ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ಜ್ಯೂಸ್ ಕುಡಿಯಬೇಡಿ-ಇದು ಆರೋಗ್ಯಕ್ಕೆ ಸುರಕ್ಷಿತವಲ್ಲ

ಇತ್ತೀಚಿನ ದಿನಗಳಲ್ಲಿ ಪುಕ್ಕಟೆಯಾಗಿ ವೈದ್ಯಕೀಯ ಸಲಹೆ ನೀಡುವ ಜನರು ನಿಮಗೆ ಹೆಜ್ಜೆಗೊಬ್ಬರು ಸಿಗುವರು. ನೀವು ಏನೇ ಸಮಸ್ಯೆ ಹೇಳಿದರೂ ಅವರಲ್ಲಿ ಒಂದು ಪರಿಹಾರ ಇದ್ದೇ ಇರುತ್ತದೆ. ಆದರೆ ಅವರು ತಮ್ಮನ್ನು ತಾವು ವೈದ್ಯರಿಗಿಂತಲೂ ಮೇಲು ಎಂದು ಭಾವಿಸಿರುವರು. ಇಂತಹ ಜನರಿಂದಾಗಿ ಹಲವಾರು ಮಂದಿ ಆರೋಗ್ಯವನ್ನು ಮತ್ತಷ್ಟು ಕೆಡಿಸಿಕೊಂಡಿದ್ದಾರೆ. ಮಧುಮೇಹಿಯಾಗಿರುವ ನನ್ನ ತಾಯಿ ಇತ್ತೀಚೆಗೆ ನೆರೆಮನೆಯವರ ಮಾತನ್ನು ಕೇಳಿ ಪ್ರತೀ ದಿನ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಹಾಗಲಕಾಯಿ ಜ್ಯೂಸ್ ಕುಡಿಯಲು ಆರಂಭಿಸಿದರು.

karela juice

ಮಧುಮೇಹವನ್ನು ಇದು ನಿವಾರಣೆ ಮಾಡುತ್ತದೆ ಎಂದು ನೆರೆಮನೆಯವರು ಆಕೆಗೆ ಹೇಳಿದ್ದರು. ಆದರೆ ಕೆಲವು ದಿನಗಳು ಕಳೆಯುತ್ತಿರುವಂತಹ ಆಕೆಗೆ ಹೊಟ್ಟೆಯಲ್ಲಿ ನೋವು ಮತ್ತು ಅಸಿಡಿಟಿಯಂತಹ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭವಾದವು. ಹಾಗಲಕಾಯಿಯು ಇದಕ್ಕೆ ಮುಖ್ಯ ಕಾರಣವಾಗಿರಬಹುದು ಎಂದು ನಾವು ತಿಳಿದುಕೊಂಡೆವು. ಹಾಗಲಕಾಯಿ ಜ್ಯೂಸ್ ಕುಡಿಯುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ನಾವು ಆಕೆಗೆ ತಿಳಿಸಿದೆವು.

ಅತಿಯಾದರೆ ಅಮೃತವು ವಿಷವಾಗಬಹುದು!!

ಅತಿಯಾದರೆ ಅಮೃತವು ವಿಷವಾಗಬಹುದು!!

