For Quick Alerts
ALLOW NOTIFICATIONS  
For Daily Alerts

ರಾತ್ರಿ ಊಟದ ನಂತರ ಹೀಗೆಲ್ಲಾ ಮಾಡಬೇಡಿ, ಇದು ಬಹಳ ಅಪಾಯಕಾರಿ!

By Manu
|

ನಮ್ಮ ದಿನದ ಆಹಾರದಲ್ಲಿ ಅತಿ ಹೆಚ್ಚಿನ ಪ್ರಾಮುಖ್ಯತೆ ಇರುವ ಆಹಾರಗಳೆಂದರೆ ಉಪಾಹಾರ ಮತ್ತು ರಾತ್ರಿಯ ಊಟ. ಇವೆರಡೂ ಕಡಿಮೆ ಪ್ರಮಾಣದಲ್ಲಿದ್ದು ಪೌಷ್ಟಿಕವಾಗಿದ್ದಷ್ಟೂ ಆರೋಗ್ಯಕ್ಕೂ ಉತ್ತಮ ಹಾಗೂ ತೂಕ ಹೆಚ್ಚಿಸಿಕೊಳ್ಳದೇ ಇರಲೂ ನೆರವಾಗುತ್ತದೆ. ರಾತ್ರಿಯ ಊಟ ಗಡದ್ದಾಗಿದ್ದಷ್ಟೂ ಹೆಚ್ಚಿನ ಸಂಖ್ಯೆಯ ಕ್ಯಾಲೋರಿಗಳು ಕೊಬ್ಬಾಗಿ ಪರಿವರ್ತನೆಗೊಳ್ಳುತ್ತವೆ. ರಾತ್ರಿಯ ಊಟದ ಬಗ್ಗೆ ಇಂತಹ ಇನ್ನೂ ಕೆಲವು ಅಭ್ಯಾಸಗಳು ಅನಾರೋಗ್ಯಕರವಾಗಿದ್ದು ಇಂದಿನ ಲೇಖನದಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಗುತ್ತಿದೆ.

ಪೌಷ್ಟಿಕ ಮತ್ತು ಸೂಕ್ತಪ್ರಮಾಣದ ರಾತ್ರಿಯ ಊಟ ಬರೆ ತೂಕ ಹೆಚ್ಚಿಸಿಕೊಳ್ಳದಿರಲು ಮಾತ್ರವಲ್ಲ, ಬದಲಿಗೆ ಸುಖವಾದ ನಿದ್ದೆ, ರಾತ್ರಿಯ ಅನೈಚ್ಛಿಕ ಕಾರ್ಯಗಳಿಗೆ ಅಗತ್ಯವಾದ ಪೋಷಕಾಂಶಗಳ ಪೂರೈಕೆ ಮೊದಲಾದವುಗಳಿಗೂ ಅವಶ್ಯವಾಗಿದೆ. ಈ ಕೆಲಸಕ್ಕೆ ರಾತ್ರಿಯೂಟಕ್ಕೂ ಮುನ್ನ ಕೊಂಚ ಹಣ್ಣು ಮತ್ತು ಹಸಿಯಾಗಿ ತಿನ್ನಬಹುದಾದ ತರಕಾರಿಗಳನ್ನು ತಿನ್ನುವುದೇ ಸೂಕ್ತ. ಪರ್ಯಾಯವಾಗಿ ತರಕಾರಿಯ ಅಥವಾ ಚಿಕನ್ ಸೂಪ್ ಅನ್ನೂ ಸೇವಿಸಬಹುದು. ರಾತ್ರಿಯೂಟದ ಬಳಿಕ ಅಥವಾ ನಡುವೆ ಸಿಹಿ ಬೇಡವೇ ಬೇಡ. ಇಂತಹ ಇನ್ನೂ ಹಲವಾರು ಮಾಹಿತಿಗಳನ್ನು ನೀಡಲು ಬೋಲ್ಡ್ ಸ್ಕೈ ತಂಡ ಹರ್ಷಿಸುತ್ತಿದೆ. ಬನ್ನಿ, ರಾತ್ರಿಯೂಕ್ಕೆ ಸಂಬಂಧಿಸಿದಂತೆ ಅಮೂಲ್ಯವಾದ ಮಾಹಿತಿಗಳನ್ನು ಈಗ ನೋಡೋಣ...

