For Quick Alerts
ALLOW NOTIFICATIONS  
For Daily Alerts

ಗಿಡಮೂಲಿಕೆಗಳ ರಾಣಿ 'ತುಳಸಿ' ಎಲೆಗಳ, ಔಷಧೀಯ ಗುಣಗಳು

By Lekhaka
|

ಭಾರತೀಯರು ಅದರಲ್ಲೂ ಹಿಂದೂಗಳು ತುಳಸಿ ಗಿಡಕ್ಕೆ ನೀಡುವಷ್ಟು ಮಹತ್ವ ಬೇರೆ ಯಾರೂ ನೀಡಲಾರರರು. ಯಾಕೆಂದೆ ಹಿಂದೂಗಳಿಗೆ ತುಳಸಿ ತುಂಬಾ ಪವಿತ್ರ. ತುಳಸಿಯಲ್ಲಿ ಲಕ್ಷ್ಮೀಯು ನೆಲೆಸಿದ್ದಾಳೆಂದು ಹಿಂದೂಗಳು ಹಿಂದಿನಿಂದಲೂ ನಂಬಿಕೊಂಡು ಬಂದಿದ್ದಾರೆ. ತುಳಸಿಯನ್ನು ಹಲವಾರು ರೀತಿಯ ಆಯುರ್ವೇದ ಔಷಧಿಗಳಲ್ಲಿಯೂ ಬಳಸಲಾಗುತ್ತಾ ಇದೆ. ಇದರಲ್ಲಿ ಇರುವಂತಹ ಔಷಧಿಯ ಗುಣಗಳು ಮಾನವನ ದೇಹಕ್ಕೆ ತುಂಬಾ ಒಳ್ಳೆಯದು.

health Benefits of Tulsi Leaves

ತುಳಸಿ-ಗ್ರೀನ್ ಟೀಯ ಜೋಡಿ-ಮಾಡಲಿದೆ ಕಮಾಲಿನ ಮೋಡಿ

ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಇದರಲ್ಲಿರುವ ಔಷಧಿಯ ಗುಣವನ್ನು ಕಂಡುಕೊಂಡಿರುವ ಇತರ ದೇಶಗಳು ಕೂಡ ತುಳಸಿ ಗಿಡಗಳನ್ನು ಬೆಳೆಸಲು ಆರಂಭಿಸಿದೆ. ತುಳಸಿಯಲ್ಲಿ ನಿಮಗೆ ತಿಳಿಯದೆ ಇರುವಂತಹ ಕೆಲವೊಂದು ಔಷಧಿಯ ಗುಣಗಳ ಬಗ್ಗೆ ಈ ಲೇಖನ ಮೂಲಕ ತಿಳಿಸಿಕೊಡಲಿದ್ದೇವೆ. ಇದನ್ನು ಓದಿಕೊಂಡು ನೀವು ಇದರ ಲಾಭ ಪಡೆದುಕೊಳ್ಳಬಹುದು. ಸೂಚನೆ: ಅಲೋವೆರಾದ ಬಗ್ಗೆ ನೀವು ನಿನ್ನೆ ಓದಲು ಮರೆತಿದ್ದರೆ ಅದನ್ನು ಇಲ್ಲಿ ಓದಿಕೊಳ್ಳಬಹುದು.

ತುಳಸಿಯಲ್ಲಿ ಮಧುಮೇಹ ವಿರೋಧಿ ಗುಣಗಳಿವೆ

ತುಳಸಿಯಲ್ಲಿ ಮಧುಮೇಹ ವಿರೋಧಿ ಗುಣಗಳಿವೆ

ತುಳಸಿ ಗಿಡದಲ್ಲಿ ಮಧುಮೇಹ ವಿರೋಧಿ ಗುಣಗಳು ಇವೆ ಎಂದು ಈಗಾಗಲೇ ಸಾಬೀತಾಗಿದೆ. ಪ್ರಾಣಿಗಳ ಮೇಲೆ ನಡೆಸಿದ ಅಧ್ಯಯನ ಮತ್ತು ಮನುಷ್ಯರ ಮೇಲೆ ಪ್ರಯೋಗ ಮಾಡಿದ ಸಂದರ್ಭದಲ್ಲಿ ತುಳಸಿ ಗಿಡವು ಅಸಾಮಾನ್ಯ ಸಕ್ಕರೆ ಅಂಶವನ್ನು ಕಡಿಮೆ ಮಾಡುವುದು, ಕೊಲೆಸ್ಟ್ರಾಲ್ ನ್ನು ನಿಯಂತ್ರಿಸುವುದು ಮತ್ತು ಮಧುಮೇಹದಿಂದ ಕಿಡ್ನಿ ಮತ್ತು ಯಕೃತ್ ಗೆ ಆಗಿರುವ ಹಾನಿ ತಡೆಗಟ್ಟುವುದು.

