ಉಪ್ಪು ಬೆರೆಸಿದ ಉಗುರು ಬೆಚ್ಚಗಿನ ನೀರು, ಆಯಸ್ಸು ನೂರು!

By: Hemanth
Subscribe to Boldsky

ನಮ್ಮ ದೇಹಕ್ಕೆ ಶೇ.75ರಷ್ಟು ನೀರಿನಾಂಶದ ಅಗತ್ಯವಿದೆ ಎಂಬುದು ಹೆಚ್ಚಿನವರಿಗೆ ತಿಳಿದೇ ಇರುವುದಿಲ್ಲ. ಹೆಚ್ಚೆಚ್ಚು ನೀರು ಕುಡಿದರೆ ಅದರಿಂದ ದೇಹದ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು. ನೀರಿನ ಅಂಶ ದೇಹದಲ್ಲಿ ಕಡಿಮೆಯಾದರೆ ಅದರಿಂದ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇದರಿಂದ ನೀರು ದೇಹಕ್ಕೆ ಅನಿವಾರ್ಯ. ನೀರನ್ನು ಕುದಿಸಿ ಕುಡಿದರೆ ಮತ್ತಷ್ಟು ಒಳ್ಳೆಯದು. ನೀರನ್ನು ಪ್ರತಿಯೊಬ್ಬರು ಕುಡಿಯುತ್ತಾರೆ. ಆದರೆ ಉಪ್ಪು ನೀರನ್ನು ಪ್ರತೀ ನಿತ್ಯ ಯಾರಾದರೂ ಕುಡಿಯುವುದನ್ನು ನೀವು ನೋಡಿದ್ದೀರಾ? ಉಪ್ಪು ನೀರಿನಿಂದ ಗಳಗಳ ಮಾಡಿದರೆ ಕೆಮ್ಮು-ಶೀತ ಮಾಯ!

ಯಾರೂ ಉಪ್ಪು ನೀರನ್ನು ಕುಡಿಯಲು ಬಯಸುವುದಿಲ್ಲ. ಆದರೆ ಉಪ್ಪು ನೀರಿನಿಂದ ಹಲವಾರು ರೀತಿಯ ಆರೋಗ್ಯ ಹಾಗೂ ಸೌಂದರ್ಯ ಲಾಭಗಳು ಇವೆ. ಉಪ್ಪು ನೀರನ್ನು ಕುಡಿದರೆ ಯಾವೆಲ್ಲಾ ಲಾಭಗಳು ಆಗಲಿದೆ ಎಂದು ಬೋಲ್ಡ್ ಸ್ಕೈ ಈ ಲೇಖನದ ಮೂಲಕ ತಿಳಿಸಿಕೊಡಲಿದೆ. ಹೊಟ್ಟೆಯೊಳಗಿನ ಕಲ್ಮಶ ಹೋಗಲಾಡಿಸಲು-ಉಪ್ಪು ನೀರಿನ ರೆಸಿಪಿ!

ಸರಿಯಾದ ಪ್ರಮಾಣ ಹಾಗೂ ಕ್ರಮದಲ್ಲಿ ತೆಗೆದುಕೊಂಡರೆ ಉಪ್ಪು ಕೂಡ ದೇಹಕ್ಕೆ ಒಳ್ಳೆಯದು. ಬಿಸಿ ನೀರಿಗೆ ಉಪ್ಪನ್ನು ಹಾಕಿ ಕುಡಿದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಸಮುದ್ರದ ನೀರಿನಿಂದ ಮಾಡುವಂತಹ ಚಿಕಿತ್ಸೆಯನ್ನು ಥಾಲಸ್ಸೊಥೆರಪಿ ಎಂದು ಕರೆಯಲಾಗುತ್ತದೆ.  ಬೆಳ್ಳಂ ಬೆಳಿಗ್ಗೆ ಕುಡಿಯಿರಿ, ಉಪ್ಪು ಬೆರೆಸಿದ ಬೆಚ್ಚನೆಯ ನೀರು

ಉಪ್ಪು ನೀರಿನ ಲಾಭ ಪಡೆಯಲು ಏನು ಮಾಡಬೇಕೆಂದು ತಿಳಿಯಲು ನೀವು ಮುಂದಕ್ಕೆ ಓದುತ್ತಾ ಸಾಗಿ. ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಎರಡು ಚಮಚ ಸಮುದ್ರದ ಉಪ್ಪನ್ನು ಹಾಕಿ ಸರಿಯಾಗಿ ಕಲಸಿಕೊಳ್ಳಿ. ಇದನ್ನು ದಿನದ ಆರಂಭದ ಮೊದಲ ಪಾನೀಯವಾಗಿ ಸೇವಿಸಿ...

