ಹೊಟ್ಟೆಯೊಳಗಿನ ಕಲ್ಮಶ ಹೋಗಲಾಡಿಸಲು-ಉಪ್ಪು ನೀರಿನ ರೆಸಿಪಿ!

By: manu
Subscribe to Boldsky

ನಮ್ಮ ಜೀರ್ಣಾಂಗಗಳು ಆಹಾರವನ್ನು ಜೀರ್ಣಿಸಿ ಕಲ್ಮಶಗಳನ್ನು ವಿಸರ್ಜಿಸಿದ ಬಳಿಕವೂ ನಮ್ಮ ಕರುಳುಗಳಲ್ಲಿ ಕೊಂಚಪ್ರಮಾಣದಲ್ಲಿ ಕಲ್ಮಶಗಳು ಉಳಿದೇ ಇರುತ್ತವೆ. ಈ ಕಲ್ಮಶಗಳನ್ನು ಆಗಾಗ ನಿವಾರಿಸುತ್ತಲೇ ಇರಬೇಕು. ಇದನ್ನೇ ಹೊಟ್ಟೆ ತೊಳೆಸುವುದು ಎನ್ನುತ್ತಾರೆ. ಈ ಕಾರ್ಯವನ್ನು ನೆರವೇರಿಸುವ ಕೆಲವಾರು ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.  ಉಪ್ಪು ಬೆರೆಸಿದ ಬೆಚ್ಚನೆಯ ನೀರು, ಆಯಸ್ಸು ನೂರು!

ಆದರೆ ಈ ಕೆಲಸವನ್ನು ಮನೆಯಲ್ಲಿಯೇ, ಕೇವಲ ಉಪ್ಪುನೀರನ್ನು ಕುಡಿದು ಪೂರೈಸಬಹುದು. ಇದರಿಂದ ಕರುಳುಗಳಲ್ಲಿ ಉಳಿದಿದ್ದ ಕಲ್ಮಶಗಳು ಹೊರಹೋಗಿ ಜೀರ್ಣಾಂಗಗಳು ಶುದ್ಧಗೊಳ್ಳುತ್ತವೆ. ಹಾಗೂ ಅನಿಯಮಿತವಾದ ವಿಸರ್ಜನಾ ಕ್ರಮಗಳು ಹಾಗೂ ದೊಡ್ಡ ಕರುಳಿನ ಒಳಗೋಡೆಗಳಿಗೆ ಘಾಸಿಯುಂಟುಮಾಡಬಹುದಾದಷ್ಟು ಕಲ್ಮಶಗಳು ಗಟ್ಟಿಯಾಗುವುದರಿಂದ ತಪ್ಪಿಸಿದಂತಾಗುತ್ತದೆ. ಕರುಳುಗಳಲ್ಲಿ ಸೇರಿರುವ ಕಲ್ಮಶ ಹೊರಹಾಕುವ ಮನೆಮದ್ದು

ಯಾವಾಗ ಮಲಪದಾರ್ಥಗಳು ಹೆಚ್ಚು ಹೊತ್ತು ದೊಡ್ಡಕರುಳಿನಲ್ಲಿ ಸಂಗ್ರಹಗೊಳ್ಳಲು ಪ್ರಾರಂಭವಾಗುತ್ತದೆಯೋ ಆಗ ಮೂಲವ್ಯಾಧಿ ಹಾಗೂ ಇತರ ತೊಂದರೆಗಳು ಎದುರಾಗುತ್ತವೆ. ಆದ್ದರಿಂದ ಆಗಾಗ ಹೊಟ್ಟೆಯನ್ನು ತೊಳೆಸುವುದು ಆಗತ್ಯ ಹಾಗೂ ಅನಿವಾರ್ಯವಾಗಿದೆ....  

