For Quick Alerts
ALLOW NOTIFICATIONS  
For Daily Alerts

ಮನೆ ಔಷಧಗಳು: ಕಿಡ್ನಿ ಸ್ಟೋನ್‌ ಸಮಸ್ಯೆಗೆ ಶಾಶ್ವತ ಪರಿಹಾರಗಳು

By Jaya Subramanya
|

ನಮ್ಮ ದೇಹವೊಂದು ಸುಂದರ ದೇವಾಲಯವಿದ್ದಂತೆ. ದೇಹದ ಒಳ ಅಂಗಗಳ ರಚನೆ ಮತ್ತು ಬಾಹ್ಯ ಅಂಗಗಳ ರಚನೆಯ ಕುರಿತು ನೀವು ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡಲ್ಲಿ ನಮ್ಮ ದೇಹವು ನಮಗೆ ಎಷ್ಟೊಂದು ಮುಖ್ಯವಾಗಿರುವಂತಹದ್ದು ಮತ್ತು ನಮ್ಮ ಸುಂದರ ಜೀವನಕ್ಕೆ ನಮ್ಮ ದೇಹವು ಯಾವ ರೀತಿಯಲ್ಲಿ ಕೊಡುಗೆ ನೀಡುತ್ತಿದೆ ಎಂಬ ಅಂಶವನ್ನು ನೀವು ಕಂಡುಕೊಳ್ಳಬಹುದಾಗಿದೆ. ಅದರಲ್ಲೂ ದೇಹದ ಒಳ ಅಂಗಗಳ ರಚನೆ ಎಷ್ಟೊಂದು ಕೌತುಕಮಯವಾಗಿದೆ ಎಂಬುದನ್ನು ತಿಳಿದುಕೊಂಡರೆ ನೀವು ಅಡ್ಡಾದಿಡ್ಡಿಯಾಗಿ ನಿಮ್ಮ ದೇಹವನ್ನು ಇರಿಸಿಕೊಂಡಿರುವುದಕ್ಕೆ ನಿಮ್ಮನ್ನು ನೀವೇ ಬೈಯ್ಯುವುದು ಖಂಡಿತ.

ಹೌದು ನಮ್ಮ ದೇಹಾರೋಗ್ಯ ಚೆನ್ನಾಗಿರಬೇಕು ಎಂದಾದಲ್ಲಿ ನಮ್ಮ ದೇಹವು ನಾವು ಕಸ ತುಂಬಿಸುವ ಗೋಡೌನ್ ಆಗಿ ಮಾರ್ಪಡಿಸಬಾರದು. ನಾಲಿಗೆಯ ಚಪಲಕ್ಕೆ ತಕ್ಕಂತೆ ನಾವು ಸಿಕ್ಕಸಿಕ್ಕದ್ದನ್ನೆಲ್ಲಾ ತಿಂದು ನಮ್ಮ ದೇಹವನ್ನು ಮುನ್ಸಿಪಾಲಿಡಿ ದೊಡ್ಡಿಯನ್ನಾಗಿ ಮಾಡಿಕೊಂಡಿದ್ದೇವೆ ಎಂಬುದು ನಿಮಗೆ ತಿಳಿದಿದೆಯೇ? ಹೌದು ಈ ಕಸವನ್ನು ರಸ ಮಾಡುವ ಕೆಲಸ ನಮ್ಮ ದೇಹದಲ್ಲಿರುವ ಕಿಡ್ನಿ ನಡೆಸುತ್ತದೆ ಎಂಬುದು ನಿಮಗೆ ಗೊತ್ತೇ? ಒಂದು ರೀತಿಯಲ್ಲಿ ಈ ಅಂಗಾಂಶಕ್ಕೆ ನಾವು ಸಾಕಷ್ಟು ಕಷ್ಟವನ್ನೇ ನೀಡುತ್ತಿದ್ದೇವೆ. ನಾವು ತಿಂದ ಆಹಾರದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದನ್ನು ಸೋಸಿ ದೇಹಕ್ಕೆ ಉತ್ತಮ ಅಂಶವನ್ನು ಪೂರೈಸುವ ಕೆಲಸವನ್ನು ಕಿಡ್ನಿ ಮಾಡುತ್ತದೆ.

