ಹೊಟ್ಟೆ ತುಂಬಾ ತಿಂದರೂ, ಮತ್ತೆ, ಮತ್ತೆ ಹಸಿವು ಆಗುತ್ತಿದೆಯೇ?

By Deepu
Subscribe to Boldsky

ಹಸಿವಾದಾಗ ಯಾವ ಊಟವೂ ರುಚಿಸುತ್ತದಂತೆ. ಅಂತೆಯೇ ಹೆಚ್ಚು ಹಸಿವಾಗಿದ್ದಾಗ ಹೆಚ್ಚು ಪ್ರಮಾಣದಲ್ಲಿ ಊಟ ಮಾಡುವುದು ಸಾಮಾನ್ಯ. ಆದರೆ ಒಮ್ಮೆ ಹೊಟ್ಟೆ ತುಂಬಿದೆ ಎಂಬ ಸೂಚನೆ ಬಂದ ಬಳಿಕ ಇನ್ನೇನನ್ನೂ ತಿನ್ನಲು ಮನ ಬಯಸುವುದಿಲ್ಲ. ಇದು ನಮ್ಮ ದೇಹದ ಒಂದು ರಕ್ಷಣಾ ವ್ಯವಸ್ಥೆಯಾಗಿದೆ. ಊಟ ಮಾಡಿದವರು ಕುತ್ತಿಗೆಯವರೆಗೆ ಊಟ ಮಾಡಿದೆವು ಎಂದು ಹೇಳುವುದು ಅಪ್ಪಟ ಉತ್ಪ್ರೇಕ್ಷೆಯಾಗಿದೆ. ಏಕೆಂದರೆ ಕುತ್ತಿಗೆಯವರೆಗೆ ಆಹಾರವನ್ನು ತುಂಬಿಸಬೇಕಾದರೆ ಅನ್ನನಾಳದಲ್ಲಿಯೂ ಆಹಾರವನ್ನು ತುಂಬಬೇಕು, ಇದು ಸಾಧ್ಯವೇ ಇಲ್ಲದ ಮಾತು. ಜಠರದಲ್ಲಿ ಆಹಾರ ಸಂಗ್ರಹವಾದಷ್ಟೂ ಜಠರ ಕೊಂಚವಾಗಿ ಹಿಗ್ಗುತ್ತದೆಯೇ ವಿನಃ ಅನ್ನನಾಳಕ್ಕೆ ಬರಬಾರದು.

ಆದರೆ ಕೆಲವರಿಗೆ ಊಟ ಮಾಡಿದ ಕೊಂಚ ಹೊತ್ತಿಗೇ ಮತ್ತೆ ಹಸಿವಾದಂತಾಗಿ ಏನನ್ನಾದರೂ ತಿನ್ನಲು ಪ್ರಾರಂಭಿಸುತ್ತಾರೆ. ಒಂದು ವೇಳೆ ಈ ಸ್ಥಿತಿ ಕಂಡುಬಂದರೆ ಅವರ ಜೀರ್ಣವ್ಯವಸ್ಥೆಯಲ್ಲಿ ಏನಾದರೂ ತೊಂದರೆ ಇರಬಹುದು ಎಂದು ತಿಳಿದುಕೊಳ್ಳಬಹುದು. ಈ ಸ್ಥಿತಿಗೆ ಪ್ರಮುಖವಾದ ಕಾರಣವೆಂದರೆ ಲಗುಬಗನೇ ಊಟಮಾಡುವುದು. ಇದರಿಂದ ಬಾಯಿಯಲ್ಲಿ ಪೂರ್ಣವಾಗಿ ಆಹಾರ ಜಗಿಯಲ್ಪಡದೇ ಇಡಿಯಿಡಿಯಾಗಿ ಜಠರಕ್ಕೆ ತಲುಪುತ್ತದೆ. ಅಲ್ಲದೇ ಬೇಗ ಬೇಗ ಬಂದ ಆಹಾರ ಬೇಗಬೇಗನೇ ಜೀರ್ಣವಾಗಿ ಹೊಟ್ಟೆ ಇನ್ನಷ್ಟು ಕೊಡಿ ಎಂಬ ಸೂಚನೆ ನೀಡುತ್ತದೆ. ಇನ್ನೊಂದು ಸಾಧ್ಯತೆಯೆಂದರೆ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ಆಹಾರವನ್ನು ಸೇವಿಸದೇ ಇರುವುದು.