ವಾಸ್ತವಾಂಶ #1

ವಾಸ್ತವಾಂಶ #1

ಇಡಿಯ ದಿನ ಮನೆಯಲ್ಲಿಯೇ ಕಳೆಯುವ ರಜಾದಿನವೊಂದನ್ನು ಆಯ್ಕೆ ಮಾಡಿ ಆ ದಿನ ಬೆಳಿಗ್ಗೆ ಎದ್ದ ತಕ್ಷಣ ಒಂದು ಲೀಟರ್ ನೀರಿಗೆ ಎರಡು ಚಿಕ್ಕಚಮಚ ಕಲ್ಲುಪ್ಪು ಸೇರಿಸಿ ಕಲಕಿ ಕುಡಿಯಿರಿ. ಈ ನೀರು ಉಗುರುಬೆಚ್ಚಗಿದ್ದರೆ ಸಾಕು. ಈ ವಿಧಾನದಿಂದ ಮುಂದಿನ ಸಮಯದಲ್ಲಿ ನಿಧಾನವಾಗಿ ಹೊಟ್ಟೆ ಮತ್ತು ಕರುಳುಗಳಲ್ಲಿ ಉಳಿದಿದ್ದ ಕಲ್ಮಶಗಳು ಸುಲಭವಾಗಿ ಹೊರಬೀಳುತ್ತವೆ.

ಎಚ್ಚರಿಕೆ

ಎಚ್ಚರಿಕೆ

ಕೆಲವರಿಗೆ ಹೆಚ್ಚಿನ ಉಪ್ಪು ಅಲರ್ಜಿಯಾಗಿದ್ದು ಹೊಟ್ಟೆಗೆ ಹೋದ ತಕ್ಷಣವೇ ವಾಂತಿಯಾಗುತ್ತದೆ. ಒಂದು ವೇಳೆ ನಿಮಗೆ ಈ ಬಗೆಯ ಅಲರ್ಜಿಯಿದ್ದರೆ ತಕ್ಷಣ ಈ ವಿಧಾನದಿಂದ ಹೊರಬನ್ನಿ. ಒಂದು ವೇಳೆ ನಿಮಗೆ ಅತಿ ರಕ್ತದೊತ್ತಡದ ತೊಂದರೆ ಇದ್ದರೆ ಅಥವಾ ಸೋಡಿಯಂ ಲವಣ ಸೇವನೆಯ ಮಿತಿಯನ್ನು ವೈದ್ಯರು ವಿಧಿಸಿದ್ದರೆ ಈ ವಿಧಾನವನ್ನು ಅನುಸರಿಸಬೇಡಿ. ಅಷ್ಟೇ ಅಲ್ಲ, ಉಪ್ಪು ನೀರಿನ ಸೇವನೆಯ ಬಳಿಕವೂ ವಿಸರ್ಜನೆಯ ನಿಟ್ಟಿನಲ್ಲಿ ಯಾವುದೇ ಬದಲಾವಣೆ ಕಂಡುಬರದಿದ್ದಲ್ಲಿ ಸಹಾ ಈ ವಿಧಾನವನ್ನು ಮತ್ತೆ ಪ್ರಯತ್ನಿಸಬೇಡಿ.

ವಾಸ್ತವಾಂಶ #2

ವಾಸ್ತವಾಂಶ #2

ಈ ವಿಧಾನವನ್ನು ಉಪವಾಸವಿರುವ ಸಮಯದಲ್ಲಿ ಪ್ರಯೋಗಿಸಬೇಕು. ಆಗ ಇದರ ಪರಿಣಾಮ ಗರಿಷ್ಟವಾಗಿರುತ್ತದೆ. ಒಂದು ವೇಳೆ ಉಪವಾಸವಿರುವುದು ಸಾಧ್ಯವಿಲ್ಲವೆಂದಾದರೆ ಮುಂಜಾನೆ ಬೇಗನೇ ಎದ್ದು ಖಾಲಿಹೊಟ್ಟೆಯಲ್ಲಿ ಈ ನೀರನ್ನು ಕುಡಿದು ಸಾಧ್ಯವಾದಷ್ಟು ಹೊತ್ತು ಹೊಟ್ಟೆಗೆ ಏನನ್ನೂ ತೆಗೆದುಕೊಳ್ಳಬಾರದು. ಮೊದಲ ಬಾರಿಯ ವಿಸರ್ಜನೆಯ ಬಳಿಕ ಲಘು ಮತ್ತು ದ್ರವಾಹಾರಗಳನ್ನು ಸೇವಿಸಬಹುದು.