ಇತ್ತೀಚಿನ ವರ್ಷಗಳಲ್ಲಿ ಹಾಗಲಕಾಯಿಗೆ ಒಂದು ಅದ್ಭುತವಾಗಿರುವ ಪ್ರಚಾರವು ಸಿಕ್ಕಿದೆ. ಇದನ್ನು ಮಧುಮೇಹ ಮತ್ತು ತೂಕ ಇಳಿಸಿಕೊಳ್ಳಲು ತುಂಬಾ ಸಹಕಾರಿ ಎಂದು ಜನರು ಹೇಳುವರು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಜನರು ದಿನಾ ಬೆಳಗ್ಗೆ ಎದ್ದು ಲೀಟರ್ ಗಟ್ಟಲೆ ಹಾಗಲಕಾಯಿ ಜ್ಯೂಸ್ ಕುಡಿಯುವರು. ಹಾಗಲಕಾಯಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು ಎನ್ನುವುದು ನಿಜವಾಗಿದ್ದರೂ, ಅತಿಯಾದರೆ ಅಮೃತವು ವಿಷ ಎನ್ನುವಂತೆ ಇದು ಕೂಡ ಹಾಗೆ ಅತಿಯಾದರೆ ದೇಹಕ್ಕೆ ಒಳ್ಳೆಯದಲ್ಲ. ಹಾಗಲಕಾಯಿಯಲ್ಲಿರುವಂತಹ ಆರೋಗ್ಯ ಲಾಭಗಳ ಬಗ್ಗೆ ನಮಗೆ ಬಾಲ್ಯದಲ್ಲೇ ಹಿರಿಯರು ಹೇಳುತ್ತಾ ಬರುತ್ತಿದ್ದಾರೆ. ಆದರೆ ಇದನ್ನು ನಾವು ತುಂಬಾ ಒತ್ತಾಯಪೂರ್ವಕವಾಗಿಯೇ ತಿನ್ನುತ್ತಿದ್ದೆವು. ಆದರೆ ಹಾಗಲಕಾಯಿ ಅಷ್ಟು ದೊಡ್ಡ ಮಟ್ಟದಲ್ಲಿ ದೇಹಕ್ಕೆ ನೆರವಾಗದು ಎಂದು ನಾನು ತಾಯಿಗೆ ಹೇಳುತ್ತೇನೆ. ಹಾಗಲಕಾಯಿಯನ್ನು ದ್ವೇಷಿಸಲು ನಿಮಗೆ ಇಲ್ಲಿ ಐದು ಕಾರಣಗಳನ್ನು ನೀಡಲಾಗಿದೆ. ಇದನ್ನು ನೀವು ತಿಳಿಯುತ್ತಾ ಮುಂದೆ ಸಾಗಿ...

ಇದು ಮಧುಮೇಹದ ಔಷಧಿಗೆ ವ್ಯತಿರಿಕ್ತವಾಗಬಹುದು

ಇದು ಮಧುಮೇಹದ ಔಷಧಿಗೆ ವ್ಯತಿರಿಕ್ತವಾಗಬಹುದು

ನೀವು ಈಗಾಗಲೇ ಮಧುಮೇಹಕ್ಕಾಗಿ ಔಷಧಿ ಸೇವನೆ ಮಾಡುತ್ತಲಿದ್ದರೆ ಆಗ ನೀವು ಹಾಗಲಕಾಯಿ ಸೇವನೆ ಮಾಡುವುದನ್ನು ಬಿಡಲೇಬೇಕು. ಹಾಗಲಕಾಯಿಯಲ್ಲಿ ಈಗಾಗಲೇ ಮಧುಮೇಹ ವಿರೋಧಿ ಗುಣಗಳು ಇರುವ ಕಾರಣದಿಂದಾಗಿ ನೀವು ಮಧುಮೇಹದ ಔಷಧಿಯ ಜತೆಗೆ ಇದರ ಸೇವನೆ ಮಾಡಿದರೆ ಆಗ ಅದು ತುಂಬಾ ಅಪಾಯಕಾರಿಯಾಗಬಹುದು. ಯಾಕೆಂದರೆ ಇದು ನಿಮ್ಮ ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು ಅತಿಯಾಗಿ ತಗ್ಗಿಸಬಹುದು.

