For Quick Alerts
ALLOW NOTIFICATIONS  
For Daily Alerts

  ಕಲ್ಲಂಗಡಿ ಹಣ್ಣಿನ ಬೀಜದ ಪ್ರಯೋಜನಗಳನ್ನು ಕೇಳಿದರೆ ಅಚ್ಚರಿ ಪಡುವಿರಿ!

  By Arshad
  |

  ಅತಿ ಹೆಚ್ಚಿನ ನೀರಿನ ಸಂಗ್ರಹವಿರುವ ಹಣ್ಣು ಎಂದರೆ ಕಲ್ಲಂಗಡಿ. ಇದರ ಜೊತೆಗೇ ಉತ್ತಮ ಪ್ರಮಾಣದ ಪೋಷಕಾಂಶಗಳಾದ ವಿಟಮಿನ್ ಎ, ಬಿ1, ಬಿ6, ವಿಟಮಿನ್ ಸಿ, ಪ್ಯಾಂಥೋಥೆನಿನ್ ಆಮ್ಲ, ತಾಮ್ರ, ಬಯೋಟಿನ್, ಪೊಟ್ಯಾಶಿಯಂ ಹಾಗೂ ಮೆಗ್ನೀಶಿಯಂ ಇವೆ. ಸಾಮಾನ್ಯವಾಗಿ ನಾವೆಲ್ಲಾ ಹಣ್ಣಿನ ತಿರುಗಳನ್ನು ಸೇವಿಸಿ ಬೀಜಗಳನ್ನು ನಿವಾರಿಸಿಬಿಡುತ್ತೇವೆ.

  ಆದರೆ ಈ ಬೀಜಗಳಲ್ಲಿಯೂ ಅದ್ಭುತ ಆರೋಗ್ಯಕರ ಅಂಶಗಳಿವೆ ಎಂದು ನಿಮಗೆ ಗೊತ್ತಿತ್ತೇ? ಈ ಬೀಜಗಳಲ್ಲಿ ಉತ್ತಮ ಪ್ರಮಾಣದ ಕೊಬ್ಬಿನ ಆಮ್ಲ, ಅವಶ್ಯಕ ಪ್ರೋಟೀನ್, ಖನಿಜಗಳಾದ ಮೆಗ್ನೇಶಿಯಂ, ಪೊಟ್ಯಾಶಿಯಂ, ಮ್ಯಾಂಗನೀಸ್, ಕಬ್ಬಿಣ, ಸತು, ಗಂಧಕ ಹಾಗೂ ಉತ್ತಮ ಪ್ರಮಾಣದ ವಿಟಮಿನ್ ಬಿ, ಥಿಯಾಮಿನ್ ನಿಯಾಸಿನ್‌ನನ್ನು ಅಗಾಧ ಪ್ರಮಾಣದಲ್ಲಿ ಒಳಗೊಂಡಿದೆ... 

  ಕಲ್ಲಂಗಡಿ ಹಣ್ಣಿನ ಬೀಜಗಳ ಸ್ಪೆಷಾಲಿಟಿ ಒಂದೇ ಎರಡೇ

  ಲಿಂಬೆಹಣ್ಣಿನಲ್ಲಿರುವ ಕೆಲವು ವಸ್ತುಗಳು ಸಹಾ ಈ ಬೀಜದಲ್ಲಿದ್ದು ಇವು ಆಂಟಿ ಆಕ್ಸಿಡೆಂಟುಗಳಂತೆ ಕೆಲಸ ನಿರ್ವಹಿಸುತ್ತವೆ. ಅಲ್ಲದೇ ನರಗಳ ಗೋಡೆಗಳು ದೃಢವಾಗುವ (arteriosclerosis), ಅಧಿಕ ರಕ್ತದೊತ್ತಡ, ರಕ್ತದಲ್ಲಿ ಆಮ್ಲಜನಕದ ಕೊರತೆ (angina), ಹಾಗೂ ನಿಮಿರು ದೌರ್ಬಲ್ಯವನ್ನು ಕಡಿಮೆಗೊಳಿಸುತ್ತದೆ. ಅಷ್ಟೇ ಅಲ್ಲ, ಮೂತ್ರಪಿಂಡಗಳ ಚಿಕಿತ್ಸೆ, ಮೂತ್ರನಾಳದ ಸೋಂಕು ನಿವಾರಣೆಯಲ್ಲಿಯೂ ನೆರವಾಗುತ್ತದೆ. ಈ ಬೀಜಗಳನ್ನು ಬೇಯಿಸಿ ಸೇವಿಸುವ ಮೂಲಕ ಪಡೆಯಬಹುದಾದ ಕೆಲವು ಪ್ರಯೋಜನಗಳನ್ನು ಇಂದಿನ ಲೇಖನದಲ್ಲಿ ಪ್ರಸ್ತುತಪಡಿಸಲಾಗುತ್ತಿದೆ..... 

