ಮುಟ್ಟಿನ ಅವಧಿಯಲ್ಲಿ ಚೆನ್ನಾಗಿ ನಿದ್ರೆ ಮಾಡಬೇಕೇ? ಹಾಗಾದರೆ ಹೀಗೆ ಮಾಡಿ

ಋತುಚಕ್ರವೆನ್ನುವುದು ಮಹಿಳೆಯರಲ್ಲಿ ಕಂಡುಬರುವಂತಹ ಪ್ರಕೃತಿ ಸಹಜ ಕ್ರಿಯೆ ಆಗಿದೆ. ಋತುಚಕ್ರದ ಸಂದರ್ಭದಲ್ಲಿ ಮಹಿಳೆಯ ದೇಹದಿಂದ ರಕ್ತವು ಹೊರಗೆ ಹೋಗುವುದು. ಋತುಚಕ್ರದ ವೇಳೆ ಹೆಚ್ಚಾಗಿ ಮಹಿಳೆಯರಿಗೆ ಹಲವಾರು ರೀತಿಯ ಸಮಸ್ಯೆಗಳು ಕಾಡುವುದು. ತಲೆನೋವು, ಸೆಳೆತ, ಸ್ತನಗಳ ನೋವು, ಅತಿಯಾದ ರಕ್ತಸ್ರಾವ ಹೀಗೆ ಇನ್ನು ಹಲವಾರು.

ಈ ಸಮಸ್ಯೆಗಳು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುವುದು. ಇದರಿಂದಾಗಿಯೇ ಋತುಚಕ್ರ ಎನ್ನುವುದು ತುಂಬಾ ನೋವಿನ ವಿಚಾರವಾಗಿದೆ. ಋತುಚಕ್ರದ ಐದು ದಿನಗಳಲ್ಲಿ ಸರಿಯಾಗಿ ನಿದ್ರೆ ಕೂಡ ಬರುವುದಿಲ್ಲ. ಹೀಗಾಗಿ ನಿದ್ರಾಹೀನತೆಯು ಕಾಡುವುದು ಮತ್ತು ಕಣ್ಣುಗಳ ಕೆಳಗಡೆ ಕಪ್ಪು ಕಲೆಗಳು ಮೂಡುವುದು. ಶೇ.30ರಷ್ಟು ಅಮೆರಿಕಾದ ಮಹಿಳೆಯರು ಪ್ರತೀ ತಿಂಗಳು ಋತುಚಕ್ರದ ವೇಳೆ ನಿದ್ರಾಹೀನತೆಗೆ ಒಳಗಾಗುವರು ಎಂದು ಅಧ್ಯಯನಗಳು ಹೇಳಿವೆ. ಈ ಲೇಖನದಲ್ಲಿ ಋತುಚಕ್ರದ ವೇಳೆ ಕಂಡುಬರುವಂತಹ ಕೆಲವೊಂದು ಸಮಸ್ಯೆಗಳ ನಿವಾರಣೆ ಮಾಡುವುದು ಹೇಗೆ ಮತ್ತು ಸರಿಯಾಗಿ ನಿದ್ರೆ ಮಾಡಲು ವಿಧಾನಗಳನ್ನು ಸೂಚಿಸಲಾಗಿದೆ.

ಋತುಚಕ್ರದ ವೇಳೆ ನಿಮ್ಮ ದೇಹಕ್ಕೆ ಏನಾಗುವುದು?

ಋತುಚಕ್ರದ ವೇಳೆ ನಿಮ್ಮ ದೇಹಕ್ಕೆ ಏನಾಗುವುದು?