ಅತಿಯಾದರೆ ಹೈಪೊಗ್ಲೈಸೆಮಿಕ್ ಕೋಮಾದ ಪರಿಸ್ಥಿತಿ ಬರಬಹುದು

ಅತಿಯಾದರೆ ಹೈಪೊಗ್ಲೈಸೆಮಿಕ್ ಕೋಮಾದ ಪರಿಸ್ಥಿತಿ ಬರಬಹುದು

ಹೈಪೊಗ್ಲೈಸೆಮಿಕ್ ಕೋಮಾ ಎನ್ನುವುದು ಒಂದು ರೀತಿಯಲ್ಲಿ ಪ್ರಾಣಹಾನಿ ಉಂಟು ಮಾಡುವ ಪರಿಸ್ಥಿತಿಯಾಗಿದೆ. ಈ ಪರಿಸ್ಥಿತಿಯಲ್ಲಿ ವ್ಯಕ್ತಿಯ ರಕ್ತದಲ್ಲಿನ ಸಕ್ಕರೆ ಪ್ರಯಾಣವು ಅತಿಯಾಗಿ ಕುಸಿದು ಆತ ಕೋಮಾ ಸ್ಥಿತಿಗೆ ತಲುಪಬಹುದು. ಹಾಗಲಕಾಯಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಗ್ಗಿಸುವುದು. ಆದರೆ ಸಕ್ಕರೆ ಮಟ್ಟವನ್ನು ಸರಿಯಾಗಿ ಗಮನಿಸದೆ ಇದ್ದರೆ ಆಗ ಅದು ತುಂಬಾ ಕೆಳಹಂತಕ್ಕೆ ತಲುಪಿ, ಆ ವ್ಯಕ್ತಿಯು ಕೋಮಾ ಸ್ಥಿತಿ ತಲುಪಬಹುದು. ಹಾಗಲಕಾಯಿ ಚಾ ಕುಡಿದ ಬಳಿಕ ಮಕ್ಕಳು ಸೆಳೆತ ಮತ್ತು ಹೈಪೊಗ್ಲೈಸೆಮಿಕ್ ಕೋಮಾಗೆ ತಲುಪಿರುವ ಉದಾಹರಣೆಗಳು ಇವೆ.

MOst Read:ಕಲ್ಲಂಗಡಿ ಹಣ್ಣಿನಿಂದ ತೂಕ ಇಳಿಸಿಕೊಳ್ಳಲು ಟಿಪ್ಸ್- ಆದರೆ ಹಿತಮಿತವಾಗಿ ಸೇವಿಸಿ

ಹೃದಯ ಬಡಿತವನ್ನು ಅಸಾಮಾನ್ಯಗೊಳಿಸಬಹುದು

ಹೃದಯ ಬಡಿತವನ್ನು ಅಸಾಮಾನ್ಯಗೊಳಿಸಬಹುದು

ಹೃದಯ ಬಡಿತವು ಅಸಾಮಾನ್ಯವಾದ ವೇಳೆ ಉಂಟಾಗುವಂತಹ ಪರಿಸ್ಥಿತಿಯನ್ನು ಹೃತ್ಕರ್ಣದ ಕಂಪನ ಎಂದು ಕರೆಯಲಾಗುತ್ತದೆ. ಇದು ಯಾವುದೇ ಹಾನಿಯುಂಟು ಮಾಡುವುದಿಲ್ಲವೆಂದು ನಾವು ಭಾವಿಸಬಹುದು. ಆದರೆ ಅಸಾಮಾನ್ಯ ಹೃದಯಬಡಿತದಿಂದಾಗಿ ಹೃದಯಾಘಾತ, ಪಾರ್ಶ್ವವಾಯು ಮತ್ತು ಬುದ್ಧಿ ಮಾಂದ್ಯತೆ ಉಂಟಾಗಬಹುದು. ಅಧ್ಯಯದನ ಪ್ರಕಾರ 22 ವರ್ಷದ ಯುವಕನೊಬ್ಬ ಪ್ರತಿನಿತ್ಯ ಹಾಗಲಕಾಯಿ ಜ್ಯೂಸ್ ಕುಡಿದ ಬಳಿಕ ಆತನಿಗೆ ಹೃತ್ಕರ್ಣದ ಕಂಪನ ಉಂಟಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ಪರಿಸ್ಥಿತಿಯು ಹಾಗಲಕಾಯಿ ಜ್ಯೂಸ್ ಕುಡಿಯುವುದರಿಂದ ಬಂದಿದೆ. ಆತನಿಗೆ ಬೇರೆ ಯಾವುದೇ ಅನಾರೋಗ್ಯ ಇರದೇ ಇದ್ದ ಕಾರಣದಿಂದಾಗಿ ಹೀಗೆ ಆಗಿದೆ ಎಂದು ವೈದ್ಯರು ಸೂಚಿಸಿದ್ದಾರೆ.

