For Quick Alerts
ALLOW NOTIFICATIONS  
For Daily Alerts

ಅಕಸ್ಮಾತ್ತಾಗಿ ಕಿವಿಯೊಳಗೆ ಕೀಟ ಹೊಕ್ಕಿದರೆ, ಕೂಡಲೇ ಈ ಟಿಪ್ಸ್ ಅನುಸರಿಸಿ

By Arshad
|

ಕೆಲವೊಮ್ಮೆ ಕೀಟಗಳು ಕಿವಿಯ ತೂತಿನೊಳಗೆ ತೂರಿಕೊಂಡು ಆಳಕ್ಕೆ ಇಳಿದುಬಿಡುತ್ತವೆ. ಇದು ಒಳಭಾಗದಲ್ಲಿ ನಡೆದಾಡಿದಂತೆಲ್ಲಾ ಕಿವಿಯ ಸೂಕ್ಷ್ಮ ಅಂಗಗಳಿಗೆ ಕಚಗುಳಿಯಾಗುವಂತಾಗುವುದು, ಕೆಲವೊಮ್ಮೆ ಕೀಟಗಳ ಕಾಲಿನ ಮುಳ್ಳುಗಳು ಚುಚ್ಚುವುದು ಅಥವಾ ಕೀಟ ಕಚ್ಚುವ ಮೂಲಕ ಒಳಭಾಗದಲ್ಲಿ ಭಾರೀ ಉರಿಯಾಗುವುದು ಅಥವಾ ನೋವು ಕಾಣಿಸಿಕೊಳ್ಳುವ ಸಂಭವವೂ ಇದೆ.

ವಿಶೇಷವಾಗಿ ಮಕ್ಕಳು ಹೊರಗೆ ಆಟವಾಡುವ ಸಮಯದಲ್ಲಿ ಈ ತೊಂದರೆಗೆ ಒಳಗಾಗುತ್ತಾರೆ. ಪ್ರತಿಯೊಬ್ಬರೂ ಜೀವಮಾನದಲ್ಲಿ ಕನಿಷ್ಠ ಮ್ಮೆಯಾದರೂ ಈ ಅನುಭವವನ್ನು ಪಡೆದೇ ಇರುತ್ತಾರೆ. ಕಿವಿಯ ಒಳ ಅಂಗಗಳು ಅತಿ ಸೂಕ್ಷ್ಮವಾಗಿದ್ದು ಅತ್ಯಂತ ದುರ್ಬಲವೂ ಆಗಿವೆ. ಆದ್ದರಿಂದ ಕಿವಿಯೊಳಗೆ ಕಡ್ಡಿಹಾಕಿ ಕೀಟವನ್ನು ಹೊರತೆಗೆಯುವ ಪ್ರಯತ್ನದಲ್ಲಿ ಈ ಸೂಕ್ಷ್ಮ ಅಂಗಗಳಿಗೆ ಘಾಸಿಯಾಗಬಹುದು.

ಕಿವಿ ನೋವನ್ನು ತ್ವರಿತವಾಗಿ ಶಮನಗೊಳಿಸುವ ಮನೆಮದ್ದುಗಳು

ಆಲಿವ್ ಎಣ್ಣೆ ಬಳಸಿ

ಆಲಿವ್ ಎಣ್ಣೆ ಬಳಸಿ

ಕೀಟ ಒಳಹೊಕ್ಕ ಬಳಿಕ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗನೇ ಕೆಲವು ತೊಟ್ಟು ಆಲಿವ್ ಎಣ್ಣೆ ಅಥವಾ ಮಗುವಿನ ಎಣ್ಣೆಯನ್ನು ಕಿವಿಯೊಳಗೆ ಒಂದೊಂದೇ ತೊಟ್ಟಾಗಿ ಬೀಳುವಂತೆ ಹಾಕಿ. ಎಣ್ಣೆಯಿಂದ ಕಿವಿಯ ತೂತು ಮುಚ್ಚಿದರೆ ಕೀಟಕ್ಕೆ ಉಸಿರಾಡಲು ಸಾಧ್ಯವಾಗದೇ ಎಣ್ಣೆಯೊಂದಿಗೇ ಹೊರಬರುತ್ತದೆ.