ಕ್ಯಾನ್ಸರ್ ವಿರುದ್ಧ ಪರಿಣಾಮಕಾರಿ ಮತ್ತು ಅದು ಬರದಂತೆ ತಡೆಯುವುದು

ಕ್ಯಾನ್ಸರ್ ವಿರುದ್ಧ ಪರಿಣಾಮಕಾರಿ ಮತ್ತು ಅದು ಬರದಂತೆ ತಡೆಯುವುದು

ನಿಯಮಿತವಾಗಿ ತುಳಸಿ ಚಹಾ ಸೇವನೆ ಮಾಡುವುದರಿಂದ ಕ್ಯಾನ್ಸರ್ ನ್ನು ತಡೆಗಟ್ಟಲು ಪರಿಣಾಮಕಾರಿಯಾಗಲಿದೆ. ತುಳಸಿ ಚಹಾ ಕುಡಿಯುವುದರಿಂದ ಬಾಯಿ ಕ್ಯಾನ್ಸರ್, ಚರ್ಮ, ಶ್ವಾಸಕೋಶ ಮತ್ತು ಯಕೃತ್‌ನ ಕ್ಯಾನ್ಸರ್ ತಡೆಗಟ್ಟಬಹುದು. ತುಳಸಿ ಎಲೆಗಳಲ್ಲಿ ಇರುವಂತಹ ಫೈಥೊಕೆಮಿಕಲ್ ಸಾಮಾನ್ಯ ಕೋಶಗಳು ಕ್ಯಾನ್ಸರ್ ಕೋಶಗಳಾಗಿ ಪರಿವರ್ತನೆಯಾಗದಂತೆ ತಡೆಯುವುದು ಮತ್ತು ಆರಂಭಿಕ ಹಂತದ ಕ್ಯಾನ್ಸರ್ ವರ್ಗಾವಣೆಯಾದಂತೆ ನೋಡಿಕೊಳ್ಳುವುದು.

ಪ್ರತಿರೋಧಕ ಶಕ್ತಿ ಹೆಚ್ಚಳ

ಪ್ರತಿರೋಧಕ ಶಕ್ತಿ ಹೆಚ್ಚಳ

ನಿಯಮಿತವಾಗಿ ತುಳಸಿ ಸೇವನೆ ಮಾಡುವವರಲ್ಲಿ ತುಳಸಿ ಸೇವನೆ ಮಾಡದೆ ಇರುವವರಿಗಿಂತ ಪ್ರತಿರೋಧಕ ಶಕ್ತಿಯು ಹೆಚ್ಚಿರುವುದು. ತುಳಸಿ ಗಿಡದಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ದೇಹದಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಿ ಫ್ರೀ ರ್ಯಾಡಿಕಲ್ ತೆಗೆದುಹಾಕುವುದು.