feeling hungry

ಇನ್ನು ಕೆಲವರಿಗೆ ಕೆಲವರಿಗೆ ದಿನವಿಡೀ ತಿನ್ನದೇ ಇದ್ದರೂ ಹಸಿವಾಗದೇ ಹೋದರೆ ಕೆಲವರಿಗೆ ಊಟವಾದ ಕೊಂಚ ಹೊತ್ತಿನಲ್ಲಿಯೇ ಮತ್ತೊಮ್ಮೆ ಹಸಿವಾಗಿರುತ್ತದೆ. ಆರೋಗ್ಯಕರ ವ್ಯಕ್ತಿಯಲ್ಲಿ ಊಟದ ಬಳಿಕ ಸುಮಾರು ಮೂರು ಘಂಟೆಗಳ ಬಳಿಕ ಹಸಿವಿನ ಅನುಭವವಾದರೆ ಇದು ಸಾಮಾನ್ಯ ಎಂದುಕೊಳ್ಳಬಹುದು. ಆದರೆ ಇದಕ್ಕೂ ಮೊದಲೇ ಹಸಿವಿನ ಘಂಟೆ ಬಾರಿಸಲಾರಂಭಿಸಿದರೆ ಇದಕ್ಕೆ ಕೆಲವು ಅನಾರೋಗ್ಯಗಳು ಕಾರಣವಾಗಿರಬಹುದು. ಉದಾಹರಣೆಗೆ ನಿರ್ಜಲೀಕರಣ, ಪ್ರೋಟೀನ್ ಕೊರತೆ, ಆಹಾರದಲ್ಲಿ ನಾರಿನ ಕೊರತೆ, ನಿದ್ದೆಯ ಕೊರತೆ ಮೊದಲಾದವು ಹಸಿವನ್ನು ಬೇಗನೇ ಪ್ರಚೋಚಿಸುತ್ತವೆ. ಬನ್ನಿ, ಶೀಘ್ರ ಹಾಗೂ ಸತತವಾಗಿ ಹಸಿವು ಎದುರಾಗಲು ಏನೆಲ್ಲಾ ಕಾರಣಗಳಿವೆ ಎಂಬುದನ್ನು ನೋಡೋಣ..

cold drinks

ಕೂಲ್ ಡ್ರಿಂಕ್ಸ್ ಕುಡಿಯುವುದರಿಂದ

ಕೆಲವರಿಗೆ ಊಟದೊಂದಿಗೆ ಲಘು ಪಾನೀಯಗಳನ್ನು ಸೇವಿಸುವ ಅಭ್ಯಾಸವಿರುತ್ತದೆ. ಇದು ಕೇವಲ ಪ್ರತಿಷ್ಠೆಯ ವಿಷಯವಾಗಿದ್ದು ಆರೋಗ್ಯಕ್ಕೆ ಯಾವುದೇ ನಿಟ್ಟಿನಲ್ಲಿ ಪ್ರಯೋಜನವಿಲ್ಲ. ಏಕೆಂದರೆ ಬುರುಗು ಬರಲು ಬಳಸುವ ಇಂಗಾಲದ ಡೈ ಆಕ್ಸೈಡ್ ನಮಗೆ ಬೇಡವೆಂದೇ ನಾವು ಉಸಿರಿನಿಂದ ಹೊರಗೆ ಹಾಕುತ್ತಿದ್ದು ಬಲವಂತವಾಗಿ ಈಗ ನೀರಿನಲ್ಲಿ ಕರಗಿಸಿ ಕುಡಿಯುತ್ತಿದ್ದೇವೆ.ಇದು ಹೊಟ್ಟೆಯಲ್ಲಿ ಜೀರ್ಣಕ್ರಿಯೆಯನ್ನು ಬಾಧಿಸುತ್ತದೆ. ಊಟದ ಕೊಂಚ ಹೊತ್ತಿನ ಬಳಿಕ ಎಲ್ಲಾ ಗಾಳಿ ಹೊರಗೆ ಹೋದ ಮೇಲೆ ಅಲ್ಲಿದ್ದ ಖಾಲಿಜಾಗವನ್ನು ಆಕ್ರಮಿಸಿಕೊಳ್ಳಲು ಹೊಟ್ಟೆ ಹೆಚ್ಚಿನ ಆಹಾರ ಕಳಿಸಿ ಎಂದು ಸೂಚನೆ ನೀಡುತ್ತದೆ.