ಈ ತೊಂದರೆ ಇದ್ದರೆ ಎಣ್ಣೆ ಬಳಸದಿರಿ

ಈ ತೊಂದರೆ ಇದ್ದರೆ ಎಣ್ಣೆ ಬಳಸದಿರಿ

ಒಂದು ವೇಳೆ ಕಿವಿಯಲ್ಲಿ ಸೋಂಕು, ಸೋರುವುದು, ಕಿವಿನೋವು ಅಥವಾ ಇತರ ಯಾವುದಾದರೂ ತೊಂದರೆ ಇದ್ದರೆ ಕಿವಿಗೆ ಎಣ್ಣೆ ಬಿಡದಿರಿ. ಉಳಿದವರಿಗೆ ಎಣ್ಣೆಯನ್ನು ಕೊಂಚವೇ ಬಿಸಿ ಮಾಡಿ ಬಿಟ್ಟರೆ ಉತ್ತಮ.

ಆಲ್ಕೋಹಾಲ್

ಆಲ್ಕೋಹಾಲ್

ಒಂದು ಕಿವಿಸ್ವಚ್ಛಗೊಳಿಸುವ ಹತ್ತಿಸುತ್ತಿದ ಕಡ್ಡಿಯನ್ನು ಅಪ್ಪಟ ಆಲ್ಕೋಹಾಲ್ ದ್ರವದಲ್ಲಿ ಮುಳುಗಿಸಿ ಕಿವಿಯ ತೂತಿನ ಬಳಿ ಇರಿಸಿ. ಇದರ ದ್ರವ ಕಿವಿಯೊಳಗೆ ತೊಟ್ಟಿಕ್ಕುವಂತೆ ಮಾಡಿ. ಆಲ್ಕೋಹಾಲ್ ನ ಹಬೆ ಕಿವಿಯೊಳಗೆ ವ್ಯಾಪಿಸಿದಂತೆಯೇ ಕೀಟ ಅಲ್ಲಿಂದ ಹೊರಬರುತ್ತದೆ. ಅಲ್ಲದೇ ಒಳಭಾಗ ಸ್ವಚ್ಛವೂ ಆಗುತ್ತದೆ.

ಹತ್ತಿಸುತ್ತಿದ ಕಡ್ಡಿಯನ್ನು ಕಿವಿಯೊಳಗೆ ತೂರಿಸದಿರಿ

ಹತ್ತಿಸುತ್ತಿದ ಕಡ್ಡಿಯನ್ನು ಕಿವಿಯೊಳಗೆ ತೂರಿಸದಿರಿ

ಕೆಲವೊಮ್ಮೆ ಕಿವಿಯೊಳಗಿನ ತುರಿಕೆ ತಾಳಲಾರದೇ ಕಡ್ಡಿಯನ್ನು ಕಿವಿಯೊಳಗೆ ಬಿಡುವ ತವಕವುಂಟಾಗುತ್ತದೆ. ಆದರೆ ಎಂದಿಗೂ ಕಡ್ಡಿಯನ್ನು ಅಥವಾ ಬೆಂಕಿಕಡ್ಡಿ, ಹೇರ್ ಪಿನ್ ಮೊದಲಾದ ಯಾವುದನ್ನೂ ಕಿವಿಯೊಳಗೆ ತೂರಿಸದಿರಿ. ಏಕೆಂದರೆ ಕಿವಿಯೊಳಗಿರುವ ಕೀಟಕ್ಕೆ ಈ ಕಡ್ಡಿ ಚುಚ್ಚಿದರೆ ಅದು ತನ್ನ ಪ್ರಾಣ ಉಳಿಸಿಕೊಳ್ಳಲು ಕೈಕಾಲುಗಳನ್ನು ಆಡಿಸಿ ಕಿವಿಯ ಸೂಕ್ಷ್ಮ ಅಂಗಗಳ ಮೇಲೆ ಒತ್ತುತ್ತಾ ಅಥವಾ ಕಚ್ಚಿ ಅಥವಾ ಮುಳ್ಳುಗಳನ್ನು ಚುಚ್ಚಿ ತನ್ನ ವಿಷವನ್ನು ಸ್ರವಿಸಬಹುದು. ಆದ್ದರಿಂದ ಕೀಟ ಹೊಕ್ಕಿರುವ ಕಿವಿಯೊಳಗೆ ಖಂಡಿತಾ ಏನನ್ನೂ ತೂರಿಸಕೂಡದು.