25-35 ದಿನಗಳಲ್ಲಿ ಪ್ರತೀ ಸಲ ಋತುಚಕ್ರವು ಸಂಭವಿಸುವುದು. ಅದೇ ಆರೋಗ್ಯವಂತ ಮಹಿಳೆಗೆ ಪ್ರತೀ 28 ದಿನಕ್ಕೆ ಸರಿಯಾಗಿ ಋತುಚಕ್ರವು ಬರುವುದು. ಇದನ್ನು ನಾವು ಋತುಚಕ್ರದ ಆವರ್ತನ ಎಂದು ಹೇಳಬಹುದು. ಪ್ರಮುಖ ನಾಲ್ಕು ಹಾರ್ಮೋನುಗಳಲ್ಲಿ ಆಗುವಂತಹ ವ್ಯತ್ಯಾಸದಿಂದಾಗಿ ಋತುಚಕ್ರದ ಆವರ್ತನದಲ್ಲಿ ಬದಲಾವಣೆ ಮತ್ತು ಮಹಿಳೆಯು ಕೆಲವೊಂದು ಸಮಸ್ಯೆಗಳನ್ನು ಈ ಸಮಯದಲ್ಲಿ ಎದುರಿಸಬೇಕಾಗುತ್ತದೆ. ಈ ಆವರ್ತನವು ಋತುಚಕ್ರದ ಮೊದಲ ದಿನದಿಂದಲೇ ಆರಂಭವಾಗುವುದು. ಈ ವೇಳೆ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟರಾನ್ ಮಟ್ಟವು ತುಂಬಾ ಕಡಿಮೆ ಇರುವುದು. ಫಾಲಿಕ್ಯುಲರ್ ಹಂತ(2-13ನೇ ದಿನ) ಈಸ್ಟ್ರೋಜನ್ ಏರಿಕೆ ಆಗುವುದು ಮತ್ತು ಇದರಿಂದ ಅಂಡೋತ್ಪತ್ತಿಯು ಆಗುವುದು (14ನೇ ದಿನ). ಅಂಡೋತ್ಪತ್ತಿಯ ಬಳಿಕದ ಹಂತ ಲೂಟಿಯಲ್ ಹಂತ(15-28 ದಿನ)ದ ವೇಳೆಯಲ್ಲಿ ಪ್ರೊಜೆಸ್ಟರಾನ್ ಮಟ್ಟವು ಹೆಚ್ಚಾಗುವುದು. ಇದರಿಂದ ಹಾರ್ಮೋನು ಮಟ್ಟವು ಕಡಿಮೆಯಾಗುವುದು ಮತ್ತು ಮತ್ತೆ ಋತುಚಕ್ರದ ಹೊಸ ಆವರ್ತನಕ್ಕೆ ಇದು ತಯಾರಾಗುವುದು.

ಬಳಲಿಕೆ ಉಂಟಾಗುವುದು ಯಾಕೆ?

ಬಳಲಿಕೆ ಉಂಟಾಗುವುದು ಯಾಕೆ?

ಪ್ರೊಜೆಸ್ಟರಾನ್ ನಿಂದಾಗಿ ದೇಹದಲ್ಲಿ ತಾಪಮಾನ ಮಟ್ಟ ಮತ್ತು ನಿಶ್ಯಕ್ತಿಯು ಹೆಚ್ಚಾಗುವುದು. ಇದು ಋತುಚಕ್ರಕ್ಕೆ ಮೊದಲು ಕಂಡುಬರುವಂತಹ ತುಂಬಾ ಸಾಮಾನ್ಯ ವಾಗಿರುವಂತಹ ಸಮಸ್ಯೆ ಆಗಿದೆ. ಇದರಿಂದಾಗಿ ನೀವು ತುಂಬಾ ಆಯಾಸಗೊಳ್ಳುವಿರಿ ಮತ್ತು ಋತುಚಕ್ರಕ್ಕೆ ಮೊದಲಿನ ಕೆಲವು ದಿನಗಳ ವೇಳೆ ನಿಮಗೆ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗದು. ದೇಹದಲ್ಲಿನ ತಾಪಮಾನವು ಕಡಿಮೆ ಆದರೆ ಆಗ ಇದು ನಿದ್ರಿಸಲು ನೀಡುವಂತಹ ಸೂಚನೆ ಯಾಗಿರುವುದು. ಹಾರ್ಮೋನುಗಳು ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನವನ್ನು ದೇಹದಲ್ಲಿ ಉಂಟು ಮಾಡಿದರೆ ಆಗ ನೈಸರ್ಗಿಕವಾಗಿ ಮಲಗುವುದು ತುಂಬಾ ಕಷ್ಟವಾಗುವುದು.

ನಿದ್ರೆ ಮಾಡಲು ತುಂಬಾ ಕಷ್ಟವಾಗುವುದು!

ನಿದ್ರೆ ಮಾಡಲು ತುಂಬಾ ಕಷ್ಟವಾಗುವುದು!

ಋತುಚಕ್ರಕ್ಕೆ ಮೊದಲಿನ ಕೆಲವು ದಿನಗಳಲ್ಲಿ ಮಹಿಳೆಯರಿಗೆ ನಿದ್ರೆ ಮಾಡಲು ತುಂಬಾ ಕಷ್ಟವಾಗುವುದು ಮತ್ತು ಋತುಚಕ್ರದ ಮೊದಲಿನ ಕೆಲವು ದಿನಗಳಲ್ಲಿ ಕೂಡ. ತುಂಬಾ ಆಸಕ್ತಿದಾಯಕ ವಿಚಾರವೆಂದರೆ ಪ್ರಯೋಗಾಯಲಗಳು ಕಂಡುಕೊಂಡಿರುವಂತಹ ವಿಚಾರದ ಪ್ರಕಾರ ಋತುಚಕ್ರದ ಆವರ್ತನದ ವೇಳೆ

