Latest Updates
-
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ!
ಭಾರವಾದ ಬ್ಲಾಂಕೆಟ್ ಬಳಸುವ ಒಳಿತು ಹಾಗೂ ಕೆಡುಕುಗಳು
ಭಾರವಾದ ಬ್ಲಾಂಕೆಟ್(ಹೊದಿಕೆ)ಗಳನ್ನು ಕೆಲವು ಥೆರಪಿಸ್ಟ್ ಗಳು, ಕ್ಲಿನಿಕ್ ಗಳು ತಮ್ಮ ಚಿಕಿತ್ಸಾ ಕ್ರಮದಲ್ಲಿ ತುಂಬಾ ಪ್ರಭಾವಶಾಲಿಯಾಗಿ ಬಳಸಿಕೊಳ್ಳುತ್ತಲಿದ್ದರು. ಇದನ್ನು ಗುರುತ್ವಾಕರ್ಷಣೆಯ ಬ್ಲಾಂಕೆಟ್ ಎಂದೂ ಕರೆಯಲಾಗುತ್ತಿತ್ತು ಮತ್ತು ಇದನ್ನು ಹೆಚ್ಚಿನ ಜನರು ಬಳಸಿಕೊಳ್ಳುತ್ತಲಿದ್ದರು. ಅದಾಗ್ಯೂ, ಆರೋಗ್ಯ ಸಮಸ್ಯೆ ಉಂಟು ಮಾಡುವಂತಹ ಆತಂಕ ನಿವಾರಣೆ ಮಾಡುವಲ್ಲಿ ಇದು ನಿಜವಾಗಿಯೂ ನೆರವಾಗುತ್ತದೆಯಾ ಎನ್ನುವ ಅಂಶವು ನಮ್ಮ ಈಗಲೂ ಕಾಡುವುದು. ಹೆಚ್ಚಿನ ತಜ್ಞರು ಈ 12 ಕೆಜಿ ಭಾರದ ಹೊದಿಕೆ ಬಳಸಬಾರದು ಎಂದು ಸಲಹೆ ನೀಡುತ್ತಾರೆ. ಅದರಲ್ಲೂ ಇದನ್ನು ಮಕ್ಕಳು ಬಳಸಿದರೆ ಅದರಿಂದ ಸಮಸ್ಯೆಗಳು ಕಾಡುವುದು ಎಂದು ಹೇಳತ್ತಾರೆ.
ಈ ಭಾರವಾದ ಹೊದಿಕೆಗಳಿಗೆ ತುಂಬಾ ಹಿಂದಿನ ಇತಿಹಾಸವಿದೆ. ಇದನ್ನು ಸಂವೇದನಾ ಏಕೀಕರಣ ಚಿಕಿತ್ಸೆ ಯಲ್ಲಿ ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿತ್ತು. ಸಂವೇದನೆಗೆ ಒಳಗೊಂಡಿರುವಂತ ಕೆಲವೊಂದು ಸಮಸ್ಯೆಗಳಿಗೆ ಈ ಚಿಕಿತ್ಸೆಯು ತುಂಬಾ ನೆರವಾಗುತ್ತಲಿತ್ತು. ನಿದ್ರಾಹೀನತೆ, ಆತಂಕ ಮತ್ತು ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್ ಪರಿಣಾಮವನ್ನು ಕಡಿಮೆ ಮಾಡುವುದು ಎಂದು ಇದರ ತಯಾರಕರು ಹೇಳುತ್ತಾರೆ. ಈ ಹೊದಿಕೆಯ ಕೆಲವೊಂದು ಆರೋಗ್ಯ ಲಾಭಗಳು ಮತ್ತು ಅದರಿಂದ ಆಗುವಂತಹ ಅಡ್ಡಪರಿಣಾಮಗಳ ಬಗ್ಗೆ ನೀವು ತಿಳಿಯಿರಿ.

ಭಾರತದ ಬ್ಲಾಂಕೆಟ್ ಗಳು ಎಂದರೇನು?
