For Quick Alerts
ALLOW NOTIFICATIONS  
For Daily Alerts

ಬೆಳಗಿನ ಹೊತ್ತಿಗೆ ನಡೆಸುವ ಸೆಕ್ಸ್ ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ!

By Arshad
|

ಮುಂಜಾನೆಯ ಸವಿನಿದ್ದೆ ಯಾರಿಗೆ ಇಷ್ಟವಿಲ್ಲ? ಆದರೂ ಈ ನಿದ್ದೆಯಿಂದೆದ್ದು ನಡೆದಾಡಿದರೆ ಇನ್ನಷ್ಟು ಅಪ್ಯಾಯಮಾನವಾದ ಅನುಭವ ದೊರಕುತ್ತದೆ. ಒಂದು ವೇಳೆ ದಂಪತಿಗಳು ಈ ಸಮಯವನ್ನು ಮತ್ತೊಂದು ಮಿಲನಕ್ಕಾಗಿ ಬಳಸಿಕೊಂಡರೆ ಇದರಿಂದ ದೊರಕುವ ಆನಂದ ದುಪ್ಪಟ್ಟಾಗುತ್ತದೆ. ಅಲ್ಲದೇ ಇನ್ನೂ ಕೆಲವಾರು ಆರೋಗ್ಯಕರ ಪ್ರಯೋಜನಗಳಿವೆ. ಉದ್ವೇಗವನ್ನು ಕಡಿಮೆ ಮಾಡುವುದು, ಮಹಿಳೆಯರ ಮಾಸಿಕ ದಿನಗಳ ಸೆಡೆತದ ನೋವನ್ನು ಕಡಿಮೆ ಮಾಡುವುದು ಹಾಗೂ ಫಲವತ್ತತೆಯನ್ನು ಹೆಚ್ಚಿಸುವಂತಹ ಪ್ರಯೋಜನಗಳನ್ನು ದಂಪತಿಗಳು ಪಡೆಯಬಹುದು. ಅಷ್ಟೇ ಅಲ್ಲ, ಮಿಲದ ಬಳಿಕ ನಿರಾಳವಾದ ಮನ ದಿನದ ಎಲ್ಲಾ ಕೆಲಸಗಳನ್ನು ಉಲ್ಲಸಿತವಾಗಿ ನಡೆಸಿಕೊಟ್ಟು ನಿಮ್ಮಿಂದ ಅತ್ಯುತ್ತಮ ಕಾರ್ಯವನ್ನು ನೀಡಲು ಸಾಧ್ಯವಾಗುತ್ತದೆ.

ಪುರುಷರ ಸೆಕ್ಸ್ ಲೈಫ್ ಹೆಚ್ಚಿಸುವ ನೈಸರ್ಗಿಕ ಆಹಾರಗಳು

ಸಾಮಾನ್ಯವಾಗಿ ಮುಂಜಾನೆಯ ವೇಳೆ ನಿದ್ದೆಯಿಂದೇಳುವುದೇ ನಮಗಾರಿಗೂ ಇಷ್ಟವಿಲ್ಲದ ಕೆಲಸ. ಹೆಚ್ಚಿನವರು ನಿದ್ದೆಯ ಮಂಪರಿನಿಂದ ಏಳಲು ಇಚ್ಛಿಸದೇ ಮತ್ತೆ ಹೊದಿಕೆಯೊಳಗೆ ತೂರಿಬಿಡುತ್ತಾರೆ. ಆದರೆ ನಿರಾಕರಿಸಲೇ ಸಾಧ್ಯವಾಗದ ಈ ಅಪ್ಯಾಯತೆಯನ್ನು ಬಲವಂತವಾಗಿಯಾದರೂ ಸರಿ ತ್ಯಜಿಸಿ ನಿದ್ದೆಯಿಂದೆದ್ದು ಮಿಲನಕ್ರಿಯೆಯಲ್ಲಿ ಒಳಗೊಂಡರೆ ದಂಪತಿಗಳ ಪಾಲಿಗೆ ಇದು ಅತ್ಯುತ್ತಮವಾದ ಆರೋಗ್ಯಕರ ಕ್ರಿಯೆಯಾಗಿದೆ ಎಂದು ತಜ್ಞರು ತಿಳಿಸುತ್ತಾರೆ. ಒಂದು ತರಹದಲ್ಲಿ ಹಸಿದವನಿಗೆ ಮೃಷ್ಟಾನ್ನ ದೊರೆತಂತೆ. ಸುಮ್ಮನೇ ಮಲಗಿ ಕಾಲ ಕಳೆಯುವ ಬದಲು ನಿದ್ದೆಯಿಂದೆದ್ದು ಪರಸ್ಪರ ಲೀನರಾಗುವ ಮೂಲಕ ಪಡೆಯಬಹುದಾದ ಪ್ರಯೋಜನಗಳನ್ನು ಕಂಡ ಬಳಿಕ ಇದನ್ನೇಕೆ ತಜ್ಞರು ಮೃಷ್ಟಾನ್ನಕ್ಕೆ ಹೋಲಿಸಿದರು ಎಂದು ನಿಮಗೆ ಅರ್ಥವಾಗುತ್ತದೆ.