ವಿಕಿರಣ ವಿಷದಿಂದ ಇದು ರಕ್ಷಿಸುವುದು

ವಿಕಿರಣ ವಿಷದಿಂದ ಇದು ರಕ್ಷಿಸುವುದು

ಎಕ್ಸ್ ರೇ ಮಾಡುವ ಸಂದರ್ಭದಲ್ಲಿ ನಿಮ್ಮ ದೇಹಕ್ಕೆ ಒಗ್ಗಿಕೊಳ್ಳುವ ವಿಕಿರಣವು ಪ್ರತಿನಿತ್ಯ ನೀವು ಸೂರ್ಯ ಮತ್ತು ಭೂಮಿಯ ವಿಕಿರಣಕ್ಕೆ ಒಗ್ಗಿಕೊಳ್ಳುವುದರಿಂದ ತುಂಬಾ ಕಡಿಮೆ ಇದೆ. ಈ ವಿಕಿರಣಗಳು ನಿಮ್ಮ ದೇಹದಲ್ಲಿ ಮಾರಣಾಂತಿಕ ಬದಲಾವಣೆ ತರಬಹುದು. ಆದರೆ ಪ್ರತಿನಿತ್ಯ ತುಳಸಿ ಚಹಾ ಸೇವನೆ ಮಾಡಿದರೆ ಇದನ್ನು ನಿವಾರಣೆ ಮಾಡಬಹುದು. ತುಳಸಿಯಲ್ಲಿರುವಂತಹ ಆ್ಯಂಟಿಆಕ್ಸಿಡೆಂಟ್ ವಿಕಿರಣಗಳಿಂದ ಉಂಟಾಗುವ ಫ್ರೀ ರ್ಯಾಡಿಕಲ್‌ನ್ನು ನಿವಾರಣೆ ಮಾಡುವುದು. ದೇಹದಲ್ಲಿ ಆ್ಯಂಟಿಆಕ್ಸಿಡೆಂಟ್ ಕಿಣ್ವಗಳ ಸ್ರವಿಸುವಿಕೆಯನ್ನು ಇದು ಉತ್ತೇಜಿಸುವುದು.

ಮೊಡವೆಗಳಿಗೆ ಪರಿಣಾಮಕಾರಿ

ಮೊಡವೆಗಳಿಗೆ ಪರಿಣಾಮಕಾರಿ

ಚರ್ಮದ ರಂಧ್ರಗಳು ಧೂಳು ಮತ್ತು ತೈಲದಿಂದ ತುಂಬಿಕೊಂಡಾಗ ಈ ಜಾಗದಲ್ಲಿ ಬ್ಯಾಕ್ಟೀರಿಯಾವು ಮನೆಮಾಡಿ ಬೆಳವಣಿಗೆಯಾಗುವುದು. ಇದರಿಂದಾಗಿ ಮೊಡವೆ ಕಾಣಿಸಿಕೊಳ್ಳುತ್ತದೆ. ತುಳಸಿ ಚಹಾ ಕುಡಿಯುವುದರಿಂದ ದೇಹದ ಹೊರಗಡೆ ಹಾಗೂ ಒಳಗಡೆ ಶುದ್ಧೀಕರಿಸಲು ನೆರವಾಗುವುದು.

ತುಳಸಿ ಎಲೆಗಳಿಂದ ಒತ್ತಡ ನಿವಾರಣೆ

ತುಳಸಿ ಎಲೆಗಳಿಂದ ಒತ್ತಡ ನಿವಾರಣೆ

ನಮ್ಮ ಸುತ್ತಮುತ್ತಲಿನ ವಾತಾರಣದಲ್ಲಿರುವ ಕೆಲವೊಂದು ಹಾನಿಕಾರಕ ವಸ್ತುಗಳಿಂದ ದೇಹವು ನಮ್ಮ ಸುರಕ್ಷಿತವಾಗಿಡಲು ಪ್ರಯತ್ನಿಸುವುದು. ಆದರೆ ಕೆಲವೊಂದು ಸಲ ದೇಹ ಕೂಡ ಇಂತಹ ಸಂದರ್ಭದಲ್ಲಿ ಒತ್ತಡದ ಹಾರ್ಮೋನು ಹಾಗಿರುವ ಕೊರ್ಟಿಸೊಲ್ ಬಿಡುಗಡೆಯನ್ನು ಇದು ಹೆಚ್ಚಿಸುವುದು. ಅಲ್ಪಾವಧಿಯಲ್ಲಿ ಕೊರ್ಟಿಸೊಲ್ ನಿಂದ ದೇಹಕ್ಕೆ ಯಾವುದೇ ರೀತಿಯ ಪರಿಣಾಮವಾಗದು. ಆದರೆ ದೀರ್ಘಕಾಲಕ್ಕೆ ಇದರಿಂದ ಬೊಜ್ಜು, ಏಕಾಗ್ರತೆ ಮತ್ತು ನೆನೆಪಿನ ಶಕ್ತಿಯ ತೊಂದರೆ, ಪ್ರತಿರೋಧಕ ಶಕ್ತಿ ಕಡಿಮೆಯಾಗುವುದು, ಎಲುಬು ದುರ್ಬಲವಾಗುವುದು, ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದು ಮತ್ತು ಹೃದಯದ ಕಾಯಿಲೆಗಳು ಬರಬಹುದು. ಆದರೆ ತುಳಸಿ ಚಹಾ ಕುಡಿಯುವುದರಿಂದ ಈ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. ತುಳಸಿಯಲ್ಲಿ ಶಮನಕಾರಿ ಮತ್ತು ಒತ್ತಡ ನಿವಾರಣೆ ಮಾಡುವಂತಹ ಗುಣಗಳು ಇವೆ. ನೀವು ಅತಿಯಾದ ಒತ್ತಡಕ್ಕೆ ಒಳಗಾಗಿದ್ದರೆ ಪ್ರತಿನಿತ್ಯ ತುಳಸಿ ಚಹಾ ಕುಡಿಯಿರಿ.