ಹೋಟೆಲಿನ ಊಟ

ಮನೆಯೂಟಕ್ಕೆ ಮತ್ತು ಹೋಟೆಲಿನ ಊಟಕ್ಕೆ ಪ್ರಮುಖ ವ್ಯತ್ಯಾಸವೆಂದರೆ ಮನೆಯೂಟದಲ್ಲಿ ವ್ಯಾಪಾರಿ ಬುದ್ದಿ ಇರುವುದಿಲ್ಲ. ಹೋಟೆಲಿನ ಊಟ ಪಕ್ಕಾ ವ್ಯಾಪಾರಿ ವ್ಯವಹಾರವಾದುದರಿಂದ ಗ್ರಾಹಕರನ್ನು ಸೆಳೆಯಲು ಏನೇನು ಕ್ರಮ ಕೈಗೊಳ್ಳುತ್ತಾರೋ ಅರಿವಿರುವುದಿಲ್ಲ. ಅಗ್ಗ ಎಂಬ ಕಾರಣಕ್ಕೆ ಬಳಸುವ ಅನಾರೋಗ್ಯಕರ ಪಾಮ್ ಅಥವಾ ಡಾಲ್ಡಾ, ನಾಲಿಗೆಯ ರುಚಿ ಹೆಚ್ಚಿಸಿ ಆರೋಗ್ಯವನ್ನು ಕಡಿಮೆಗೊಳಿಸುವ ಅಜಿನೋಮೋಟೋ, ಹೆಚ್ಚು ಕಾಲ ತಾಜಾವಿರಿಸಲು ಬಳಸಲಾಗುವ bisphenol-A ಎಂಬ ಸಂರಕ್ಷಕ ಮೊದಲಾದವು ಹೋಟೆಲಿನ ಆಹಾರವನ್ನು ರುಚಿಕರವಾಗಿಸಿದರೂ ಆರೋಗ್ಯಕರವಾಗಿಸುವುದಿಲ್ಲ. ಈ ಸಂರಕ್ಷಕ ಹೊಟ್ಟೆಯಲ್ಲಿ ಪ್ರಚೋದನೆಯುಂಟುಮಾಡಿ ಲೆಪ್ಟಿನ್ ಎಂಬ ಕಿಣ್ವವನ್ನು ಹೆಚ್ಚು ಸ್ರವಿಸಲು ಕಾರಣವಾಗುತ್ತದೆ. ಇದು ಕೃತಕವಾದ ಸೂಚನೆಯನ್ನು ನೀಡಿ ತಪ್ಪಾದ ಹಸಿವಾಗಿದೆ ಎಂಬ ಸೂಚನೆಯನ್ನು ಮೆದುಳಿಗೆ ನೀಡುತ್ತದೆ.