ಉದ್ವೇಗವನ್ನು ಕಡಿಮೆ ಮಾಡುತ್ತದೆ

ಉದ್ವೇಗವನ್ನು ಕಡಿಮೆ ಮಾಡುತ್ತದೆ

ಒಂದು ವೇಳೆ ಮುಂದಿನ ದಿನದಲ್ಲಿ ಯಾವುದೋ ಪ್ರಮುಖ ಕೆಲಸವಿದ್ದು (ಇದ್ದರೆ ಏನು, ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ) ಇದನ್ನು ಎದುರಿಸುವುದು ಹೇಗೆ ಎಂಬ ಚಿಂತೆ ಉದ್ವೇಗಕ್ಕೆ ಕಾರಣವಾಗಬಹುದು. ಸಾಮಾನ್ಯವಾಗಿ ನಾವೆಲ್ಲಾ ರಜಾದಿನದ ಹೊರತು ಇತರ ದಿನಗಳಲ್ಲೆಲ್ಲಾ ಬೆಳಗ್ಗಿನ ಹೊತ್ತನ್ನು ಹೊರಡುವ ಧಾವಂತದಲ್ಲಿಯೇ ಉದ್ವೇಗದಿಂದ ಕಳೆಯುತ್ತೇವೆ. ಆದರೆ ಮುಂಜಾನೆಯ ಸಮಯದ ಮಿಲನದ ಸಮಯದಲ್ಲಿ ಪಡೆದ ಒಂದೇ ಕಾಮಪರಾಕಾಷ್ಠೆಯಿಂದ ಬಿಡುಗಡೆಯಾಗುವ ಎಂಡಾರ್ಫಿನ್ ಗಳು ಮಾನಸಿಕ ಒತ್ತಡವನ್ನು ನಿವಾರಿಸುತ್ತವೆ ಹಾಗೂ ಮನದಲ್ಲಿ ಆನಂದ ಮತ್ತು ಧನಾತ್ಮಕ ಧೋರಣೆಯನ್ನು ತಳೆಯಲು ಸಾಧ್ಯವಾಗುತ್ತದೆ. ಅಲ್ಲದೇ ಒತ್ತಡ ನಿವಾರಿಸಿ ಮನೋಭಾವವನ್ನು ಉತ್ತಮಗೊಳಿಸಲು ಮತ್ತು ನೋವನ್ನು ಇಲ್ಲವಾಗಿಸಲೂ ಈ ಎಂಡಾರ್ಫಿನ್ ಗಳೇ ಅಗತ್ಯವಾಗಿವೆ. ಬೆಳಗ್ಗಿನ ಹೊತ್ತಿನಲ್ಲಿ ಮನ ಉಲ್ಲಸಿತವಾಗಿದ್ದು ಚಟುವಟಿಕೆಯಿಂದ ಮುಂದುವರೆಯಲು ಸನ್ನದ್ದವಾಗಿದ್ದಾಗ ದಿನದ ಎಲ್ಲಾ ಕೆಲಸಗಳು ಹೂವಿನಷ್ಟು ಹಗುರವಾಗುತ್ತವೆ.

