ಏನಿದು ಸೋರಿಯಾಸಿಸ್ ಕಾಯಿಲೆ? ವೈದ್ಯರು ಇದರ ಬಗ್ಗೆ ಏನು ಹೇಳುತ್ತಾರೆ?

By Hemanth
Subscribe to Boldsky

ಮನುಷ್ಯನಾದ ಮೇಲೆ ಕಾಯಿಲೆಗಳು ಬಂದೇ ಬರುತ್ತವೆ. ಒಂದಲ್ಲಾ ಒಂದು ರೀತಿಯ ಕಾಯಿಲೆಯಿಂದ ಮನುಷ್ಯ ಬಳಲುತ್ತಾ ಇರುತ್ತಾನೆ. ಮಕ್ಕಳಿಂದ ಹಿಡಿದು ದೊಡ್ಡವರ ತನಕ ಪ್ರತಿಯೊಬ್ಬರು ಏನಾದರೊಂದು ಕಾಯಿಲೆಯಿಂದ ಬಳಲುವರು. ಸಂಪೂರ್ಣ ಆರೋಗ್ಯ ಪಡೆದವರು ತುಂಬಾ ಕಡಿಮೆ ಎನ್ನಬಹುದು. ಅದರಲ್ಲೂ ಸೋರಿಯಾಸಿಸ್ ಎನ್ನುವ ಕಾಯಿಲೆಯು ವಿಶ್ವದ ಶೇ. 2ರಷ್ಟು ಜನರನ್ನು ಕಾಡುತ್ತಿದೆ. ವಿಶ್ವದಲ್ಲಿ ಸುಮಾರು 125 ದಶಲಕ್ಷ ಜನರು ಸೋರಿಯಾಸಿಸ್ ಕಾಯಿಲೆಯ ತೊಂದರೆಗೆ ಸಿಲುಕಿರುವರು.

ದೇಹದ ತುಂಬೆಲ್ಲಾ ಕೆಂಪು ಕಲೆಗಳು ಬರುವುದು, ತುರಿಕೆ, ನೋವು ಮತ್ತು ಕೆಲವೊಂದು ಸಲ ರಕ್ತಸ್ರಾವವು ಆಗುವುದುಂಟು. ಇದು ಸಾಂಕ್ರಾಮಿಕ ರೋಗವಲ್ಲದಿದ್ದರೂ ಇಂತಹ ಸಮಸ್ಯೆ ಇರುವವರನ್ನು ಮುಟ್ಟಲು ಹಿಂದೇಟು ಹಾಕುವಂತಹ ಪರಿಸ್ಥಿತಿಯಿದೆ. ಈ ವಿಚಾರವಾಗಿ ಬೆಂಗಳುರಿನ ಮಣೆಪಾಲ ಆಸ್ಪತ್ರೆಯ ಸಮಾಲೋಚನ ಚರ್ಮರೋಗ ವೈದ್ಯೆ ಡಾ. ಮುಕ್ತಾ ಸಚದೇವ್ ಅವರಿಂದ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಬೋಲ್ಡ್ ಸ್ಕೈ ನಿಮ್ಮ ಮುಂದಿಡುತ್ತಾ ಇದೆ. ಸೂಚನೆ: ಆವರಣದಲ್ಲಿ ಇರುವಂತಹ ಮಾಹಿತಿ ಬೋಲ್ಡ್ ಸ್ಕೈ ನೀಡಿರುವುದು.

 What is Psoriasis

1. ಸೋರಿಯಾಸಿಸ್ ಎಂದರೇನು?

ಚರ್ಮದ ಮೇಲಿನ ಪದರವು ಅತಿಯಾಗಿ ಉತ್ಪತ್ತಿಯಾಗಲು ಆರಂಭವಾಗುವುದನ್ನು ಸೋರಿಯಾಸಿಸ್ ಎಂದು ಕರೆಯಲಾಗುವುದು. ಇದರಿಂದ ಮೊಣಕೈ, ಮೊಣಕಾಲು, ಬೆನ್ನಿನ ಕೆಳಭಾಗ ಮತ್ತು ತಲೆಬುರುಡೆ ಮೇಲೆ ಪರಿಣಾಮವಾಗುವುದು. ಅಂಗೈ, ಪಾದ, ಉಗುರು, ತೊಡೆಸಂಧಿನ ಮೇಲೆ ಪರಿಣಾಮವಾಗುವುದು. ಇನ್ನು ಕೆಲವೊಮ್ಮೆ ಇದು ಸಂಪೂರ್ಣ ದೇಹದ ಮೇಲೆ ಪರಿಣಾಮ ಬೀರುವುದು.