Hotel foods

ಟೀ ಬ್ರೇಕ್

ಎರಡು ಊಟಗಳ ನಡುವೆ ಒಂದು ಚಹಾ ವಿರಾಮ ತೆಗೆದುಕೊಳ್ಳುವುದು ಆರೋಗ್ಯಕರ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಬೆಳಿಗ್ಗೆ ಹನ್ನೊಂದು ಮತ್ತು ಸಂಜೆ ನಾಲ್ಕು ಗಂಟೆಯ ವೇಳೆಗೆ ಚಹಾ ಸೇವಿಸುವುದರಿಂದ ಈಗ ತಾನೇ ಖಾಲಿಯಾಗಿದ್ದ ಜಠರಕ್ಕೆ ಕೊಂಚ ಆಹಾರ ದೊರೆತಂದಾಗಿ ಜೀರ್ಣಕ್ರಿಯೆ ಮುಂದುವರೆಯುತ್ತದೆ. ಇಲ್ಲದಿದ್ದರೆ ಖಾಲಿ ಹೊಟ್ಟೆ ಹಾಗೇ ಮುಂದುವರೆದು ಊಟದ ಹೊತ್ತಿನಲ್ಲಿ ಅಗತ್ಯಕ್ಕೂ ಹೆಚ್ಚು ತಿನ್ನಲು ಕಾರಣವಾಗುತ್ತದೆ.

ಬೆಳಗ್ಗಿನ ಉಪಾಹಾರ ಸೇವಿಸದೇ ಇರುವುದು

ಖಂಡಿತಾ ಗಮನಿಸಿ: ದಿನದ ಮೂರೂ ಹೊತ್ತಿನ ಆಹಾರಗಳಲ್ಲಿ ಅತ್ಯಗತ್ಯವಾದ ಮತ್ತು ತಪ್ಪಿಸಿಕೊಳ್ಳಲೇಬಾರದ ಆಹಾರವೆಂದರೆ ಬೆಳಗ್ಗಿನ ಉಪಾಹಾರ. ಏಕೆಂದರೆ ರಾತ್ರಿಯ ಉಪಾವಾಸದ ಬಳಿಕ ಮೆದುಳಿಗೆ ಹೆಚ್ಚಿನ ರಕ್ತದ ಅವಶ್ಯಕತೆಯಿದ್ದು ಉಪಾಹಾರದಿಂದ ಇದು ಲಭ್ಯವಾಗುತ್ತದೆ. ಇಲ್ಲದಿದ್ದರೆ ಮೆದುಳಿನ ಕ್ಷಮತೆ ಕುಗ್ಗುತ್ತದೆ ಹಾಗೂ ಮಧ್ಯಾಹ್ನದ ಊಟದಲ್ಲಿ ಅಗತ್ಯಕ್ಕಿಂತಲೂ ಭಾರೀ ಪ್ರಮಾಣದಲ್ಲಿ ಹೆಚ್ಚಿನ ಆಹಾರ ಸೇವಿಸಿ ಹಲವಾರು ತೊಂದರೆಗಳನ್ನು ಆಹ್ವಾನಿಸಿದಂತಾಗುತ್ತದೆ.

ವ್ಯಾಯಾಮಗಳು

ನಿಮ್ಮ ನಿತ್ಯದ ವ್ಯಾಯಾಮದ ಪ್ರಮಾಣ ಹೆಚ್ಚಿದಷ್ಟೂ ದೇಹ ಹೆಚ್ಚಿನ ಆಹಾರ ಬೇಡುವ ಕಾರಣ ಸ್ವಾಭಾವಿಕವಾಗಿಯೇ ಹಸಿವೂ ಹೆಚ್ಚುತ್ತದೆ. ಅದರಲ್ಲೂ ಭಾರೀ ವೇಗದಿಂದ ಕ್ಯಾಲೋರಿಗಳನ್ನು ದಹಿಸುವ ಕಠಿಣ ವ್ಯಾಯಾಮಗಳನ್ನು ನಿರ್ವಹಿಸುವ ಕ್ರೀಡಾಪಟುಗಳಿಗೆ ಅತಿ ಹೆಚ್ಚು ಹಸಿವಾಗುತ್ತದೆ. ಈ ವ್ಯಕ್ತಿಗಳು ಇತರರಿಗಿಂತಲೂ ಬೇಗನೇ ಹಸಿವಾಗುವ ಭಾವನೆಯನ್ನು ಪ್ರಕಟಿಸುತ್ತಾರೆ.