ವ್ಯಾಯಾಮಕ್ಕೆ ಪರ್ಯಾಯವೂ ಹೌದು

ವ್ಯಾಯಾಮಕ್ಕೆ ಪರ್ಯಾಯವೂ ಹೌದು

ಒಂದು ವೇಳೆ ನೀವು ನಿತ್ಯವೂ ವ್ಯಾಯಾಮ ಮಾಡುತ್ತಿದ್ದು ಈ ವ್ಯಾಯಾಮವನ್ನು ತಪ್ಪಿಸಿ ಮಿಲನಕ್ರಿಯೆಗಾಗಿ ಸಮಯವನ್ನು ಮೀಸಲಿರಿಸಿದರೆ ಇದರಿಂದ ವ್ಯಾಯಾಮದ ಮೂಲಕ ಪಡೆಯಬಹುದಾದ ಪ್ರಯೋಜನಗಳಿಂದ ವಂಚಿತರಾಗುತ್ತೀರಿ ಎಂದು ನೀವು ಅಂದುಕೊಂಡಿದ್ದರೆ - ನಿಮ್ಮ ಭಾವನೆಯನ್ನು ಕೆಲವು ಸಂಶೋಧನೆಗಳು ಸುಳ್ಳಾಗಿಸಿವೆ. ಏಕೆಂದರೆ ಮಿಲನಕ್ರಿಯೆಯೂ ಒಂದು ಬಗೆಯ ವ್ಯಾಯಾಮವೇ ಆಗಿದ್ದು ಸರಿಸುಮಾರು ನಿತ್ಯದ ಸಾಮಾನ್ಯ ವ್ಯಾಯಾಮದಲ್ಲಿ ಆದಷ್ಟೇ ಶ್ರಮ ವಹಿಸಬೇಕಾಗುತ್ತದೆ ಹಾಗೂ ತನ್ಮೂಲಕ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳೂ ದಹಿಸಲ್ಪಡುತ್ತವೆ. ವ್ಯಾಯಾಮದಿಂದ ಪಡೆದದ್ದೂ ಇದನ್ನೇ ತಾನೇ? ಹೀಗಿರುವಾಗ ಬೆಳಗ್ಗಿನ ವ್ಯಾಯಾಮದಿಂದ ಕೇವಲ ನೀವೊಬ್ಬರೇ ಪ್ರಯೋಜನ ಪಡೆಯುವ ಬದಲು ದಂಪತಿಗಳಿಬ್ಬರೂ ಈ ಮೂಲಕ ಏಕೆ ಪ್ರಯೋಜನ ಪಡೆದುಕೊಳ್ಳಬಾರದು?