ವಾಸ್ತವಾಂಶ#3

ವಾಸ್ತವಾಂಶ#3

ಉಪ್ಪುನೀರಿನ ಸೇವನೆಯ ಬಳಿಕ ಬಾಯಿ, ಗಂಟಲು, ಹೊಟ್ಟೆ, ಕರುಳುಗಳೆಲ್ಲವೂ ಒಳಗಿನಿಂದ ಸ್ವಚ್ಛಗೊಳ್ಳುತ್ತದೆ. ಇದು ಕೊಂಚ ಅಸ್ವಾಭಾವಿಕವಾದುದರಿಂದ ಒಳಗಿನಿಂದ ಕಚಗುಳಿಯಾಗುವ ಅನುಭವವಾಗಬಹುದು. ಆದರೆ ಇದನ್ನು ಸಹಿಸಿಕೊಳ್ಳಬೇಕು.

ವಾಸ್ತವಾಂಶ #4

ವಾಸ್ತವಾಂಶ #4

ಕೇವಲ ಕಲ್ಲುಪ್ಪು ಅಥವಾ ಹಿಮಾಯಲದ ಉಪ್ಪು ಈ ವಿಧಾನಕ್ಕೆ ಸೂಕ್ತ. ಪುಡಿಯುಪ್ಪು, ಅಯೋಡಿನ್ ಉಪ್ಪು ಎಲ್ಲವೂ ಈ ವಿಧಾನಕ್ಕೆ ಸೂಕ್ತವಲ್ಲ.

ವಾಸ್ತವಾಂಶ #5

ವಾಸ್ತವಾಂಶ #5

ನೀರು ಕುಡಿದ ನಂತರ ಏನಾಗುತ್ತದೆ? ಸುಮಾರು ಹದಿನೈದು ಇಪ್ಪತ್ತು ನಿಮಿಷಗಳಲ್ಲಿಯೇ ನೀರು ಹರಿಯುವುದರ ಅನುಭವವನ್ನು ಕಂಡುಕೊಳ್ಳಬಹುದು. ಬಳಿಕ ಶೌಚಾಲಯಕ್ಕೆ ಹೋಗುವ ಅವಸರವಾಗುತ್ತದೆ. ಈ ಕ್ರಿಯೆಯನ್ನು ಮುಂದಿನ ಗಂಟೆಗಳಲ್ಲಿ ನಾಲ್ಕಾರು ಬಾರಿ ಪುನರಾವರ್ತಿಸಬೇಕಾಗಬಹುದು. ಆದ್ದರಿಂದ ರಜಾದಿನವಾಗಿದ್ದು ಮನೆಯಲ್ಲಿಯೇ ಇರುವ ಸಂದರ್ಭವನ್ನು ಈ ವಿಧಾನಕ್ಕೆ ಆಯ್ದುಕೊಳ್ಳುವುದು ಅಗತ್ಯ.

ವಾಸ್ತವಾಂಶ #6

ವಾಸ್ತವಾಂಶ #6

ಕೆಲವರು ಈ ವಿಧಾನವನ್ನು ಸತತವಾಗಿ ಐದರಿಂದ ಏಳು ದಿನಗಳವರೆಗೆ ಅನುಸರಿಸುತ್ತಾರೆ. ಆದರೆ ಈ ವಿಧಾನವನ್ನು ಹೆಚ್ಚು ಕಾಲ ಅನುಸರಿಸುವುದು ಒಳ್ಳೆಯದಲ್ಲ. ಪ್ರತಿ ಆರು ತಿಂಗಳಿಗೆ ಒಂದು ಬಾರಿ ಅನುಸರಿಸಿದರೆ ಸಾಕಾಗುತ್ತದೆ. ಯಾವುದಕ್ಕೂ ನಿಮ್ಮ ಕುಟುಂಬ ವೈದ್ಯರ ಸಲಹೆ ಪಡೆದೇ ಮುಂದುವರೆಯುವುದು ಉತ್ತಮ.

 
English summary

How Does Salt Water Colon Cleanse Work

Colon cleansing has become a popular term. Many products are being sold in its name. The objective of colon cleansing is elimination of toxins. You don't need to buy any of those advertised products as you can try salt cleanse at home. Irregular bowel movements and abnormal stool texture are some signs your colon needs some cleansing. When waste material gets accumulated in the colon, it could cause other problems. When you cleanse the colon, the waste could be cleared.
Subscribe Newsletter