ನಿರ್ವಿಷಕಾರಿ

ನಿರ್ವಿಷಕಾರಿ

ದೇಹದ ಒಳಗಿನ ಅಂಗಗಳಿಗೆ ದೀರ್ಘ ಕಾಲದ ತನಕ ಹಾನಿಯನ್ನು ಉಂಟು ಮಾಡುವ ವಿಷವನ್ನು ಹೊರಹಾಕುವಲ್ಲಿ ಉಪ್ಪುನೀರು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ದಿನದ ಮೊದಲ ಪಾನೀಯವಾಗಿ ಉಗುರುಬೆಚ್ಚಗಿನ ಉಪ್ಪುನೀರನ್ನು ಸೇವನೆ ಮಾಡಿದರೆ ತುಂಬಾ ಒಳ್ಳೆಯದು.

ಯಕೃತ್‌ನ ಕಾಯಿಲೆಗಳಿಗೆ

ಯಕೃತ್‌ನ ಕಾಯಿಲೆಗಳಿಗೆ

ಸಿರೋಸಿಸ್ ನಂತಹ ಸಮಸ್ಯೆಯಿಂದ ಯಕೃತ್‌ನ ಕೋಶಗಳು ನಾಶವಾದಾಗ ಅದನ್ನು ಮರುಸ್ಥಾಪಿಸಲು ಉಪ್ಪು ನೀರು ತುಂಬಾ ನೆರವಾಗುವುದು. ಇದು ಯಕೃತ್‌ನ ಕಾಯಿಲೆಗೆ ತುಂಬಾ ಒಳ್ಳೆಯ ಮದ್ದು. ಪ್ರತೀ ದಿನ ಬೆಳಿಗ್ಗೆ ಉಪ್ಪು ನೀರನ್ನು ಸೇವನೆ ಮಾಡಿ. ಇದು ಉಪ್ಪು ನೀರನ್ನು ಕುಡಿಯುವುದರಿಂದ ಸಿಗುವ ಒಂದು ಲಾಭವಾಗಿದೆ.

ಒಳ್ಳೆಯ ನಿದ್ರೆಗೆ

ಒಳ್ಳೆಯ ನಿದ್ರೆಗೆ

ರಕ್ತದಲ್ಲಿರುವಂತಹ ಕಾರ್ಟಿಸೋಲ್ ಮತ್ತು ಅಡ್ರಿನಾಲ್ ಅಂಶವನ್ನು ಉಪ್ಪು ನೀರು ಕಡಿಮೆ ಮಾಡುತ್ತದೆ. ಈ ಎರಡು ಹಾರ್ಮೋನುಗಳು ಒತ್ತಡವನ್ನು ಉಂಟು ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಈ ಹಾರ್ಮೋನುಗಳ ಮಟ್ಟವನ್ನು ಸರಿಯಾಗಿ ನಿಯಂತ್ರಣದಲ್ಲಿ ಇಟ್ಟುಕೊಂಡರೆ ಒಳ್ಳೆಯ ನಿದ್ರೆ ಬರುತ್ತದೆ. ಇದರಿಂದ ಉಪ್ಪು ನೀರನ್ನು ಸೇವಿಸಲೇಬೆಕು.

ಸೋಂಕಿನ ವಿರುದ್ಧ ಹೋರಾಡುವುದು

ಸೋಂಕಿನ ವಿರುದ್ಧ ಹೋರಾಡುವುದು

ಬ್ಯಾಕ್ಟೀರಿಯಾ ವಿರುದ್ಧ ಉಪ್ಪು ನೀರು ಹೋರಾಡುತ್ತದೆ. ಬ್ಯಾಕ್ಟೀರಿಯಾದ ಕೋಶಗಳಲ್ಲಿ ಇರುವಂತಹ ನೀರನ್ನು ಉಪ್ಪು ತೆಗೆದುಹಾಕುವುದು. ಇದರಿಂದ ಬ್ಯಾಕ್ಟೀರಿಯಾ ಸ್ಪೋಟಗೊಳ್ಳುವುದು. ಮುಂದಿನ ಸಲ ನೀವು ಮೆಡಿಕಲ್ ಗೆ ಹೋಗುವ ಬದಲು ಉಪ್ಪು ನೀರನ್ನು ಸೇವಿಸಿ.