ಭಾರವಾದ ಬ್ಲಾಂಕೆಟ್ ನಲ್ಲಿ ಕೆಲವೊಂದು ಸಣ್ಣ ವಸ್ತುಗಳಾಗಿರುವಂತಹ ಡಿಸ್ಕ್, ಮಣಿಗಳು, ಗೋಲಿಗಳಾಗಿ ಅಥವಾ ಪಾಲಿಪ್ರೊಪಿಲೀನ್ ಪ್ಲಾಸ್ಟಿಕ್ ಇತ್ಯಾದಿಗಳನ್ನು ತುಂಬಿರುವರು. ಇದು ಭಾರವಾಗಿರುವ ಕಾರಣದಿಂದಾಗಿ ಅಪ್ಪಿಕೊಂಡಂತಹ ಅನುಭವ ಸಿಗುವುದು. ದೊಡ್ಡವರ ಭಾರದ ಹೊದಿಕೆಯು ಸುಮಾರು 4 ರಿಂದ 14 ಕಿ.ಲೋ.ತನಕ ಇರುತ್ತದೆ. ಇದಕ್ಕಿಂತ ಲಘುವಾದ ಆಯ್ಕೆಯು ಮಕ್ಕಳಿಗೆ ಸಿಗುವುದು. ಇಂತಹ ಹೊದಿಕೆಗಳನ್ನು ಸಣ್ಣ ಶಿಶುಗಳಿಗೆ ಬಳಸಬಾರದು. ಲಘುವಾಗಿರುವಂತಹ ಲೋಹಗಳನ್ನು ಹತ್ತಿ ಜತೆಗೆ ಹಾಕಿಕೊಂಡು ಈ ಹೊದಿಕೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಲಾಗುತ್ತದೆ.
ತನ್ನ ತೂಕಕ್ಕೆ ಅನುಗುಣವಾಗಿ ಇಂತಹ ಬ್ಲಾಂಕೆಟ್ ನ್ನು ಆಯ್ಕೆ ಮಾಡಿಕೊಳ್ಳಬಹುದು. ಕೆಲವು ತಜ್ಞರು ಇಂತಹ ಬ್ಲಾಂಕೆಟ್ ಬಳಸುವ ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಯಾಕೆಂದರೆ ಇದರಿಂದ ನಿಮಗೆ ಸುರಕ್ಷಿತ ಭಾವನೆಯು ಸಿಗುವುದು ಮತ್ತು ಒಳ್ಳೆಯ ನಿದ್ರೆ ಮಾಡಲು ಕೂಡ ಇದು ತುಂಬಾ ಸಹಕಾರಿ ಆಗಲಿರಲಿದೆ ಎಂದು ಅವರು ಹೇಳುತ್ತಾರೆ. ಇದು ನಿಮ್ಮನ್ನು ಹಿಡಿದುಕೊಂಡಂತೆ ಆಗುವ ಕಾರಣ ಒಳ್ಳೆಯ ನಿದ್ರೆಗೆ ಇದು ತುಂಬಾ ಸಹಕಾರಿ ಆಗಿರಲಿದೆ. ಸಾಮಾನ್ಯ ಬ್ಲಾಂಕೆಟ್ ಗಳನ್ನು ಬಳಸಿಕೊಂಡರೆ ಅದು ತುಂಬಾ ಹಗುರವಾಗಿ ಇರುತ್ತದೆ. ಇದರಿಮದ ನಮಗೆ ತಬ್ಬಿಕೊಂಡ ಭಾವನೆಯು ಸಿಗದು. ಆದೆ ಭಾರವಾದ ಬ್ಲಾಂಕೆಟ್ ಈ ಭಾವನೆ ನೀಡುವುದು.
ಭಾರದ ಬ್ಲಾಂಕೆಟ್‌ಗಳ ಲಾಭಗಳು
*ಭಾರವಾದ ಬ್ಲಾಂಕೆಟ್ ಗಳನ್ನು ಬಳಸುವುದರಿಂದ ಸಿಗುವಂತಹ ಲಾಭಗಳ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆದಿಲ್ಲ. ಆದರೆ ಕೆಲವೊಂದು ಅಧ್ಯಯನಗಳು ಇದು ಒಳ್ಳೆಯದು ಎಂದು ಹೇಳಿವೆ. ಆಳವಾದ ಮಾನಸಿಕ ಕಾರಣಗಳಿಗೆ ಇದು ತುಂಬಾ ಸಹಕಾರಿ ಎಂದು ಹೇಳಲಾಗುತ್ತದೆ ಮತ್ತು ಇದರಿಂದ ಖಿನ್ನತೆಯಿಂದ ಬಳಲುತ್ತಿರುವ ಜನರಿಗೆ ಇದು ನೆರವಾಗುವುದು. ದೀರ್ಘಕಾಲಿಕ ನೋವಿನ ಪರಿಸ್ಥಿತಿ ಮತ್ತು ನಿದ್ರಾಹೀನತೆಯಿಂದ ಬಳಲುತ್ತಿರುವ ಜನರಿಗೆ ಇದು ನೆರವಾಗುವುದು ಎಂದು ಹೇಳಲಾಗುತ್ತದೆ.
