲಗಿಕೊಂಡು ಮೊಣಕಾಲನ್ನು ಮಡಚಿಕೊಳ್ಳಿ. ಹಿಂಗಾಲನ್ನು ನೀವು ಇದೇ ವೇಳೆ ಕೈಗಳಿಂದ ಹಿಡಿದುಕೊಳ್ಳಿ. ಸೊಂಟದ ಭಾಗ ಮತ್ತು ಬೆನ್ನಿಗೆ ಒತ್ತಡ ಹಾಕಲು ಒಂದು ಬದಿಯಿಂದ ಇನ್ನೊಂದು ಬದಿಗೆ ನಿಧನವಾಗಿ ಹೊರಲಾಡಿ. ಇದರಿಂದಾಗಿ ನಿಮ್ಮ ಮನಸ್ಸಿಗೆ ತುಂಬಾ ಆರಾಮ ಸಿಗುವುದು.
ಆನಂದ ಬಾಲಾಸನವನ್ನು ಹಾಕಲು ಕ್ರಮಬದ್ಧವಾದ ವಿವರಣೆ:
*ನಿಂತಿರುವ ಭಂಗಿಯಿಂದ ನಿಧಾನವಾಗಿ ನೆಲದ ಮೇಲೆ ಮಲಗುವ ಭಂಗಿಗೆ ಬರಬೇಕು. ಬೆನ್ನನ್ನು ಕೆಳಮುಖ ಮಾಡಿ ಅಡ್ಡಾಗಬೇಕು.
*ಎರಡೂ ಕಾಲುಗಳನ್ನು ಮೇಲಕ್ಕೆ ಎತ್ತಬೇಕು. ಎರಡೂ ಮಂಡಿಗಳು ನಿಮ್ಮ ಎದೆಯ ಭಾಗಕ್ಕೆ ಸಮೀಪವಿರುವಂತೆ ನೋಡಿಕೊಳ್ಳಬೇಕು. *ನಿಮ್ಮ ಕಾಲ್ಬೆರಳನ್ನು ನಿಮ್ಮ ಕೈಗಳಿಂದ ಹಿಡಿಯಬೇಕು.
*ನಿಮ್ಮ ತೋಳುಗಳನ್ನು ಮತ್ತು ನಿಮ್ಮ ಕಾಲುಗಳನ್ನು ನಿಧಾನವಾಗಿ ಅಗಲಿಸಬೇಕು.
*ನಿಮ್ಮ ತಲೆ, ಮೂಳೆತುದಿ ಮತ್ತು ತ್ರಿಕಾಸ್ಥಿ ನೆಲಕ್ಕೆ ತಾಕಿರಬೇಕು.
*ಹಿಮ್ಮಡಿಯನ್ನು ಮೇಲಕ್ಕೆ ಎತ್ತಿರಬೇಕು ಮತ್ತು ನಿಮ್ಮ ಕೈಗಳಿಂದ ಎಳೆದುಕೊಳ್ಳಬೇಕು.
*ಕುತ್ತಿಗೆ ಹಿಂಭಾಗ, ಭುಜಗಳು ಮತ್ತು ಬೆನ್ನನ್ನು ಸಂಪೂರ್ಣವಾಗಿ ನೆಲಕ್ಕೆ ಅದುಮಿರಬೇಕು.
*ದೀರ್ಘವಾಗಿ ಉಸಿರಾಡಿಸಿ ಮತ್ತು ಅದೇ ಭಂಗಿಯಲ್ಲಿ 20-30 ಸೆಕೆಂಡುಗಳ ಕಾಲವಿರಬೇಕು.
*ನಿಧಾನವಾಗಿ ಭಂಗಿಯಿಂದ ಹೊರಗೆ ಬನ್ನಿ. ಇದೇ ರೀತಿ 3-4 ಬಾರಿ ಅಭ್ಯಾಸ ಮಾಡಬೇಕು.
ಆನಂದ ಬಾಲಾಸನದಿಂದಾಗುವ ಇತರ ಲಾಭಗಳು
*ಬೆನ್ನೆಲಬನ್ನು ಮತ್ತು ತೊಡೆಸಂದುವನ್ನು ಹಿಗ್ಗಿಸುವುದಕ್ಕೆ ಸಹಾಯ ಮಾಡುತ್ತದೆ
*ಮಂಡಿರಜ್ಜು ಮತ್ತು ಒಳತೊಡೆಗಳನ್ನು ಹಿಗ್ಗುವಿಕೆಗೆ ನೆರವಾಗುತ್ತದೆ
*ಕೈಗಳ ಮತ್ತು ತೋಳುಗಳ ಬಲವನ್ನು ವರ್ಧಿಸುತ್ತದೆ
*ಆಯಾಸ ಒತ್ತಡಗಳನ್ನು ಉಪಶಮನ ಮಾಡುತ್ತದೆ
*ಮನಸ್ಸನ್ನು ಶಾಂತಗೊಳಿಸುತ್ತದೆ
*ತ್ರಿಕಾಸ್ಥಿಯನ್ನು ಸಡಿಲಗೊಳಿಸುತ್ತದೆ
*ಪಚನ ಕಾರ್ಯವನ್ನು ವೃದ್ಧಿಸುತ್ತದೆ

ಶವಾಸನ
ಶವಾಸನವು ನಿಮ್ಮನ್ನು ಧ್ಯಾನದ ಅತ್ಯುನ್ನತ ಸ್ಥಿತಿಗೆ ಕೊಂಡೊಯ್ಯುವ ಮೂಲಕ ನಿಮ್ಮ ದೇಹಕ್ಕೆ ಬೇಕಾದ ಆಹ್ಲಾದಕತೆಯನ್ನು ಒದಗಿಸುತ್ತದೆ. ನೀವು ಯೋಗವನ್ನು ಮಾಡಿದ ಮೇಲೆ ಈ ಆಸನ ಮಾಡಿದ ಮೇಲೆಯೇ ಯೋಗಾಸನವು ಮುಕ್ತಾಯಗೊಳ್ಳುತ್ತದೆ. ಅದಕ್ಕಾಗಿ ಈ ಆಸನಕ್ಕೆ ಯೋಗದಲ್ಲಿ ಎಲ್ಲಿಲ್ಲದ ಮಹತ್ವವಿದೆ. ಶವಾಸನವು ಒತ್ತಡ ನಿವಾರಣೆ ಮಾಡುವಲ್ಲಿ ತುಂಬಾ ಸಹಕಾರಿ ಆಗಿದೆ. ಇದು ನೋವು ನಿವಾರಣೆ ಮಾಡುವುದು. ಇದು ನಿದ್ರಿಸುವ ಭಂಗಿ ಆಗಿದೆ. ಇದನ್ನು ಮಾಡಲು ತುಂಬಾ ಸರಳ ಮತ್ತು ಪ್ರತಿಯೊಬ್ಬರು ಇದನ್ನು ಅಭ್ಯಾಸ ಮಾಡಬಹುದು. ಶವಾಸನ ಮಾಡಲು ಹೆಚ್ಚಿನ ಏಕಾಗ್ರತೆ ಬೇಕು. ತಲೆನೋವು ಕಾಡುತ್ತಲಿದ್ದರೆ, ಆಗ ನೀವು ಈ ಆಸನವನ್ನು ಪ್ರಯತ್ನಿಸಿ ನೋಡಬಹುದು.



Click it and Unblock the Notifications