ನಿದ್ರೆಯ ಸಂಯೋಜನೆಯು ಸ್ಥಿರವಾಗಿರುವುದು. ಅದಾಗ್ಯೂ, ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವಂತಹ ಮಹಿಳೆಯರು ಗಾಢನಿದ್ರೆ ಬರುವುದು ಕಡಿಮೆ. ಋತುಚಕ್ರದ ವೇಳೆ ಕಾಣಿಸಿ ಕೊಳ್ಳುವಂತಹ ಹಾರ್ಮೋನುಗಳಿಗಿಂತ ಕೃತಕ ಹಾರ್ಮೋನುಗಳು ನಿದ್ರೆಯ ಮೇಲೆ ತುಂಬಾ ಪ್ರಭಾವ ಬೀರುವುದು. ಗರ್ಭ ನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವಂತಹ ಮಹಿಳೆಯರು ಬೇರೆ ಮಹಿಳೆಯರಷ್ಟು ನಿದ್ರೆಯ ಸಮಸ್ಯೆಗೆ ಒಳಗಾಗಿರುವುದು ಕಾಣಿಸುತ್ತಿಲ್ಲ.

ಪಿಎಂಎಸ್, ಪಿಎಂಡಿಡಿ ಮತ್ತು ನಿದ್ರೆ

ಪಿಎಂಎಸ್, ಪಿಎಂಡಿಡಿ ಮತ್ತು ನಿದ್ರೆ

ಶೇ.80ರಷ್ಟು ಮಹಿಳೆಯರಲ್ಲಿ ಋತುಚಕ್ರಕ್ಕೆ ಮೊದಲಿನ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳುವುದು ಎಂದು ಹೇಳಲಾಗುತ್ತದೆ.(ಎಲ್ಲವೂ ನಿದ್ರೆಯ ಮೇಲೆ ಪ್ರಭಾವ ಬೀರಿಲ್ಲ). ಶೇ. 3-8ರಷ್ಟು ಆರೋಗ್ಯವಂತ ಮಹಿಳೆಯರು ತುಂಬಾ ತೀವ್ರ ವಾಗಿರುವಂತಹ ಸಮಸ್ಯೆಯಾಗಿರುವ ಋತುಚಕ್ರ ಪೂರ್ವ ಇರುಸುಮುರುಸಿನ ಅಸ್ವಸ್ಥತೆ (ಪಿಎಂಡಿಡಿ)ಗೆ ಒಳಗಾಗುವರು. ಇದರ ಕೆಲವೊಂದು ಲಕ್ಷಣಗಳು ಏನೆಂದರೆ ಅದು ನಿದ್ರೆಗೆ ಭಂಗ ವಾಗುವುದು, ಅತಿ ನಿದ್ರೆ ಅಥವಾ ನಿದ್ರಾಹೀನತೆ. ರಾತ್ರಿ ವೇಳೆ ದೇಹದ ತಾಪಮಾನವು ಅಧಿಕವಾಗುವುದು, ಅದೇ ರೀತಿಯಾಗಿ ಚಳಿ ಮತ್ತು ಬೆವರು ಬರುವುದು. ಇಂತಹ ಸಮಸ್ಯೆಗಳು ಕೂಡ ಪಿಎಂಎಸ್ ಅಥವಾ ಪಿಎಂಡಿಡಿ ತೀವ್ರವಾಗಿ ಇರುವಂತಹ ಮಹಿಳೆಯರಲ್ಲಿ ಕಂಡುಬಂದಿದೆ. ಇದೆಲ್ಲಾ ಸಮಸ್ಯೆಗಳು ರಾತ್ರಿ ವೇಳೆ ಸರಿಯಾಗಿ ನಿದ್ರೆ ಮಾಡಲು ತುಂಬಾ ಸಮಸ್ಯೆಯನ್ನು ಉಂಟು ಮಾಡಲಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಲಕ್ಷಣಗಳನ್ನು ನಿರ್ವಹಿಸಲು ಕೆಲವು ಸಲಹೆಗಳು

ಲಕ್ಷಣಗಳನ್ನು ನಿರ್ವಹಿಸಲು ಕೆಲವು ಸಲಹೆಗಳು

ಮಧ್ಯಮದಿಂದ ತೀವ್ರ ರೀತಿಯ ಋತುಚಕ್ರದ ಸಮಸ್ಯೆಗಳನ್ನು ಎದುರಿಸುವಂತಹ ಮಹಿಳೆಯರಿಗೆ ಇಲ್ಲಿ ಪರಿಹಾರವನ್ನು ಕಂಡು ಹಿಡಿಯಲಾಗಿದೆ. ಋತುಚಕ್ರದ ವೇಳೆ ಉಂಟಾಗುವಂತಹ ಕೆಲವೊಂದು ಸಮಸ್ಯೆಗಳ ನಿರ್ವಹಣೆ ಮಾಡಲು ಇಲ್ಲಿ ಕೆಲವೊಂದು ಸಲಹೆಗಳನ್ನು ನೀಡಲಾಗಿದೆ.