ಜ್ವರ ಕಡಿಮೆ ಮಾಡುವುದು

ಜ್ವರ ಕಡಿಮೆ ಮಾಡುವುದು

ದೇಹದಲ್ಲಿ ಉಂಟಾಗಿರುವ ಸೋಂಕಿನ ವಿರುದ್ಧ ಹೋರಾಡಲು ನೆರವಾಗುವ ತುಳಸಿಯು ಜ್ವರ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಕೆಮ್ಮು ಮತ್ತು ಇತರ ಶ್ವಾಸಕೋಶದ ಸಮಸ್ಯೆಗೆ

ಕೆಮ್ಮು ಮತ್ತು ಇತರ ಶ್ವಾಸಕೋಶದ ಸಮಸ್ಯೆಗೆ

ತುಳಸಿಯು ಅಸ್ತಮಾ ರೋಗಿಗಳಿಗೆ ತುಂಬಾ ಪರಿಣಾಮಕಾರಿ. ಇದು ಶ್ವಾಸಕೋಶದ ದಟ್ಟಣೆ ನಿವಾರಣೆ ಮಾಡಿ ಗಾಳಿಯು ಸರಾಗವಾಗಿ ಹಾದುಹೋಗಲು ನೆರವಾಗುವುದು. ತುಳಸಿಯಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕೆಮ್ಮು ಮತ್ತು ಶೀತ ನಿವಾರಿಸುವುದು.

ವಿಟಮಿನ್ ಕೆ ಸಮೃದ್ಧವಾಗಿದೆ

ವಿಟಮಿನ್ ಕೆ ಸಮೃದ್ಧವಾಗಿದೆ

ರಕ್ತ ಹೆಪ್ಪುಗಟ್ಟಲು ಪ್ರಮುಖವಾಗಿ ಬೇಕಾಗಿರುವ ಅಂಶವೆಂದರೆ ವಿಟಮಿನ್ ಕೆ. ಇದು ದೇಹದ ಎಲುಬುಗಳ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಇದರಿಂದ ಪ್ರತಿನಿತ್ಯ ನೀವು ಒಂದು ಕಪ್ ತುಳಸಿ ಚಹಾ ಕುಡಿದರೆ ಅದು ಒಳ್ಳೆಯದು. ಇದರಿಂದ ನಿಮ್ಮ ದೇಹಕ್ಕೆ ದಿನನಿತ್ಯಕ್ಕೆ ಬೇಕಾಗುವ ವಿಟಮಿನ್ ಕೆ. ಸಿಗುವುದು.

ಬಾಯಿಯ ಸಮಸ್ಯೆ ನಿವಾರಣೆ

ಬಾಯಿಯ ಸಮಸ್ಯೆ ನಿವಾರಣೆ

ಹಲ್ಲಿನ ಕುಳಿಗಳಿಂದ ಹಿಡಿದು ಒಸಡಿನ ಸಮಸ್ಯೆ ತನಕ ತುಳಸಿ ಎಲೆಗಳನ್ನು ಜಗಿದರೆ ಅದರಿಂದ ಶ್ರೇಷ್ಠ ಮಟ್ಟದ ಲಾಭ ಸಿಗುವುದು. ಇದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡಿ ಬಾಯಿಯ ಆರೋಗ್ಯ ಕಾಪಾಡುವುದು. ದುರ್ವಾಸನೆಯ ಉಸಿರನ್ನು ತಡೆಯುವುದು.