ಮದ್ಯವ್ಯಸನ

ಒಂದು ವೇಳೆ ಮದ್ಯವನ್ನು ಮಿತಿಗಿಂತಲೂ ಮೀರಿ ಸೇವಿಸಿದರೆ ಇದು ಆರೋಗ್ಯವನ್ನು ಹಲವು ವಿಧದಲ್ಲಿ ಬಾಧಿಸುತ್ತದೆ. ಇದು ಕೆಟ್ಟದ್ದು ಎಂದು ಗೊತ್ತಿದ್ದರೂ ವ್ಯಸನವನ್ನು ಮುಂದುವರೆಸಿಕೊಂಡು ಹೋಗುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮದ್ಯಸೇವನೆಯಿಂದ ಮೆದುಳಿನಲ್ಲಿ ಮಂಪರಿನ ಅನುಭವವುಂಟಾಗುತ್ತದೆ ಹಾಗೂ ಅನಗತ್ಯವಾಗಿ ಹಸಿವಿನ ಭಾವನೆಯನ್ನು ಮೂಡಿಸುತ್ತದೆ. ಅಲ್ಲದೇ ಮದ್ಯ ಹೊಟ್ಟೆಗೆ ಹೋದ ಬಳಿಕ ನೇರವಾಗಿ ರಕ್ತಕ್ಕೆ ಹೀರಲ್ಪಡುವ ಸಮಯದಲ್ಲಿ ಹೊಟ್ಟೆ ತುಂಬಿರುವ ಸೂಚನೆಗಳನ್ನು ನೀಡುವ ರಸದೂತಗಳ ಉತ್ಪತ್ತಿಯನ್ನು ಕುಂಠಿಸಿ ಹೊಟ್ಟೆ ಖಾಲಿಯಾಗಿರುವ ಭಾವನೆಯನ್ನು ಮೂಡಿಸುತ್ತದೆ. ಇದು ಹಸಿವನ್ನು ಭುಗಿಲೆಬ್ಬಿಸುತ್ತದೆ.

Alcohol

ಆಹಾರದಲ್ಲಿ ನಾರಿನ ಕೊರತೆ

ನಿಮ್ಮ ಆಹಾರದಲ್ಲಿ ಅಗತ್ಯಪ್ರಮಾಣದ ನಾರು ಇಲ್ಲದೇ ಹೋದರೂ ಇದು ಸತತವಾಗಿ ಹಸಿವಿಗೆ ಕಾರಣವಾಗಬಹುದು. ನಾರಿನ ಪ್ರಮಾಣ ಹೆಚ್ಚಿರುವ ಆಹಾರಗಳ ಸೇವನೆಯಿಂದ ಜೀರ್ಣಕ್ರಿಯೆ ಹೆಚ್ಚಿನ ಸಮಯದವರೆಗೆ ನಡೆಯುತ್ತದೆ ಹಾಗೂ ಈ ಮೂಲಕ ಅಷ್ಟು ಹೊತ್ತಿನವರೆಗೆ ಹಸಿವನ್ನು ನಿಯಂತ್ರಿಸಬಹುದು. ಅಲ್ಲದೇ ಹೊಟ್ಟೆ ತುಂಬಿರುವ ಸೂಚನೆಯನ್ನು ನೀಡುವ ರಸದೂತಗಳ ಉತ್ಪತ್ತಿಗೂ ನೆರವಾಗುವ ಮೂಲಕ ಹಸಿವಾಗದಂತೆ ತಡೆಯುತ್ತದೆ ಹಾಗೂ ಜೀರ್ಣಾಂಗಗಳಲ್ಲಿ ಚಿಕ್ಕ-ಸಂಕಲೆಯ ಕೊಬ್ಬಿನ ಆಮ್ಲಗಳ ಉತ್ಪತ್ತಿಯಾಗುವ ಮೂಲಕ ಹೊಟ್ಟೆ ತುಂಬಿದ ಅನುಭವವೂ ಆಗುತ್ತದೆ.