2.ಇದು ಸಾಂಕ್ರಾಮಿಕವೇ?

ಸೋರಿಯಾಸಿಸ್ ಎನ್ನುವುದು ಸಾಂಕ್ರಾಮಿಕ ರೋಗವಲ್ಲ. ಸೋರಿಯಾಸ್ ಇರುವವರೊಂದಿಗೆ ಕೈ ಮಿಲಾಯಿಸುವುದು, ಅಪ್ಪಿಕೊಳ್ಳುವುದು ಅಥವಾ (ಬಟ್ಟೆ, ಪಾತ್ರೆ ಮತ್ತು ಪಿಠೋಪಕರಣ) ಬಳಸುವುದರಿಂದ ಏನೂ ಆಗಲ್ಲ.

3.ಸೋರಿಯಾಸಿಸ್ ನ್ನು ಅಟೋಇಮ್ಯೂನ್ಯೂ ಕಾಯಿಲೆಯೆಂದು ಕರೆಯಲಾಗುತ್ತದೆ. ಪ್ರತಿರೋಧಕ ಶಕ್ತಿಯು ಹೀಗೆ ವಿಫಲವಾಗಲು ಕಾರಣವೇನು? ಇದು ಅನುವಂಶೀಯವೇ? ಅಥವಾ ಯಾವುದೇ ಸಂಪರ್ಕಕ್ಕೆ ದೇಹವು ಒಕ್ಕಿಕೊಳ್ಳುವುದರಿಂದ ಹೀಗೆ ಆಗುವುದೇ?

ಸೋರಿಯಾಸಿಸ್ ಗೆ ಹಲವಾರು ಕಾರಣಗಳು ಇವೆ. ಮೊದಲನೇಯದಾಗಿ ಸೋರಿಯಾಸಿಸ್ ರೋಗಿಗಳಿಗೆ ರೋಗದ ಅನುವಂಶೀಯ ಪ್ರವೃತ್ತಿಯು ಹಚ್ಚಿಕೊಳ್ಳಬಹುದು. ವಂಶವಾಹಿನಿಯು ಇದರ ಮೇಲೆ ಪರಿಣಾಮ ಬೀರುವುದು ಎಂದು ಈಗಾಗಲೇ ಪತ್ತೆಯಾಗಿದೆ. ಕುಟುಂಬದಲ್ಲಿ ಯಾರಿಗಾದರೂ ಸೋರಿಯಾಸಿಸ್ ಸಮಸ್ಯೆಯಿದ್ದರೆ ಅದು ಬರುವ ಸಾಧ್ಯತೆಯು ಹೆಚ್ಚಿದೆ. ಎರಡನೇಯದಾಗಿ ಕೆಲವೊಂದು ಅಲ ಇದು ಹೊರಗಿನ ಪರಿಸರ ಅಂಶಗಳಿಂದಲೂ ಬರಬಹುದು. ಅತಿಯಾದ ಚಳಿಯ ವಾತಾವರಣ, ದೈಹಿಕ ಗಾಯ, ಸೋಂಕು(ಸ್ಟ್ರೆಪ್ಟೊಕೊಕಲ್, ಸ್ಟ್ಯಾಫಿಲೋಕೊಕಲ್, ಮತ್ತು ಎಚ್ಐವಿ ಸೋಂಕುಗಳು), ಆಲ್ಕೋಹಾಲ್ ಸೇವನೆ, ಧೂಮಪಾನ ಮತ್ತು ಔಷಧಿ(ರಕ್ತದೊತ್ತಡದ ಮಾತ್ರೆ, ಹೃದಯಾಘಾತದ ಮಾತ್ರೆ, ವಿರೋಧಿ ಮನೋಕೃತಿಯ ಮಾತ್ರೆ ಮತ್ತು ಮಲೇರಿಯಾದ ಮಾತ್ರೆ) ಸಿರಾಯ್ಡ್ ಮಾತ್ರೆಗಳ ಬಿಟ್ಟುಬಿಡುವುದು ಇತ್ಯಾದಿ.