*ಇದು ಆಳವಾಗಿ ಒಂದು ಅಪ್ಪುವಿಕೆ ಅನುಭವ ನೀಡುವ ಕಾರಣದಿಂದಾಗಿ ಇದು ಆತಂಕ ನಿವಾರಣೆ ಮಾಡಲು ತುಂಬಾ ಸಹಕಾರಿ ಎಂದು ಅಧ್ಯಯನಗಳು ಹೇಳಿವೆ. ಇದು ಆರಾಮ, ಸುರಕ್ಷತೆ ಭಾವನೆಯನ್ನು ಕೂಡ ಉಂಟು ಮಾಡುವುದು.
*ಅಪ್ಪುವಿಕೆ ಉಂಟು ಮಾಡುವ ಪರಿಣಾಮವಾಗಿ ಅದು ಆಕ್ಸಿಟಾಕ್ಸಿನ್ ಉಂಟು ಮಾಡುವುದು. ಇದು ಹೃದಯ ಬಡಿತ ಮತ್ತು ರಕ್ತದೊತ್ತಡ ಕಡಿಮೆ ಮಾಡುವುದು. ಇದರಿಂದಾಗಿ ಇದು ನಿಮಗೆ ಶಮನಕಾರಿ ಭಾವನೆ ನೀಡುವುದು.
*ಇದು ಮೆಲಟಾನಿನ್ ಉತ್ಪತ್ತಿಯನ್ನು ಹೆಚ್ಚು ಮಾಡುವ ಪರಿಣಾಮದಿಂದಾಗಿ ಇದು ತುಂಬಾ ಪರಿಣಾಮಕಾರಿ ಆಗಿರಲಿದೆ ಎಂದು ಇನ್ನು ಕೆಲವೊಂದು ಅಧ್ಯಯನಗಳು ಹೇಳಿವೆ. ಈ ಬ್ಲಾಂಕೆಟ್ ಗಳು ಸಂತೋಷವನ್ನು ಹೆಚ್ಚಿಸುವಂತಹ ಸೆರೊಟೊನಿನ್ ಉತ್ಪತ್ತಿಯನ್ನು ಹೆಚ್ಚಿಸುವುದು.
*ನಿದ್ರಾಹೀನತೆಯಿಂದ ಬಳಲುತ್ತಿರುವ ಮತ್ತು ನಿದ್ರೆ ಬರಲು ಔಷಧಿ ತೆಗೆದುಕೊಳ್ಳುವ ಜನರಿಗೆ ಈ ಭಾರವಾದ ಬ್ಲಾಂಕೆಟ್ ತುಂಬಾ ಪರಿಣಾಮಕಾರಿ ಎಂದು ಕೆಲವೊಂದು ವೈದ್ಯಕೀಯ ತಜ್ಞರು ಅಭಿಪ್ರಾಯಿಸಿರುವರು.
ಭಾರದ ಬ್ಲಾಂಕೆಟ್ ಗಳ ಆಯ್ಕೆ ಹೇಗೆ?