ಗರ್ಭಪಾತವಾಗಬಹುದು

ಗರ್ಭಪಾತವಾಗಬಹುದು

ಹಾಗಲಕಾಯಿಯನ್ನು ಗರ್ಭಿಣಿ ಮಹಿಳೆಯರು ಅತಿಯಾಗಿ ಸೇವನೆ ಮಾಡುವ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಹಾಗಲಕಾಯಿಯಲ್ಲಿ ಗರ್ಭಪಾತ ಆಗುವಂತಹ ಕೆಲವೊಂದು ಅಂಶಗಳು ಇವೆ. 2010ರಲ್ಲಿ ನಡೆಸಿರುವಂತಹ ಅಧ್ಯಯನದಲ್ಲಿ ಗರ್ಭ ಧರಿಸಿದ ಇಲಿಗಳಿಗೆ ಹಾಗಲಕಾಯಿ ನೀರನ್ನು ನೀಡಲಾಯಿತು. ಇದರಿಂದ ಇಲಿಗಳಲ್ಲಿ ಗರ್ಭಪಾತ ಆಗಿರುವುದು ಕಂಡುಬಂದಿದೆ. ಹೀಗಾಗಿ ಗರ್ಭಿಣಿಯರು ಹಾಗಲಕಾಯಿ ಸೇವನೆ ಮಾಡಬಾರದು ಎಂದು ಅಧ್ಯಯನಗಳು ಹೇಳಿವೆ.

2010ರಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ ಹಾಗಲಕಾಯಿಯ ನೀರನ್ನು ಪ್ರಯೋಗಾಲಯದಲ್ಲಿ ಗರ್ಭಿಣಿ ಇಲಿಗಳಿಗೆ ನೀಡಲಾಯಿತು. ಈ ಇಲಿಗಳಲ್ಲಿ ಗರ್ಭಪಾತವಾಗಿದೆ ಎಂದು ಅಧ್ಯಯನಗಳು ಕಂಡುಕೊಂಡಿದೆ.ಹಾಗಲಕಾಯಿ ಸೇವಿಸುವ ವೇಳೆ ಗರ್ಭಿಣಿ ಮಹಿಳೆಯರು ಎಚ್ಚರಿಕೆ ವಹಿಸಬೇಕು ಎಂದು ಅಧ್ಯಯನಗಳು ಹೇಳಿವೆ.

ಹೊಟ್ಟೆಯಲ್ಲಿ ತಳಮಳ

ಹೊಟ್ಟೆಯಲ್ಲಿ ತಳಮಳ

ಹಾಗಲಕಾಯಿ ಸೇವನೆಯಿಂದ ಆಗುವಂತಹ ಮತ್ತೊಂದು ವ್ಯತಿರಿಕ್ತ ಪರಿಣಾಮವೆಂದರೆ ಅದು ಹೊಟ್ಟೆಯ ಸಮಸ್ಯೆಗಳು. ಮಧ್ಯಮ ಭೇದಿ ಮತ್ತು ಹೊಟ್ಟೆಯ ನೋವು ಇದರಲ್ಲಿ ಮುಖ್ಯವಾಗಿರುವುದು. ಹಾಗಲಕಾಯಿ ಸೇವನೆ ಮಾಡುವುದನ್ನು ನಿಲ್ಲಿಸುವ ಮೂಲಕವಾಗಿ ಈ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಿಕೊಳ್ಳಬಹುದು. ಹಾಗಲಕಾಯಿ ಜ್ಯೂಸ್ ಸೇವನೆ ಮಾಡುತ್ತಿರುವ ವೇಳೆ ರಕ್ತದಲ್ಲಿನ ಸಕ್ಕರೆ ಮಟ್ಟದ ಬಗ್ಗೆ ನಿಗಾ ವಹಿಸುವುದು ಅತೀ ಅಗತ್ಯವಾಗಿರುವುದು. ನೀವು ಹಾಗಲಕಾಯಿ ಜ್ಯೂಸ್ ಸೇವನೆ ಮುಂದುವರಿಸುವಿರಾದರೆ ಆಗ ಇದರ ಬಗ್ಗೆ ವೈದ್ಯರಿಗೆ ತಿಳಿಸಿ.