ಮೂರನೇಯದಾಗಿ ಪ್ರತಿರೋಧಕ ಕೋಶಗಳು ಅತಿಯಾಗಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದಲೂ ಸೋರಿಯಾಸಿಸ್ ಬರಬಹುದು. ಅಂತಿಮವಾಗಿ ಒತ್ತಡ.

ಮಾನಸಿಕ ಹಾಗೂ ದೈಹಿಕ ಒತ್ತಡವು ಈ ಕಾಯಿಲೆಯನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ.

 What is Psoriasis

Image Source

4. ಸ್ಟ್ರೆಪ್ಟೋಕೊಕಲ್ ಸೋಂಕುಗಳು ಸೋರಿಯಾಸಿಸ್ ಗೆ ಕಾರಣವಾಗುವುದು ಯಾಕೆ? ಇದು ಎಷ್ಟು ಸಾಮಾನ್ಯ

ಟಿ ಕೋಶದ ಚಟುವಟಿಕೆ ಹೆಚ್ಚು ಪ್ರಚೋದನೆಗೆ ಒಳಗಾಗುವುದಕ್ಕೆ ಸೋರಿಯಾಸಿಸ್ ಸಂಬಂಧಪಟ್ಟಿದೆ. . ಸ್ಟ್ರೆಪ್ಟೋಕೊಕಲ್ ಸೋಂಕುಗಳು, ಬ್ಯಾಕ್ಟೀರಿಯಾದ ಪೆಪ್ಟೈಡ್ ಗಳು (ಸ್ಟ್ರೆಪ್ಟೋಕೊಕಲ್ ಸೂಪರ್ಟೈಜೆನ್ ಗಳು) ಚರ್ಮದ ಕಾಲಜನ್ ಜೊತೆಗೆ ಅಡ್ಡ-ಪ್ರತಿಕ್ರಿಯಿಸುತ್ತವೆ ಮತ್ತು ರೋಗಿಗಳಲ್ಲಿ ಹೆಚ್ಚಿದ ಟಿ ಕೋಶಗಳ ಚಟುವಟಿಕೆಯನ್ನು ಉಂಟುಮಾಡುತ್ತವೆ. ಈ ರೀತಿಯ ಸೋರಿಯಾಸಿಸ್ ನ್ನು ಗಟ್ಟೇಟ್ ಸೋರಿಯಾಸಿಸ್ ಎಂದು ಕರೆಯಲಾಗುತ್ತದೆ.

5.ಕೆಲವೊಂದು ರೀತಿಯ ಔಷಧಿಗಳಾದ ಐಬುಪ್ರೊಫೇನ್ (ನೋವು ನಿವಾರಕ), ಬೀಟಾ-ಬ್ಲಾಕರ್ ಗಳು (ರಕ್ತದೊತ್ತಡಕ್ಕಾಗಿ ಔಷಧ), ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ (ಮಲೇರಿಯಾ-ವಿರೋಧಿ) ದಿಂದ ಸೋರಿಯಾಸಿಸ್ ಉಂಟಾಗಲು ಕಾರಣವೇನು?

ಈ ಔಷಧಿಗಳು ದೇಹದಲ್ಲಿ ರೋಗನಿರೋಧಕ ಕ್ಯಾಸ್ಕೇಡ್ ಗಳನ್ನು ಉಂಟು ಮಾಡುವುದು. ಇದರಿಂದ ಸೋರಿಯಾಸಿಸ್ ಮತ್ತಷ್ಟು ಹೆಚ್ಚಾಗುವುದು.

6. ಸೋರಿಯಾಸಿಸ್ ನಲ್ಲಿರುವ ವಿಧಗಳು ಯಾವುದು ಮತ್ತು ಅತ್ಯಂತ ಸಾಮಾನ್ಯವಾಗಿರುವಂತದ್ದು ಯಾವುದು?

ದೀರ್ಘಕಾಲದ ಪದರ ಸೋರಿಯಾಸಿಸ್: (ಚರ್ಮದ ಮೇಲೆ ಕೆಂಪು ಪದರದೊಂದಿಗೆ ಬಿಳಿಯ ಗೆರೆಗಳು ತುರಿಕೆ, ಒಡೆಯುವುದು, ನೋವು ಮತ್ತು ರಕ್ತಸೋರಿಕೆ ಉಂಟು ಮಾಡುವುದು). ಇದು ಕೈಯ ಉಗುರು, ಕಾಲಿನ ಉಗುರು ಮತ್ತು ತಲೆಬುರುಡೆ ಮೇಲೆ ಪರಿಣಾಮ ಬೀರುವುದು.