ರಾತ್ರಿ ಊಟದ ನಂತರ ಹಣ್ಣುಗಳಿಂದ ದೂರವಿರಿ!

ರಾತ್ರಿ ಊಟದ ನಂತರ ಹಣ್ಣುಗಳಿಂದ ದೂರವಿರಿ!

ಕೆಲವೊಂದು ಮೂಲಗಳ ಪ್ರಕಾರ ರಾತ್ರಿ ಊಟದ ಬಳಿಕ ಹಣ್ಣುಗಳನ್ನು ತಿನ್ನುವುದು ಎರಡು ಕಾರಣಗಳಿಂದ ಒಳ್ಳೆಯದಲ್ಲವಂತೆ. ಮೊದಲನೇಯದಾಗಿ ಇದರಲ್ಲಿನ ಸಕ್ಕರೆ ಅಂಶ ನಿದ್ರೆಯ ಮೇಲೆ ಪರಿಣಾಮ ಉಂಟುಮಾಡಬಹುದು. ಎರಡನೇಯದಾಗಿ ನಿಮ್ಮ ದೈನಂದಿನ ಆಹಾರದೊಂದಿಗೆ ಹಣ್ಣುಗಳನ್ನು ಜೀರ್ಣಗೊಳಿಸುವ ಕ್ರಿಯೆ ದೇಹಕ್ಕೆ ಕಷ್ಟವಾಗಬಹುದು.

ಊಟದ ಬಳಿಕ ತಕ್ಷಣವೇ ಮಲಗಬೇಡಿ!

ಊಟದ ಬಳಿಕ ತಕ್ಷಣವೇ ಮಲಗಬೇಡಿ!

ರಾತ್ರಿಯೂಟದ ಬಳಿಕ ತಕ್ಷಣವೇ ಮಲಗಿದರೆ ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ ಹೊಟ್ಟೆಯುಬ್ಬರಿಕೆ ಹಾಗೂ ಹೊಟ್ಟೆಯಲ್ಲಿ ವಾಯು ತುಂಬಿಕೊಳ್ಳಲು ಕಾರಣವಾಗುತ್ತದೆ. ಉತ್ತಮ ಆರೋಗ್ಯಕ್ಕಾಗಿ ರಾತ್ರಿಯೂಟದ ಎರಡು ಗಂಟೆಗಳ ಬಳಿಕವೇ ಮಲಗಬೇಕು. ಹಿರಿಯರ ಪ್ರಕಾರ ಊಟದ ಬಳಿಕ ಕೊಂಚ ಅಡ್ಡಾಡಿ, ಕೊಂಚ ಕಾಲ ಯಾವುದೇ ಗದ್ದಲವಿಲ್ಲದೇ ಮನಸ್ಸಿಗೆ ಮುದನೀಡುವ ವಿಷಯವನ್ನು ಓದಿ, ಪಾದಗಳನ್ನು ತಣ್ಣೀರಿನಿಂದ ತೊಳೆದು ಮಲಗಿದರೆ ಸುಖವಾದ ನಿದ್ದೆ ಆವರಿಸುತ್ತದೆ.

ಸ್ನಾನ ಮಾಡಬೇಡಿ

ಸ್ನಾನ ಮಾಡಬೇಡಿ

ಕೆಲವರಿಗೆ ಊಟದ ಬಳಿಕ ಸ್ನಾನ ಮಾಡುವ ಅಭ್ಯಾಸವಿರುತ್ತದೆ. ವಾಸ್ತವವಾಗಿ ಊಟದ ಬಳಿಕ ರಕ್ತಪರಿಚಲನೆ ಜೀರ್ಣಾಂಗಗಳಿಗೆ ಹೆಚ್ಚಾಗುವ ಕಾರಣ ಈ ಹೊತ್ತಿನಲ್ಲಿ ಸ್ನಾನ ಮಾಡುವುದರಿಂದ ಬಲವಂತವಾಗಿ ಚರ್ಮವನ್ನು ಪ್ರಚೋದಿಸಿದಂತಾಗಿ ದೇಹದ ತಾಪಮಾನ ಕಡಿಮೆಯಾಗುತ್ತದೆ. ಆಗ ಅನಿವಾರ್ಯವಾಗಿ ರಕ್ತಪರಿಚಲನೆ ಹಿಮ್ಮೆಟ್ಟಿ ಚರ್ಮದೆಡೆಗೆ ಬರಬೇಕಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಅರ್ಧಂಬರ್ಧವಾಗಿಸುತ್ತದೆ ಹಾಗೂ ಇದರ ಪರಿಣಾಮಗಳೂ ಗಾಢವೇ ಅಗಿರುತ್ತದೆ. ಉತ್ತಮ ಅಭ್ಯಾಸವೆಂದರೆ ಸ್ನಾನ ಮಾಡಿದ ಕೊಂಚ ಹೊತ್ತಿನ ಬಳಿಕವೇ ಊಟ ಮಾಡುವುದು.