 ಯೋಗ

ಯೋಗ

ಋತುಚಕ್ರದ ವೇಳೆ ಕಂಡುಬರುವಂತಹ ಸ್ನಾಯುಸೆಳೆತದ ನೋವಿಗೆ ಯೋಗದಿಂದ ಮುಕ್ತಿ ನೀಡಬಹುದು ಎಂದು ಅಧ್ಯಯನಗಳು ಹೇಳಿವೆ. ಮಲಗುವ ಮೊದಲು ಕೆಲವೊಂದು ಸಣ್ಣ ಮಟ್ಟದ ಯೋಗ ಮಾಡುವುದರಿಂದ ದೇಹಕ್ಕೆ ಆರಾಮದ ನಿದ್ರೆ ಸಿಗುವುದು ಎಂದು ಹೇಳಲಾಗುತ್ತದೆ.

ಬಿಸಿ ಚಿಕಿತ್ಸೆ

ಬಿಸಿ ಚಿಕಿತ್ಸೆ

ನಿಮಗೆ ಸೆಳೆತ ಅಥವಾ ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತಾ ಇದ್ದರೆ ಆಗ ನೀವು ಬಿಸಿ ನೀರಿನ ಬಾಟಲಿಯಿಂದ ಮಸಾಜ್ ಮಾಡಿಕೊಂಡು ಸ್ವಲ್ಪ ಮಟ್ಟಿನ ಆರಾಮ ಪಡೆಯಿರಿ.

ಭ್ರೂಣದ ಭಂಗಿಯಲ್ಲಿ ಮಲಗಿ

ಭ್ರೂಣದ ಭಂಗಿಯಲ್ಲಿ ಮಲಗಿ

ನೀವು ಬೆನ್ನು ಅಥವಾ ಹೊಟ್ಟೆಯ ಮೇಲೆ ಮಲಗುತ್ತಿದ್ದರೆ ಆಗ ನೀವು ಭ್ರೂಣದ ರೀತಿಯಲ್ಲಿ ಮಲಗಿ. ನೀವು ಎರಡು ಕೈಗಳನ್ನು ಕಾಲುಗಳ ನಡುವೆ ಇಟ್ಟುಕೊಂಡು ಅಡ್ಡ ಮಲಗಿ. ಈ ರೀತಿ ಮಲಗುವುದರಿಂದ ಹೊಟ್ಟೆಯ ಸ್ನಾಯುಗಳ ಮೇಲಿನ ಒತ್ತಡ ಕಡಿಮೆ ಆಗುವುದು ಮತ್ತು ಸ್ನಾಯು ಸೆಳೆತದಿಂದಾಗಿ ಆಗುವಂತಹ ಒತ್ತಡದಿಂದ ಆರಾಮ ನೀಡುವುದು.

ಮಲಗುವ ಕೋಣೆಯು ತಂಪಾಗಿರಲಿ

ಮಲಗುವ ಕೋಣೆಯು ತಂಪಾಗಿರಲಿ

ಋತುಚಕ್ರದ ಸಮಯದಲ್ಲಿ ಕೆಲವು ಹಾರ್ಮೋನುಗಳಿಂದಾಗಿ ದೇಹದಲ್ಲಿನ ತಾಪಮಾನವು ಹೆಚ್ಚಾಗುತ್ತಾ ಹೋಗುವುದು. ಇದರಿಂದ ನಿದ್ರೆ ಮಾಡಲು ನಿಮಗೆ ತುಂಬಾ ಕಷ್ಟವಾಗಬಹುದು. ಇದರಿಂದಾಗಿ ನೀವು ಮಲಗುವ ಕೋಣೆಯ ತಾಪಮಾನವನ್ನು 60-68 ಡಿಗ್ರಿ ತನಕ ಇಟ್ಟು, ಮಲಗಲು ತಣ್ಣಗಿನ ವಾತಾವರಣ

ನಿರ್ಮಾಣ ಮಾಡಿ.