ವಿಲೋಮಾ ಸೋರಿಯಾಸಿಸ್: (ಕೆಂಪು ಹಾಗೂ ತುಂಬಾ ಕಾಂತಿಯಿಂದ ಇರುವ ಸೋರಿಯಾಸಿಸ್ ಕಂಕುಳ ಹಾಗೂ ತೊಡೆಸಂಧುಗಳಲ್ಲಿ ಸಾಮಾನ್ಯವಾಗಿ ಕಾಣಸಿಕೊಳ್ಳುವುದು)

ಸೋರಿಯಾಸಿಸ್ ಸಂಧಿವಾತ:(ಸೋರಿಯಾಸಿಸ್ ನಿಂದ ಬಳಲುವ ಶೇ.30ರಷ್ಟು ಜನರು ಸೋರಿಯಾಸಿಸ್ ನ ಸಂಧಿವಾತ ಸಮಸ್ಯೆಗೆ ಗುರಿಯಾಗುವರು. ಇದರಿಂದ ದೇಹದ ಎಲ್ಲಾ ಗಂಟುಗಳ ಮೇಲೆ ಪರಿಣಾಮ ಬೀರುವುದು. ಗಂಟುಗಳಲ್ಲಿ ಊತ ಉಂಟಾಗಿ ಅತಿಯಾದ ನೋವು ಕಾಣಿಸಿಕೊಳ್ಳುವುದು.

ಗುಟ್ಟೇಟ್ ಸೋರಿಯಾಸಿಸ್: (ಬಾಲ್ಯದಲ್ಲಿ ಹದಿಹರೆಯದಲ್ಲೇ ಇದು ಆರಂಭವಾಗುವುದು. ಇದು ತುಂಬಾ ಸಣ್ಣ, ಕೆಂಪು ಕಲೆಗಳದ್ದು ಎಂದು ವಿಭಾಗಿಸಲಾಗಿದೆ. ಇದು ಕೈ, ಕಾಲು ಮತ್ತು ಮುಂಡದ ಮೇಲೆ ಕಂಡುಬರುವುದು.

ಪಸ್ಟುಲರ್ ಸೋರಿಯಾಸಿಸ್: (ಕೆಂಪು, ಚರ್ಮದ ಮೇಲೆ ಪದರಗಳು ಮೂಡುವುದು. ಇದು ಗಂಟುಗಳಲ್ಲಿಯೂ ಅಂಡಿಕೊಂಡಿರುವುದು.

ಎರಿಥ್ರೋಡರ್ಮಿಕ್ ಸೋರಿಯಾಸಿಸ್: (ಆಗಾಗ ಇದು ಉಂಟುಆಗುವುದು. ಕೆಂಪು ರದ್ದುಗಳಿಂದ ನಿರೂಪಿಸ್ಪಟ್ಟಿರುವ ಇವುಗಳು ತುರಿಕೆ ಉಂಟು ಮಾಡಿ ಭಾರೀ ಉರಿ ಉಂಟು ಮಾಡುವುದು. ಇದಕ್ಕೆ ತಕ್ಷಣ ವೈದ್ಯರ ನೆರವು ಪಡೆಯಬೇಕು. ) ಇವುಗಳಲ್ಲಿ ದೀರ್ಘಕಾಲದ ಸೋರಿಯಾಸಿಸ್ ಸಾಮಾನ್ಯವಾಗಿರುವುದು.

7. ಎರಿಥ್ರೋಡರ್ಮಿಕ್ ಸೋರಿಯಾಸಿಸ್ ಬಗ್ಗೆ ಸ್ವಲ್ಪ ವಿವರವಾಗಿ ತಿಳಿಸಿ. ಇದು ಬಂದರೆ ಜನರು ಏನು ಮಾಡಬೇಕು?