ಹಲ್ಲುಗಳನ್ನು ಉಜ್ಜುವುದು ಮರೆಯಬೇಡಿ!

ಹಲ್ಲುಗಳನ್ನು ಉಜ್ಜುವುದು ಮರೆಯಬೇಡಿ!

ರಾತ್ರಿಯ ಭೋಜನಾನ೦ತರ ಕನಿಷ್ಟ ಪಕ್ಷ ಅರ್ಧ ಗಂಟೆಯ ಕಾಲವಾದರೂ ಕಾಯುವುದು ಒಳಿತು. ಭೋಜನವಾದ ಕೂಡಲೇ ಹಲ್ಲುಗಳನ್ನು ಉಜ್ಜುವುದರಿ೦ದ, ಈಗಷ್ಟೇ ನಿಮ್ಮ ಆಹಾರವನ್ನು ಜಗಿದಿರುವ ಹಲ್ಲುಗಳ ಹೊರಪದರವನ್ನು ಘಾಸಿಗೊಳಿಸಿದ೦ತಾಗುತ್ತದೆ. ಆದ್ದರಿ೦ದ, ಬೋಜನಾನ೦ತರ ನಿಮ್ಮ ಹಲ್ಲುಗಳಿಗೆ ಜಗಿತದಿ೦ದು೦ಟಾದ ಹಾನಿಯಿ೦ದ ಸಾವರಿಸಿಕೊಳ್ಳಲು ಸ್ವಲ್ಪ ಕಾಲಾವಕಾಶದ ಅಗತ್ಯವಿರುತ್ತದೆ. ಹೀಗಾಗಿ ಭೋಜನವಾದ ಕೂಡಲೇ ಹಲ್ಲುಗಳನ್ನುಜ್ಜಿಕೊ೦ಡರೆ ಅವು ಹಾನಿಗೀಡಾಗುವ ಸ೦ಭವವಿರುತ್ತದೆ.

ಧೂಮಪಾನ

ಧೂಮಪಾನ

ಮೊದಲನೆಯದಾಗಿ ಹೇಳಬೇಕೆ೦ದರೆ, ನೀವು ಧೂಮಪಾನವನ್ನು ಮಾಡುವುದೇ ತಪ್ಪು. ಆದರೂ ಕೂಡ, ಒ೦ದು ವೇಳೆ ನೀವು ಧೂಮಪಾನಿಯೇ ಆಗಿದ್ದಲ್ಲಿ, ರಾತ್ರಿಯ ಭೋಜನವಾದ ಕೂಡಲೇ ಧೂಮಪಾನವನ್ನು ಕೈಗೊಳ್ಳುವುದು ಖ೦ಡಿತಾ ವಿಹಿತವಲ್ಲ. ಅಧ್ಯಯನಗಳು ತೋರಿಸಿಕೊಟ್ಟಿರುವ ಪ್ರಕಾರ, ಭೋಜನಾನ೦ತರ ಒ೦ದು ಸಿಗರೇಟಿನ ಸೇವನೆಯು ಹತ್ತು ಸಿಗರೇಟುಗಳ ಸೇವನೆಗೆ ಸಮನಾಗಿರುತ್ತದೆ ಹಾಗೂ ಇದ೦ತೂ ಕ್ಯಾನ್ಸರ್‌ನ ಸಾಧ್ಯತೆಯನ್ನು ನೂರ್ಮಡಿಗೊಳಿಸುತ್ತದೆ.