ಕಿಡ್ನಿಯಲ್ಲಿ ಸಮಸ್ಯೆ ಇದೆಯೇ? ಈ ಆಹಾರಗಳನ್ನು ಸರ್ವಥಾ ಸೇವಿಸಬೇಡಿ!

ನಮ್ಮ ಕಿಡ್ನಿಯಲ್ಲಿ ಸಂಗ್ರಹಗೊಂಡ ಕೊಳಕು ಅಂಶವವನ್ನು ಮೂತ್ರದ ರೂಪದಲ್ಲಿ ದೇಹದಿಂದ ಹೊರಹಾಕುತ್ತದೆ. ನಮ್ಮ ಕಿಡ್ನಿ ಮಾಡುವ ಪ್ರಮುಖ ಕಾರ್ಯ ಇದಾಗಿದೆ. ನಮ್ಮ ಕಿಡ್ನಿಯನ್ನು ಆರೋಗ್ಯಕರವಾಗಿರಿಸಬೇಕು ಎಂದಾದಲ್ಲಿ ನೀವು ಸಾಕಷ್ಟು ನೀರು ಸೇವನೆಯನ್ನು ಮಾಡಬೇಕು. ಇದರಿಂದ ನಮ್ಮ ಕಿಡ್ನಿಯಲ್ಲಿ ಸಂಗ್ರಹಗೊಂಡಿರುವ ವಿಷಕಾರಿ ಅಂಶಗಳು ಮೂತ್ರ ರೂಪದಲ್ಲಿ ಹೊರಹೋಗಿ ಕಿಡ್ನಿ ಸ್ವಾಸ್ಥ್ಯವಾಗಿರುತ್ತದೆ. ನಿಮ್ಮ ಕಿಡ್ನಿಯಲ್ಲಿ ಸಂಗ್ರಹಗೊಂಡಿರುವ ಕಲ್ಮಶ ಅಂಶಗಳು ನೀರಿನ ವಿತರಣೆ ಕಡಿಮೆಯಾದಾಗ ದೇಹದಿಂದ ಹೊರಹೋಗದೆ ಕಲ್ಲಾಗಿ ಮಾರ್ಪಡುತ್ತದೆ ಇದನ್ನೇ ಕಿಡ್ನಿ ಸ್ಟೋನ್ ಎಂದು ಕರೆಯುತ್ತಾರೆ.

ಈ ಕಿಡ್ನಿ ಸ್ಟೋನ್ ಅನ್ನು ಹೊರಹಾಕುವ ಕೆಲಸವನ್ನು ನೀರು ಸೇವನೆಯ ಮೂಲಕ ಮಾಡಬಹುದು. ಆದರೆ ಕೆಲವೊಮ್ಮೆ ಕಲ್ಲು ದೊಡ್ಡದಿದ್ದ ಸಮಯದಲ್ಲಿ ಶಸ್ತ್ರಕ್ರಿಯೆಯನ್ನೇ ಅನುಸರಿಬೇಕಾಗುತ್ತದೆ. ಆದರೆ ಈ ಕ್ರಿಯೆ ತುಂಬಾ ನೋವುದಾಯಕವಾಗಿರುತ್ತದೆ ಅಂತೆಯೇ ನೀವು ಜೀವನಪರ್ಯಂತ ಇದಕ್ಕೆ ದೊಡ್ಡ ಮೊತ್ತವನ್ನೇ ಪಾವತಿಸಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಇಲ್ಲಿ ಕೆಲವೊಂದು ಆಹಾರಗಳ ಪಟ್ಟಿಯನ್ನು ನಾವು ನೀಡುತ್ತಿದ್ದು ಇವುಗಳ ನಿಯಮಿತ ಸೇವನೆಯಿಂದ ನಿಮ್ಮ ಕಿಡ್ನಿಯ ಆರೋಗ್ಯವನ್ನು ನಿಮಗೆ ಕಾಪಾಡಿಕೊಳ್ಳಬಹುದಾಗಿದೆ....