ಆರೋಗ್ಯಕರ ಚರ್ಮಕ್ಕೆ

ಆರೋಗ್ಯಕರ ಚರ್ಮಕ್ಕೆ

ಮೊಡವೆ ಹಾಗು ಮುಖದಲ್ಲಿ ಮೂಡುವಂತಹ ಬೊಕ್ಕೆಗಳನ್ನು ಕಡಿಮೆ ಮಾಡಲು ಉಪ್ಪು ನೀರಿನಿಂದ ಮುಖವನ್ನು ತೊಳೆಯಿರಿ. ಉಪ್ಪು ನೀರಿನಿಂದ ಮುಖವನ್ನು ತೊಳೆಯಿರಿ ಅಥವಾ ಹತ್ತಿ ಉಂಡೆಯನ್ನು ಉಪ್ಪುನೀರಿನಲ್ಲಿ ಅದ್ದಿಕೊಂಡು ಮುಖವನ್ನು ಒರೆಸಿಕೊಳ್ಳಿ. ಇದು ಕೂಡ ಮೊಡವೆಗಳನ್ನು ಕಡಿಮೆ ಮಾಡಲು ನೆರವಾಗುವುದು.

ನೋಯುತ್ತಿರುವ ಗಂಟಲಿಗೆ

ನೋಯುತ್ತಿರುವ ಗಂಟಲಿಗೆ

ಬ್ಯಾಕ್ಟೀರಿಯಾಗಳ ಕೋಶದಿಂದ ನೀರನ್ನು ಹೀರಿಕೊಳ್ಳುವಂತಹ ಉಪ್ಪು ನೀರು ನೋಯುತ್ತಿರುವ ಗಂಟಲಿನ ಚಿಕಿತ್ಸೆಗೆ ತುಂಬಾ ಒಳ್ಳೆಯದು. ಉಗುರುಬೆಚ್ಚಗಿನ ಬಿಸಿ ನೀರಿನಿಂದ ಪ್ರತೀ ದಿನ ಎರಡು ಸಲ ಬಾಯಿ ಮುಕ್ಕಲಿಸಿಕೊಳ್ಳಬೇಕು. ಇದು ಗಂಟಲು ಊದಿಕೊಳ್ಳುವುದನ್ನು ಕಡಿಮೆ ಮಾಡಿ ನೋವನ್ನು ಕಡಿಮೆ ಮಾಡುವುದು. ಇದರಿಂದ ಗಂಟಲು ನೋವು ಕಡಿಮೆಯಾಗುವುದು. ಪ್ರತೀ ದಿನ ಉಪ್ಪು ನೀರನ್ನು ಸೇವಿಸಿ ಈ ಆರೋಗ್ಯ ಲಾಭಗಳನ್ನು ಪಡೆಯಿರಿ.

ಜಲಸಂಚಯ

ಜಲಸಂಚಯ

ಉಗುರುಬೆಚ್ಚಗಿನ ಉಪ್ಪು ನೀರು ದೇಹವನ್ನು ಒಳಗಿನಿಂದ ಜಲಸಂಚಯವನ್ನಾಗಿಡುವುದು. ಇದರ ಪರಿಣಾಮ ದೇಹದ ಆರೋಗ್ಯದ ಮೇಲೆ ಕಂಡು ಬರುವುದು. ಇದರಿಂದ ಚರ್ಮದ ಸ್ಥಿತಿಸ್ಥಾಪಕತ್ವವು ಸರಿಯಾಗಿರುವುದು ಮತ್ತು ನೀವು ಯುವಕರಾಗಿ ಕಾಣುವಿರಿ.

English summary

Tried & Tested Health Benefits Of Salt Water You Need To Know

Salt water is a very effective home remedy that can be used in curing many of the health and beauty issues. This can range from treating minor problems like acne to major problems like throat infections or wounds. Don't go before the common health statement that salt is not good for health. Salt is of course good for your health, but when used in the proper way in adequate amounts only.
Please Wait while comments are loading...
Subscribe Newsletter