  ಹೃದಯವನ್ನು ರಕ್ಷಿಸುತ್ತದೆ

  ಹೃದಯವನ್ನು ರಕ್ಷಿಸುತ್ತದೆ

  ಈ ಬೀಜಗಳಲ್ಲಿರುವ ಉತ್ತಮ ಪ್ರಮಾಣದ ಮೆಗ್ನೇಶಿಯಂ ಹೃದಯ ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಅಲ್ಲದೇ ಹೃದಯದ ಒತ್ತಡ ಸಮತೋಲನದಲ್ಲಿರಲು ಹಾಗೂ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳಲು ನೆರವಾಗುತ್ತದೆ. ಇದು ಕಲ್ಲಂಗಡಿ ಬೀಜಗಳನ್ನು ಸೇವಿಸುವ ಅತ್ಯುತ್ತಮ ಪ್ರಯೋಜನವಾಗಿದೆ.

  ವೃದ್ಧಾಪ್ಯವನ್ನು ತಡವಾಗಿಸುತ್ತದೆ

  ವೃದ್ಧಾಪ್ಯವನ್ನು ತಡವಾಗಿಸುತ್ತದೆ

  ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ವೃದ್ಧಾಪ್ಯ ಆವರಿಸುವ ಗತಿಯನ್ನು ನಿಧಾನವಾಗಿಸುವ ಮೂಲಕ ವೃದ್ಧಾಪ್ಯವನ್ನು ತಡವಾಗಿಸುತ್ತದೆ. ಚರ್ಮದ ಸೆಳೆತ ಹೆಚ್ಚಿಸಿ ತಾರುಣ್ಯವನ್ನು ಕಾಪಾಡುತ್ತದೆ. ಇದು ಕಲ್ಲಂಗಡಿ ಬೀಜಗಳನ್ನು ಸೇವಿಸುವ ಅತ್ಯುತ್ತಮವಾದ ಇನ್ನೊಂದು ಪ್ರಯೋಜನವಾಗಿದೆ.

  ಮೊಡವೆಗಳನ್ನು ನಿವಾರಿಸುತ್ತದೆ

  ಮೊಡವೆಗಳನ್ನು ನಿವಾರಿಸುತ್ತದೆ

  ಮುಖದ ಮೇಲೆ ಇರುವ ಮೊಡವೆಗಳನ್ನು ನಿವಾರಿಸಲು ಈ ಬೀಜಗಳಿಂದ ಹಿಂಡಿ ತೆಗೆದ ಎಣ್ಣೆ ಉತ್ತಮವಾಗಿದೆ. ಅಷ್ಟೇ ಅಲ್ಲ, ಚರ್ಮದ ಸೂಕ್ಷ್ಮ ರಂಧ್ರದಲ್ಲಿ ಸಿಲುಕಿದ್ದ ಕೊಳೆ ಹಾಗೂ ಸತ್ತ ಜೀವಕೋಶಗಳನ್ನು ನಿವಾರಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ, ಈ ಎಣ್ಣೆ ಎಲ್ಲಾ ಬಗೆಯ ತ್ವಚೆಗಳಿಗೂ ಸುರಕ್ಷಿತವಾಗಿದೆ.

  ಕೂದಲ ಬುಡವನ್ನು ದೃಢಪಡಿಸುತ್ತದೆ

  ಕೂದಲ ಬುಡವನ್ನು ದೃಢಪಡಿಸುತ್ತದೆ

  ಈ ಎಣ್ಣೆಯಲ್ಲಿರುವ ಉತ್ತಮ ಪ್ರಮಾಣದ ಪ್ರೋಟೀನುಗಳು ಹಾಗೂ ಅಮೈನೋ ಆಮ್ಲಗಳು ಕೂದಲಿನ ಬುಡವನ್ನು ದೃಢಗೊಳಿಸುತ್ತವೆ. ಈ ಬೀಜಗಳನ್ನು ಹುರಿದು ಪುಡಿಮಾಡಿ ಕೂದಲಿಗೆ ಹಚ್ಚಿಕೊಳ್ಳುವ ಮೂಲಕ ಈ ಪುಡಿಯಲ್ಲಿರುವ ತಾಮ್ರ ಕೂದಲಿಗೆ ಬಣ್ಣ ನೀಡುವ ಮೆಲನಿನ್ ಎಂಬ ವರ್ಣದ್ರವ್ಯವನ್ನು ಹೆಚ್ಚಿಸಿ ಕೂದಲ ಕಾಂತಿಯನ್ನು ಹೆಚ್ಚಿಸುತ್ತದೆ.