ಸಾಕಷ್ಟು ನೀರು ಸೇವಿಸಿ

ಸಾಕಷ್ಟು ನೀರು ಸೇವಿಸಿ

ಸಾಕಷ್ಟು ನೀರು ಕುಡಿಯುವುದು ಕಿಡ್ನಿ ಕಲ್ಲುಗಳನ್ನು ಸ್ವಾಭಾವಿಕವಾಗಿ ತಡೆಯುತ್ತದೆ. ಕನಿಷ್ಠ ಪಕ್ಷ 8 ಲೋಟಗಳಷ್ಟಾದರೂ ನೀರನ್ನು ಕುಡಿಯುವುದು ಅತ್ಯವಶ್ಯಕವಾಗಿದೆ. ನೀರಲ್ಲದೆ, ಸಿಟ್ರಸ್ ಅಂಶವುಳ್ಳ ಜ್ಯೂಸ್ ಅನ್ನು ಕೂಡ ನೀವು ಸೇವಿಸಬಹುದು. ಈ ಪಾನೀಯಗಳು ಕಲ್ಲಿನ ರಚನೆಯನ್ನು ನಿರ್ಬಂಧಿಸುವಲ್ಲಿ ಸಹಕಾರಿ.

ಆಪಲ್ ಸೀಡರ್ ವಿನೇಗರ್

ಆಪಲ್ ಸೀಡರ್ ವಿನೇಗರ್

ಒ೦ದು ಅಥವಾ ಎರಡು ಟೇಬಲ್ ಚಮಚಗಳಷ್ಟು ಆಪಲ್ ಸೈಡರ್ ವಿನೆಗರ್ ಗೆ ಒ೦ದಿಷ್ಟು ನೀರನ್ನು ಬೆರೆಸಿಕೊಳ್ಳುವುದರ ಮೂಲಕ ಅದನ್ನು ತಿಳಿಯಾಗಿಸಿಕೊ೦ಡು ಅದನ್ನು ದಿನಾಲೂ ಕುಡಿಯಿರಿ. ಆಪಲ್ ಸೈಡರ್ ವಿನಿಗರ್ ಮೂತ್ರಪಿ೦ಡಗಳಲ್ಲಿನ ಹರಳುಗಳನ್ನು ಕರಗಿಸಲು ನೆರವಾಗುವುದರ ಮೂಲಕ ಯಾವುದೇ ಯಾತನೆಯಿಲ್ಲದೇ ಕರಗಿದ ಹರಳುಗಳನ್ನು ಮೂತ್ರದೊಡನೆ ಶರೀರದಿ೦ದ ಹೊರಹಾಕಲು ನೆರವಾಗುತ್ತದೆ.

ತುಳಸಿ ಎಲೆಗಳು

ತುಳಸಿ ಎಲೆಗಳು

ತುಳಸಿ ಎಲೆಗಳು ಸಾಮಾನ್ಯವಾಗಿ ಮೂತ್ರದ ಯಾವುದೇ ತೊಂದರೆಗೆ ತುಳಸಿ ಉತ್ತಮವಾಗಿದೆ. ಶೀತದಿಂದ ಹಿಡಿದು ಜ್ವರ, ಶ್ವಾಸ, ಮೂತ್ರಪಿಂಡಗಳ ಕಲ್ಲಿಗೂ ಉತ್ತಮವಾಗಿದೆ. ತುಳಸಿಯಲ್ಲಿರುವ ಮೂತ್ರವರ್ಧಕ ಗುಣ ಮತ್ತು ಕಲ್ಮಶ ನಿವಾರಕ ಗುಣ ಮೂತ್ರಪಿಂಡಗಳ ಕಲ್ಲುಗಳನ್ನು ಹೊರಹಾಕಲು ಸಮರ್ಥವಾಗಿವೆ. ತುಳಸಿ ಎಲೆಗಳ ರಸದಲ್ಲಿ ಅಸೆಟಿಕ್ ಆಮ್ಲವಿದ್ದು ಈ ಆಮ್ಲದಲ್ಲಿ ಮೂತ್ರಪಿಂಡದ ಕಲ್ಲುಗಳು ಕರಗುತ್ತವೆ. ಕಲ್ಲುಗಳು ಕರಗುತ್ತಾ ಹೋದಂತೆ ನೋವು ಸಹಾ ಕಡಿಮೆಯಾಗುತ್ತದೆ.