ಬಳಕೆದಾರರ ತೂಕಕ್ಕೆ ಅನುಗುಣವಾಗಿ ಉತ್ತಮವಾದ ಭಾರದ ಬ್ಲಾಂಕೆಟ್ ನ್ನು ಬಳಸಿಕೊಳ್ಳುವುದು.ನಿಮ್ಮ ದೇಹದ ತೂಕದ ಶೇ.10ರಷ್ಟು ಇರುವ ಮತ್ತು ಒಂದು ಅಥವಾ ಎರಡು ಕೆಜಿ ಸೇರಿಸಿಕೊಂಡಿರುವಂತಹ ಬ್ಲಾಂಕೆಟ್ ನ್ನು ಖರೀದಿ ಮಾಡಬೇಕು. ತಾಂತ್ರಿಕವಾಗಿ ಹೇಳುವುದಾದರೆ ಈ ಭಾರದ ಬ್ಲಾಂಕೆಟ್ ಗಳು ನಿಮ್ಮ ದೇಹಕ್ಕೆ ಸಂಪೂರ್ಣವಾಗಿ ಒತ್ತಡವನ್ನು ಹಾಕುತ್ತದೆ. ಇದು ನಿಮ್ಮ ದೇಹದ ಉದ್ದ ಮತ್ತು ಅಗಲಕ್ಕೆ ಸರಿಯಾಗಿ ಹೊಂದಿಕೆ ಆಗಬೇಕಾಗುತ್ತದೆ.
ನಿಮ್ಮ ಪ್ರಸಕ್ತ ಹೊದಿಕೆಯನ್ನು ಬದಲಾಯಿಸಿಕೊಳ್ಳಲು ನೀವು ಭಾರದ ಬ್ಲಾಂಕೆಟ್ ನ್ನು ಬಳಸಬೇಕೆಂದಿಲ್ಲ. ಅದಾಗ್ಯೂ, ಭಾರದ ಬ್ಲಾಂಕೆಟ್ ಗಳು ವಿವಿಧ ಗಾತ್ರಗಳಲ್ಲಿ ನಿಮಗೆ ಲಭ್ಯವಾಗಲಿದೆ.
ಭಾರದ ಬ್ಲಾಂಕೆಟ್ ಗಳಿಗೆ ಡಿಸ್ಕ್, ಮಣಿಗಳು, ಗೋಲಿಗಳಾಗಿ ಅಥವಾ ಪಾಲಿಪ್ರೊಪಿಲೀನ್ ಪ್ಲಾಸ್ಟಿಕ್ ಗಳನ್ನು ಹಾಕಿ ತಯಾರಿಸಿಕೊಳ್ಳಲಾಗುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಇದಕ್ಕೆ ಲೋಹಗಳು ಮತ್ತು ಹತ್ತಿಯಂತೆ ತುಂಬಾ ಹಗುರವಾಗಿರುವಂತಹ ಲೋಹಗಳನ್ನು ಬಳಸಿಕೊಳ್ಳಲಾಗುತ್ತದೆ.
ಸಾಮಾನ್ಯ ಬ್ಲಾಂಕೆಟ್ ಗಳಂತೆ ಭಾರದ ಬ್ಲಾಂಕೆಟ್ ಗಳು ವಿವಿಧ ಬಗೆಯ ಬಟ್ಟೆಗಳಿಂದ ತಯಾರಿಸಿಕೊಳ್ಳಲಾಗುತ್ತದೆ. ನೀವು ಈ ಬ್ಲಾಂಕೆಟ್ ನ್ನು ಮಲಗುವ ವೇಳೆ ಸಂಪೂರ್ಣವಾಗಿ ದೇಹಕ್ಕೆ ಹೊದ್ದಿಕೊಳ್ಳಬಹುದು ಅಥವಾ ಕುಳಿತಿರುವ ವೇಳೆ ಭುಜಕ್ಕೆ ಹಾಕಿಕೊಳ್ಳಬಹುದು.