ಅತಿ ಹೆಚ್ಚು ಸಂಸ್ಕರಿತ ಕಾರ್ಬೋಹೈಡ್ರೇಟುಗಳ ಸೇವನೆ

ಪ್ರೋಟೀನ್, ವಿಟಮಿನ್ನುಗಳು ಮೊದಲಾದ ಕಾರ್ಬೋಹೈಡ್ರೇಟುಗಳು ನಮ್ಮ ಶರೀರಕ್ಕೆ ಅತಿ ಅವಶ್ಯವಾಗಿ ಬೇಕಾಗಿರುವ ಪೋಷಕಾಂಶಗಳಾಗಿವೆ. ಆದರೆ ಸಂಸ್ಕರಿತ ಕಾರ್ಬೋಹೈಡ್ರೇಟುಗಳಲ್ಲಿ ನೈಸರ್ಗಿಕ ವಿಟಮಿನ್ನುಗಳು, ನಾರು ಹಾಗೂ ಖನಿಜಗಳಿಲ್ಲದೇ ಇರುವ ಕಾರಣ ಇವುಗಳ ಸೇವನೆಯಿಂದ ಆರೋಗ್ಯದ ಮೇಲೆ ನೈಸರ್ಗಿಕ ಕಾರ್ಬೋಹ್ರೈಡ್ರೇಟುಗಳಿಂದ ಬೇರೆಯೇ ರೀತಿಯಲ್ಲಿ ಪ್ರಭಾವ ಬೀರುತ್ತದೆ. ಮೈದಾ, ಪಾಸ್ತಾ, ಬ್ರೆಡ್, ಕ್ಯಾಂಡಿ, ಸಂಸ್ಕರಿತ ಸಕ್ಕರೆ, ಸೋಡಾ ಮೊದಲಾದವುಗಳ ಸೇವನೆಯಿಂದ ಹೊಟ್ಟೆ ತುಂಬಿದ್ದರೂ ಹಸಿವಿನ ಭಾವನೆಯುಂಟಾಗುತ್ತದೆ. ಏಕೆಂದರೆ ಇವುಗಳಲ್ಲಿ ನಾರು ಇಲ್ಲದೇ ಇರುವ ಕಾರಣ ಇವುಗಳನ್ನು ನಮ್ಮ ಹೊಟ್ಟೆ ಮತ್ತು ಕರುಳುಗಳು ಬೇಗನೇ ಜೀರ್ಣಿಸಿ ಮುಂದೆ ಕಳಿಸಿ ಹೊಸ ಆಹಾರಕ್ಕೆ ಪ್ರಚೋದನೆ ಸಲ್ಲಿಸುತ್ತವೆ. ಅಲ್ಲದೇ ಹೀಗಾಗುವ ಮೂಲಕ ಎಷ್ಟು ತಿಂದರೂ ಹೊಟ್ಟೆ ತುಂಬಿಲ್ಲದ ಭಾವನೆ ಮೂಡುವ ಮೂಲಕ ಇನ್ನಷ್ಟು ಅನಾರೋಗ್ಯಕರ ಆಹಾರ ಸೇವನೆಗೂ ಕಾರಣವಾಗುತ್ತದೆ.