ಅನಿಯಮಿತ ಹೃದಯಬಡಿತ

ಅನಿಯಮಿತ ಹೃದಯಬಡಿತ

ಹೃದಯವು ಅಸಾಮಾನ್ಯವಾಗಿ ಬಡಿಯಲು ಆರಂಭಿಸಿದಾಗ ಉಂಟಾಗುವ ಪರಿಸ್ಥಿತಿಯನ್ನು ಹೃತ್ಕರ್ಣದ ಕಂಪನ ಎಂದು ಕರೆಯಲಾಗುತ್ತದೆ. ಇದರಿಂದ ಅಪಾಯವಿಲ್ಲವೆಂದು ನಾವು ಭಾವಿಸುತ್ತೇವೆ. ಆದರೆ ಪದೇ ಪದೇ ಹೀಗೆ ಆಗುವುದರಿಂದ ಹೃದಯ ವೈಫಲ್ಯ, ಬುದ್ಧಿಮಾಂದ್ಯತೆ ಮತ್ತು ಪಾರ್ಶ್ವವಾಯು ಉಂಟಾಗಬಹುದು. ಹಾಗಲಕಾಯಿ ಜ್ಯೂಸ್ ನ್ನು ಪ್ರತಿನಿತ್ಯ ಸೇವಿಸಿದ 22ರ ಹರೆಯದ ವ್ಯಕ್ತಿಯೊಬ್ಬನಿಗೆ ನಾಡಿಮಿಡಿತದಲ್ಲಿ ಸಮಸ್ಯೆಯಾದ ಕಾರಣ ಆತ ಆಸ್ಪತ್ರೆಗೆ ದಾಖಲಾದ ಬಗ್ಗೆ ವರದಿಯಾಗಿದೆ. ಆತನಿಗೆ ಬೇರೆ ಯಾವುದೇ ಸಮಸ್ಯೆಯಿಲ್ಲದ ಕಾರಣ ಆತ ಹಾಗಲಕಾಯಿ ಜ್ಯೂಸ್ ಕುಡಿದ ಕಾರಣದಿಂದ ಹೀಗೆ ಆಗಿದೆ ಎಂದು ವೈದ್ಯರು ಕಂಡುಕೊಂಡಿದ್ದಾರೆ.

ಹೊಟ್ಟೆಯ ಸಮಸ್ಯೆ ಕೂಡ ಬರಬಹುದು

ಹೊಟ್ಟೆಯ ಸಮಸ್ಯೆ ಕೂಡ ಬರಬಹುದು

ಹಾಗಲಕಾಯಿಯನ್ನು ಅತಿಯಾಗಿ ಸೇವಿಸುವುದರಿಂದ ಅದು ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅಧ್ಯಯನಗಳು ಹೇಳಿವೆ. ಸಣ್ಣ ಮಟ್ಟದ ಭೇದಿ ಮತ್ತು ಹೊಟ್ಟೆನೋವು ಇದರ ಅಡ್ಡಪರಿಣಾಮಗಳು ಆಗಿರಬಹುದು. ಹಾಗಲಕಾಯಿಯ ಸೇವನೆ ನಿಲ್ಲಿಸಿದರೆ ಈ ಎರಡು ಸಮಸ್ಯೆಗಳು ಕಡಿಮೆಯಾಗಬಹುದು.