ಮೈಗ್ರೇನ್ ಮತ್ತು ಸೈನಸೈಟಿಸ್‌ಗೆ ಪರಿಣಾಮಕಾರಿ

ಮೈಗ್ರೇನ್ ಮತ್ತು ಸೈನಸೈಟಿಸ್‌ಗೆ ಪರಿಣಾಮಕಾರಿ

ಹಣೆ ಮತ್ತು ಕಣ್ಣಿನ ಭಾಗದಲ್ಲಿ ಕಾಣಿಸಿಕೊಳ್ಳುವ ನೋವನ್ನು ಮೈಗ್ರೇನ್ ತಲೆನೋವು ಎಂದು ಕರೆಯಲಾಗುತ್ತದೆ. ಸೈನಟೈಟೀಸ್ ಎಂದರೆ ನೈಸರ್ಗಿಕ ಗಾಳಿಯು ತಲೆಬುರುಡೆ ಮೂಲಕ ಹಾದುಬರುವುದು. ಇದರೊಂದಿಗೆ ಕಫ ಕೂಡ ಇರುವುದು. ಈ ಎರಡು ಸಂದರ್ಭದಲ್ಲಿ ತಲೆಯಲ್ಲಿ ನೋವು ಕಾಣಿಸಿಕೊಳ್ಳುವುದು ಮತ್ತು ತಲೆಭಾರವಾಗುವುದು. ಇಂತಹ ಪರಿಸ್ಥಿತಿಯಿಂದ ನೀವು ಬಳಲುತ್ತಿದ್ದರೆ ತುಳಸಿ ಚಹಾ ಸೇವನೆ ಮಾಡಿ. ಇದು ತುಂಬಾ ಪರಿಣಾಮಕಾರಿ ನೋವು ನಿವಾರಕ ಮತ್ತು ಸೈನಸ್ ನ್ನು ಮುಕ್ತಗೊಳಿಸುವುದು.

ತುಳಸಿ ಎಲೆಗಳ ಸೇವನೆ ಮಾಡುವುದು ಹೇಗೆ?

ತುಳಸಿ ಎಲೆಗಳನ್ನು ಎರಡು ವಿಧಗಳಲ್ಲಿ ಸೇವನೆ ಮಾಡಬಹುದು. ಒಂದು ತುಳಸಿ ಗಿಡವನ್ನು ಮನೆಯಲ್ಲಿ ಇಟ್ಟುಕೊಂಡು ಅದರ ಕೆಲವು ಎಲೆಗಳನ್ನು ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ. 4-5 ತುಳಸಿ ಎಲೆಗಳು ಅಥವಾ ಒಂದು ಚಮಚ ತುಳಸಿ ಚಹಾವನ್ನು ಬಿಸಿ ನೀರಿಗೆ ಹಾಖಿ ಕೆಲವು ನಿಮಿಷ ಕುದಿಸಬೇಕು. ಈ ಚಹಾವನ್ನು ದಿನದಲ್ಲಿ ಒಂದು ಸಲ ಕುಡಿಯಬೇಕು. ಈ ಚಹಾಗೆ ಶುಂಠಿ ಮತ್ತು ಲವಂಗ ಹಾಕಿದರೆ ಮತ್ತಷ್ಟು ಲಾಭಗಳು ಸಿಗುವುದು.

ಈ ಲೇಖನ ಓದಿ ನಿಮಗೆ ತುಂಬಾ ಖುಷಿಯಾಗಿದ್ದರೆ ಶೇರ್ ಮಾಡಿ. ಯಾಕೆಂದರೆ ನಿಮ್ಮಿಂದಾಗಿ ಮತ್ತಷ್ಟು ಜನರು ತುಳಸಿ ಎಲೆಗಳ ಆರೋಗ್ಯ ಲಾಭ ಪಡೆಯಬಹುದು.

English summary

You Will Be Surprised by These Benefits of Tulsi Leaves

Tulsi, or Holy Basil (as it is known around the world), is a plant of incredible significance in India because Hindus worship the Tulsi plant as a manifestation of the Goddess Tulsi. But did you know that Tulsi is also revered in Ayurveda for its incredible medicinal properties? Or that it is now grown in most tropical countries around the world because of a growing demand for Tulsi tea among the health-conscious? Well, you can prepare to be surprised by a lot more facts and benefits of Tulsi than these because in this article we are going to discuss exactly that.
Story first published: Thursday, November 9, 2017, 12:25 [IST]
X
Desktop Bottom Promotion