ಬಳಕೆಯ ವಿಧಾನ

ನಾಲ್ಕಾರು ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದು ಕೊಂಚ ಜೇನಿನೊಂದಿಗೆ ಬೆರೆಸಿ ಪ್ರತಿದಿನ ಜಗಿದು ತಿನ್ನುವ ಮೂಲಕ ಕಲ್ಲುಗಳು ನಿಧಾನವಾಗಿ ಕರಗುತ್ತಾ ಹೋಗುತ್ತವೆ.

ಲಿಂಬೆ ರಸ ಹಾಗೂ ಆಲೀವ್ ಆಯಿಲ್

ಲಿಂಬೆ ರಸ ಹಾಗೂ ಆಲೀವ್ ಆಯಿಲ್

ಕಿಡ್ನಿ ಸ್ಟೋನ್ ಅನ್ನು ನಿವಾರಿಸುವಲ್ಲಿ ಲಿಂಬೆ ರಸ ಮತ್ತು ಆಲೀವ್ ಆಯಿಲ್ ಪರಿಣಾಮಕಾರಿಯಾದುದು. ನಿಮ್ಮ ಕಿಡ್ನಿಯಲ್ಲಿರುವ ಸ್ಟೋನ್ ಅನ್ನು ಹೊರಹಾಕುವಲ್ಲಿ ಇದು ಪ್ರಮುಖವಾಗಿ ಕಾರ್ಯನಿರ್ವಹಿಸುತ್ತದೆ ಅಂತೆಯೇ ಆಲೀವ್ ಆಯಿಲ್ ಕಿಡ್ನಿ ಸ್ಟೋನ್‌ಗಳ ನೈಸರ್ಗಿಕವಾಗಿ ಹೊರಹೋಗಲು ಸಹಾಯ ಮಾಡುತ್ತದೆ. 2 ಚಮಚ ಆಲೀವ್ ಆಯಿಲ್ ಅನ್ನು ತಾಜಾ ಲಿಂಬೆ ರಸದಲ್ಲಿ ಬೆರೆಸಿಕೊಂಡು ನಿತ್ಯವೂ ಸೇವಿಸಿ.

ಕಲ್ಲಂಗಡಿ ಬೀಜ

ಕಲ್ಲಂಗಡಿ ಬೀಜ

ನಿಮ್ಮ ಕಿಡ್ನಿ ಸ್ಟೋನ್ ಅನ್ನು ಹೊರಹಾಕುವಲ್ಲಿ ಕಲ್ಲಂಗಡಿ ಮತ್ತು ಅದರ ಬೀಜ ಪರಿಣಾಮಕಾರಿಯಾದುದು. ಇದರ ಬೀಜವು ಪ್ರಭಾವಕಾರಿ ಅಂಶಗಳನ್ನು ತನ್ನಲ್ಲಿ ಒಳಗೊಂಡಿದ್ದು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುತ್ತದೆ ಹಾಗೂ ನಿಮ್ಮ ಕಿಡ್ನಿ ಸ್ಟೋನ್ ಅನ್ನು ಶೀಘ್ರದಲ್ಲೇ ನಿವಾರಿಸುತ್ತದೆ. ಒಂದು ಲೀಟರ್‌ನಷ್ಟು ನೀರನ್ನು ಕುದಿಸಿಕೊಳ್ಳಿ ಹಾಗೂ ಬೀಜವನ್ನು ಪೇಸ್ಟ್ ರೂಪದಲ್ಲಿ ತಯಾರಿಸಿಕೊಂಡು ಈ ನೀರಿಗೆ ಮಿಶ್ರ ಮಾಡಿ. ಅರ್ಧ ಗಂಟೆ ಈ ನೀರನ್ನು ಕುದಿಸಿ ನಂತರ ತಣಿಸಿ ಕುಡಿಯಿರಿ.