ತಾರುಣ್ಯದ ಕಳೆಯನ್ನು ನೀಡುತ್ತದೆ

ತಾರುಣ್ಯದ ಕಳೆಯನ್ನು ನೀಡುತ್ತದೆ

ನಮ್ಮ ದಿನದ ಆರಂಭ ತಾಜಾತನದಿಂದ ಹಾಗೂ ಆತ್ಮವಿಶ್ವಾಸದಿಂದ ಪ್ರಾರಂಭಗೊಳ್ಳಬೇಕೆಂದು ನಾವೆಲ್ಲರೂ ಆಶಿಸುತ್ತೇವೆ. ಮುಂಜಾನೆಯ ಮಿಲನ ನಿಮ್ಮ ಸಹಜಸೌಂದರ್ಯವನ್ನು ಉಲ್ಬಣಿಸುತ್ತದೆ. ಮಿಲನಕ್ರಿಯೆಯ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಸ್ರವಿಸುವ ಈಸ್ಟ್ರೋಜೆನ್ ತಾರುಣ್ಯ ಹಾಗೂ ತಾಜಾನತದ ಕಳೆಯನ್ನು ನೀಡಲು ನೆರವಾಗುತ್ತದೆ ಹಾಗೂ ತ್ವಚೆ ಒಣಗುವುದನ್ನು ತಪ್ಪಿಸಿ ಮೊಡವೆಗಳಾಗದಂತೆ ತಡೆಯುತ್ತದೆ. ತ್ವಚೆಗೆ ಅಗತ್ಯವಾದ ಆರ್ದ್ರತೆಯನ್ನು ಒದಗಿಸಿ ಸೆಳೆತ ಹೆಚ್ಚಿಸಿ ನೆರಿಗೆಗಳಾಗದಂತೆ ತಡೆಯುತ್ತದೆ. ಅಲ್ಲದೇ ಮಿಲನಕ್ರಿಯೆಯ ಬಳಿಕ ದೇಹದಲ್ಲಿ ರಕ್ತಸಂಚಾರ ಹೆಚ್ಚುತ್ತದೆ. (ಇದೇ ಕಾರಣಕ್ಕೆ ಮುಖ, ಮೂಗುಗಳೆಲ್ಲಾ ಕೆಂಪಡರುತ್ತವೆ). ಪರಿಣಾಮವಾಗಿ ಕಾಂತಿಯುಕ್ತ ತ್ವಚೆ ನಿಮ್ಮದಾಗುತ್ತದೆ. ಹಾಗಾಗಿ ನಿಮ್ಮ ಸಹಜಸೌಂದರ್ಯ ಅತ್ಯುತ್ತಮವಾಗಿ ಪ್ರಕಟಗೊಳ್ಳಬೇಕೆಂದಿದ್ದರೆ ಮುಂಜಾನೆಯ ಮಿಲನವನ್ನು ತಪ್ಪಿಸಿಕೊಳ್ಳದಿರಿ.

ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ

ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ

ಮಿಲನ ಕ್ರಿಯೆಯ ಬಳಿಕವೂ ಕೇವಲ ಹಿತವಾದ ಮುದ್ದಾಟದಿಂದಲೂ ಅಪಾರವಾದ ಅಪ್ಯಾಯಮಾನ ದೊರಕುತ್ತದೆ ಎಂದು ನಿಮಗೆ ಗೊತ್ತೇ? ಇದಕ್ಕೆ ಆಕ್ಸಿಟೋಸಿನ್ ಎಂಬ ರಾಸಾಯನಿಕವೇ ಕಾರಣ. ಮಿಲನಕ್ರಿಯೆಯಲ್ಲಿ ಸ್ರವಿಸುವ ಈ ರಾಸಾಯನಿಕ ದಂಪತಿಗಳಲ್ಲಿ 'ಪರಸ್ಪರ ಒಂದಾಗುವ' ಭಾವನೆಯನ್ನು ಮೂಡಿಸುತ್ತದೆ. ವಾಸ್ತವವಾಗಿ ಮಗು ತಾಯಿಯ ಹಾಲನ್ನು ಕುಡಿಯುವಾಗಲೂ ಇದೇ ರಾಸಾಯನಿಕ ಬಿಡುಗಡೆಯಾಗಿ ತಾಯಿ-ಮಗುವಿನ ನಡುವೆ ಆಪ್ತವಾದ ಬಂಧನವನ್ನು ಸ್ಥಾಪಿಸುತ್ತದೆ. ಅಲ್ಲದೇ ಕೆಲವಾರು ಸಂಶೋಧನೆಗಳಲ್ಲಿ ಕಂಡುಕೊಂಡಿರುವ ಪ್ರಕಾರ ಏಕಸಂಗಾತಿ ನಿಷ್ಠೆಗೂ ಈ ಆಕ್ಸಿಟೋಸಿನ್ನೇ ಕಾರಣ ಎಂದು ಸಾಬೀತಾಗಿದೆ. ಅಷ್ಟಕ್ಕೂ ಸಂಗಾತಿಯ ಆತ್ಮೀಯತೆ, ಅನ್ಯೋನ್ಯತೆ, ವಿಶ್ವಾಸ, ಸಾನಿಧ್ಯ ಹಾಗೂ ಅಪಾರವಾದ ಏಕನಿಷ್ಠ ಪ್ರೀತಿ ಯಾರಿಗೆ ಬೇಕಾಗಿಲ್ಲ?