  ಘಾಸಿಗೊಂಡ ಕೂದಲನ್ನು ದುರಸ್ತಿಗೊಳಿಸುತ್ತದೆ

  ಘಾಸಿಗೊಂಡ ಕೂದಲನ್ನು ದುರಸ್ತಿಗೊಳಿಸುತ್ತದೆ

  ಈ ಬೀಜಗಳಲ್ಲಿರುವ ಅವಶ್ಯಕ ಕೊಬ್ಬಿನ ಆಮ್ಲಗಳು ಕೂದಲು ಘಾಸಿಗೊಳ್ಳುವುದನ್ನು ತಡೆಯುತ್ತದೆ ಹಾಗೂ ದುರಸ್ತಿಗೊಳ್ಳಲು ನೆರವಾಗುತ್ತವೆ.

  ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

  ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

  ಈ ಬೀಜಗಳಲ್ಲಿ ಮೆಗ್ನೇಶಿಯಂ ಉತ್ತಮ ಪ್ರಮಾಣದಲ್ಲಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ವಿಟಮಿನ್ ಬಿ5 ಆಹಾರದ ಕಾರ್ಬೋಹೈಡ್ರೇಟುಗಳನ್ನು ಒಡೆದು ಶಕ್ತಿಯನ್ನು ಬಿಡುಗಡೆ ಮಾಡುತ್ತದೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

  ಶರೀರದ ಬಾವುಗಳನ್ನು ಕಡಿಮೆ ಮಾಡುತ್ತದೆ

  ಶರೀರದ ಬಾವುಗಳನ್ನು ಕಡಿಮೆ ಮಾಡುತ್ತದೆ

  ಒಂದು ವೇಳೆ ಉರಿಯೂತದ ಕಾರಣ ಶರೀರದ ಯಾವುದಾದರೊಂದು ಭಾಗದಲ್ಲಿ ಬಾವು ಕಾಣಿಸಿಕೊಂಡರೆ ಒಂದು ಚಿಕ್ಕ ಚಮಚ ಒಣಗಿಸಿ ಕುಟ್ಟಿ ಮಾಡಿದ ಪುಡಿಯನ್ನು ಒಂದು ಚಿಕ್ಕ ಚಮಚ ಜೇನು ಹಾಗೂ ಮುಕ್ಕಾಲು ಕಪ್ ಬಿಸಿನೀರನ್ನು ಬೆರೆಸಿ ಮಿಶ್ರಣ ಮಾಡಿ ದಿನಕ್ಕೆರಡು ಬಾರಿ ಸೇವಿಸಿ. ಇದರಿಂದ ಬಾವು ಕಡಿಮೆಯಾಗುತ್ತದೆ.

  ಪುರುಷರಲ್ಲಿ ಫಲವಂತಿಕೆ ಹೆಚ್ಚಿಸುತ್ತದೆ

  ಪುರುಷರಲ್ಲಿ ಫಲವಂತಿಕೆ ಹೆಚ್ಚಿಸುತ್ತದೆ

  ಈ ಬೀಜಗಳಲ್ಲಿರುವ ಲೈಕೋಪಿನ್ ಎಂಬ ಆಂಟಿ ಆಕ್ಸಿಡೆಂಟು ಪುರುಷರಲ್ಲಿ ನಂಪುಸಕತ್ವವನ್ನು ಕಡಿಮೆಗೊಳಿಸಿ ಫಲವಂತಿಕೆ ಹೆಚ್ಚಿಸುತ್ತದೆ.

  English summary

  Take boiled watermelon seeds see what it does to your body

  Watermelon is an excellent fruit that has several nutritional benefits. It is a good source of vitamin A, vitamin B1, vitamin B6, vitamin C, pantothenic acid, copper, biotin, potassium and magnesium. But did you know that the seeds of watermelon also offer several health benefits? Watermelon seeds consists of nutrients like fatty acids, essential proteins, minerals like magnesium, potassium, manganese, iron, zinc, phosphorous and is also chocked with vitamin B like thiamine, niacin and folate.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more