ಮಲಗುವ ಮೊದಲು ಒತ್ತಡ ನಿವಾರಿಸಿ

ಮಲಗುವ ಮೊದಲು ಒತ್ತಡ ನಿವಾರಿಸಿ

ಋತುಚಕ್ರಕ್ಕೆ ಮೊದಲಿನ ಕೆಲವು ದಿನಗಳಲ್ಲಿ ಮಹಿಳೆಯರಲ್ಲಿ ಮನಸ್ಥಿತಿ ಬದಲಾವಣೆಯು ಕಂಡುಬರುವುದು. ನೀವು ರಾತ್ರಿಯಿಡಿ ಒತ್ತಡದಲ್ಲೇ ಇದ್ದರೆ ಆಗ ನೀವು ತುಂಬಾ ಶಾಂತ ಸಂಗೀತ ಕೇಳಬಹುದು ಅಥವಾ ಬಿಸಿ ನೀರಿನ ಸ್ನಾನ ಮಾಡಬಹುದು ಅಥವಾ ಮಲಗುವ ಮೊದಲು ಆರಾಮ ನೀಡುವಂತಹ ಸ್ನಾನ ಮಾಡ ಬಹುದು.

ಸ್ವಚ್ಛ ನಿದ್ರೆಯ ಪರಿಪಾಠ ಬೆಳೆಸಿಕೊಳ್ಳಿ

ಸ್ವಚ್ಛ ನಿದ್ರೆಯ ಪರಿಪಾಠ ಬೆಳೆಸಿಕೊಳ್ಳಿ

ಋತುಚಕ್ರದ ಸಮಯದಲ್ಲಿ ನಿಮಗೆ ನಿದ್ರಿಸಲು ತುಂಬಾ ಸಮಸ್ಯೆಯಾಗುತ್ತಿದ್ದರೆ ಆಗ ನೀವು ಸ್ವಚ್ಛ ನಿದ್ರೆಯನ್ನು ಅಭ್ಯಾಸ ಮಾಡಿಕೊಂಡರೆ ಅದರಿಂದ ನೆರವು ಸಿಗುವುದು. ನಿದ್ರೆಗೆ ಮೊದಲು ನೀವು ಮೊಬೈಲ್ ಅಥವಾ ಟಿವಿ ನೋಡಬೇಕು, ರಾತ್ರಿ ವೇಳೆ ನೀವು ಸರಿಯಾದ ಕ್ರಮ ಪಾಲಿಸಿ ಮತ್ತು ನಿದ್ರಿಸುವ ಸಮಯವು ಯಾವಾಗಲೂ ಒಂದೇ ಆಗಿರಲಿ.

ನಿದ್ರೆಯ ಡೈರಿ ರೂಪಿಸಿ

ನಿದ್ರೆಯ ಡೈರಿ ರೂಪಿಸಿ

ಋತುಚಕ್ರದ ಸಮಯದಲ್ಲಿ ನಿಮ್ಮ ನಿದ್ರೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುವುದು ಎಂದು ನಿಮಗೆ ದೊಡ್ಡ ಚಿಂತೆಯಾಗುತ್ತಲಿದ್ದರೆ ಆಗ ನೀವು ತಿಂಗಳ ಕಾಲ ಒಂದು ಡೈರಿ ಬರೆದುಕೊಳ್ಳಿ. ಕೆಲವೊಂದು ಲಕ್ಷಣಗಳಿಂದಾಗಿ ನಿಮ್ಮ ಗುಣಮಟ್ಟದ ನಿದ್ರೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎಂದು

ನೀವು ಈ ಡೈರಿ ನೋಡಿಕೊಂಡು ತಿಳಿಯಬಹುದು. ಋತುಚಕ್ರದ ವೇಳೆ ಕಾಣಿಸಿಕೊಳ್ಳುವ ಸಮಸ್ಯೆಯಿಂದಾಗಿ ನಿಮಗೆ ತುಂಬಾ ತೊಂದರೆಯಾಗುತ್ತಲಿದ್ದರೆ ಮತ್ತು ಇದು ನಿಮ್ಮ ಗುಣಮಟ್ಟದ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ ಅವರಿಂದ ಸರಿಯಾದ ಚಿಕಿತ್ಸೆ ಪಡೆದುಕೊಳ್ಳುವುದು ಮುಖ್ಯ.

English summary

Ways to Get Better Sleep While on Your Period

Cramps, headaches, breast tenderness, heavy bleeding; these menstrual symptoms are notorious for preventing a restful night’s sleep. If you’re like 30% of American women who lose quality sleep every month, this article contains tips for managing your symptoms and getting the rest you need.
X
Desktop Bottom Promotion