ಫಲವತ್ತತೆಯನ್ನು ಹೆಚ್ಚಿಸುತ್ತದೆ

ಫಲವತ್ತತೆಯನ್ನು ಹೆಚ್ಚಿಸುತ್ತದೆ

ಒಂದು ವೇಳೆ ದಂಪತಿಗಳು ಕರುಳಕುಡಿಗಾಗಿ ಹಂಬಲಿಸುತ್ತಿದ್ದು ಹಿಂದಿನ ಪ್ರಯತ್ನಗಳಲ್ಲಿ ಯಶ ಸಿಗದೇ ಇದ್ದರೆ ಈ ದಂಪತಿಗಳು ತಪ್ಪದೇ ಮುಂಜಾನೆಯ ಮಿಲನವನ್ನು ಪ್ರಯತ್ನಿಸಬೇಕು. ಏಕೆಂದರೆ ಈ ಸಮಯದ ಮಿಲನದಿಂದ ಫಲೀಕರಣದ ಸಾಧ್ಯತೆ ಹೆಚ್ಚುತ್ತದೆ. ಏಕೆಂದರೆ ಮುಂಜಾನೆಯ ಸಮಯದಲ್ಲಿ ಪುರುಷರ ದೇಹದಲ್ಲಿ ಟೆಸ್ಟಾಸ್ಟೆರೋನ್ ರಸದೂತ ಗರಿಷ್ಟ ಪ್ರಮಾಣದಲ್ಲಿ ಸ್ರವಿಸುತ್ತದೆ. ಮುಂಜಾನೆಯ ಸವಿನಿದ್ದೆಯಿಂದೆದ್ದು ಮಿಲನಕ್ರಿಯೆಯಲ್ಲಿ ಒಳಗೊಳ್ಳುವ ಮೂಲಕ ಹಾಗೂ ಸತತವಾಗಿ ಈ ಪ್ರಯತ್ನವನ್ನು ಮುಂದುವರೆಸುವ ಮೂಲಕ ಪುರುಷರ ವೀರ್ಯಾಣುಗಳ ಗುಣಮಟ್ಟವೂ ಸಾಂದ್ರತೆಯೂ ಹೆಚ್ಚುತ್ತದೆ.

ಮಾಸಿಕ ದಿನಗಳ ಸೆಡೆತದ ನೋವನ್ನು ಕಡಿಮೆ ಮಾಡುತ್ತದೆ

ಮಾಸಿಕ ದಿನಗಳ ಸೆಡೆತದ ನೋವನ್ನು ಕಡಿಮೆ ಮಾಡುತ್ತದೆ

ಮಾಸಿಕ ದಿನಗಳಲ್ಲಿ ಮಹಿಳೆಯರು ಸೆಡೆತ ಹಾಗೂ ಕೆಳಹೊಟ್ಟೆ ನೋವನ್ನು ಅನುಭವಿಸುತ್ತಾರೆ ಹಾಗೂ ಈ ಅವಧಿಯಲ್ಲಿ ಮನೋಭಾವವೂ ಅಪಾರವಾಗಿ ಏರುಪೇರಾಗುತ್ತದೆ. ಕೆಲವಾರು ಲೈಂಗಿಕ ತಜ್ಞರ ಪ್ರಕಾರ ಮುಂಜಾನೆಯ ಮಿಲನ ಈ ನೋವನ್ನು ಕಡಿಮೆ ಮಾಡುತ್ತದೆ, ಆದರೆ ಈ ತರ್ಕಕ್ಕೆ ಇದುವರೆಗೆ ವೈಜ್ಞಾನಿಕ ಪುರಾವೆ ಇಲ್ಲ. ಆದರೆ ಈ ವಿಧಾನವನ್ನು ಪ್ರಯತ್ನಿಸಿದ ಕೆಲವು ಮಹಿಳೆಯರ ಅನುಭವದ ಪ್ರಕಾರ ಈ ಮಾಹಿತಿ ನಿಜವಾಗಿದೆ. ಒಂದು ವೇಳೆ ಮಾಸಿಕ ದಿನಗಳು ಹತ್ತಿರವಿದ್ದರೆ ಮುಂಜಾನೆಯ ಮಿಲನವೇ ಕ್ಷೇಮಕರ! ಇದರಿಂದ ಮುಂದಿನ ಮೂರು ದಿನಗಳ ಕಾಲ ದೇಹ ಅತಿ ಕಡಿಮೆ ನೋವನ್ನು ಅನುಭವಿಸಲು ಸಾಧ್ಯವಾಗುತ್ತದೆ. ಅಲ್ಲದೇ ಮಾಸಿಕ ದಿನಗಳಲ್ಲಿಯೂ ಮುಂಜಾನೆಯ ಮಿಲನ ಸುಲಭಸಾಧ್ಯವಾಗಬಹುದು, ಏಕೆ ಪ್ರಯತ್ನಿಸಬಾರದು?