ದಾಳಿಂಬೆ ಜ್ಯೂಸ್

ದಾಳಿಂಬೆ ಜ್ಯೂಸ್

ದಾಳಿಂಬೆಯು ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿದ್ದು ನಿಮ್ಮ ಕಿಡ್ನಿ ಸ್ಟೋನ್ ಅನ್ನು ಮೂತ್ರದ ರೂಪದಲ್ಲಿ ಹೊರಹಾಕುವಲ್ಲಿ ಸಹಾಯ ಮಾಡುತ್ತದೆ. ನಿಮ್ಮ ದೇಹಕ್ಕೆ ಬೇಕಾಗುವ ನೀರಿನ ಪ್ರಮಾಣವನ್ನು ಈ ಜ್ಯೂಸ್ ನೀಡುತ್ತದೆ. ಒಂದು ಕಪ್‌ನಷ್ಟು ದಾಳಿಂಬೆ ಬೀಜವನ್ನು 2 ಕಪ್‌ಗಳಷ್ಟು ನೀರಿನಲ್ಲಿ ಬ್ಲೆಂಡ್ ಮಾಡಿ. ಈ ತಾಜಾ ಜ್ಯೂಸ್ ಅನ್ನು ಸೇವಿಸಿ.

ದಿನಕ್ಕೊ೦ದು ಸೇಬನ್ನು ಸೇವಿಸಿ

ದಿನಕ್ಕೊ೦ದು ಸೇಬನ್ನು ಸೇವಿಸಿ

ದಿನಕ್ಕೊ೦ದು ಸೇಬನ್ನು ಸೇವಿಸುವುದರಿ೦ದ ಮೂತ್ರಪಿ೦ಡಗಳಲ್ಲಿನ ಕಲ್ಲುಗಳು ಕರಗಿಹೋಗುತ್ತವೆ. ಸೇಬಿನಲ್ಲಿ ಕೆಲವು ಕಿಣ್ವಗಳಿದ್ದು, ಅವು ಕಾಲಕ್ರಮೇಣವಾಗಿ ಮೂತ್ರಪಿ೦ಡಗಳಲ್ಲಿನ ಹರಳುಗಳನ್ನು ಕರಗಿಸಿ, ಮೂತ್ರದ ಮೂಲಕ ಶರೀರದಿ೦ದ ಆ ಹರಳುಗಳು ಹೊರಹೋಗುವ೦ತೆ ಮಾಡುತ್ತವೆ.

ಬಾಳೆ ದಿಂಡು

ಬಾಳೆ ದಿಂಡು

ನಿಮ್ಮ ದೇಹದಿಂದ ಕಿಡ್ನಿ ಸ್ಟೋನ್‌ಗಳನ್ನು ಹೊರಹಾಕುವಲ್ಲಿ ಬಾಳೆ ದಿಂಡು ಪರಿಣಾಮಕಾರಿಯಾದುದು. ನೀವು ನಿತ್ಯವೂ ಬಾಳೆ ದಿಂಡು ಜ್ಯೂಸ್ ಅನ್ನು ಸೇವಿಸಿ ನಿಮ್ಮ ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಅರ್ಧ ಕಪ್‌ನಷ್ಟು ಬಾಳೆ ದಿಂಡನ್ನು ಸಣ್ಣಗೆ ಹೆಚ್ಚಿಕೊಂಡು ಅದನ್ನು ಹಾಲಿನಲ್ಲಿ ರಾತ್ರಿ ಪೂರ್ತಿ ನೆನೆಸಿ. ಇದಕ್ಕೆ ಸ್ವಲ್ಪ ಸಕ್ಕರೆ ಮತ್ತು ಚಿಟಿಕೆಷ್ಟು ಅರಿಶಿನವನ್ನು ಸೇರಿಸಿ. ಬೆಳಗ್ಗೆ ಇದನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ನಿತ್ಯವೂ ಸೇವಿಸಿ.