ಬೆರಳನ್ನೂ ಹಾಕದಿರಿ

ಬೆರಳನ್ನೂ ಹಾಕದಿರಿ

ಕೆಲವೊಮ್ಮೆ ಕೀಟದ ಮೀಸೆಯ ತುದಿ ಕಿವಿಯ ಹೊರಗೆ ಇಣುಕುತ್ತಿರುವಂತೆ ಕಾಣುತ್ತದೆ. ಇದನ್ನು ತೆಗೆಯಲು ಬೆರಳನ್ನು ತೂರಿಸಲು ಪ್ರಬಲ ಬಯಕೆಯುಂಟಾಗುತ್ತದೆ. ಆದರೆ ಇದನ್ನು ನಿವಾರಿಸಲು ಬೆರಳು ತೂರಿಸಿದರೆ ಕೀಟ ಒಳಗಿನ ಭಾಗಗಳಿಗೆ ಕಚ್ಚಬಹುದು.

ಬೆಂಕಿಕಡ್ಡಿ, ಹೇರ್ ಪಿನ್ನುಗಳೂ ಬೇಡ

ಬೆಂಕಿಕಡ್ಡಿ, ಹೇರ್ ಪಿನ್ನುಗಳೂ ಬೇಡ

ಕೆಲವೊಮ್ಮೆ ಬೆಂಕಿಕಡ್ಡಿ ಅಥವಾ ಹೇರ್ ಪಿನ್ನುಗಳನ್ನು ಕಿವಿಯೊಳಗೆ ತೂರಿಸುವಾಗ ಕಿವಿಯೊಳಗಿನ ಮೇಣದ ಪದರ ಎದ್ದು ಬಂದು ಕಿವಿಯ ತೂತಿಗೆ ಅಡ್ಡಲಾಗಿ ಸಿಕ್ಕಿಕೊಳ್ಳಬಹುದು. ಇವು ಕೀಟವನ್ನು ಹೊರತೆಗೆಯಲು ಇನ್ನಷ್ಟು ಕಷ್ಟವಾಗಿಸಬಹುದು. ಅಲ್ಲದೇ ಮೇಣ ಎದ್ದುಬಂದ ಚರ್ಮದ ಭಾಗ ಈಗ ಯಾವುದೇ ರಕ್ಷಣೆಯಿಲ್ಲದೇ ಕೀಟದ ಸೂಕ್ಷ್ಮ ಮುಳ್ಳುಗಳಿಗೆ ಸುಲಭವಾಗಿ ಚುಚ್ಚಿಕೊಳ್ಳಲು ಸಾಧ್ಯವಾಗುವಂತಿದ್ದು ಇದರಿಂದ ಸೋಂಕು ಉಂಟಾಗಬಹುದು. ಇದು ಕೇಳುವ ಸಾಮರ್ಥವನ್ನೇ ಉಡುಗಿಸಬಹುದು.

ತಕ್ಷಣ ವೈದ್ಯರನ್ನು ಭೇಟಿಯಾಗಿ

ತಕ್ಷಣ ವೈದ್ಯರನ್ನು ಭೇಟಿಯಾಗಿ

ಒಂದು ವೇಳೆ ಎಣ್ಣೆ ಬಿಟ್ಟರೂ ಕೀಟ ಹೊರಬರದೇ ಇದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಈ ಪ್ರಯತ್ನದಲ್ಲಿ ಯಾವುದೇ ತಪ್ಪಾದರೂ ಇದರ ಪರಿಣಾಮ ಕಿವಿ ಕೇಳುವ ಸಾಮರ್ಥಕ್ಕೆ ಅಪಾಯವಾಗುವ ಕಾರಣ ಯಾವುದೇ ರೀತಿಯ ನಿರ್ಲಕ್ಷ್ಯ ಸಲ್ಲದು.

English summary

What To Do If An Insect Enters The Ear?

Ear is a very sensitive part. The internal parts of the ear are very delicate and therefore, you can't take an impulsive step the moment an insect goes in and gets stuck.You need to know what to do and what not to do in such a situation. Here are some points to remember when any insect gets stuck in your ears.
X
Desktop Bottom Promotion