ಮುಂಜಾನೆಯ ಮಿಲನವೇ ಅತ್ಯುತ್ತಮ ಮಿಲನ

ಮುಂಜಾನೆಯ ಮಿಲನವೇ ಅತ್ಯುತ್ತಮ ಮಿಲನ

ಮಿಲನಕ್ಕೆ ಮುಂಜಾನೆಯ ಸಮಯವೇ ಅತ್ಯುತ್ತಮವಾಗಿದೆ. ಈ ಸಮಯದಲ್ಲಿ ಕೇವಲ ನಿದ್ದೆಯ ಮಂಪರು ನಿಮ್ಮನ್ನು ಹಿನ್ನಡೆಸುತ್ತದೆಯೇ ಹೊರತು ಒಮ್ಮೆ ನಿದ್ದೆಯಿಂದೆದ್ದು ತಣ್ಣೀರಿನಿಂದ ಮುಖ ತೊಳೆದು ಸ್ವಚ್ಛರಾಗಿ ಹೊರಬಂದಿರೆಂದರೆ ಸಾಕು, ಕೆಲವು ನಿಮಿಷಗಳಲ್ಲಿಯೇ ಮಿಲನಕ್ರಿಯೆಗೆ ಅಗತ್ಯವಿರುವಷ್ಟು ಶಕ್ತಿ ದೇಹದಲ್ಲಿ ತುಂಬಿಕೊಳ್ಳುತ್ತದೆ. ಅಲ್ಲದೇ ಪುರುಷರ ದೇಹದಲ್ಲಿ ಈ ಸಮಯದಲ್ಲಿ ಟೆಸ್ಟೋಸ್ಟೆರಾನ್ ಗರಿಷ್ಟ ಮಟ್ಟದಲ್ಲಿರುತ್ತದೆ ಹಾಗೂ ಪುರುಷರು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ. ಮುಂಜಾನೆಯ ಸಮಯದಲ್ಲಿ ಬೀಳುವ ಸಿಹಿಸ್ವಪ್ನಗಳ ಜೊತೆಜೊತೆಗೇ ಪುರುಷರ ಜನನಾಂಗದಲ್ಲಿ ಹೆಚ್ಚಿನ ರಕ್ತಸ್ರಾವವಾಗುತ್ತದೆ ಹಾಗೂ ಈ ಸ್ವಪ್ನದಿಂದ ಎದ್ದಾಗ ಜನನಾಂಗ ಉದ್ರೇಕಿತ ಸ್ಥಿತಿಯಲ್ಲಿರುವುದನ್ನು ಗಮನಿಸಬಹುದು! ಇದೇ ಕಾರಣಕ್ಕೆ ಪುರುಷರಿಂದ ಅತ್ಯುತ್ತಮ ಪ್ರದರ್ಶನವನ್ನು ನಿರೀಕ್ಷಿಸಬಹುದು.

ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆಯಾಗುವುದು!

ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆಯಾಗುವುದು!

ಮುಂಜಾನೆಯ ಮಿಲನದಿಂದ ಇವೆಲ್ಲಾ ನೇರವಾದ ಪ್ರಯೋಜನಗಳಾದರೆ ಪರೋಕ್ಷವಾಗಿಯೂ ಹಲವಾರು ಪ್ರಯೋಜನಗಳಿವೆ. ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುವುದು, ತಲೆನೋವು ಕಡಿಮೆಯಾಗುವುದು, ಹೃದಯದ ಕ್ಷಮತೆ ಉತ್ತಮಗೊಂಡು ಕಾಯಿಲೆಗಳ ಸಾಧ್ಯತೆ ಕಡಿಮೆಯಾಗುವುದು, ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆಯಾಗುವುದು ಮೊದಲಾದ ಪ್ರಯೋಜನಗಳಿವೆ. ಈ ಮಾಹಿತಿಗಳನ್ನೆಲ್ಲಾ ಅರಿತ ಬಳಿಕ ನಾಳೆ ಮುಂಜಾನೆಯಿಂದ ನೀವೇನು ಮಾಡಬೇಕೆಂದು ಈಗ ನಿಮಗೆ ಗೊತ್ತಿದೆ!