ಎಳನೀರು

ಎಳನೀರು

ನಮ್ಮ ದೇಹಕ್ಕೆ ಅತ್ಯುತ್ತಮವಾದ ದ್ರವವಾಗಿರುವ ಎಳನೀರು ಮೂತ್ರಪಿಂಡಗಳ ಕಲ್ಲು ನಿವಾರಿಸಲು ಹಾಗೂ ನೋವು ಇಲ್ಲದಂತಾಗಿಸಲೂ ನೆರವಾಗುತ್ತದೆ. ಪ್ರತಿದಿನ ಖಾಲಿಹೊಟ್ಟೆಯಲ್ಲಿ ಒಂದು ಎಳನೀರು ಕುಡಿಯುವ ಮೂಲಕ ಕಲ್ಲುಗಳು ಕರಗಲು ಸಾಧ್ಯವಾಗುತ್ತದೆ. ಬಳಕೆಯ ವಿಧಾನ ಖಾಲಿಹೊಟ್ಟೆಯಲ್ಲಿ ಒಂದು ಎಳನೀರು ಕುಡಿದ ಬಳಿಕ ದಿನದಲ್ಲಿ ಸುಮಾರು ನಾಲ್ಕರಿಂದ ಐದು ಎಳನೀರನ್ನಾದರೂ ಊಟಕ್ಕೆ ಅರ್ಧ ಗಂಟೆಗೆ ಮುನ್ನ ಕುಡಿಯಬೇಕು. ರಾತ್ರಿ ಮಲಗುವ ಮುನ್ನವೂ ಒಂದು ಎಳನೀರು ಕುಡಿದು ಕೊಂಚಕಾಲ ಅಡ್ಡಾಡಿ ಬಳಿಕ ಮೂತ್ರ ವಿಸರ್ಜಿಸಿ ಮಲಗಿಕೊಳ್ಳಬೇಕು.

ಕಿಡ್ನಿ ಬೀನ್ಸ್

ಕಿಡ್ನಿ ಬೀನ್ಸ್

ನಿಮ್ಮ ಕಿಡ್ನಿ ಸ್ಟೋನ್‌ಗಳ ನಿವಾರಣೆಗೆ ಕಿಡ್ನಿ ಬೀನ್ಸ್ ಪರಿಣಾಮಕಾರಿಯಾದುದು. ಇದರಲ್ಲಿ ಹೆಚ್ಚುವರಿ ಫೈಬರ್ ಇದ್ದು ನಿಮಗೆ ಸಾಕಷ್ಟು ಶಕ್ತಿಯನ್ನು ನೀಡುವುದರ ಜೊತೆಗೆ ನಿಮ್ಮ ಕಿಡ್ನಿಯನ್ನು ಆರೋಗ್ಯವಾಗಿರಿಸುತ್ತದೆ.

ಮೂಲಂಗಿ ಜ್ಯೂಸ್

ಮೂಲಂಗಿ ಜ್ಯೂಸ್

ತರಕಾರಿಗಳು ಕಿಡ್ನಿ ಸ್ಟೋನ್ ಸಮಸ್ಯೆಯನ್ನು ನೈಸರ್ಗಿಕವಾಗಿ ಉಪಚರಿಸುತ್ತವೆ. ನಿಮ್ಮ ಕಿಡ್ನಿ ಸ್ಟೋನ್ ಅನ್ನು ಇದು ಇಳಿಕೆ ಮಾಡಿ ಮೂತ್ರದ ರವಾನೆಗೆ ಸಹಾಯ ಮಾಡುತ್ತದೆ ಮತ್ತು ಸ್ಟೋನ್ ಅನ್ನು ಮೂತ್ರದಲ್ಲಿ ಸಲೀಸಾಗಿ ಹೋಗುವಂತೆ ಮಾಡುತ್ತದೆ.