ವೇಗದ ಊಟ

ಪ್ರತೀ ಸಲ ನಿಮಗೆ ಊಟದ ಬಳಿಕ ಮತ್ತೆ ಹಸಿವಾಗುತ್ತಿದ್ದರೆ ಮುಂದಿನ ಸಲ ನೀವು ಊಟ ಮಾಡುವಾಗ ಸ್ಟಾಪ್ ವಾಚ್ ಅಳವಡಿಸಿ ಮತ್ತು ನಿಮಗೆ ಊಟ ಮಾಡಲು ಎಷ್ಟು ಸಮಯ ಬೇಕಾಗುತ್ತದೆ ಎಂದು ಗಮನಿಸಿ. ನೀವು ತುಂಬಾ ವೇಗವಾಗಿ ಊಟ ಮಾಡುತ್ತಿದ್ದರೆ ಆಗ ಪೂರ್ಣ ಸಂತೃಪ್ತಿಯ ಹಾರ್ಮೋನ್ ಬಿಡುಗಡೆಗೆ ಸಮಯ ಸಿಗುವುದಿಲ್ಲ. ಈ ಹಾರ್ಮೋನ್ ಬಿಡುಗಡೆಗೆ ಕನಿಷ್ಠ 20 ನಿಮಿಷ ಬೇಕಾಗುತ್ತದೆ. ನಿಯಮಿತವಾಗಿ ಐಸ್ ಕ್ರೀಮ್ ತಿನ್ನುವ ಪುರುಷರಲ್ಲಿ ನಿಧಾನವಾಗಿ ಊಟ ಮಾಡುವವರಷ್ಟು ಹಸಿವಿನ ಹಾರ್ಮೋನುಗಳು ಹೆಚ್ಚಳವಾಗುವುದಿಲ್ಲವೆಂದು ಒಂದು ಅಧ್ಯಯನ ಹೇಳಿದೆ. ಊಟಕ್ಕೆ ಸರಿಯಾದ ಸಮಯ ನೀಡಿ. ಪ್ರತೀ ಸಲ ನೀವು ಬಾಯಿಗೆ ತುತ್ತು ಇಡುವಾಗ ಸಮಯದ ಅಂತರವಿರಲಿ. ಇದರಿಂದ ನೀವು ಕಡಿಮೆ ಆಹಾರ ಸೇವಿಸಿದರೂ ಹೊಟ್ಟೆ ತುಂಬುತ್ತದೆ. ಜೀರ್ಣಕ್ರಿಯೆಗೂ ಇದು ನೆರವಾಗುತ್ತದೆ.

ಹೆಚ್ಚು ನೀರು ಕುಡಿಯದೇ ಇರುವುದು

ಹಸಿವನ್ನು ನಿಯಂತ್ರಿಸಲು ನೀರು ಒಳ್ಳೆಯ ವಿಧಾನ. ನಾವು ಯಾವಾಗಲೂ ನಿರ್ಜಲೀಕರಣವನ್ನು ಹಸಿವೆಂದು ತಪ್ಪು ತಿಳಿದುಕೊಂಡು ಹೆಚ್ಚಿನ ಊಟ ಮಾಡುತ್ತದೆ. ನಿಮಗೆ ಹಸಿವಾದಾಗ ಒಂದು ಗ್ಲಾಸ್ ನೀರು ಕುಡಿಯಿರಿ ಮತ್ತು ಇದರಿಂದ ನಿಮ್ಮ ಹೊಟ್ಟೆಯಲ್ಲಿ ಭಿನ್ನವಾದ ವಾತಾವರಣ ಉಂಟಾಗಬಹುದು. ದಿನವಿಡಿ ನೀರು ಕುಡಿಯುವುದರಿಂದ ನಿಮ್ಮ ಹೊಟ್ಟೆ ತುಂಬಿದಂತಾಗಿರುತ್ತದೆ ಮತ್ತು ತೂಕ ಕಳಕೊಳ್ಳಬಹುದು.

For Quick Alerts
ALLOW NOTIFICATIONS
For Daily Alerts

    English summary

    Do You Feel Hungry Very Often It May Be These Reasons!

    Hunger is the natural cue that says the body requires food for proper body functioning. At any point in time, all of us have felt the symptoms of hunger, i.e., growling of stomach, headache, feeling irritated, etc. The bouts of hunger, however, vary according to people. Some can go without food for a long span of time, while others feel hungry very often. So if you are in the latter section, there may be a specific reason for you to feel hungry frequently. Let us now look at some of the possible reasons for your frequent hunger.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more