ಗರ್ಭಿಣಿಯರಿಗೆ ಸ್ನಾಯುಗಳು ದುರ್ಬಲವಾಗುವಿಕೆ

ಗರ್ಭಿಣಿಯರಿಗೆ ಸ್ನಾಯುಗಳು ದುರ್ಬಲವಾಗುವಿಕೆ

ನೋವುಗಳು ಮತ್ತು ಸೆಳೆತಗಳು ಗರ್ಭಿಣಿಯರನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತವೆ. ಹಾಗಲಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಸ್ನಾಯುಗಳು ದುರ್ಬಲವಾಗುತ್ತವೆ ಮತ್ತು ಸೆಳೆತಗಳು ಅಧಿಕಗೊಳ್ಳುತ್ತವೆ. ಒಂದು ವೇಳೆ ನೀವು ಇದುವರೆಗೂ ಹಾಗಲಕಾಯಿಯನ್ನು ಸೇವಿಸದೆ ಇದ್ದ ಪಕ್ಷದಲ್ಲಿ, ನಿಮ್ಮ ಪ್ರಸೂತಿ ತಜ್ಞರನ್ನು ಕೇಳಿ ಇದನ್ನು ಸೇವಿಸುವುದು ಉತ್ತಮ. ಅದಕ್ಕಿಂತ ಮುಖ್ಯವಾಗಿ ನೀವು ಗರ್ಭಿಣಿಯಾದ ಕೂಡಲೆ, ಯಾವುದನ್ನು ಸೇವಿಸಬೇಕು ಮತ್ತು ಸೇವಿಸಬಾರದು ಎಂಬುದನ್ನು ಕೇಳಿ ತಿಳಿದುಕೊಳ್ಳಿ. ಆಗ ಮುಂದಿನ ಅಪಾಯಗಳನ್ನು ನೀವು ತಪ್ಪಿಸಿಕೊಳ್ಳಬಹುದು!!

ಡಯೇರ್ರಿಯಾ

ಡಯೇರ್ರಿಯಾ

ಹಾಗಲಕಾಯಿಯ ರಸವು ಗರ್ಭಿಣಿಯರಲ್ಲಿ ಡಯೇರ್ರಿಯಾವನ್ನು ತರುತ್ತದೆ. ಹೊಟ್ಟೆ ತೊಳೆಸುವಿಕೆಯು ಗರ್ಭಿಣಿಯರಿಗೆ ಅಸೌಖ್ಯವನ್ನುಂಟು ಮಾಡುತ್ತದೆ. ವೈದ್ಯರನ್ನು ಕಾಣಬೇಕಾದ ಪ್ರಸಂಗ ಇದರಿಂದ ಎದುರಾಗಬಹುದು.

ದೃಷ್ಟಿ ಮಂದವಾಗುತ್ತದೆ

ದೃಷ್ಟಿ ಮಂದವಾಗುತ್ತದೆ

ಹಾಗಲಕಾಯಿಯಲ್ಲಿರುವ ಆಲ್ಕಾಲೈನ್‍ಗಳು ದೃಷ್ಟಿಯನ್ನು ಮಂದ ಮಾಡುತ್ತವೆ. ಇದು ಹೆಚ್ಚಾಗಿ ಗರ್ಭಿಣಿಯರಲ್ಲಿ, ಉದ್ವೇಗಕ್ಕೆ ಕಾರಣವಾಗುತ್ತದೆ ಮತ್ತು ಅವರಿಗೆ ಅಸೌಖ್ಯವನ್ನುಂಟು ಮಾಡುತ್ತದೆ.

English summary

Is it safe to drink karela juice in the morning?

Karela juice has attained an elixir-like status in the recent years, with people prescribing it for everything, from diabetes to weight loss. Scores of diabetics, reluctantly down litres of bitter gourd juice every morning in a bid to control their blood sugar levels. While it is true that karela does help lower blood sugar levels, one should know that excess of anything good can be bad.
Story first published: Saturday, February 9, 2019, 12:30 [IST]
X
Desktop Bottom Promotion