ಎರಿಥ್ರೋಡರ್ಮಿಕ್ ಸೋರಿಯಾಸಿಸ್ ಚರ್ಮವನ್ನು ಕೆಂಪಾಗಿಸುವುದು, ನೋವು ಉಂಟು ಮಾಡುವುದು, ತುರಿಕೆ ಮತ್ತು ಪದರ ಎದ್ದು ಬರುವ ಸಮಸ್ಯೆ ಉಂಟಾಗಬಹುದು. ವಿವಿಧ ಪಸ್ಟುಲರ್ ಸಹ ಇರಬಹುದು. ಇದು ಸಂಪೂರ್ಣ ದೇಹವನ್ನು ಆವರಿಸಿಕೊಳ್ಳುವುದು. ಇದರಿಂದ ಜ್ವರ, ಶೀತ, ದೇಹದ ಉಷ್ಣಾಂಶ ಕಡಿಮೆಯಾಗುವುದು ಮತ್ತು ನಿರ್ಜಲೀಕರಣದ ಸಮಸ್ಯೆ ಉಂಟಾಗಬಹುದು.

ತೀವ್ರವಾದ ಪಸ್ಟುಲರ್ ಅಥವಾ ಎರಿಥ್ರೋಡಮಿಕ್ ಸೋರಿಯಾಸಿಸ್ ಹೊಂದಿರುವ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿದೆ. ಎರಿಥೋಡಮಿಕ್ ಸೋರಿಯಾಸಿಸ್ ಹೊಂದಿರುವ ಹಳೆಯ ರೋಗಿಗಳು ಸಹ ಚರ್ಮದಲ್ಲಿ ರಕ್ತದ ಸೋರುವಿಕೆಯಿಂದಾಗಿ ಹೃದಯ ಅಸ್ಥಿರತೆ ಮತ್ತು ಕಡಿಮೆ ರಕ್ತದೊತ್ತಡ ಸಮಸ್ಯೆ ಎದುರಿಸಬಹುದು.

 What is Psoriasis
 

       Image source

8. ರೋಗನಿರೋಧಕ ಅಸ್ವಸ್ಥೆಯಿದ್ದರೂ ಸೋರಿಯಾಸಿಸ್ ಆರ್ವತವಾಗುವುದು ಯಾಕೆ?

ಸೋರಿಯಾಸಿಸ್ ತುಂಬಾ ಸಂಕೀರ್ಣವಾಗಿರುವ ಕ್ರಿಯಾತ್ಮಕ ರೋಗ. ಕೆಲವೊಂದು ಅಂಶಗಳು ಅವುಗಳನ್ನು ಪ್ರಚೋದಿಸಿ ಮತ್ತಷ್ಟು ಕೆಡಿಸುವುದು. ಸೋಂಕು, ಶೀತಚಳಿಗಾಲ, ಒತ್ತಡ ಮತ್ತು ಕೆಲವು ಔಷಧಿಗಳು ಇವುಗಳನ್ನು ಪ್ರಚೋದಿಸುವುದು.

9. ಸೋರಿಯಾಸಿಸ್ ನ್ನು ನಿವಾರಿಸಬಹುದೇ?

ಹಲವಾರು ರೀತಿಯ ಚಿಕಿತ್ಸೆಗಳು ಲಭ್ಯವಿದ್ದರೂ ಸೋರಿಯಾಸಿಸ್ ನ್ನು ನಿವಾರಣೆ ಮಾಡಲು ಸಾಧ್ಯವಿಲ್ಲ. ಚಿಕಿತ್ಸೆಯಿಂದ ಸೋರಿಯಾಸಿಸ್ ಸಂಪೂರ್ಣವಾಗಿ ಕಡಿಮೆಯಾಗಬಹುದು ಅಥವಾ ಸ್ಥಿತಿ ಉತ್ತಮವಾಗಬಹುದು. ಚರ್ಮರೋಗತಜ್ಞನು ಈ ರೋಗವನ್ನು ಅದರ ಉಪಶಮನ ಅವಧಿಯಲ್ಲಿ (ರೋಗದ ಮುಕ್ತ ಅವಧಿಯ) ಸಾಧ್ಯವಾದಷ್ಟು ಕಾಲ ಇರಿಸಿಕೊಳ್ಳುವುದಾಗಿದೆ.

10. ಸೋರಿಯಾಸಿಸ್ ನ ವಿಧವನ್ನು ಗಣನೆಗೆ ತೆಗೆದುಕೊಂಡು ಅದಕ್ಕೆ ಯಾವ ರೀತಿಯ ಚಿಕಿತ್ಸೆಗಳು ಲಭ್ಯವಿದೆ?