ಚಹಾ ಸೇವಿಸಬೇಡಿ!

ಚಹಾ ಸೇವಿಸಬೇಡಿ!

ಚಹಾ ಸೇವನೆಯ ಚಟಕ್ಕ೦ಟಿಗೊ೦ಡವರಿಗೆ, ರಾತ್ರಿಯ ಊಟದ ನಂತರವೂ ಅನ೦ತರವೂ ಕೂಡ ಒ೦ದು ಕಪ್ ಚಹಾ ಕುಡಿಯದಿದ್ದರೆ ಅವರಿಗೆ ಸಮಾಧಾನವಿರುವುದಿಲ್ಲ. ಆದರೆ, ರಾತ್ರಿಯ ಭೋಜನವಾದ ಕೂಡಲೇ ಅತಿಯಾದ ಚಹಾದ ಸೇವನೆಯು ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ಆಗತಾನೇ ಸೇವಿಸಿರಬಹುದಾದ ಆಹಾರದಲ್ಲಿರುವ ಕಬ್ಬಿಣಾ೦ಶದ ಹೀರುವಿಕೆಯ ಪ್ರಮಾಣವನ್ನು ಚಹಾದಲ್ಲಿರುವ ಪಾಲಿಫೆನಾಲ್ ಗಳು ಕಡಿಮೆಮಾಡುತ್ತವೆ. ಜೊತೆಗೆ, ಚಹಾದಲ್ಲಿರುವ ಘಟಕಗಳು ಆಹಾರದ ಪ್ರೋಟೀನ್ ಗಳ ಜೀರ್ಣಕ್ರಿಯೆಯನ್ನು ಅಡ್ಡಿಪಡಿಸುತ್ತವೆ.

ರಾತ್ರಿ ಹೊತ್ತು ಮೊಸರನ್ನು ಸೇವಿಸದಿರಿ, ಇಲ್ಲಿದೆ ಪರಿಹಾರ

ವ್ಯಾಯಾಮಗಳೆನ್ನೆಲ್ಲಾ ಮಾಡಿಬೇಡಿ

ವ್ಯಾಯಾಮಗಳೆನ್ನೆಲ್ಲಾ ಮಾಡಿಬೇಡಿ

ಬೆಳಗ್ಗೆ ಅಥವಾ ಸ೦ಜೆಯ ವೇಳೆ ಯಾವುದೇ ಭೋಜನವನ್ನು ತೆಗೆದುಕೊಳ್ಳುವ ಸಮಯಕ್ಕೆ ಸಾಕಷ್ಟು ಮು೦ಚಿತವಾಗಿಯೇ ವ್ಯಾಯಾಮವನ್ನಾಚರಿಸುವುದು ಆದರ್ಶಪ್ರಾಯವಾಗಿದೆ. ರಾತ್ರಿಯ ಭೋಜನವಾದ ಕೂಡಲೇ ವ್ಯಾಯಾಮಕ್ಕೆ ಸಿದ್ಧಗೊಳ್ಳುವ ಸ೦ಗತಿಯು, ದಿನದ ವೇಳೆಯಲ್ಲಿ ವ್ಯಾಯಾಮಕ್ಕಾಗಿ ನಿಮಗೆ ಸಾಕಷ್ಟು ಸಮಯಾವಕಾಶವಿಲ್ಲದಿರುವುದನ್ನು ಸೂಚಿಸುತ್ತದೆ. ಊಟವಾದ ಕೂಡಲೇ ವ್ಯಾಯಾಮವನ್ನು ಕೈಗೊಳ್ಳುವುದರಿ೦ದ ರಕ್ತದ ಹರಿವು ವಿಪರೀತಗೊ೦ಡು ನಿಮ್ಮ ಜೀರ್ಣಕ್ರಿಯೆಯ ಹಳಿತಪ್ಪಿಸುತ್ತದೆ ಹಾಗೂ ನಿಮ್ಮ ಶರೀರದ ಚಯಾಪಚಯ ಕ್ರಿಯೆಯನ್ನು ತು೦ಡರಿಸುತ್ತದೆ.