ಭಾರದ ಬ್ಲಾಂಕೆಟ್ ಗಳಲ್ಲಿ ಇರುವ ಕೆಲವೊಂದು ಅಪಾಯಗಳು
ಭಾರವಾದ ಬ್ಲಾಂಕೆಟ್ ಗಳು ಉಪಯೋಗಕ್ಕೆ ಬಂದ ದಿನದಿಂದಲೇ ಹಲವಾರು ರೀತಿಯ ಪ್ರಶ್ನೆಗಳು ಇದರ ಸುರಕ್ಷತೆಯ ಬಗ್ಗೆ ಕಾಡುತ್ತಲೇ ಇದೆ. ಕೆಲವೊಂದು ಅಧ್ಯಯನಗಳು ಹೇಳಿರುವ ಪ್ರಕಾರ ಭಾರದ ಬ್ಲಾಂಕೆಟ್ ಗಳನ್ನು ಅತಿಯಾಗಿ ಬಳಸಿಕೊಂಡರೆ ಆಗ ಅದು ಮಕ್ಕಳಿಗೆ ತುಂಬಾ ಅಪಾಯವನ್ನು ಉಂಟು ಮಾಡಲಿದೆ. ಇದರಿಂದಾಗಿ ಭಾರದ ಬ್ಲಾಂಕೆಟ್ ಗಳನ್ನು ಮಕ್ಕಳು ಯಾವಾಗಲೂ ದೊಡ್ಡವರ ಉಪಸ್ಥಿತಿಯಲ್ಲೇ ಬಳಸಿಕೊಳ್ಳಬೇಕು ಮತ್ತು ಇದಕ್ಕೆ ಮೊದಲು ವೈದ್ಯರಿಂದ ಸರಿಯಾದ ಸಲಹೆ ಪಡೆದುಕೊಳ್ಳಬೇಕು.
ಈ ಪರಿಸ್ಥಿತಿಯಲ್ಲಿ ಭಾರದ ಬ್ಲಾಂಕೆಟ್ ಗಳನ್ನು ಬಳಸಿಕೊಳ್ಳಬಹುದಾಗಿದೆ.
•ಮಧುಮೇಹದ ಸಮಸ್ಯೆಯಿದ್ದರೆ...
•ಉಸಿರಾಟದ ಸಮಸ್ಯೆಯಿದ್ದರೆ(ಅಸ್ತಮಾ ಮತ್ತು ನಿದ್ರೆಯ ತೊಂದರೆ)
•ಕ್ಲಾಸ್ಟ್ರೋಫೋಬಿಯಾ ದಿಂದ ಬಳಲುತ್ತಿದ್ದರೆ.
•ಕ್ಲೆಥ್ರೋಫೋಬಿಯಾ ದಿಂದ ಬಳಲುತ್ತಿದ್ದರೆ.
•ರಕ್ತದೊತ್ತಡ ಅಥವಾ ರಕ್ತ ಸಂಚಾರದ ಸಮಸ್ಯೆಯಿದ್ದರೆ.
•ದದ್ದು ಅಥವಾ ಗಾಯವಿರುವ ವೇಳೆ
ನೀವು ಭಾರದ ಬ್ಲಾಂಕೆಟ್ ಬಳಸುವ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳುವುದು ಅತೀ ಅಗತ್ಯವಾಗಿದೆ. ಕೆಲವೊಂದು ವೈದ್ಯಕೀಯ ಸಮಸ್ಯೆಗಳಿಗೆ ಇದನ್ನು ಬಳಸಿಕೊಳ್ಳಲಾಗುತ್ತದೆ. ಸರಿಯಾದ ಗಾತ್ರ ಮತ್ತು ಭಾರದ ಬ್ಲಾಂಕೆಟ್ ಗಳನ್ನು ಆಯ್ಕೆ ಮಾಡಿಕೊಳ್ಳಿ. ಯಾವುದೇ ವೈದ್ಯಕೀಯ ಪರಿಸ್ಥಿತಿಗೆ ನೀವು ಭಾರದ ಬ್ಲಾಂಕೆಟ್ ಬಳಸಿಕೊಳ್ಳುತ್ತಲಿದ್ದರೆ ಆಗ ನೀವು ಎಷ್ಟು ಸಮಯದ ತನಕ ಇದನ್ನು ಬಳಸಬಹುದು ಎಂದು ವೈದ್ಯರಿಂದ ಸಲಹೆ ಪಡೆಯಿತು. ಗರ್ಭಿಣಿ ಹಾಗೂ ಬಾಣಂತಿಯರು ಇದನ್ನು ಬಳಸುವ ಮೊದಲು ಸಲಹೆ ಪಡೆಯಿರಿ. ಮಕ್ಕಳಿಗೆ ಇದನ್ನು ಬಳಸುವ ಮೊದಲು ಮಕ್ಕಳ ತಜ್ಞರ ಸಲಹೆ ಖಂಡಿತವಾಗಿಯೂ ಪಡೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