ನಿಮಗೆ ಯೌವನ ನೀಡುವುದು

ನಿಮಗೆ ಯೌವನ ನೀಡುವುದು

ಪ್ರತಿದಿನವೂ ತುಂಬಾ ತಾಜಾ ಹಾಗೂ ಆತ್ಮವಿಶ್ವಾಸದಿಂದ ಇರಬೇಕೆಂದು ಪ್ರತಿಯೊಬ್ಬರು ಬಯಸುವರು. ಸೆಕ್ಸ್ ಶ್ರೇಷ್ಠವಾಗಿ ನಿಮಗೆ ನೆರವಾಗುವುದು. ಲೈಂಗಿಕ ಕ್ರಿಯೆ ವೇಳೆ ಬಿಡುಗಡೆಯಾಗುವಂತಹ ಈಸ್ಟ್ರೋಜನ್ ನೀವು ಹದಿ ಹರೆಯದವರಂತೆ ಮತ್ತು ಸುಂದರವಾಗಿ ಕಾಣಲು ನೆರವಾಗುವುದು. ಇದು ಒಣ ಚರ್ಮ, ಮೊಡವೆ ನಿವಾರಣೆ ಮಾಡಿಕೊಂಡು, ಚರ್ಮಕ್ಕೆ ತೇವಾಂಶ ನೀಡುವುದು. ಇದರಿಂದ ನೆರಿಗೆ ತಡೆಯುವುದು. ಸೆಕ್ಸ್ ರಕ್ತಸಂಚಾರವನ್ನು ಸುಧಾರಿಸುವುದು. ಆರೋಗ್ಯಕರ ರಕ್ತಸಂಚಾರವು ಮುಖಕ್ಕೆ ಕಾಂತಿ ಹಾಗೂ ಸೌಂದರ್ಯ ನೀಡುವುದು. ಇದರಿಂದ ನೀವು ಮುಂಜಾನೆ ಬೇರೆ ಕೆಲಸವನ್ನು ಆರಂಭಿಸುವ ಮೊದಲು ಸೆಕ್ಸ್ ನಲ್ಲಿ ತೊಡಗಿಸಿಕೊಂಡರೆ ಒಳ್ಳೆಯದು.

ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ...

ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ...

ದಂಪತಿಗಳು ಲೈಂಗಿಕ ಕ್ರಿಯೆಗೆ ಮೊದಲು ಮತ್ತು ನಂತರ ಜನನಾಂಗಗಳನ್ನು ಸ್ವಚ್ಛಗೊಳಿಸಿಕೊಂಡು ತಮ್ಮನ್ನು ತಾವು ಸೋಂಕುಗಳಿಂದ ಕಾಪಾಡಿಕೊಳ್ಳುವುದು ಅತ್ಯಗತ್ಯ. ಮಹಿಳೆಯರು ಸಹ ಸಂಭೋಗದ ನಂತರ ಮೂತ್ರ ವಿಸರ್ಜನೆ ಮಾಡಿ, ತಮ್ಮ ಜನನಾಂಗದಲ್ಲಿರುವ ಸೋಂಕನ್ನು ಹೊರ ಹಾಕುವ ಪ್ರಯತ್ನ ಮಾಡಬೇಕು.

Read more about: health wellness
English summary

Benefits Of Morning Sex: Let Love Dawn On You

Having sex in the morning might just be the best time to have sex! It can add to your morning workout routine and help you start your day on a high. Morning sex also fights anxiety, reduces menstrual cramps, and improves fertility. Also, it gives your face a glow and lets you begin your day looking your best.Waking up in the morning, especially if you know you’re going to have a long day ahead, isn’t the easiest task. It’s tempting to just get back in the sheets – or the sack.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more