ಮೆಂತೆ ಕಾಳು

ಮೆಂತೆ ಕಾಳು

ಒಂದು ಚಮಚ ಮೆಂತೆಯನ್ನು ಒಂದು ಲೋಟ ನೀರಿನಲ್ಲಿ ನೆನೆ ಹಾಕಿ ಬೆಳ್ಳಗ್ಗೆ ತಿನ್ನಬೇಕು. ಈ ರೀತಿ ಮಾಡಿದರೆ ಕಿಡ್ನಿಯಲ್ಲಿರುವ ಕಲ್ಲು ಮಾತ್ರವಲ್ಲ ದೇಹದಲ್ಲಿರುವ ಕಲ್ಮಶಗಳನ್ನು ತೊಡೆದು ಹಾಕಲು ಸಹಕಾರಿಯಾಗಿದೆ. ಇನ್ನೊಂದು ವಿಧಾನವೆಂದರೆ ಖಾಲಿ ಹೊಟ್ಟೆಯಲ್ಲಿ ಒಂದು ತಿಂಗಳ ಕಾಲ ಮೆಂತೆ ನೆನೆಸಿದ ನೀರನ್ನು ಕುಡಿಯಿರಿ. ಇದು ಕಿಡ್ನಿಯಲ್ಲಿ ಕಲ್ಲನ್ನು ಹೊರಹಾಕಲು ನೆರವಾಗುವುದು.

ಕಲ್ಲ೦ಗಡಿ

ಕಲ್ಲ೦ಗಡಿ

ಮೂತ್ರಪಿ೦ಡಗಳಲ್ಲಿನ ಹರಳುಗಳ ನಿವಾರಣೆಗೆ ಕಲ್ಲ೦ಗಡಿ ಹಣ್ಣು ಅತ್ಯುತ್ತಮವಾದ ಪರಿಹಾರೋಪಾಯವಾಗಿದೆ. ಕಲ್ಲ೦ಗಡಿ ಹಣ್ಣು ಜಲಾ೦ಶದಿ೦ದ ಸಮೃದ್ಧವಾಗಿದ್ದು, ಮೂತ್ರಪಿ೦ಡಗಳಲ್ಲಿನ ಹರಳುಗಳನ್ನು ಪರಿಣಾಮಕಾರಿಯಾಗಿ ಹೊರಗೆಡಹಲು ನೆರವಾಗುತ್ತದೆ. ಮೂತ್ರಪಿ೦ಡಗಳಲ್ಲಿನ ಹರಳುಗಳನ್ನು ಹೊರಹಾಕುವುದಕ್ಕಾಗಿ ಪ್ರಾಚೀನ ಕಾಲದಲ್ಲಿ ಯಾವುದೇ ಔಷಧವು ಅಲಭ್ಯವಾಗಿದ್ದಾಗ, ಆ ಹರಳುಗಳನ್ನು ರೋಗಿಯ ಶರೀರದಿ೦ದ ಹೊರಹಾಕಲು ವೈದ್ಯರು ರೋಗಿಗೆ ಕಲ್ಲ೦ಗಡಿ ಹಣ್ಣನ್ನು ಸೇವಿಸುವ೦ತೆ ಶಿಫಾರಸು ಮಾಡುತ್ತಿದ್ದರು.

English summary

natural-ways-to-get-rid-of-kidney-stone-without-surgery

It is very important to remove these kidney stones immediately. If the stone formation is small, kidney stones pass out through the urinary tract naturally. But sometimes, if the stones are large, a surgery is required. The surgery to remove these stones is risky and it takes a lot of time to heal afterwards. That is why most people opt for natural remedies to remove kidney stones. The power of Nature is so strong that it can provide relief from almost all human ailments.
X
Desktop Bottom Promotion