ಭಾರತದಲ್ಲಿ ಇದಕ್ಕೆ ಹಲವಾರು ರೀತಿಯ ಚಿಕಿತ್ಸೆಗಳು ಲಭ್ಯವಿದೆ. ಆದರೆ ಚಿಕಿತ್ಸೆಯ ಆಯ್ಕೆಯು ದೇಹದಲ್ಲಿ ರೋಗದ ಶೇಕಡವಾರು ಪ್ರಮಾಣ, ರೋಗ ನಿರೋಧಕ ಪ್ರಕೃತಿ ಮತ್ತು ರೋಗದ ಸ್ಥಿತಿಯನ್ನು ಅವಲಂಬಿಸಿರುವುದು. ಇತರ ರೀತಿಯ ರೋಗಿಗಳಿಗೆ ಈ ಕೆಳಗಿನ ಚಿಕಿತ್ಸೆಗಳು ಲಭ್ಯವಿದೆ.

1. ಮೇಲ್ಮೈಯ ಕಾರ್ಟಿಕೊಸ್ಪೆರಾಯ್ಡ್ ನ್ನು ಅವಲಂಭಿಸಿರುವ ಭಾಗವು ಸೌಮ್ಯವಾಗಿರುವುದು. ಕಡಿಮೆ ಅವಧಿಯವರೆಗೆ ಬಳಸಬೇಕು.

2. ಸ್ಯಾಲಿಸಿಲಿಕ್ ಆಮ್ಲ: ಒಂದೇ ಅಥವಾ ಸಾಮೂಯಿಕ ಕಾರ್ಟಿಕೊಸ್ಟೆರಾಯ್ಡ್ ಸಂಯೋಜನೆಯಾಗಿರುವುದು.

3. ನಾನ್ ಸ್ಟಿರಾಯ್ಡ್ ಚಿಕಿತ್ಸೆ: ದಪ್ಪಗಿನ ಪದರ ಉತ್ತಮವಾದ ಬಳಿಕ ಇದನ್ನು ಬಳಸಲಾಗುವುದು. ಇದು ಟ್ಯಾಕ್ರೊಲಿಮಸ್, ವಿಟಮಿನ್ ಡಿ ಅನಲಾಗ್ಸ್ (ಕ್ಯಾಲಿಪೊಟ್ರಿಯೊಲ್), ವಿಟಮಿನ್ ಎ ಮತ್ತು ಉತ್ಪನ್ನಗಳು, ಮತ್ತು ಕಲ್ಲಿದ್ದಲು ಟಾರ್ ಮತ್ತು ಡಿತ್ರನಾಲ್ (ವಿಶೇಷವಾಗಿ ನೆತ್ತಿ ಸೋರಿಯಾಸಿಸ್ ) ಮುಂತಾದ ಪ್ರತಿರೋಧಕಗಳ ಬಳಕೆಯನ್ನು ಒಳಗೊಂಡಿದೆ.

ವ್ಯವಸ್ಥಿತ ಚಿಕಿತ್ಸೆ

ಬಾಯಿ ಮೂಲಕ ಅಥವಾ ಸಮಸ್ಯೆ ತೀವ್ರವಾಗಿದ್ದರೆ ಚುಚ್ಚುಮದ್ದಿನ ಮೂಲಕ ನೀಡಲಾಗುತ್ತದೆ. ಇದು ವೈದ್ಯರ ಮೇಲ್ವಿಚಾರಣೆಯಲ್ಲಿ ನೀಡಲಾಗುತ್ತದೆ. ಇವುಗಳು ಮೆಥೊಟ್ರೆಕ್ಸೇಟ್, ವಿಟಮಿನ್ ಎ ಉತ್ಪನ್ನಗಳು (ಎಸಿಟ್ರಿಟಿನ್), ಸೈಕ್ಲೋಸ್ಪೋರ್ನ್, 6-ಥಿಯೊಗುನೈನ್, ಅಜಥಿಪ್ರೈನ್, ಅಥವಾ ಹೈಡ್ರಾಕ್ಸಿರಿಯ. ಇವುಗಳು ಮೆಥೊಟ್ರೆಕ್ಸೇಟ್, ವಿಟಮಿನ್ ಎ ಡೆರಿವಟಿವ್ಸ್ (ಎಸಿಟ್ರಿಟಿನ್), ಸೈಕ್ಲೋಸ್ಪೋರ್ನ್, 6-ಥಿಯೊಗುನೈನ್, ಅಜಥಿಪ್ರೈನ್, ಅಥವಾ ಹೈಡ್ರಾಕ್ಸಿರಿಯಗಳು.