ಊಟ ಹೆಚ್ಚಾಗಿದ್ದರೆ ಬೆಲ್ಟ್ ಸಡಿಲಿಸಬೇಡಿ

ಊಟ ಹೆಚ್ಚಾಗಿದ್ದರೆ ಬೆಲ್ಟ್ ಸಡಿಲಿಸಬೇಡಿ

ಒಂದು ವೇಳೆ ಜಿಹ್ವಾಚಾಪಲ್ಯ ಅಥವಾ ನೆಂಟರ ಪ್ರೀತಿ ಹೆಚ್ಚಾಗಿ ಹೊಟ್ಟೆಯುಬ್ಬಿದರೆ ಇದಕ್ಕನುಗುಣವಾಗಿ ನಮ್ಮ ಸೊಂಟದ ಬೆಲ್ಟ್ ಅನ್ನು ಸಡಿಲಗೊಳಿಸುತ್ತೇವೆ. ವಾಸ್ತವವಾಗಿ ಹೀಗೆ ಮಾಡುವುದರಿಂದ ಹೊಟ್ಟೆಯ ಸ್ನಾಯುಗಳಿಗೆ ವಿಕಸಿಸಲು ಅವಕಾಶ ಮಾಡಿಕೊಟ್ಟಂತಾಗಿ ಹೊಟ್ಟೆ ವಿಶಾಲವಾಗಲು ಪರೋಕ್ಷವಾಗಿ ನೆರವಾದಂತಾಗುತ್ತದೆ. ಆದ್ದರಿಂದ ಅತಿ ಬಿಗಿಯೂ ಅಲ್ಲದಂತೆ ಬೆಲ್ಟ್ ಕಟ್ಟಿಕೊಂಡೇ ಇರುವುದು ಮತ್ತು ಮಲಗುವ ಮುನ್ನ ಸಡಿಲಿಸುವುದು ಆರೋಗ್ಯಕರ ಕ್ರಮವಾಗಿದೆ.

ಸಡಿಲವಾದ ಬಟ್ಟೆಗಳನ್ನೇ ತೊಡಿ

ಸಡಿಲವಾದ ಬಟ್ಟೆಗಳನ್ನೇ ತೊಡಿ

ಊಟದ ಬಳಿಕ ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ಹೊಟ್ಟೆಯ ಭಾಗದಲ್ಲಿ ಹೆಚ್ಚಿನ ಒತ್ತಡ ಹೇರಿ ಇದರಿಂದ ಎದೆಯುರಿಗೆ ಕಾರಣವಾಗುತ್ತದೆ. ಆದ್ದರಿಂದ ಸಡಿಲವಾದ ಬಟ್ಟೆಗಳನ್ನೇ ತೊಡುವುದು ಉತ್ತಮ. ವಿಶೇಷವಾಗಿ ಸೊಂಟಕ್ಕೆ ಪಟ್ಟಿ ಕಟ್ಟಿಕೊಳ್ಳದಿರುವ ಅಥವಾ ಸುಮ್ಮನೇ ಸುತ್ತಿಕೊಳ್ಳಬಹುದಾದ ಉಡುಗೆಗಳೇ ಉತ್ತಮ. ಬಿಗಿಯುಡುಗೆ ಧರಿಸುವುದರಿಂದ ದೇಹದ ತಾಪಮಾನವೂ ಹೆಚ್ಚುತ್ತದೆ, ನಿದ್ದೆಯೂ ಭಂಗಗೊಳ್ಳುತ್ತದೆ ಹಾಗೂ ವಾಯುಪ್ರಕೋಪ, ಹುಳಿತೇಗು ಮೊದಲಾದವುಗಳಿಗೂ ಕಾರಣವಾಗುತ್ತದೆ.

ಊಟದ ಬಳಿಕ ಸಣ್ಣ ವಾಕಿಂಗ್ ಮಾಡಿ-ಬಹಳ ಒಳ್ಳೆಯದು

ಊಟದ ಬಳಿಕ ಸಣ್ಣ ವಾಕಿಂಗ್ ಮಾಡಿ-ಬಹಳ ಒಳ್ಳೆಯದು

ಊಟದ ಬಳಿಕ ಕೊಂಚ ದೂರವಾದರೂ ನಡೆಯಲೇಬೇಕು. ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ನಡೆದರೂ ಸಾಕಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಹೊಟ್ಟೆಯಲ್ಲಿ ವಾಯು ತುಂಬಿಕೊಳ್ಳದಿರಲು ನೆರವಾಗುತ್ತದೆ. ತೂಕ ಇಳಿಸಬೇಕೆಂದರೆ ಈ ಕ್ರಮ ಅತ್ಯಗತ್ಯವಾಗಿದೆ.