ಸೋರಿಯಾಸಿಸ್ ನ ಚಿಕಿತ್ಸೆಯ ಪಟ್ಟಿಗೆ ಇತ್ತೀಚೆಗೆ ಜೈವಿಕ ಪ್ರತಿನಿಧಿಗಳನ್ನು ಕೂಡ ಸೇರಿಸಿಕೊಳ್ಳಲಾಗಿದೆ.

ಸೋರಿಯಾಸಿಸ್ ಗೆ ಫೋಟೊಥೆರಫಿ ಕೂಡ ಒಂದು ಆಯ್ಕೆಯಾಗಿದೆ. ಇದು ಆಸ್ಪತ್ರೆ ಅಥವಾ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ನಡೆಸಲಾಗುವ ಬೆಳಕಿನ ಚಿಕಿತ್ಸೆ. ಇದನ್ನು ಹೊರತುಪಡಿಸಿ ದೀರ್ಘಕಾಲದಲ್ಲಿ ಇದನ್ನು ಉಪಶಮನ ಮಾಡಲು ಕೆಲವೊಂದು ಕ್ರಮಗಳನ್ನು ಪಾಲಿಸಿಕೊಂಡು ಹೋಗುವುದು ಅಗತ್ಯವಾಗಿದೆ. ಒತ್ತಡ ಕಡಿಮೆ ಮಾಡುವುದು, ಚರ್ಮದಲ್ಲಿ ತೇವಾಂಶವಿರುವಂತೆ ನೋಡಿಕೊಳ್ಳುವುದು. ಧೂಮಪಾನ ಮತ್ತು ಮಧ್ಯಪಾನದಿಂದ ದೂರವಿರುವುದು.

11. ವ್ಯವಸ್ಥಿತ ಸೋರಿಯಾಸಿಸ್ ಚಿಕಿತ್ಸೆಯಿಂದಾಗಿ ಕೆಲವು ಸಲ ಅಡ್ಡಪರಿಣಾಮಗಳು ಉಂಟಾಗಬಹುದು. ಎರಡನೇ ಹಂತದ ಮಧುಮೇಹ, ಪಾರ್ಶ್ವವಾಯು ಮತ್ತು ಹೃದಯಾಘಾತ ಸಂಭವಿಸಬಹುದು. ಇದರ ಬಗ್ಗೆ ವಿವರ ನೀಡಿ. ಇಂತಹ ಪರಿಸ್ಥಿತಿಯಲ್ಲಿ ಸೋರಿಯಾಸಿಸ್ ಉಂಟಾದರೆ ಜನರು ಏನು ಮಾಡಬೇಕು?

ವ್ಯವಸ್ಥಿತ ಸೋರಿಯಾಸಿಸ್ ಸ್ವೀಕರಿಸುವಾಗ ಅಡ್ಡಪರಿಣಾಮಗಳು ಮೊದಲೇ ತಿಳಿದಿರುವ ಕಾರಣದಿಂದಾಗಿ ಅವರ ಬಗ್ಗೆ ಮೇಲ್ವಿಚಾರಣೆ ನಡೆಸಬೇಕು. ಸಂಯೋಜಿತ ಪೂರ್ವ-ಅಸ್ತಿತ್ವದಲ್ಲಿರುವ ವೈದ್ಯಕೀಯ ಸ್ಥಿತಿಗತಿಗಳನ್ನು ಹೊಂದಿರುವ ಸೋರಿಯಾಸಿಸ್ ರೋಗಿಗಳು ಚರ್ಮಶಾಸ್ತ್ರಜ್ಞ, ಸಂಧಿವಾತ ವೈದ್ಯ, ಸಾಮಾನ್ಯ ವೈದ್ಯ, ಹೃದ್ರೋಗ ಮತ್ತು ಮೂಳೆ ಶಸ್ತ್ರಚಿಕಿತ್ಸಕ ಉಪಸ್ಥಿತಿಯಲ್ಲಿ ಬಹು-ಶಿಸ್ತಿನ ವಿಧಾನದ ಮೂಲಕ ಚಿಕಿತ್ಸೆ ನೀಡಬೇಕು.

For Quick Alerts
ALLOW NOTIFICATIONS
For Daily Alerts

    English summary

    What is Psoriasis? Causes, Symptoms, and Cure

    Find out more about psoriasis causes and treatment options in this in-depth interview with expert dermatologist, Dr. Mukta Sachdev.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more