ರಾತ್ರಿ ಊಟದ ನಂತರ ಡ್ರೈವಿಂಗ್ ಕೂಡ ಮಾಡಬೇಡಿ!

ರಾತ್ರಿ ಊಟದ ನಂತರ ಡ್ರೈವಿಂಗ್ ಕೂಡ ಮಾಡಬೇಡಿ!

ಜೀರ್ಣಕ್ರಿಯೆಗೆ ಒಳಪಡುತ್ತಿರುವ ಆಹಾರವಸ್ತುವಿಗೋಸ್ಕರ, ರಕ್ತದ ಸರಬರಾಜು ಹೊಟ್ಟೆಗೆ ಅತಿಯಾಗಿ ಆಗಬೇಕಾದ ಕಾರಣದಿ೦ದಾಗಿ, ರಕ್ತದ ಹರಿವನ್ನು ಹೊಟ್ಟೆಯಿ೦ದ ಬೇರೆ ಅ೦ಗಾ೦ಗಗಳತ್ತ ವಿಮುಖಗೊಳಿಸುವ ಯಾವುದೇ ಚಟುವಟಿಕೆಯನ್ನೂ ಕೂಡ ಭೋಜನವಾದ ಕೂಡಲೇ ಕೈಗೊಳ್ಳುವುದು ಸರಿಯಲ್ಲ. ವಾಹನ ಚಾಲನೆಯ೦ತಹ ಚಟುವಟಿಕೆಯು ಗಮನವನ್ನು ಹಾಗೂ ಏಕಾಗ್ರತೆಯನ್ನು ಬೇಡುತ್ತದೆ ಮತ್ತು ಭೋಜನವಾದ ಕೂಡಲೇ ನಿಮಗೆ ಏಕಾಗ್ರತೆಯನ್ನು ಸಾಧಿಸಲು ಕಷ್ಟವೆನಿಸಬಹುದು. ಅದೂ ಅಲ್ಲದೇ, ಪೂರ್ಣಪ್ರಮಾಣದ ಭೋಜನಾನ೦ತರ ನಿಮಗೆ ಆಯಾಸವೆ೦ದೆನಿಸಬಹುದು. ಆದ್ದರಿ೦ದ, ಭೋಜನವಾದ ಬಳಿಕ ವಾಹನಚಾಲನೆಗೆ ಮು೦ಚೆ ಕನಿಷ್ಟ ಒ೦ದು ಘ೦ಟೆಯ ಕಾಲವಾದರೂ ಕಾಯುವುದೊಳಿತು.

ಬಿಸಿ ನೀರು

ಬಿಸಿ ನೀರು

ರಾತ್ರಿಯ ಊಟಕ್ಕಿಂತ ಸುಮಾರು 30-40 ನಿಮಿಷ ಮೊದಲು ಒಂದು ಗ್ಲಾಸ್ ಬಿಸಿ ನೀರು ಕುಡಿದರೆ ಆಗ ಅದು ನಿಮ್ಮ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಇದರಿಂದ ನೀವು ರಾತ್ರಿ ಹೊತ್ತು ಅತಿಯಾಗಿ ತಿನ್ನುವುದು ಕಡಿಮೆಯಾಗುತ್ತದೆ. ತದನಂತರ ರಾತ್ರಿಯ ಊಟಕ್ಕಿಂತ ಬಳಿಕ ಸುಮಾರು 30-40 ನಿಮಿಷ ಬಿಟ್ಟು ಮತ್ತೊಂದು ಗ್ಲಾಸ್ ಬಿಸಿ ನೀರು ಕುಡಿಯಿರಿ, ಇದು ಕೂಡ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು

English summary

Things You Should Not Do After Dinner

There are some healthy habits after eating dinner that we will share with you today. There are some healthy habits after eating dinner that we will share with you today. A healthy and light dinner is important for a better, sound and restful sleep
X
Desktop Bottom Promotion